ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೌಂಟ್ ಎವರೆಸ್ಟ್ ಚಾರಣ ಮಾಡುತ್ತಿದ್ದ ಅಮೆರಿಕ ಪ್ರಜೆ ಸಾವು

ವಿಶ್ವದ ಅತ್ಯಂತ ಎತ್ತರದ ಪರ್ವತ ಎಂದೇ ಪ್ರಸಿದ್ಧಿ ಪಡೆದ ಮೌಂಟ್ ಎವರೆಸ್ಟ್ ಚಾರಣ ಮಾಡುತ್ತಿದ್ದ ಅಮೆರಿಕದ ಪ್ರಜೆಯೊಬ್ಬ ಆಕ್ಸಿಜನ್ ಕೊರತೆಯಿಂದಾಗಿ ಸಾವಿನಪ್ಪಿದ ಘಟನೆ ನಿನ್ನೆ ನಡೆದಿದೆ.

By ಒನ್ ಇಂಡಿಯ ಪ್ರತಿನಿಧಿ
|
Google Oneindia Kannada News

ನೇಪಾಳ, ಮೇ 22: ವಿಶ್ವದ ಅತ್ಯಂತ ಎತ್ತರದ ಪರ್ವತ ಎಂದೇ ಪ್ರಸಿದ್ಧಿ ಪಡೆದ ಮೌಂಟ್ ಎವರೆಸ್ಟ್ ಚಾರಣ ಮಾಡುತ್ತಿದ್ದ ಅಮೆರಿಕದ ಪ್ರಜೆಯೊಬ್ಬ ಆಕ್ಸಿಜನ್ ಕೊರತೆಯಿಂದಾಗಿ ಸಾವಿನಪ್ಪಿದ ಘಟನೆ ನಿನ್ನೆ (ಮೇ 21) ನಡೆದಿದೆ.

ಮೃತರನ್ನು ಅಮೆರಿಕದ ರೊಲಾಂಡ್ ಯೀರ್ವುಡ್ (50) ಎಂಡು ಗುರುತಿಸಲಾಗಿದ್ದು, ಮೌಂಟ್ ಎವರೆಸ್ಟ್ ನ ಡೆತ್ ಜೋನ್ ಎಂಬ 27,500 ಅಡಿ ಎತ್ತರದ ಪ್ರದೇಶದಲ್ಲಿದ್ದ ರೋಲಾಂಡ್ ಆಕ್ಸಿಜನ್ ಕೊರತೆಯಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಎವರೆಸ್ಟ್ ಪರಿವಾಸ್ ಟ್ರೆಕ್ಕಿಂಗ್ ಕಲ್ಪನಿಯ ಮುರಳೀ ಶರ್ಮಾ ಎನ್ನುವವವರು ತಿಳಿಸಿದ್ದಾರೆ.[ಈ 2 ಮಕ್ಕಳ ತಾಯಿ, 5 ದಿನಗಳಲ್ಲಿ ಮೌಂಟ್ ಎವರೆಸ್ಟ್ 2 ಬಾರಿ ಹತ್ತಿಳಿದ್ರು!]

An American citizen dies in Mount Everest

ಒಂದು ತಿಂಗಳಿನಲ್ಲಿ ಎವರೆಸ್ಟ್ ಗೆ ಪ್ರವಾಕ್ಕೆಂದು ತೆರಳಿ ಮೃತರಾದ ಮೂರನೇ ವ್ಯಕ್ತಿ ರೊಲಾಂಡ್ ಆಗಿದ್ದು, ಭಾರತದ ಇನ್ನೊಬ್ಬ ವ್ಯಕ್ತಿ ಕಾಣೆಯಾಗಿದ್ದಾರೆಂದು ತಿಳಿದು ಬಂದಿದೆ. ಮೌಂಟ್ ಎವರೆಸ್ಟ್ ನಲ್ಲಿ ಇಂಥ ಘಟನೆಗಳು ಪದೇ ಪದೇ ನಡೆಯುತ್ತಿದ್ದು, ಭದ್ರತೆಯ ಬಗ್ಗೆ ಹೆಚ್ಚಿನ ಗಮನ ನೀಡುವ ಅಗತ್ಯವಿದೆ.

ಚೀನಾ ಮತ್ತು ನೇಪಾಳದ ಗಡಿಯಲ್ಲಿರುವ ಮೌಂಟ್ ಎವರೆಸ್ಟ್ ಸಮುದ್ರ ಮಟ್ಟದಿಂದ 29,029 ಅಡಿ ಎತ್ತರದಲ್ಲಿದ್ದು, ಜಗತ್ತಿನ ಅತ್ಯಂತ ಎತ್ತರದ ಪರ್ವತ ಎನ್ನಿಸಿದೆ.

{promotion-urls}

English summary
An American citizen who was climbing Mount Everest has died yesterday, May 21st. This is the third death on the world's highest mountain in past one month and raising safety concerns for climbers, sources said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X