• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಗುವನ್ನು ರಕ್ಷಿಸಿದ ಅಕ್ರಮ ವಲಸಿಗ 'ಸ್ಪೈಡರ್‌ಮ್ಯಾನ್‌'ಗೆ ಫ್ರಾನ್ಸ್ ಪೌರತ್ವ

|

ಪ್ಯಾರಿಸ್, ಮೇ 29: ನಾಲ್ಕನೇ ಮಹಡಿಯ ಬಾಲ್ಕನಿಯಲ್ಲಿ ನೇತಾಡುತ್ತಿದ್ದ ಮಗುವನ್ನು ಜೀವದ ಹಂಗು ತೊರೆದು ರಕ್ಷಿಸಿದ ಸಾಹಸಿಗ 'ಸ್ಪೈಡರ್‌ಮ್ಯಾನ್‌'ನ ಅದೃಷ್ಟ ಖುಲಾಯಿಸಿದೆ.

ಪ್ಯಾರಿಸ್‌ನ ಅಪಾರ್ಟ್‌ಮೆಂಟ್‌ ಒಂದರ ಬಾಲ್ಕನಿಯಲ್ಲಿ ಸಿಲುಕಿಕೊಂಡಿದ್ದ ಮಗುವನ್ನು ಚಕಚಕನೆ ಮಹಡಿ ಏರಿ ರಕ್ಷಿಸಿದ ಮಾಲಿಯ ಅಕ್ರಮ ವಲಸಿಗ ಮಮೌದೊ ಗಸಾಮ (22) ಅವರಿಗೆ ಫ್ರಾನ್ಸ್‌ನ ಪೌರತ್ವ ನೀಡುವುದಾಗಿ ಅಧ್ಯಕ್ಷ ಎಮಾನ್ಯುಯೆಲ್ ಮಾಕ್ರಾನ್ ಹೇಳಿದ್ದಾರೆ.

ಒಮಾನ್ ನಲ್ಲಿ ಮೆಕುನು ರುದ್ರನರ್ತನ: ಮೈನಡುಗಿಸುವ ವೈರಲ್ ವಿಡಿಯೋ

ಜತೆಗೆ ತುರ್ತು ಸನ್ನಿವೇಶ ನಿರ್ವಹಣಾ ವಿಭಾಗದಲ್ಲಿ ಕೆಲಸ ಮಾಡುವ ಆಹ್ವಾನವನ್ನೂ ಫ್ರಾನ್ಸ್ ಸರ್ಕಾರ ಈ ಸಾಹಸಿಗನಿಗೆ ನೀಡಿದೆ.

ಸ್ಮಾರ್ಟ್ ಫೋನ್‌ನಲ್ಲಿ ಪೋಕಿಮಾನ್ ಗೋ ಆಟವಾಡುತ್ತಿದ್ದ ನಾಲ್ಕು ವರ್ಷದ ಮಗನನ್ನು ಮನೆಯಲ್ಲಿಯೇ ಬಿಟ್ಟು, ತಂದೆ ಶಾಪಿಂಗ್‌ಗೆಂದು ಹೊರಗೆ ಹೋಗಿದ್ದರು. ಆಟವಾಡುತ್ತಿದ್ದ ಮಗು ಬಾಲ್ಕನಿಯ ಮೇಲಿನಿಂದ ಹೊರಗೆ ಹೇಗೆ ಬಂದಿತ್ತು ಎಂದು ಗೊತ್ತಾಗಿಲ್ಲ.

ಬಾಲ್ಕನಿಯ ಹೊರಗೆ ಬೀಳುವ ಸ್ಥಿತಿಯಲ್ಲಿ ಸರಳುಗಳನ್ನು ಹಿಡಿದು ನೇತಾಡುತ್ತಿದ್ದ ಮಗುವನ್ನು ಕಂಡು ಅಪಾರ್ಟ್‌ಮೆಂಟ್‌ನ ಜನರು ಗಾಬರಿಗೊಂಡಿದ್ದರು. ಕೂಡಲೇ ಸಮಯಪ್ರಜ್ಞೆ ಮೆರೆದ ಗಸಾಮ, 'ಸ್ಪೈಡರ್‌ಮ್ಯಾನ್‌'ನಂತೆ ಗೋಡೆಏರಿ, ಬಾಲ್ಕನಿಯಿಂದ ಬಾಲ್ಕನಿಗೆ ಜಿಗಿದು ಆ ಮಗುವಿನ ಜೀವ ಉಳಿಸಿದ್ದಾರೆ.

ಈ ಘಟನೆಯ ದೃಶ್ಯವನ್ನು ಸ್ಥಳೀಯರು ಸೆರೆಹಿಡಿದ್ದು, ವಿಡಿಯೋ ವೈರಲ್ ಆಗಿದೆ. ಈಗಾಗಲೇ ಫ್ರಾನ್ಸ್‌ ಹಾಗೂ ಗಸಾಮ ಅವರ ತವರು ಮಾಲಿಯಲ್ಲಿ ಗಸಾಮ ಜನಪ್ರಿಯವಾಗಿದ್ದು, ಜನರು ಗಸಾಮ ಅವರನ್ನು 'ಸ್ಪೈಡರ್‌ಮ್ಯಾನ್' ಎಂದೇ ಕರೆಯುತ್ತಿದ್ದಾರೆ.

ಜೀವ ಒತ್ತೆ ಇಟ್ಟು ಸಾಹಸ ಮೆರೆದ ಗಸಾಮಗೆ ಫ್ರಾನ್ಸ್ ಪೌರತ್ವ ನೀಡುವ ಪ್ರಕ್ರಿಯೆಗಳು ನಡೆಯುತ್ತಿವೆ. ಫ್ರಾನ್ಸ್ ಕಾನೂನಿನ ಪ್ರಕಾರ ಅಕ್ರಮ ವಲಸಿಗರಿಗೆ ತಕ್ಷಣ ಪೌರತ್ವ ನೀಡುವುದು ಸಾಧ್ಯವಿಲ್ಲ. ಇದಕ್ಕೆ ಸ್ವಲ್ಪ ದಿನಗಳು ಬೇಕಾಗುತ್ತದೆ ಎನ್ನಲಾಗಿದೆ.

2014ರಲ್ಲಿ ಮೆಡಿಟರೇನಿಯನ್ ಮೂಲಕ ಇಟಲಿಗೆ ವಲಸೆ ಹೋಗಲು ಪ್ರಯತ್ನಿಸಿದ್ದ ಗಸಾಮ, ಫ್ರಾನ್ಸ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು.

ಇತ್ತ ಮಗುವನ್ನು ಆಟವಾಡಲು ಬಿಟ್ಟು ಹೊರಹೋಗಿದ್ದ ತಂದೆಯನ್ನು ನಿರ್ಲಕ್ಷ್ಯತನದ ಆರೋಪದಡಿ ಪೊಲೀಸರು ಬಂಧಿಸಿದ್ದಾರೆ. ಈ ತಂದೆಗೆ ಎರಡು ವರ್ಷ ಜೈಲು ಶಿಕ್ಷೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

English summary
France president Emmanuel Macron offered citizenship to an illegal immigrant from Mali, who climbed up the balconies to save a 4 year old boy. Malian youth nicknamed as spiderman, as he was climbed the four-floors and saved the child.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X