• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಾರ್ಜಾ ಸ್ಟೇಡಿಯಂಗೆ ಅಚ್ಚರಿಯ ಭೇಟಿ ಕೊಟ್ಟ ಅಮಿತ್ ಶಾ ಪುತ್ರ

|

ಶಾರ್ಜಾ, ಸೆ. 19: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈಗಷ್ಟೇ ಗುಣಮುಖರಾಗಿ ಕ್ವಾರಂಟೈನ್ ನಿಂದ ಹೊರ ಬರುತ್ತಿದ್ದಾರೆ. ಈ ವೇಳೆಗಾಗಲೇ ಅವರ ಪುತ್ರ ಜಾಯ್ ಶಾ ಅವರು ಶಾರ್ಜಾದ ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಕೊರೊನಾ ಭೀತಿಯಿಂದ ಎರಡು ವಾರಗಳ ಕಾಲ ಸಕ್ರಿಯವಾಗಿರದ ಅಮಿತ್ ಶಾ ಹಾಗೂ ಕುಟುಂಬದವರು ಸದ್ಯ ಕೊರೊನಾ ಭೀತಿಯಿಂದ ಹೊರ ಬಂದಿರುವಂತಿದೆ. ಆಸ್ಪತ್ರೆಯಿಂದ ಅಮಿತ್ ಶಾ ಹೊರ ಬಂದಿದ್ದಾರೆ ಇನ್ನೇನು ಮುಂಗಾರು ಅಧಿವೇಶನಕ್ಕೂ ಹಾಜರಾಗಲಿದ್ದಾರೆ. ಈ ನಡುವೆ ಅವರ ಪುತ್ರ ಜಾಯ್ ಶಾ ಅವರು ಐಪಿಎಲ್ ಸಿದ್ಧತೆ ನೋಡಲು ಶಾರ್ಜಾಗೆ ಬಂದಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಕಾರ್ಯದರ್ಶಿಯಾಗಿದ್ದಾರೆ.

ಐಪಿಎಲ್ 2020: ಬುಕ್ಕಿಗಳ ಪ್ರಕಾರ ಕಪ್ ಗೆಲ್ಲೋ ಫೇವರಿಟ್ ತಂಡ?

ಅಬುಧಾಬಿಯಲ್ಲಿ ಐಪಿಎಲ್ 2020ರ ಮೊದಲ ಪಂದ್ಯ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಆರಂಭಕ್ಕೂ ಮುನ್ನ ಶಾರ್ಜಾ ಮೈದಾನದಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಜೊತೆ ಜಾಯ್ ಓಡಾಡಿದ್ದಾರೆ. ಶಾರ್ಜಾ ಸ್ಟೇಡಿಯಂ ಸಿದ್ಧತೆ ಬಗ್ಗೆ ಟ್ವೀಟ್ ಮಾಡಿ, ಮೈದಾನದ ಸುಂದರ ಚಿತ್ರವನ್ನು ಹಂಚಿಕೊಂಡಿದ್ದಾರೆ

ಕ್ವಾರಂಟೈನ್ ನಿಯಮಗಳು ಸರಳ

ಕ್ವಾರಂಟೈನ್ ನಿಯಮಗಳು ಸರಳ

ಯುಎಇಯಲ್ಲಿ ಕ್ವಾರಂಟೈನ್ ನಿಯಮಗಳು ಭಾರತಕ್ಕಿಂತ ಸಡಿಲವಾಗಿರುವುದು ಜಾಯ್ ಅವರಿಗೆ ಅನುಕೂಲವಾಗಿ ಪರಿಣಮಿಸಿದೆ. ಜಾಯ್ ಅವರ ಜೊತೆ ಸ್ಟೇಡಿಯಂನಲ್ಲಿ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನ ಉಪಾಧ್ಯಕ್ಷ ವಲೀದ್ ಬುಖಾತಿರ್, ಸ್ಟೇಡಿಯಂನ ಸಿಇಒ, ಬುಖಾತಿರ್ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಖಲಾಫ್ ಬುಖಾತಿರ್ ಅವರು ಉಪಸ್ಥಿತರಿದ್ದರು.

ಅತಿ ಹೆಚ್ಚು ಏಕದಿನ ಪಂದ್ಯ ಕಂಡಿರುವ ಮೈದಾನ

ಅತಿ ಹೆಚ್ಚು ಏಕದಿನ ಪಂದ್ಯ ಕಂಡಿರುವ ಮೈದಾನ

ಶಾರ್ಜಾದಲ್ಲಿ ಸೆಪ್ಟೆಂಬರ್ 22ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯವಾಡಲಿದೆ. ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ಅತಿ ಹೆಚ್ಚು ಏಕದಿನ ಕ್ರಿಕೆಟ್ ಪಂದ್ಯಗಳನ್ನಾಡಲಾಗಿದೆ. ಸರಿ ಸುಮಾರು 236 ಪಂದ್ಯಗಳಿಗೆ ವೇದಿಕೆ ಒದಗಿಸಿದೆ.

80ರ ದಶಕದಲ್ಲಿ ನಿರ್ಮಾಣಗೊಂಡ ಮೈದಾನದಲ್ಲಿ 1984ರಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಲಾಯಿತು. ಏಷ್ಯಾ ಕಪ್ ಟೂರ್ನಮೆಂಟ್ ನಲ್ಲಿ ಶ್ರೀಲಂಕಾ ಹಾಗೂ ಪಾಕಿಸ್ತಾನ ಹಿಂದಿಕ್ಕಿ ಭಾರತ ಕಪ್ ಎತ್ತಿತ್ತು.

IPL 2020: ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಪೂರ್ಣ ವೇಳಾಪಟ್ಟಿ

ಶಾರ್ಜಾ ಮೈದಾನದಲ್ಲಿ 12 ಪಂದ್ಯಗಳು ನಡೆಯಲಿವೆ

ಶಾರ್ಜಾ ಮೈದಾನದಲ್ಲಿ 12 ಪಂದ್ಯಗಳು ನಡೆಯಲಿವೆ

ಶಾರ್ಜಾ ಮೈದಾನದಲ್ಲಿ 12 ಪಂದ್ಯಗಳು ನಡೆಯಲಿವೆ. ವೇಳಾಪಟ್ಟಿ ಹೀಗಿದೆ:

ಸೆಪ್ಟೆಂಬರ್ 22: ರಾಜಸ್ಥಾನ ವಿರುದ್ಧ ಚೆನ್ನೈ

ಸೆಪ್ಟೆಂಬರ್ 27: ರಾಜಸ್ಥಾನ ವಿರುದ್ಧ ಪಂಜಾಬ್

ಅಕ್ಟೋಬರ್ 3: ಡೆಲ್ಲಿ ವಿರುದ್ಧ ಕೋಲ್ಕತ್ತಾ

ಅಕ್ಟೋಬರ್ 4: ಮುಂಬೈ ವಿರುದ್ಧ ಹೈದರಾಬಾದ್

ಅಕ್ಟೋಬರ್ 9: ರಾಜಸ್ಥಾನ ವಿರುದ್ಧ ಡೆಲ್ಲಿ

ಅಕ್ಟೋಬರ್ 12: ಬೆಂಗಳೂರು ವಿರುದ್ಧ ಕೋಲ್ಕತ್ತಾ

ಅಕ್ಟೋಬರ್ 15: ಬೆಂಗಳೂರು ವಿರುದ್ಧ ಪಂಜಾಬ್

ಅಕ್ಟೋಬರ್ 17: ಡೆಲ್ಲಿ ವಿರುದ್ಧ ಚೆನ್ನೈ

ಅಕ್ಟೋಬರ್ 23: ಚೆನ್ನೈ ವಿರುದ್ಧ ಮುಂಬೈ

ಅಕ್ಟೋಬರ್ 26: ಕೋಲ್ಕತ್ತಾ ವಿರುದ್ಧ ಪಂಜಾಬ್

ಅಕ್ಟೋಬರ್ 31: ಬೆಂಗಳೂರು ವಿರುದ್ಧ ಹೈದರಾಬಾದ್

ನವೆಂಬರ್ 3: ಹೈದರಾಬಾದ್ ವಿರುದ್ಧ ಮುಂಬೈ.

ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಜೊತೆ ಒಪ್ಪಂದ

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜಾಯ್ ಶಾ ಅವರು ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಹಾಗೂ ಬಿಸಿಸಿಐ ನಡುವೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಭಾರತ ಹಾಗೂ ಯುಎಇ ನಡುವಿನ ಕ್ರಿಕೆಟ್ ಬಾಂಧವ್ಯ ಹಾಗೂ ಅಭಿವೃದ್ಧಿಗೆ ಪೂರಕವಾಗಿ ಕರ್ಯ ನಿರ್ವಹಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಜಾಯ್ ಶಾ ಹೇಳಿದರು.

English summary
Jay Shah, the Secretary of the Board of Control for Cricket in India (BCCI), visited the Sharjah Cricket Stadium on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X