ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾ-ಉಕ್ರೇನ್‌ ಯುದ್ಧ: ಪೋಲೆಂಡ್‌ಗೆ ಭೇಟಿ ನೀಡಲಿರುವ ಜೋ ಬೈಡೆ‌ನ್‌

|
Google Oneindia Kannada News

ವಾರ್ಸಾ, ಮಾರ್ಚ್ 21: ರಷ್ಯಾ ಹಾಗೂ ಉಕ್ರೇನ್‌ ನಡುವಿನ ಬಿಕ್ಕಟ್ಟಿನ ಬಗ್ಗೆ ಪೋಲೆಂಡ್ ಅಧ್ಯಕ್ಷ ಆಂಡ್ರೆಜ್ ದುಡಾ ಜೊತೆ ಚರ್ಚೆ ನಡೆಸಲು ಯುಎಸ್ ಅಧ್ಯಕ್ಷ ಜೋ ಬೈಡೆನ್‌ ಪೋಲೆಂಡ್‌ನ ರಾಜಧಾನಿ ವಾರ್ಸಾಗೆ ಪ್ರಯಾಣಿಸಲಿದ್ದಾರೆ ಎಂದು ಶ್ವೇತಭವನ ಸೋಮವಾರ ತಿಳಿಸಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ನ್ಯಾಟೋ ಮತ್ತು ಇತರ ಯುರೋಪಿಯನ್ ಮಿತ್ರರಾಷ್ಟ್ರಗಳೊಂದಿಗೆ ತುರ್ತು ಮಾತುಕತೆ ನಡೆಸಲಿದ್ದಾರೆ.

ಉಕ್ರೇನ್‌ನ ಮೇಲೆ ರಷ್ಯಾವು ಅಪ್ರಚೋದಿತ ಯುದ್ಧ ಘೋಷಣೆ ಮಾಡಿದ ಬೆನ್ನಲ್ಲೇ ಈ ಬಿಕ್ಕಟ್ಟಿನ ಬಗ್ಗೆ ಯುಎಸ್ ತನ್ನ ಮಿತ್ರರಾಷ್ಟ್ರಗಳು ಮತ್ತು ಮಿತ್ರ ಪಕ್ಷಗಳೊದಿಂದಿಗೆ ಮಾತುಕತೆ ನಡೆಸುತ್ತಿದೆ. ಅಮೆರಿಕ ಅಧ್ಯಕ್ಷ ಬೈಡೆನ್‌ ಮೊದಲು ಬ್ರಸೆಲ್ಸ್‌ಗೆ ಭೇಟಿ ನೀಡಲಿದ್ದಾರೆ. ನಂತರ ಶುಕ್ರವಾರ ಪೋಲೆಂಡ್‌ಗೆ ತೆರಳಿ ಅಲ್ಲಿನ ನಾಯಕರನ್ನು ಭೇಟಿಯಾಗಲಿದ್ದಾರೆ ಎಂದು ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರಷ್ಯಾದ ಕೈ ಕಟ್ಟಿ ಹಾಕಲು ನಿರ್ಬಂಧದ ಅಸ್ತ್ರ; ಯಾರಲ್ಲಿದೆ ಆ ಸಾಮರ್ಥ್ಯ?ರಷ್ಯಾದ ಕೈ ಕಟ್ಟಿ ಹಾಕಲು ನಿರ್ಬಂಧದ ಅಸ್ತ್ರ; ಯಾರಲ್ಲಿದೆ ಆ ಸಾಮರ್ಥ್ಯ?

ಉಕ್ರೇನ್ ಬಿಕ್ಕಟ್ಟಿನಲ್ಲಿ ಪೋಲೆಂಡ್ ನಿರ್ಣಾಯಕ ಮಿತ್ರರಾಷ್ಟ್ರವಾಗಿದೆ. ಇದು ಸಾವಿರಾರು ಅಮೇರಿಕನ್ ಪಡೆಗಳಿಗೆ ಆತಿಥ್ಯ ವಹಿಸುತ್ತಿದೆ ಮತ್ತು ಉಕ್ರೇನ್‌ನಲ್ಲಿ ಯುದ್ಧದಿಂದ ಪಲಾಯನ ಮಾಡುವ ಹೆಚ್ಚಿನ ಜನರಿಗೆ ಪೋಲೆಂಡ್‌ ಆಶ್ರಯ ನೀಡಿದೆ. ಉಕ್ರೇನ್‌ನಿಂದ ಹಲವಾರು ಮಂದಿ ಸ್ಥಳಾಂತರಗೊಂಡು ಪೋಲೆಂಡ್‌ನ ನಿರಾಶ್ರಿತರ ಕೇಂದ್ರದಲ್ಲಿ ಇದ್ದಾರೆ.

Amid Ukraine-Russia War Joe Biden to visit Poland

ಇನ್ನು ಈ ಯುದ್ಧ ಪೀಡಿತ ಪ್ರದೇಶದಲ್ಲಿ ಇನ್ನು ಕೂಡಾ ಹಲವಾರು ಭಾರತೀಯರು ಸಿಲುಕಿದ್ದಾರೆ. ಈ ನಡುವೆ ರಷ್ಯಾವು ಉಕ್ರೇನ್‌ ಮೇಲೆ ರಷ್ಯಾವು ದಾಳಿಯನ್ನು ಹೆಚ್ಚಿಸಿದೆ. ಈ ಬೆನ್ನಲ್ಲೇ ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ಅವರು ಶುಕ್ರವಾರ ಪೋಲೆಂಡ್‌ಗೆ ಭೇಟಿ ನೀಡಲಿದ್ದಾರೆ ಎಂದು ಶ್ವೇತ ಭವನ ಭಾನುವಾರ ವರದಿ ಮಾಡಿದೆ.

"ಉಕ್ರೇನ್‌ ಮೇಲೆ ರಷ್ಯಾವು ದಾಳಿ ಮಾಡಿರುವ ಬಳಿಕ ಉಕ್ರೇನ್‌ನಲ್ಲಿ ಉಂಟಾಗಿರುವ ಮಾನವ ಹಕ್ಕುಗಳು ಹಾಗೂ ಮಾನವೀಯ ಬಿಕ್ಕಟ್ಟಿಗೆ ಸಂಬಂಂಧಿಸಿದಂತೆ ಅಮೆರಿಕ ಹಾಗೂ ಮಿತ್ರ ರಾಷ್ಟ್ರಗಳು ಹೇಗೆ ಪ್ರತಿಕ್ರಿಯೆ ನೀಡುತ್ತಿದೆ ಎಂಬುವುದರ ಬಗ್ಗೆ ಚರ್ಚೆ ನಡೆಯಲಿದೆ," ಎಂದು ಶ್ವೇತ ಭವನದ ಪ್ರಕಟಣೆ ತಿಳಿಸಿದೆ.

ರಷ್ಯಾದ ಮೇಲೆ ಅಮೆರಿಕದ ನಿರ್ಬಂಧಗಳು

ಮಾರ್ಚ್ 24ರಂದು ನ್ಯಾಟೋ ರಾಷ್ಟ್ರಗಳ ಸಭೆಯಲ್ಲಿ ಭಾಗಿಯಾಗಲು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಬೆಲ್ಜಿಯಂಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಜಿ7 ಹಾಗೂ ಐರೋಪ್ಯ ಒಕ್ಕೂಟದ ಸಭೆಗಳು ನಿಗಿದಿಯಾಗಿದೆ. ರಷ್ಯಾವು ಉಕ್ರೇನ್‌ ಮೇಲೆ ದಾಳಿ ಆರಂಭ ಮಾಡಿದ ಬಳಿಕ ಹಲವಾರು ರಾಷ್ಟ್ರಗಳು ರಷ್ಯಾದ ಮೇಲೆ ನಿರ್ಬಂಧವನ್ನು ಹೇರಿದ್ದು, ಅಮೆರಿಕ ಪ್ರಮುಖವಾಗಿ ರಷ್ಯಾದ ಮೇಲೆ ನಿರ್ಬಂಧವನ್ನು ಹೇರಿದೆ.

ಉಕ್ರೇನ್ ಮೇಲೆ ರಷ್ಯಾ ಆಕ್ರಮಣದ ಮುಂದುವರೆದಂತೆ ಪಶ್ಚಿಮ ರಾಷ್ಟ್ರಗಳು ಮಾಸ್ಕೋ ವಿರುದ್ಧ ನಿರ್ಬಂಧಗಳನ್ನು ಹೆಚ್ಚಿಸುತ್ತಿವೆ. ರಷ್ಯಾದಿಂದ ತೈಲ ಮತ್ತು ನೈಸರ್ಗಿಕ ಅನಿಲವನ್ನು ಆಮದು ಮಾಡಿಕೊಳ್ಳುವುದನ್ನು ಯುಎಸ್ ನಿಲ್ಲಿಸಲಿದೆ ಎಂದು ಯುಎಸ್ ಅಧ್ಯಕ್ಷ ಜೋ ಬೈಡನ್ ಇತ್ತೀಚೆಗೆ ಘೋಷಣೆ ಮಾಡಿದ್ದಾರೆ. ಈ ಹಿಂದೆ, ಶ್ವೇತಭವನವು ಬೈಡನ್ "ಉಕ್ರೇನ್ ಮೇಲೆ ಅದರ ಅಪ್ರಚೋದಿತ ಮತ್ತು ನ್ಯಾಯಸಮ್ಮತವಲ್ಲದ ಯುದ್ಧಕ್ಕೆ ರಷ್ಯಾವನ್ನು ಹೊಣೆಗಾರರನ್ನಾಗಿ ಮಾಡುವುದನ್ನು ಮುಂದುವರಿಸಲು" ಕ್ರಮಗಳನ್ನು ಘೋಷಿಸುತ್ತದೆ ಎಂದು ಹೇಳಿದೆ.

ಉಕ್ರೇನ್‌ನ ಮೇಲೆ ದಾಳಿ ನಡೆಸುವುದಕ್ಕೆ ಒಂದು ತಿಂಗಳಿಗಿಂತ ಮೊದಲೇ ಪೂರ್ವಭಾವಿ ಸಿದ್ಧತೆ ಮಾಡಿಕೊಂಡಿದ್ದ ರಷ್ಯಾದ ಯುದ್ಧದಾಹದ ವಿರುದ್ಧ ಯುಎಸ್ ಅಧ್ಯಕ್ಷ ಜೋ ಬೈಡನ್ ಸಿಡಿಮಿಡಿಗೊಂಡಿದ್ದು, ಅಧ್ಯಕ್ಷ ಜೋ ಬೈಡನ್, ಅಮೆರಿಕಾದಲ್ಲಿರುವ ರಷ್ಯಾದ ಎಲ್ಲಾ ಸ್ವತ್ತುಗಳನ್ನು ಫ್ರೀಜ್ ಮಾಡಲಾಗುವುದು ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಇದರ ಜೊತೆಗಿನ ರಫ್ತು ನಿಯಮಗಳ ಮೇಲೆ ನಿರ್ಬಂಧ ಮತ್ತು ನಿಯಂತ್ರಣವನ್ನು ಘೋಷಿಸಿದ್ದಾರೆ. (ಒನ್‌ಇಂಡಿಯಾ ಸುದ್ದಿ)

English summary
Amid Ukraine-Russia War Joe Biden to visit Poland for urgent talks with NATO.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X