ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ದೇಶದಲ್ಲಿ ಗಂಡು ಹೆಣ್ಣು ಒಟ್ಟಾಗಿ ಪಾರ್ಕ್‌ಗೆ ಹೋಗುವಂತಿಲ್ಲ

|
Google Oneindia Kannada News

ಕಾಬೂಲ್ ಮಾರ್ಚ್ 28: ಅಫ್ಘಾನಿಸ್ತಾನದ ಅಮ್ಯೂಸ್‌ಮೆಂಟ್ ಪಾರ್ಕ್‌ಗಳಲ್ಲಿ ತಾಲಿಬಾನ್‌ಗಳು ಲಿಂಗ ಪ್ರತ್ಯೇಕತೆಯನ್ನು ಜಾರಿಗೊಳಿಸಿದ್ದಾರೆ ಎಂದು ಹೇಳಲಾಗಿದೆ. ಒಂದೇ ದಿನ ಅಮ್ಯೂಸ್‌ಮೆಂಟ್ ಪಾರ್ಕ್‌ಗಳಿಗೆ ಪುರುಷರು ಮತ್ತು ಮಹಿಳೆಯರು ಒಟ್ಟಿಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ.

ಪುರುಷರಿಗೆ ಬುಧವಾರದಿಂದ ಶನಿವಾರದವರೆಗೆ ಉದ್ಯಾನವನಗಳಿಗೆ ಭೇಟಿ ನೀಡಲು ಅವಕಾಶವಿರುತ್ತದೆ. ಆದರೆ ವಾರದ ಉಳಿದ ಭಾಗದಲ್ಲಿ ಮಹಿಳೆಯರು ಅಲ್ಲಿಗೆ ಹೋಗಬಹುದು ಎಂದು ಸುದ್ದಿ ಸಂಸ್ಥೆ ಸ್ಪುಟ್ನಿಕ್ ಹೇಳಿದೆ. "ಇಸ್ಲಾಮಿಕ್ ಎಮಿರೇಟ್‌ನ ಮುಜಾಹಿದ್ದೀನ್‌ಗಳು ಶಸ್ತ್ರಾಸ್ತ್ರಗಳು, ಮಿಲಿಟರಿ ಸಮವಸ್ತ್ರಗಳು ಮತ್ತು ವಾಹನಗಳೊಂದಿಗೆ ಅಮ್ಯೂಸ್‌ಮೆಂಟ್ ಪಾರ್ಕ್‌ಗಳಿಗೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ" ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ. ಅವರು ಮನೋರಂಜನಾ ಉದ್ಯಾನವನಗಳ ಎಲ್ಲಾ ನಿಯಮಗಳು ಮತ್ತು ನಿಬಂಧನೆಗಳಿಗೆ ಬದ್ಧರಾಗಿರುತ್ತಾರೆ ಎಂದು ಅವರು ಹೇಳಿದರು.

ಕಾಬೂಲ್‌ನಲ್ಲಿ ತಾಲಿಬಾನಿಗಳು ಅಧಿಕಾರವನ್ನು ವಶಪಡಿಸಿಕೊಂಡು ಏಳು ತಿಂಗಳು ಕಳೆದಿವೆ. ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ತನ್ನ ಆಡಳಿತ ಆರಂಭಿಸಿ ಶಿಕ್ಷಣ ಪಡೆಯುವ ಮಹಿಳೆಯರ ಹಕ್ಕುಗಳ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಿದೆ. ಆದರೆ ಕೆಲ ದಿನಗಳ ಹಿಂದೆ ತಾಲಿಬಾನ್ ಆಕ್ರಮಿತ ಕಾಬೂಲ್‌ನಲ್ಲಿ ಅಲ್ಲಿನ ಶಿಕ್ಷಣ ಅಧಿಕಾರಿಗಳು ಮಾಧ್ಯಮಿಕ ಶಾಲೆಗಳನ್ನು ಪುನರಾರಂಭಿಸುವುದಾಗಿ ಘೋಷಿಸಿದ್ದರು. ಈ ಘೋಷಣೆಯ ಬಳಿಕ ಅಫ್ಘಾನ್ ರಾಜಧಾನಿಯಲ್ಲಿ ವಿದ್ಯಾರ್ಥಿನಿಯರು ತರಗತಿಗೆ ಹಾಜರಾಗಿದ್ದಾರೆ. ಆದರೆ ಶಾಲೆಗಳಿಗೆ ವಿದ್ಯಾರ್ಥಿನಿಯರ ಪ್ರವೇಶವನ್ನು ಮತ್ತೆ ನಿರ್ಬಂಧಿಸಲಾಗಿದೆ.

Amusement Parks in Afghanistan Now Victim of Taliban;S Gender Segregation

ಕಳೆದ ಆಗಸ್ಟ್‌ನಲ್ಲಿ ತಾಲಿಬಾನ್ ಅಧಿಕಾರ ವಹಿಸಿಕೊಂಡಾಗ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಎಲ್ಲಾ ಶಾಲೆಗಳನ್ನು ಮುಚ್ಚಲಾಯಿತು. ಎರಡು ತಿಂಗಳ ನಂತರ ತರಗತಿಗಳನ್ನು ಪುನರಾರಂಭಿಸಿ ಹುಡುಗರಿಗೆ ಮತ್ತು ಕೆಲವು ಕಿರಿಯ ಹುಡುಗಿಯರಿಗೆ ಮಾತ್ರ ಶಾಲೆಗಳಿಗೆ ತೆರಳಲು ಅನುಮತಿಸಲಾಗಿತ್ತು. ಬಳಿಕ ವಿದ್ಯಾರ್ಥಿನಿಯರಿಗೆ ನಿಷೇಧವನ್ನು ಹೇರಲಾಗಿದೆ.

Recommended Video

H. Vishwanath : ಎಲ್ಲಾ‌ Muslim ದೇಶಗಳು ಭಾರತಕ್ಕೆ ನಿರ್ಬಂಧ ಹೇರಿದ್ರೆ ಏನಾಗುತ್ತೆ? | Oneindia Kannada

ತಾಲಿಬಾನ್ ಮಹಿಳೆಯರ ಮೇಲೆ ಹಲವಾರು ನಿರ್ಬಂಧಗಳನ್ನು ಹೇರಿದೆ. ಅನೇಕ ಸರ್ಕಾರಿ ಉದ್ಯೋಗಗಳಿಂದ ಅವರನ್ನು ತೆಗೆದುಹಾಕಲಾಗಿದೆ. ಅವರು ಹಿಜಾಬ್ ಇಲ್ಲದೆ ಏಕಾಂಗಿಯಾಗಿ ಹೊರಬರುವಂತಿಲ್ಲ. ನಗರಗಳ ಹೊರಗೆ ಏಕಾಂಗಿಯಾಗಿ ಪ್ರಯಾಣಿಸುವುದನ್ನು ನಿಷೇಧಿಸಲಾಗಿದೆ. ಅವರ ಜೊತೆಗೆ ಅವರ ಮನೆಯ ಪುರುಷರು ಅವರೊಂದಿಗಿರಬೇಕು ಎನ್ನುವ ನಿಯಮ ತಂದಿದೆ. ಜೊತೆಗೆ ತಾಲಿಬಾನಿಗಳು ಮಹಿಳಾ ಹಕ್ಕುಗಳಿಗಾಗಿ ಪ್ರತಿಭಟಿಸಿದ ಹಲವಾರು ಕಾರ್ಯಕರ್ತರನ್ನೂ ಬಂಧಿಸಿದ್ದಾರೆ. ಹೀಗಾಗಿ ಆರಂಭದಲ್ಲಿ ತಾಲಿಬಾನಿಗಳ ಅಟ್ಟಹಾಸವನ್ನು ಕಂಡ ಅಫ್ಘಾನಿಸ್ತಾನಿಗಳ ಯಾವುದೇ ಮಹಿಳಾ ಬದಲಾವಣೆಯನ್ನು ಅಲ್ಲಿನ ಜನ ನಂಬಲು ಸಿದ್ಧರಿಲ್ಲ.

English summary
The Taliban is said to have enforced a gender segregation in amusement parks of Afghanistan. Men and women have been banned from entering amusement parks on the same day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X