ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಜುಕೊಳದಲ್ಲಿ ಮುಳುಗಿ ಆಂಧ್ರದ ಟೆಕ್ಕಿ ಮತ್ತು ಮಗನ ದಾರುಣ ಸಾವು

ಅಮೆರಿಕದ ಮಿಶಿಗನ್ ನ ನಾರ್ತ್ ವಿಲ್ಲೆ ಎಂಬಲ್ಲಿ ಸ್ವಿಮ್ಮಿಂಗ್ ಪೂಲ್ ನಲ್ಲಿ ಬೆಳ್ಳಂಬೆಳಗ್ಗೆ ಎರಡು ಶವ ತೇಲಾಡುತ್ತಿದ್ದುದನ್ನು ನೋಡಿದ ಮಹಿಳೆಯೊಬ್ಬರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದರು.

|
Google Oneindia Kannada News

ಮಿಶಿಗನ್ (ಅಮೆರಿಕ), ಜೂನ್ 2: ದುರಂತ ಎಂದರೆ ಇದೇ ಇರಬೇಕು! ತಾಯ್ನೆಲವನ್ನು ಬಿಟ್ಟು, ತುತ್ತಿನ ಚೀಲ ಅರಸಿ ಅಮೆರಿಕಕ್ಕೆ ತೆರಳಿದ್ದ ಆಂಧ್ರ ಪ್ರದೇಶದ ನಾಗರಾಜು ಸುರೇಪಳ್ಳಿ ಮೂವತ್ತೊಂದರ ವಯಸ್ಸಿನಲ್ಲಿಯೇ ಶವವಾಗಿ ತಾಯ್ನಾಡು ಸೇರುತ್ತಾರೆಂಬ ಊಹೆ ಯಾರಿಗೂ ಇರಲಿಲ್ಲ. ಇನ್ನೂ ದುರಂತವೆಂದರೆ, ಆಗಿನ್ನೂ ತೊದಲು ನುಡಿಯುತ್ತಿದ್ದ ಅವರ ಮೂರು ವರ್ಷದ ಪುಟ್ಟ ಮಗ ಸಹ ತಂದೆಯೊಂದಿಗೆ ಇಂಥ ದಾರುಣ ಅಂತ್ಯ ಕಾಣುತ್ತಾನೆಂದರೆ ನಂಬಲಿಕ್ಕಾಗುವುದಿಲ್ಲ!

ಅಮೆರಿಕದ ಮಿಶಿಗನ್ ನ ನಾರ್ತ್ ವಿಲ್ಲೆ ಎಂವಿಬಲ್ಲಿ ಸ್ವಿಮ್ಮಿಂಗ್ ಪೂಲ್ ನಲ್ಲಿ ಬೆಳ್ಳಂಬೆಳಗ್ಗೆ ಎರಡು ಶವ ತೇಲಾಡುತ್ತಿದ್ದುದನ್ನು ನೋಡಿದ ಮಹಿಳೆಯೊಬ್ಬರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವವನ್ನು ಹೊರತೆಗೆಯುವಾಗ ಪುಟ್ಟ ಮಗು ಮತ್ತು ವ್ಯಕ್ತಿಯ ದೇಹ ಸಿಕ್ಕಿದೆ. ಮಕ್ಕಳು ಬಳಸುವ ಮೂರುಚಕ್ರದ ಸೈಕಲ್, ಕೆಲವು ಬೊಂಬೆಗಳು ಎಲ್ಲವೂ ನೀರಿನಲ್ಲಿ ಬಿದ್ದಿರುವುದು, ಆಟವಾಡುತ್ತಿದ್ದ ಮಗು ಅಚಾನಕ್ಕಾಗಿ ನೀರಿಗೆ ಬಿದ್ದಿರುವುದಕ್ಕೆ ಕುರುಹು ಎನ್ನಿಸಿಸದೆ.[ಜನಾಂಗೀಯ ದ್ವೇಷ: ಆಸ್ಟ್ರೇಲಿಯಾದಲ್ಲಿ ಭಾರತೀಯ ಚಾಲಕನ ಮೇಲೆ ಹಲ್ಲೆ]

Andra Man and his 3 year old son dies in America

ಆಟವಾಡುತ್ತಿದ್ದ ಮಗು ಆಕಸ್ಮಿಕವಾಗಿ ನೀರಿಗೆ ಬಿದ್ದಾಗ, ಅದನ್ನು ಕಾಪಾಡಲು ತೆರಳಿದ ತಂದೆಯೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆಂದು ಇಲ್ಲಿನ ಪೊಲೀಸರು ಹೇಳಿದ್ದಾರೆ.

ಆಂಧ್ರದ ವ್ಯಕ್ತಿ
ಆಂಧ್ರಪ್ರದೇಶದ ಗುಂಟೂರಿನ ನಾಗರಾಜು ಸುರೇಪಳ್ಳಿ(31) ಮತ್ತು ಅವರ ಮೂರು ವರ್ಷದ ಮಗ ಹೀಗೆ ದಾರುಣ ಸಾವುಕಂಡವರು. ಪತ್ನಿ ಬಿಂದು ಅವರೊಂದಿಗೆ ಕಳೆದ ಮೂರು ವರ್ಷಗಳಿಂದ ಅಮೆರಿಕದಲ್ಲಿ ವಾಸವಿದ್ದ ನಾಗರಾಜು, ಸಾಫ್ಟ್ ವೇರ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಮೇ 31 ರಂದು ಸ್ವಿಮ್ಮಿಂಗ್ ಪೂಲ್ ವೊಂದರ ಬಳಿ ಮಗುವಿನೊಂದಿಗೆ ಆಟವಾಡುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.

Andra Man and his 3 year old son dies in America

ಶವ ಕಳಿಸುವುದಕ್ಕೆ ಅಭಿಯಾನದ ಮೂಲಕ ಹಣ ಸಂಗ್ರಹ
ಅವರ ಶವವನ್ನು ಭಾರತಕ್ಕೆ ಕಳುಹಿಸಲು ಹಣದ ಸಮಸ್ಯೆ ಎದುರಾಗಿರುವುದರಿಂದ, ನಾಗರಾಜು ಅವರ ಸ್ನೇಹ ಬಳಗ ಆನ್ ಲೈನ್ ಅಭಿಯಾನವೊಂದನ್ನು ಆರಂಭಿಸಿ ಆ ಮೂಲಕ ಹಣ ಸಂಗ್ರಹಿಸುತ್ತಿದೆ. ಈ ಹಣವನ್ನು ಅವರ ಪತ್ನಿಗೆ ನೀಡಿ, ಅವರ ಶವವನ್ನು ಭಾರತಕ್ಕೆ ಕಳಿಸಲಾಗುವುದು ಎಂದು ನಾಗರಾಜು ಆಪ್ತಬಳಗ ಹೇಳಿದೆ. ಈಗಾಗಲೇ ಆನ್ ಲೈನ್ ಮೂಲಕ ಅಗತ್ಯವಿರುವಷ್ಟು ಹಣ ಸಂಗ್ರಹವಾಗಿದ್ದು, ಇಂಥ ಸಂಕಷ್ಟದ ಪರಿಸ್ಥಿತಿಹಯನ್ನು ಅ ರ್ಥಮಾಡಿಕೊಂಡು ಮಾನವೀಯತೆ ಮೆರೆದ ಎಲ್ಲರಿಗೂ ನಾಗರಾಜು ಸ್ನೇಹಿತರ ಬಳಗ ಕೃತಜ್ಞತೆ ಹೇಳಿದೆ.

English summary
In a heartmelting incident, a 31-year-old software professional from Andhra died on May 31st Wednesday along with his three-year-old son in a swimming pool in Northville in USA's Michigan state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X