ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಎಇಯಿಂದ ಭಾರತಕ್ಕೆ 'ಅಮಿತಾಬ್ ಬಚ್ಚನ್' ಹಸ್ತಾಂತರ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಮೇ 18 : ಅಮಿತಾಬ್ ಬಚ್ಚನ್ ಅವರನ್ನು ಯುಎಇ ಯಿಂದ ಭಾರತಕ್ಕೆ ಹಸ್ತಾಂತರ ಮಾಡಲಾಗುತ್ತಿದೆ. ಅರೇ ಇದೇನಿದು ಬಾಲಿವುಡ್ ಬಿಗ್ ಬಿ ಯನ್ನು ಯಾಕೆ ಹಸ್ತಾಂತರ ಮಾಡುತ್ತಿದ್ದಾರೆ? ಎಂದು ಆಶ್ಚರ್ಯ ಪಡುತ್ತಿದ್ದೀರಾ ಮುಂದಕ್ಕೆ ಓದಿ...

ಇದೀಗ ಉಗ್ರರ ಕಣ್ಣು ಪ್ರಖ್ಯಾತ ಸಿನಿಮಾ ನಟರ ಹೆಸರಿನ ಮೇಲೂ ಬಿದ್ದಿದೆ. ಹಿಂದೆ ರಿಯಾಜ್ ಭಟ್ಕಳ್ ಮತ್ತು ಯಾಸಿನ್ ಭಟ್ಕಳ್ ತಮ್ಮನ್ನು ಶಾರುಖ್ ಖಾನ್ ಎಂದು ಕರೆದುಕೊಂಡಿದ್ದರು. ಈಗ ಮತ್ತೊಬ್ಬ ಉಗ್ರ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಹೆಸರಿನ ಮೇಲೆ ಕಣ್ಣು ಹಾಕಿದ್ದಾನೆ.[ಐಎಸ್ಐಎಸ್ ಸೇರಲು ಮುಂದಾಗಿದ್ದ 21 ಯುವಕರಿಗೆ ತಡೆ]

terrorism

ನಕಲಿ ಕರೆನ್ಸಿ ದಂಧೆಯಲ್ಲಿ ಭಾಗಿಯಾಗಿರುವ ಕೇರಳ ಕಾಸರಗೋಡು ಮೂಲದ ಹಜಿ ಅಬ್ದುಲ್ಲಾ ತನ್ನನ್ನು ತಾನು ಅಮಿತಾಬ್ ಬಚ್ಚನ್ ಎಂದು ಕರೆದುಕೊಂಡಿದ್ದಾನೆ. ಯುಎಇ ಯಲ್ಲಿ ವಿಚಾರಣೆ ಎದುರಿಸಿದ ಅಬ್ದುಲ್ಲಾ ನನ್ನು ಭಾರತಕ್ಕೆ ಹಸ್ತಾಂತರ ಮಾಡಲಾಗುತ್ತಿದೆ.

ಫ್ಯಾನ್ಸಿ ಹೆಸರು ಉಗ್ರರಿಗೆ ಯಾಕೆ ಬೇಕು?
ಅಲಿಯಾಸ್ ಎಂದು ಕರೆದಿಕೊಳ್ಳದಿದ್ದರೆ ಉಗ್ರರಿಗೆ ಏನಾಗುತ್ತದೋ ತಿಳಿಯದು. ಪೊಲೀಸರ ಕಣ್ಣಿಗೆ ಮಣ್ಣೆರೆಚಲು, ಭದ್ರತಾ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳಲು, ದೇಶದೆಲ್ಲಡೆ ಸುಲಭವಾಗಿ ಓಡಾಡಲು ಉಗ್ರರು ತಮ್ಮ ಹೆಸರನ್ನು ಪದೇ ಪದೇ ಬದಲಾಯಿಸುತ್ತಿರುತ್ತಾರೆ.

ಯಾಸಿನ್ ಭಟ್ಕಳ್ ಬಳಿ ನೀನೇಕೆ ಶಾರುಖ್ ಖಾನ್ ಹೆಸರು ಇಟ್ಟುಕೊಂಡೆ ಎಂದದೆ ಆತ ನಾನು ಶಾರುಖ್ ನ ಅಭಿಮಾನಿ ಹಾಗಾಗಿ ಇಟ್ಟುಕೊಂಡೆ ಎಂದು ಹೇಳಿದ್ದ. ರಿಯಾಜ್ ಭಟ್ಕಳ್ ಶಾರುಖ್ ಖಾನ್ ಹೆಸರಿಟ್ಟುಕೊಳ್ಳಲು ಇದೇ ಕಾರಣವಿತ್ತು.['ಜಾಣ' ಮೆಹದಿ ಗುಪ್ತದಳದ ಕಣ್ಣು ತಪ್ಪಿಸಿದ್ದು ಹೇಗೆ?]

ಅಮಿತಾಬ್ ಬಚ್ಚನ್ ಇದೇ ಮೊದಲು
ಹಿಂದೆಲ್ಲ ಅಲಿಯಾಸ್ ಗಳನ್ನು ದುಷ್ಕರ್ಮಿಗಳ ಪುಂಡಾಟ ಆಧರಿಸಿ ನೀಡಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಅಮಿತಾಬ್ ಬಚ್ಚನ್ ಹೆಸರನ್ನು ಉಗ್ರನೊಬ್ಬ ತನ್ನ ಹೆಸರಿಗೆ ಬಳಸಿಕೊಂಡಿದ್ದಾನೆ.[ಡ್ರೋನ್ ಬಳಸಿ ದೆಹಲಿ ಸ್ಫೋಟಕ್ಕೆ ಲಷ್ಕರ್ ಸಂಚು]

ಹಜಿಯನ್ನು ಭಾರತಕ್ಕೆ ಹಸ್ತಾಂತರ ಮಾಡುತ್ತಿರುವ ಸಂದರ್ಭದಲ್ಲಿ ಗುಪ್ತಚರ ಇಲಾಖೆ ಅನೇಕ ಮಾಹಿತಿಗಳನ್ನು ಬಹಿರಂಗ ಮಾಡಿದೆ. ನಕಲಿ ನೋಟು ಜಾಲದ ಕಿಂಗ್ ಪಿನ್ ಈ ಹಜಿ . ಹಜಿಗೆ ಅಂತರಾಷ್ಟ್ರೀಯ ಮಾದಕ ವಸ್ತು ಸಾಗಾಟಗಾರ ಇಕ್ಬಾಲ್ ಖನ್ನಾ ಜತೆ ಸಂಬಂಧವಿರುವ ಬಗ್ಗೆಯೂ ತಿಳಿದು ಬಂದಿದೆ.

English summary
Criminals and terrorists have taken a liking for fancy names. While Indian Mujahideen operatives, Riyaz Bhatkal and Yasin Bhatkal used the aliases Sharukh Khan, here is one more operative who chose the alias "Amitabh Bachchan."Haji Abdullah alias Amitabh Bachchan a resident of Kasargode, Kerala ran a major fake currency racket in the United Arab Emirates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X