ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂಜಿಲೆಂಡ್ ನಲ್ಲೂ ಶುರುವಾಯ್ತು ಜನಾಂಗೀಯ ನಿಂದನೆ

|
Google Oneindia Kannada News

ಆಕ್ಲಾಂಡ್, ಮಾರ್ಚ್ 7: ಅಮೆರಿಕದಲ್ಲಿ ಭಾರತೀಯ ವ್ಯಕ್ತಿಯೊಬ್ಬರನ್ನು ಗುಂಡಿಕ್ಕಿ ಕೊಂದು ವಾರವೂ ಕಳೆದಿಲ್ಲ. ವಿದೇಶದಲ್ಲಿರುವ ಭಾರತೀಯರೆಲ್ಲ ಅಸುರಕ್ಷಿತರು ಎಂದುಕೊಳ್ಳುತ್ತಿರುವಾಗಲೇ ನ್ಯೂಜಿಲೆಂಡ್ ನಲ್ಲಿ ಸಹ ಭಾರತೀಯನೊಬ್ಬನ ಮೇಲೆ ನಡೆದ ಜನಾಂಗೀಯ ನಿಂದನೆ ಪ್ರಕರಣ ಬೆಳಕಿಗೆ ಬಂದಿದೆ.

ಇಲ್ಲಿನ ಆಕ್ಲಾಂಡ್ ಪ್ರದೇಶದ ರಸ್ತೆಯೊಂದರಲ್ಲಿ ನರೀಂದರ್ ವೀರ್ ಸಿಂಗ್ ಎಂಬ ಪಂಜಾಬಿ ವ್ಯಕ್ತಿಯೊಬ್ಬನನ್ನು ಅವಾಚ್ಯ ಶಬ್ದಗಳಿಂದ ಬೈದು, "ನಿನ್ನ ದೇಶಕ್ಕೆ ನೀನು ಹಿಂತಿರುಗು" ಎಂದು ನ್ಯೂಜಿಲೆಂಡ್ ಪ್ರಜೆಯೊಬ್ಬ ಗುಡುಗಿದ ಘಟನೆ ನಡೆದಿದೆ. ಒಂದು ವಾರದ ಹಿಂದೆ ತಮ್ಮ ಸ್ನೇಹಿತ ಬಿಕ್ರಮ್ ಜಿತ್ ಸಿಂಗ್ ಎಂಬುವವರನ್ನೂ ಹೀಗೆಯೇ ನಿಂದಿಸಲಾಗಿತ್ತು ಎಂದು ನರೀಂದರ್ ವೀರ್ ಸಿಂಗ್ ಹೇಳಿದ್ದಾರೆ.[ಅಂಧರ ಟಿ20 ವಿಶ್ವಕಪ್: ಕಿವೀಸ್ ಕಿವಿ ಹಿಂಡಿದ ಭಾರತ]

An Indian man faces racist remark in New Zealend

"ನ್ಯೂಜಿಲೆಂಡ್ ನ ಪ್ರಜೆಯೊಬ್ಬ ತನ್ನ ಬಳಿ ಬಂದು ನನ್ನ ದೇಶದ ಬಗ್ಗೆ, ಪಂಜಾಬಿಗಳ ಬಗ್ಗೆ ಕೀಳಾಗಿ ಮಾತನಾಡಿದ್ದನ್ನು ಕೇಳಿ ನೋವಾಯ್ತು, ಆತನ ಉದ್ರಿಕ್ತ ವರ್ತನೆಯನ್ನು ನೋಡಿ ಎಲ್ಲಿ ಆತ ಆಯುಧಗಳಿಂದ ನನ್ನನ್ನು ಇರಿದುಬಿಡುತ್ತಾನೋ ಎಂದು ಭಯವಾಗಿತ್ತು" ಎನ್ನುತ್ತಾರೆ ಸಿಂಗ್. ಒಟ್ಟಿನಲ್ಲಿ ವಿದೇಶದಲ್ಲಿರುವ ಭಾರತೀಯರು ಸುರಕ್ಷಿತರಲ್ಲ ಎಂಬುದು ಈ ಮೂಲಕ ಮತ್ತೊಮ್ಮೆ ದೃಢವಾಗಿದೆ.

English summary
An Indian man faces racist remark in New Zealend. Go back to your country, the New Zealand man told to the Sikh man and insulted him in road. ನ್ಯೂಜಿಲೆಂಡ್ ನಲ್ಲೂ ಶುರುವಾಯ್ತು ಜನಾಂಗೀಯ ನಿಂದನೆ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X