• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದ ಎಚ್ಚರಿಕೆ ನಡುವೆಯೂ ತೈವಾನ್‌ಗೆ ಬಂದಿಳಿದ ಅಮೆರಿಕದ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ

|
Google Oneindia Kannada News

ತೈಪೆ, ಆಗಸ್ಟ್ 2: ಚೀನಾದ ಗಂಭೀರ ಎಚ್ಚರಿಕೆಯ ನಡುವೆಯೂ ಅಮೆರಿಕದ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ತೈವಾನ್‌ಗೆ ಬಂದಿಳಿದಿದ್ದಾರೆ. ಚೀನಾ ಕ್ಸಿಯಾಮೆನ್ ಸುತ್ತ ಪೂರ್ವ ಕರಾವಳಿಯ ವಾಯುಪ್ರದೇಶವನ್ನು ಮುಚ್ಚಿದ್ದರಿಂದ ಆಕೆಯ ವಿಮಾನ ತೈಪೆಯಲ್ಲಿ ಇಳಿಯಿತು. ಚೀನಾದ ಯುದ್ಧ ವಿಮಾನಗಳು ತೈವಾನ್ ಜಲಸಂಧಿಯ ಬಳಿ ಹಾರಾಟ ನಡೆಸಿದೆ ಎಂದು ವರದಿಯಾಗಿದೆ.

ತೈವಾನ್‌ಗೆ ಭೇಟಿ ನೀಡಿದ ನಂತರ ನ್ಯಾನ್ಸಿ ಪೆಲೋಸಿ ಟ್ವೀಟ್ ಮಾಡಿದ್ದಾರೆ, "ತೈವಾನ್‌ಗೆ ನಮ್ಮ ನಿಯೋಗದ ಭೇಟಿಯು ತೈವಾನ್‌ನ ರೋಮಾಂಚಕ ಪ್ರಜಾಪ್ರಭುತ್ವವನ್ನು ಬೆಂಬಲಿಸುವ ಅಮೆರಿಕದ ಅಚಲ ಬದ್ಧತೆಯನ್ನು ಗೌರವಿಸುತ್ತದೆ. ನಮ್ಮ ಭೇಟಿಯು ತೈವಾನ್‌ಗೆ ಹಲವಾರು ಕಾಂಗ್ರೆಷನಲ್ ನಿಯೋಗಗಳಲ್ಲಿ ಒಂದಾಗಿದೆ. 1979 ರ ತೈವಾನ್ ಸಂಬಂಧಗಳ ಕಾಯಿದೆಯ ಯುಎಸ್‌-ಚೀನಾ ನಡುವಿನ ಜಂಟಿ ಸಂಬಂಧಗಳು, ಆರು ಭರವಸೆಗಳನ್ನು ಯಾವುದೇ ರೀತಿಯಲ್ಲಿ ದೀರ್ಘಾವಧಿಯ ಯುನೈಟೆಡ್ ಸ್ಟೇಟ್ಸ್ ನೀತಿಯನ್ನು ವಿರೋಧಿಸುವುದಿಲ್ಲ." ಎಂದು ಅವರು ಹೇಳಿದ್ದಾರೆ.

25 ವರ್ಷಗಳ ಬಳಿಕ ಅಮೆರಿಕದ ಉನ್ನತ ಮಟ್ಟದ ಪ್ರತಿನಿಧಿಯೊಬ್ಬರು ತೈವಾನ್‌ಗೆ ಭೇಟಿ ನೀಡಿದ್ದಾರೆ. ನ್ಯಾನ್ಸಿ ಪೆಲೋಸಿ ಅವರು ಪ್ರಯಾಣಿಸುತ್ತಿದ್ದ ಅಮೆರಿಕದ ವಿಶೇಷ ವಿಮಾನಕ್ಕೆ ತೈವಾನ್‌ ವಾಯುಪಡೆಯ ಯುದ್ಧ ವಿಮಾನಗಳು ರಕ್ಷಣೆ ಒದಗಿಸಿದವು.

 ತೈವಾನ್‌ನ ವಿದೇಶಾಂಗ ಸಚಿವಾಲಯದ ಮೌನ

ತೈವಾನ್‌ನ ವಿದೇಶಾಂಗ ಸಚಿವಾಲಯದ ಮೌನ

ನ್ಯಾನ್ಸಿ ಪೆಲೋಸಿ ಭೇಟಿಯ ಬಗ್ಗೆ ತೈವಾನ್‌ನ ವಿದೇಶಾಂಗ ಸಚಿವಾಲಯವು ಮೌನವಾಗಿದೆ. ಆದರೆ ತೈವಾನ್ ವಿದೇಶಾಂಗ ಸಚಿವರು ಪೆಲೋಸಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವೀಕರಿಸಿದರು, ಅಲ್ಲಿ ಪೆಲೋಸಿಯನ್ನು ನೋಡಲು ಜನರು ನೋಡಲು ಸೇರಿದ್ದರು. ಪೆಲೋಸಿಯನ್ನು ಸ್ವಾಗತಿಸುವ ಸಂಕೇತವಾಗಿ ತೈಪೆಯ ಅತ್ಯಂತ ಎತ್ತರದ ಕಟ್ಟಡವು ಬೆಳಗಿತು.

ತೈವಾನ್‌ನ ವಿದೇಶಾಂಗ ಸಚಿವ ಜೋಸೆಫ್ ವು ಆಗಮಿಸಿ ಪೆಲೋಸಿ ಅವರನ್ನು ಸ್ವಾಗತಿಸಿರುವುದನ್ನು ಮಾಧ್ಯಮಗಳು ತೋರಿಸಿವೆ.

ತೈವಾನ್‌ ವಾಯು ಪ್ರದೇಶಕ್ಕೆ ಅಮೆರಿಕದ ವಿಮಾನವು ಪ್ರವೇಶಿಸುವುದಕ್ಕೂ ಮುನ್ನ ಜಪಾನ್‌ನ ವಾಯುನೆಲೆಯಿಂದ ಅಮೆರಿಕ ವಾಯುಪಡೆಯ ಕನಿಷ್ಠ 13 ವಿಮಾನಗಳು ರಕ್ಷಣಾ ಹಾರಾಟ ಆರಂಭಿಸಿದವು. ಎಂಟು ಯುದ್ಧ ವಿಮಾನಗಳು ಹಾಗೂ ಐದು ಟ್ಯಾಂಕರ್‌ಗಳು ಜಪಾನ್‌ನಿಂದ ಹಾರಾಟ ಆರಂಭಿಸಿ, ನ್ಯಾನ್ಸಿ ಪೆಲೋಸಿ ಅವರಿದ್ದ ವಿಮಾನಕ್ಕೆ ಭದ್ರತೆ ಒದಗಿಸಿದವು ಎಂದು ವರದಿಯಾಗಿದೆ.
 ಅಮೆರಿಕದ ಮೇಲೆ ಉರಿದು ಬಿದ್ದಿರುವ ಚೀನಾ!

ಅಮೆರಿಕದ ಮೇಲೆ ಉರಿದು ಬಿದ್ದಿರುವ ಚೀನಾ!

ತೈವಾನ್ ಅನ್ನು ತನ್ನ ಪ್ರದೇಶದ ಭಾಗವೆಂದು ಪರಿಗಣಿಸುವ ಚೀನಾ, 25 ವರ್ಷಗಳಲ್ಲಿ ಅತ್ಯುನ್ನತ ಶ್ರೇಣಿಯ ಯುಎಸ್ ಅಧಿಕಾರಿಯ ಭೇಟಿಯನ್ನು ಮೊದಲಿನಿಂದಲೂ ವಿರೋಧಿಸುತ್ತಲೇ ಇದೆ. ನ್ಯಾನ್ಸಿ ಪೆಲೋಸಿ ತೈವಾನ್‌ಗೆ ಭೇಟಿ ನೀಡಿದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿತ್ತು. ಎಚ್ಚರಿಕೆ ನೀಡಿದ್ದರೂ ನ್ಯಾನ್ಸಿ ಪೆಲೋಸಿ ತೈವಾನ್‌ಗೆ ಭೇಟಿ ನೀಡಿರುವುದು ಚೀನಾ ಕಣ್ಣನ್ನು ಕೆಂಪಾಗಿಸಿದೆ.

"ತೈವಾನ್ ಜಲಸಂಧಿಯಾದ್ಯಂತ ಉದ್ವಿಗ್ನತೆಯನ್ನು ಹೆಚ್ಚಿಸುವ ಪ್ರಚೋದನಕಾರಿ ಕ್ರಮಗಳನ್ನು ಅಮೆರಿಕ ತೆಗೆದುಕೊಳ್ಳುತ್ತಿದೆ. ಅದು ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಚೀನಾದ ಸಾರ್ವಭೌಮತ್ವ ಮತ್ತು ಭದ್ರತಾ ಹಿತಾಸಕ್ತಿಗಳನ್ನು ದುರ್ಬಲಗೊಳಿಸಲು ಪ್ರಯತ್ನಿಸಿದರೆ ಯುಎಸ್ ಖಂಡಿತವಾಗಿ ಹೊಣೆಗಾರನಾಗುತ್ತದೆ ಮತ್ತು ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ" ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.

ಚೀನಾ ಎಚ್ಚರಿಕೆಗೆ ಹೆದರಲ್ಲ ಎಂದ ಅಮೆರಿಕ

ಚೀನಾ "ಸೇಬರ್ ರ್ಯಾಟ್ಲಿಂಗ್" ಎಂದು ಕರೆದದ್ದಕ್ಕೆ ಹೆದರುವುದಿಲ್ಲ ಎಂದು ಯುಎಸ್ ಹೇಳಿದೆ. ವಾಷಿಂಗ್ಟನ್ ಅಧಿಕೃತವಾಗಿ ತೈವಾನ್‌ನೊಂದಿಗೆ ಯಾವುದೇ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿಲ್ಲ ಆದರೆ ದ್ವೀಪವು ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಹಾಯ ಮಾಡಲು ಅಮೆರಿಕ ಕಾನೂನಿನ ಪ್ರಕಾರ ನೆರವು ನೀಡಲಿದೆ ಎಂದು ತಿಳಿಸಿದೆ.

1979 ರ ತೈವಾನ್ ಸಂಬಂಧಗಳ ಕಾಯಿದೆಯನ್ನು ತಾನು ವಿರೋಧಸಿಲ್ಲ, ಪ್ರಜಾಪ್ರಭುತ್ವಕ್ಕೆ ಬೆಂಬಲ ನೀಡುವ ಉದ್ದೇಶದಿಂದ ತೈವಾನ್‌ಗೆ ಭೇಟಿ ನೀಡಿದ್ದೇನೆ ಎಂದು ನ್ಯಾನ್ಸಿ ಪೆಲೋಸಿ ಸ್ಪಷ್ಟವಾಗಿ ಹೇಳಿದ್ದಾರೆ.

 ಪೆಲೋಸಿ ಭೇಟಿಯಿಂದ ಪರಿಸ್ಥಿತಿ ಉದ್ವಿಗ್ನ

ಪೆಲೋಸಿ ಭೇಟಿಯಿಂದ ಪರಿಸ್ಥಿತಿ ಉದ್ವಿಗ್ನ

ಪೆಲೋಸಿಯ ಭೇಟಿಯ ಸುತ್ತಲಿನ ವಿವಾದಗಳು ಎರಡೂ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಹದಗೆಡಿಸುವ ಸಾಧ್ಯತೆ ಇದೆ. ವಿಶ್ವದ ಎರಡು ದೊಡ್ಡ ಆರ್ಥಿಕತೆಗಳ ನಡುವಿನ ಉದ್ವಿಗ್ನತೆಯ ವಾಸ್ತವತೆಯನ್ನು ಸರ್ಕಾರಗಳು ಎದುರಿಸುತ್ತವೆ. ಆಗ್ನೇಯ ಏಷ್ಯಾದ ನಾಯಕರೊಂದಿಗೆ ತೊಡಗಿಸಿಕೊಳ್ಳಲು ಯುಎಸ್ ಮತ್ತು ಚೀನಾ ಎರಡೂ ರಾಜತಾಂತ್ರಿಕರನ್ನು ಕಳುಹಿಸಿವೆ.
ನ್ಯಾನ್ಸಿ ಪೆಲೋಸಿ ಭೇಟಿಯ ಹಿನ್ನೆಲೆಯಲ್ಲಿ ತೈವಾನ್‌ ಸುತ್ತಲಿನ ಪ್ರಮುಖ ಆರು ವಲಯಗಳಲ್ಲಿ ಚೀನಾ ಸೇನೆ ಸಮರಾಭ್ಯಾಸ ನಡೆಸಿದೆ ಎಂದು ಚೀನಾ ಸೇನೆ ಹೇಳಿಕೊಂಡಿದೆ.

'ಚೀನಾ ತನ್ನ ಭೌಗೋಳಿಕ ಸಾರ್ವಭೌಮತೆಯನ್ನು ರಕ್ಷಣೆ ಮಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಿದೆ. ಮುಂದೆ ಆಗಬಹುದಾದ ಎಲ್ಲಾ ಪರಿಣಾಗಳಿಗೂ ಅಮೆರಿಕ, ತೈವಾನ್ ಪ್ರತ್ಯೇಕತಾ ಪಡೆಗಳೇ ಹೊಣೆ" ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್‌ ಯಿ ಎಚ್ಚರಿಕೆ ನೀಡಿದ್ದಾರೆ.

English summary
Amid Warning From China US House Speaker Nancy Pelosi has landed in Taiwan. Her flight landed in Taipei as China closed the east coast airspace around Xiamen. Taiwan's foreign ministry stayed silent about the visit. But the Taiwanese foreign minister received Ms Pelosi at the airport, where hundreds flocked to see her.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X