ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನಿಸ್ತಾನದಲ್ಲಿ ಸೋಮನಾಥ ವಿಗ್ರಹ ಧ್ವಂಸಗೊಳಿಸಿದ ತಾಲಿಬಾನ್

|
Google Oneindia Kannada News

ಕಾಬೂಲ್, ಅಕ್ಟೋಬರ್ 06: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ದಿನೇ ದಿನೇ ಹೆಚ್ಚಾಗುತ್ತಿದೆ. ಎಲ್ಲದಕ್ಕೂ ತಮ್ಮದೇ ಆದ ಕಾನೂನುಗಳನ್ನು ಸೃಷ್ಟಿಸಿಕೊಂಡಿರುವ ತಾಲಿಬಾನ್, ಅಲ್ಲಿನ ಜನತೆಯ ಉಸಿರುಗಟ್ಟಿಸುವ ಕೆಲಸ ಮಾಡುತ್ತಿದ್ದಾರೆ.

ತಾಲಿಬಾನ್ ಆಟಾಟೋಪ ದಿನದಿಂದ ತೀವ್ರ ಸ್ವರೂಪ ಪಡೆಯುತ್ತಿದೆ. ತಾಲಿಬಾನ್​ ಮುಖಂಡರಲ್ಲೊಬ್ಬನಾದ ಅನಸ್ ಹಕ್ಕಾನಿ ಎಂಬಾತ ಟ್ವೀಟ್ ಮಾಡಿ, ಐತಿಹಾಸಿಕ ಸೋಮನಾಥ ದೇವಾಲಯದ ವಿಗ್ರಹವನ್ನು ನಾಶಪಡಿಸಿರುವುದಾಗಿ ಹೇಳಿಕೊಂಡಿದ್ದಾನೆ.

ಅಫ್ಘಾನ್ ತಾಲಿಬಾನ್ ವಶವಾಗುತ್ತಿದ್ದಂತೆ ಕಾಶ್ಮೀರದಲ್ಲಿ ಹೆಚ್ಚಿದ ಉಗ್ರರುಅಫ್ಘಾನ್ ತಾಲಿಬಾನ್ ವಶವಾಗುತ್ತಿದ್ದಂತೆ ಕಾಶ್ಮೀರದಲ್ಲಿ ಹೆಚ್ಚಿದ ಉಗ್ರರು

ಘಜ್ನವಿ ಘಜ್ನಿ ಪ್ರದೇಶವನಾಗಿದ್ದು, ಮುಸ್ಲಿಂ ಆಡಳಿತವನ್ನು ಅತ್ಯಂತ ಶಕ್ತಿಶಾಲಿಯಾಗಿಸಿದ್ದ ಈ ಜಾಗದಲ್ಲಿ ಮಹಮದ್ ಘಜ್ನವಿ ಮಸೀದಿಯನ್ನು ಪುನರ್ನಿರ್ಮಾಣ ಮಾಡಲಾಗುತ್ತಿದೆ ಎಂದು ಅನಸ್ ಹಕ್ಕಾನಿ ತಿಳಿಸಿದ್ದಾನೆ.

Anas Haqqani Praises Conqueror Mahmud Ghazni For Destroying Idol Of Somnath

'10ನೇ ಶತಮಾನದ ಮುಸ್ಲಿಂ ನಾಯಕ ಮಹಮ್ಮದ್ ಘಜ್ನವಿ ಅವರ ಪ್ರದೇಶಕ್ಕೆ ನಾವು ಇಂದು ಭೇಟಿ ನೀಡಿದ್ದೆವು. ಅಲ್ಲಿದ್ದ ಐತಿಹಾಸಿಕ ಸೋಮನಾಥ ದೇವಾಲಯದ ಸೋಮನಾಥ ವಿಗ್ರಹವನ್ನು ನಾಶ ಮಾಡಿದ್ದೇವೆ' ಎಂದು ಟ್ವೀಟ್​ನಲ್ಲಿ ತಿಳಿಸಿದ್ದಾನೆ.

ಈ ಸೋಮನಾಥ ದೇವಾಲಯದ ಪುನರ್ನಿರ್ಮಾಣವನ್ನು ಭಾರತದ ಮೊದಲ ಗೃಹ ಮಂತ್ರಿ ವಲ್ಲಭಭಾಯಿ ಪಟೇಲ್ ಅವರ ಆದೇಶದ ಮೇರೆಗೆ ಆರಂಭಿಸಲಾಗಿದ್ದು, 1951ರ ಮೇ ತಿಂಗಳಲ್ಲಿ ಪೂರ್ಣಗೊಂಡಿತ್ತು. ಪ್ರಸ್ತುತ ಪ್ರಧಾನಿ ಮೋದಿ ಸೋಮನಾಥ ಮಂದಿರ ಟ್ರಸ್ಟ್‌ನ ಅಧ್ಯಕ್ಷರಾಗಿದ್ದಾರೆ.

ತಾಲಿಬಾನ್‌ ಉಗ್ರರು ಅಲ್ಲಿರುವ ಐತಿಹಾಸಿಕ ಥಾಲಾ ಸಾಹೀಬ್‌ ಗುರುದ್ವಾರದಲ್ಲಿನ 'ನಿಶಾನ್‌ ಸಾಹಿಬ್‌' ಎಂಬ ಸಿಖ್‌ ಧಾರ್ಮಿಕ ಧ್ವಜವನ್ನು ಕಿತ್ತೆಸೆಸಿದ್ದರು.

ಪಕ್ತಿಯಾ ಪ್ರಾಂತ್ಯದಲ್ಲಿರುವ ಈ ಐತಿಹಾಸಿಕ ಗುರುದ್ವಾರಕ್ಕೆ ಶ್ರೀ ಗುರು ನಾನಕ್‌ ದೇವ್‌ ಅವರು ಭೇಟಿ ನೀಡಿದ್ದಾರೆ ಎಂಬ ಪ್ರತೀತಿ ಇದೆ.

ಗುರುದ್ವಾರದಲ್ಲಿನ ನಿಶಾನ್‌ ಸಾಹಿಬ್‌ ಧ್ವಜವನ್ನು ತಾಲಿಬಾನ್‌ ಉಗ್ರರು ಕಿತ್ತು ಬಿಸಾಡಿದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿವೆ. ಈ ಘಟನೆ ಕುರಿತು ಭಾರತ ಸರ್ಕಾರ, ತನ್ನ ಅಸಮಾಧಾನವನ್ನು ಅಫ್ಘಾನಿಸ್ತಾನ ಸರ್ಕಾರಕ್ಕೆ ಸಲ್ಲಿಸಿತ್ತು.

ಪಾಕಿಸ್ತಾನ ಪಂಜಾಬ್‌ ಪ್ರಾಂತ್ಯದಲ್ಲಿ ಇತ್ತೀಚೆಗೆ ನಡೆದ ಹಿಂದೂ ದೇವಾಲಯ ಧ್ವಂಸ ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪಾಕಿಸ್ತಾನದ ಸುಪ್ರೀಂ ಕೋರ್ಟ್‌, ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆದುಕೊಂಡಿತ್ತು.. ದೇವಸ್ಥಾನ ಮೇಲೆ ದಾಳಿಯಾಗುವ ಮೊದಲು ಪೊಲೀಸರು ಏನು ಮಾಡುತ್ತಿದ್ದರು? ಈ ಘಟನೆ ಜಾಗತೀಕವಾಗಿ ದೇಶದ ಘನತೆ ಕುಗ್ಗಿಸಿದೆ.

ಕೂಡಲೇ ದೇವಸ್ಥಾನ ನಾಶ ಮಾಡಿದವರನ್ನು ಬಂಧಿಸುವಂತೆ ನ್ಯಾ. ಗುಲ್ಜಾರ್‌ ಅಹಮದ್‌ ಆದೇಶ ನೀಡಿದ್ದರು. ಇದೇ ವೇಳೆ ದೇಗುಲ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಅರೆ ಸೇನಾಪಡೆಯನ್ನು ಪಾಕ್‌ ಸರ್ಕಾರ ನಿಯೋಜಿಸಿತ್ತು.

ತಾಲಿಬಾನಿಗಳು ನಿತ್ಯ ಒಂದೊಂದು ರೀತಿಯ ಕಾನೂನುಗಳನ್ನು ಜಾರಿಗೆ ತರುತ್ತಿದೆ. ಒಂದೇ ಕಾಲೇಜಿನಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಒಟ್ಟಿ ಕುಳಿತು ವ್ಯಾಸಂಗ ಮಾಡುವಂತಿಲ್ಲ ಎಂದು ಹೇಳಿದ್ದರು. ಆದರೆ ಇದೀಗ ಸಧ್ಯಕ್ಕೆ ವಿದ್ಯಾರ್ಥಿನಿಯರು ಕಾಲೇಜಿಗೆ ಬರುವುದು ಬೇಡ ಎಂದು ಹೇಳಿದ್ದಾರೆ.

English summary
Taliban leader Anas Haqqani on Tuesday visited the shrine of Mahmud Ghazni, who attacked the iconic Somnath Temple in Gujarat in the 17th century, and praised the conqueror as a "renowned Muslim warrior".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X