ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಹ್ಯಾಕಾಶಕ್ಕೆ ಹಾರಿದ ರಷ್ಯಾದ ರಾಕೆಟ್ ಮೇಲೆಯೂ Z ಅಕ್ಷರ!

|
Google Oneindia Kannada News

ಮಾಸ್ಕೋ, ಮಾರ್ಚ್ 23: ಉಕ್ರೇನ್ ಮೇಲಿನ ದಾಳಿಯ ನಡುವೆಯೇ Z ಅಕ್ಷರವನ್ನು ಬರೆದಿರುವ ರಾಕೆಟ್ ಸೊಯುಜ್ -2.1 ಎ ಅನ್ನು ಬುಧವಾರ ಅರ್ಕಾಂಗೆಲ್ಸ್ಕ್ ಪ್ರದೇಶದ ಮಿರ್ನಿಯಲ್ಲಿರುವ ಪ್ಲೆಸೆಟ್ಸ್ಕ್ ಕಾಸ್ಮೊಡ್ರೋಮ್‌ನಿಂದ ರಷ್ಯಾ ಬಾಹ್ಯಾಕಾಶಕ್ಕೆ ಉಡಾಯಿಸಿದೆ.

ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧವು 28ನೇ ದಿನಕ್ಕೆ ಕಾಲಿಟ್ಟಿದೆ. ಇದರ ಮಧ್ಯೆ ಯುದ್ಧದಲ್ಲಿ ಬಳಸಲಾದ Z ಚಿಹ್ನೆಯು ಸಾಕಷ್ಟು ಸುದ್ದಿ ಆಗಿತ್ತು. ಈ Z ಚಿಹ್ನೆಯನ್ನು ರಷ್ಯಾದ ಮಿಲಿಟರಿ ವಾಹನಗಳು, ಶಸ್ತ್ರಾಸ್ತ್ರಗಳು ಹಾಗೂ ಮಿಸೈಲ್ ಮೇಲೆ ಹಾಕಲಾಗಿತ್ತು. ಈಗ ಅದೇ ಚಿಹ್ನೆಯುಳ್ಳ ರಾಕೆಟ್ ಅನ್ನು ರಷ್ಯಾ ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿದೆ.

Russia-Ukraine War Live Updates: ಪರಮಾಣು ಶಸ್ತ್ರಾಸ್ತ್ರ ಬಳಕೆ ಬಗ್ಗೆ ರಷ್ಯಾ ಅಧಿಕಾರಿ ಹೇಳಿದ್ದೇನು?Russia-Ukraine War Live Updates: ಪರಮಾಣು ಶಸ್ತ್ರಾಸ್ತ್ರ ಬಳಕೆ ಬಗ್ಗೆ ರಷ್ಯಾ ಅಧಿಕಾರಿ ಹೇಳಿದ್ದೇನು?

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನೇತೃತ್ವದಲ್ಲಿ ಉಕ್ರೇನ್ ಮೇಲಿನ ಆಕ್ರಮಣವನ್ನು ಬೆಂಬಲಿಸುವುದರ ಸಂಕೇತವಾಗಿ 'Z' ಅಕ್ಷರವನ್ನು ಬಳಸಲಾಗುತ್ತಿತ್ತು. ಉಕ್ರೇನಿಯನ್ ಗಡಿಯ ಬಳಿ ನೆಲೆಸಿರುವ ರಷ್ಯಾದ ಟ್ಯಾಂಕ್‌ಗಳು ಮತ್ತು ಮಿಲಿಟರಿ ಟ್ರಕ್‌ಗಳಲ್ಲಿ ಈ ಅಕ್ಷರವನ್ನು ಮೊದಲು ಗುರುತಿಸಲಾಯಿತು. ರಷ್ಯಾದ ರಕ್ಷಣಾ ಸಚಿವಾಲಯವು ತನ್ನ Instagram ಪುಟದಲ್ಲಿ Z ಮತ್ತು V ಅಕ್ಷರಗಳ ಶೈಲೀಕೃತ ಗ್ರಾಫಿಕ್ಸ್ ಅನ್ನು ಪೋಸ್ಟ್ ಮಾಡಿದೆ. ಆದಾಗ್ಯೂ, ಅಕ್ಷರಗಳು ಏನನ್ನು ಸೂಚಿಸುತ್ತವೆ ಎಂಬುದರ ಕುರಿತು ಯಾವುದೇ ನಿರ್ದಿಷ್ಟ ವಿವರಣೆಯನ್ನು ನೀಡಿಲ್ಲ.

Amid Ukraine-Russia War Russia launch Z into space

ವಿಶ್ವಕಪ್‌ನಲ್ಲಿಯೂ ಸುದ್ದಿಯಾದ Z ಅಕ್ಷರ:

2022ರ ಆರಂಭದಲ್ಲಿ ದೋಹಾದಲ್ಲಿ ನಡೆದ ಅಪರಾಟಸ್ ವಿಶ್ವಕಪ್‌ನಲ್ಲಿ ರಷ್ಯಾದ ಜಿಮ್ನಾಸ್ಟ್ ಇವಾನ್ ಕುಲಿಯಾಕ್ ತನ್ನ ಎದೆಯ ಮೇಲೆ 'Z' ಅಕ್ಷರವನ್ನು ಬರೆದುಕೊಂಡ ನಂತರ ಕ್ರೀಡೆಯಲ್ಲೂ ಈ ಅಕ್ಷರ ಸಾಕಷ್ಟು ಸುದ್ದಿ ಮಾಡಿತ್ತು. 20ರ ಹರೆಯದ ರಷ್ಯಾದ ಅಥ್ಲೀಟ್ ತೃತೀಯ ಸ್ಥಾನ ಗಳಿಸಿ ಚಿನ್ನ ಗೆದ್ದ ಉಕ್ರೇನಿಯನ್ ಪ್ರತಿಸ್ಪರ್ಧಿ ಇಲಿಯಾ ಕೊವ್ತುನ್ ಅವರ ಪಕ್ಕದ ವೇದಿಕೆಯಲ್ಲಿ ನಿಂತಾಗ ಈ ಚಿಹ್ನೆಯನ್ನು ಪ್ರದರ್ಶಿಸಿದ್ದರು.

ಉಕ್ರೇನ್ ನೆಲದಲ್ಲಿ 28ನೇ ದಿನಕ್ಕೆ ಕಾಲಿಟ್ಟ ಯುದ್ಧ:

ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಆಕ್ರಮಣವು 28ನೇ ದಿನಕ್ಕೆ ಕಾಲಿಟ್ಟಿದೆ. ಎರಡು ರಾಷ್ಟ್ರಗಳ ನಡುವೆ ನಡೆದ ಶಾಂತಿ ಮಾತುಕತೆಗಳು ವಿಫಲವಾಗುತ್ತಿವೆ. ರಷ್ಯಾ ವಿಧಿಸುತ್ತಿರುವ ಷರತ್ತು ಒಪ್ಪಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಇದರ ಮಧ್ಯೆ ರಷ್ಯಾ ತನ್ನ ಆಕ್ರಮಣವನ್ನು ಮುಂದುವರಿಸಿದೆ.

ರಷ್ಯಾದ ಪೈಲಟ್‌ಗಳಿಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, "ಅವರು ನಡೆಸುವ ಆದೇಶಗಳ ಬಗ್ಗೆ ಯೋಚಿಸದ ಎಲ್ಲಾ ರಷ್ಯಾದ ಪೈಲಟ್‌ಗಳಿಗೆ ನಾನು ಮತ್ತೊಮ್ಮೆ ಪುನರಾವರ್ತಿಸಿ ಹೇಳಲು ಬಯಸುತ್ತೇನೆ. ನಾಗರಿಕರನ್ನು ಕೊಲ್ಲುವುದು ಅಪರಾಧ, ಅದಕ್ಕೆ ನೀವು ಬೆಲೆ ತೆರಬೇಕಾಗುತ್ತದೆ" ಎಂದು ಝೆಲೆನ್ಸ್ಕಿ ಹೇಳಿದರು.

English summary
Amid Ukraine-Russia War Russia launch Z into space. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X