ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾನ್ಸರ್ ಸಂಪೂರ್ಣ ಗುಣಪಡಿಸುವ ಔಷಧಿ 2020ಕ್ಕೆ ಮಾರುಕಟ್ಟೆಗೆ!

|
Google Oneindia Kannada News

ಜಗತ್ತಿನಾದ್ಯಂತ ಭಯಾನಕ ಕ್ಯಾನ್ಸರ್ ಮಾರಿಯ ಕರಾಳ ಹಸ್ತ ಚಾಚುತ್ತಲೇ ಇದೆ. ಈ ಮಾರಣಾಂತಿಕ ಕಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸುವ ಔಷಧ 2020ನೇ ಇಸವಿ ಹೊತ್ತಿಗೆ ನಮ್ಮ ಬಳಿ ಇರುತ್ತದೆ ಎಂದು ಇಸ್ರೇಲಿ ಬಯೋಟೆಕ್ ಕಂಪನಿ ಹೇಳಿಕೊಂಡಿದೆ. ಈಗಾಗಲೇ ಹಲವು ಬಗೆಯ ಔಷಧಗಳು ಕ್ಯಾನ್ಸರ್ ಗೆ ಲಭ್ಯವಿವೆ. ಆದರೆ ಯಾವುವೂ ಶೇಕಡಾ ನೂರರಷ್ಟು ಗುಣಪಡಿಸುವ ಖಾತ್ರಿ ನೀಡುವುದಿಲ್ಲ.

ಆದರೆ, ಹತ್ತೊಂಬತ್ತು ವರ್ಷಗಳ ಹಿಂದೆ ಆರಂಭವಾದ ಆಕ್ಸಲರೇಟೆಡ್ ಎವಲ್ಯೂಷನ್ ಬಯೋಟೆಕ್ನಾಲಜೀಸ್ ಲಿಮಿಟೆಡ್ ‌ಸಂಸ್ಥೆಯು ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ಗುಣಪಡಿಸುವುದಾಗಿ ಹೇಳಿಕೊಂಡಿದೆ. ಪತ್ರಿಕೆಯೊಂದಕ್ಕೆ ಸಂಸ್ಥೆಯ ಅಧ್ಯಕ್ಷ ನೀಡಿದ ಸಂದರ್ಶನದಲ್ಲಿ ಈ ವಿಷಯ ತಿಳಿಸಿದ್ದಾರೆ.

ಕ್ಯಾನ್ಸರ್ ರೋಗಿಗಳಿಗಾಗಿ ಕೂದಲನ್ನೇ ದಾನ ಮಾಡಿದ ಮಂಗಳೂರಿನ ಮಾಡೆಲ್ಕ್ಯಾನ್ಸರ್ ರೋಗಿಗಳಿಗಾಗಿ ಕೂದಲನ್ನೇ ದಾನ ಮಾಡಿದ ಮಂಗಳೂರಿನ ಮಾಡೆಲ್

ನಾವು ಕಂಡುಹಿಡಿದಿರುವ ಔಷಧವು ಮೊದಲ ದಿನದಿಂದಲೇ ಪರಿಣಾಮಕಾರಿಯಾದದ್ದು. ಅದಕ್ಕೆ ಕೆಲವು ವಾರ ಸಮಯ ಹಿಡಿಸಬಹುದು. ಜತೆಗೆ ಆ ಔಷಧದಿಂದ ಬಹಳ ಕಡಿಮೆ ಅಥವಾ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ. ಸದ್ಯಕ್ಕೆ ಕ್ಯಾನ್ಸರ್ ಚಿಕಿತ್ಸೆಗೆ ತಗುಲುವ ವೆಚ್ಚಕ್ಕಿಂತ ಬಹಳ ಕಡಿಮೆ ಬೆಲೆಗೆ ಈ ಔಷಧ ದೊರೆಯುತ್ತದೆ ಎಂದಿದ್ದಾರೆ.

An Israeli company claims to have found complete cure for cancer

ಈ ಚಿಕಿತ್ಸೆಯಲ್ಲಿ ಬಯೋಟೆಕ್ ಕಂಪನಿಯು ಮಲ್ಟಿ ಟಾರ್ಗೆಟ್ ಟಾಕ್ಸಿನ್ ಎಂದು ಕರೆದಿದ್ದು, SoAP ತಂತ್ರಜ್ಞಾನವನ್ನು ಅವಲಂಬಿಸಿದೆ. ಅದು ಫೇಜ್ ಡಿಸ್ ಪ್ಲೇ ಗ್ರೂಪ್ ಆಫ್ ಟೆಕ್ನಾಲಜೀಸ್ ಗೆ ಸೇರಿದ್ದಾಗಿದೆ.

ಮೊದಲಿಗೆ ಬೇರೆ ಕ್ಯಾನ್ಸರ್ ಗೆ ಸಂಬಂಧಿಸಿದ ಔಷಧಗಳು ಹಾಗೂ ಚಿಕಿತ್ಸೆಗಳು ಏಕೆ ಕೆಲಸ ಮಾಡುತ್ತಿಲ್ಲ ಎಂಬುದನ್ನು ಗುರುತಿಸಿದೆವು. ಆ ನಂತರ ಕ್ಯಾನ್ಸರ್ ಅನ್ನು ಎದುರಿಸಲು ಪರಿಣಾಮಕಾರಿ ಔಷಧ ಕಂಡುಹಿಡಿದೆವು ಎಂದು ಬಯೋಟೆಕ್ ಕಂಪನಿಯ ಸಿಇಒ ಹೇಳಿದ್ದಾರೆ.

ಕ್ಯಾನ್ಸರ್ ಗೆ ಈಗಿರುವ ಹಲವು ಔಷಧಗಳು ನಿರ್ದಿಷ್ಟ ಗುರಿಯತ್ತ ದಾಳಿ ಮಾಡುತ್ತವೆ. ಆದರೆ ನಮ್ಮ ಔಷಧವು ಕ್ಯಾನ್ಸರ್ ನ ಮೂರು ದಿಕ್ಕಿನಿಂದ ದಾಳಿ ಮಾಡುತ್ತದೆ ಎಂದಿದ್ದಾರೆ.

ಕ್ಯಾನ್ಸರ್ ರೋಗಿಗಳಿಗೆ ಉಚಿತವಾಗಿ ಹಾಲು, ಮೊಸರು ನೀಡುತ್ತಿದೆ ಬಮುಲ್ಕ್ಯಾನ್ಸರ್ ರೋಗಿಗಳಿಗೆ ಉಚಿತವಾಗಿ ಹಾಲು, ಮೊಸರು ನೀಡುತ್ತಿದೆ ಬಮುಲ್

ಈ ವರ್ಷ ಔಷಧವನ್ನು ಮಾನವರ ಮೇಲೆ ಪ್ರಯೋಗ ಮಾಡಿ ನೋಡಲಾಗುವುದು. ಆ ನಂತರ ಮುಂದಿನ ವರ್ಷ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಜಗತ್ತಿನಾದ್ಯಂತ ಪ್ರತಿ ವರ್ಷ ಹತ್ತು ಲಕ್ಷ ಮಂದಿ ಹೊಸದಾಗಿ ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದಾರೆ.

English summary
At a time when cancer is spreading at a disturbingly fast pace across the globe, an Israeli biotech company have claimed that they will have the cure for this deadly disease by 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X