ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಕ್ರೇನ್‌ ಯುದ್ಧದ ನಡುವೆ ರಷ್ಯಾದಲ್ಲಿ ಇನ್ಫೋಸಿಸ್ ಕಾರ್ಯಾಚರಣೆ ಸ್ಥಗಿತ

|
Google Oneindia Kannada News

ಮಾಸ್ಕೋ, ಏಪ್ರಿಲ್‌ 04: ಐಟಿ ದಿಗ್ಗಜ ಇನ್ಫೋಸಿಸ್ ತನ್ನ ಸೇವೆಗಳನ್ನು ರಷ್ಯಾದಿಂದ ತನ್ನ ಇತರ ಜಾಗತಿಕ ವಿತರಣಾ ಕೇಂದ್ರಗಳಿಗೆ ವರ್ಗಾಯಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ರಷ್ಯಾದಲ್ಲಿ ಇನ್ಫೋಸಿಸ್ ಅಸ್ತಿತ್ವದ ಬಗ್ಗೆ ಹಾಗೂ ಪತ್ನಿ ಅಕ್ಷತಾ ಮೂರ್ತಿ ಅವರ ಪಾಲು ಇರುವ ಬಗ್ಗೆ ಇನ್ಫೋಸಿಸ್ ಸಹ ಸ್ಥಾಪಕ ನಾರಾಯಣ ಮೂರ್ತಿ ಅಳಿಯ,ಬ್ರಿಟನ್‌ನ ಹಣಕಾಸು ಸಚಿವ ರಿಷಿ ಸುನಕ್ ಅವರಿಗೆ ಸಂದರ್ಶನದಲ್ಲಿ ಪ್ರಶ್ನೆಗಳನ್ನು ಕೇಳಿದ ಬಳಿಕ ಈ ಬೆಳವಣಿಗೆ ಕಂಡು ಬಂದಿದೆ.

ಇನ್ಫೋಸಿಸ್ ರಷ್ಯಾದಿಂದ ಇತರ ಜಾಗತಿಕ ವಿತರಣಾ ಕೇಂದ್ರಗಳಿಗೆ ಸೇವೆಗಳನ್ನು ಬದಲಾಯಿಸುತ್ತಿದೆ ಎಂದು ಮೂಲಗಳು ತಿಳಿಸಿವೆ ಆದರೆ ಯಾವುದೇ ವಿವರಗಳನ್ನು ನೀಡಿಲ್ಲ. ಇನ್ಫೋಸಿಸ್ ರಷ್ಯಾದಲ್ಲಿ 100 ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿದೆ ಮತ್ತು ಅಲ್ಲಿನ ಸ್ಥಳೀಯ ಸಿಬ್ಬಂದಿಯ ಸ್ಥಿತಿ ಮತ್ತು ಅವರನ್ನು ಸ್ಥಳಾಂತರಿಸಲಾಗುತ್ತದೆಯೇ ಎಂದು ಕೂಡಾ ಸ್ಪಷ್ಟತೆ ದೊರಕಿಲ್ಲ.

ರಷ್ಯಾದಲ್ಲಿ ಇನ್ಫೋಸಿಸ್ ಅಸ್ತಿತ್ವ; ಇನ್ಪಿ ಮೂರ್ತಿ ಅಳಿಯನಿಗೆ ಪ್ರಶ್ನೆಗಳ ಬಾಂಬ್!ರಷ್ಯಾದಲ್ಲಿ ಇನ್ಫೋಸಿಸ್ ಅಸ್ತಿತ್ವ; ಇನ್ಪಿ ಮೂರ್ತಿ ಅಳಿಯನಿಗೆ ಪ್ರಶ್ನೆಗಳ ಬಾಂಬ್!

ಇನ್ನು ಮಾಧ್ಯಮಗಳ ಇಮೇಲ್‌ಗಳಿಗೆ, "ನಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ," ಎಂದು ಇನ್ಫೋಸಿಸ್ ಹೇಳಿದೆ ಎಂದು ಎನ್‌ಡಿ ಟಿವಿ ಸುದ್ದಿ ಮಾಡಿದೆ. ಉಕ್ರೇನ್‌ ಮೇಲೆ ರಷ್ಯಾವು ದಾಳಿ ನಡೆಸಿದ ಬಳಿಕ ಯುಕೆ ಈ ಹಿಂದೆ ರಷ್ಯಾದ ವ್ಯವಹಾರಗಳು ಮತ್ತು ವ್ಯಕ್ತಿಗಳ ಮೇಲೆ ವ್ಯಾಪಕ ನಿರ್ಬಂಧಗಳನ್ನು ವಿಧಿಸಿದೆ.

Amid Sunak Row Infosys Shifting Services From Russia

ರಷ್ಯಾದ ಮೇಲೆ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಿರುವುದನ್ನು ಉಲ್ಲೇಖಿಸಿ, ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿಯವರ ಅಳಿಯ ಸುನಕ್‌ ಅವರಿಗೆ ಪ್ರಶ್ನೆಗಳ ಬಾಂಬ್‌ ಹಾಕಲಾಗಿತ್ತು. ರಷ್ಯಾದಲ್ಲಿ ಇನ್ಫೋಸಿಸ್ ಅಸ್ತಿತ್ವದ ಬಗ್ಗೆ ಹಾಗೂ ಅವರ ಪತ್ನಿ ಅಕ್ಷತಾ ಮೂರ್ತಿ ಅವರ ಪಾಲು ಇರುವ ಬಗ್ಗೆ ತೀಕ್ಷ್ಣವಾದ ಪ್ರಶ್ನೆಗಳನ್ನು ಎದುರಿಸಿದರು.

ರಷ್ಯಾದ ಮೇಲೆ ಬ್ರಿಟನ್ ಕಠಿಣ ಆರ್ಥಿಕ ನಿರ್ಬಂಧಗಳನ್ನು ಹೇರುತ್ತಿರುವ ಸಂದರ್ಭದಲ್ಲಿ, ರಿಷಿ ಸುನಕ್ ಅವರಿಗೆ ತಮ್ಮ ಮನೆಯಲ್ಲಿ ನಿಯಮಗಳನ್ನು ಅನುಸರಿಸುತ್ತಿಲ್ಲವೇ ಎಂಬ ಪ್ರಶ್ನೆಯನ್ನು ಕೇಳಲಾಯಿತು. ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯುಕೆ ಹಣಕಾಸು ಸಚಿವ ರಿಷಿ ಸುನಕ್ ಅವರು ಖಾಸಗಿ ಕಂಪನಿಗಳ ಕಾರ್ಯಾಚರಣೆಯಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಒತ್ತಾಯಿಸಿದರು. ಇದು ಯಾವುದೇ ಖಾಸಗಿ ಕಂಪನಿಯ ವೈಯಕ್ತಿಕ ವಿಷಯವಾಗಿದೆ ಎಂದು ಸ್ಪಷ್ಟಪಡಿಸಿದರು.

Amid Sunak Row Infosys Shifting Services From Russia

ಮಾಧ್ಯಮದಿಂದ ಪ್ರಶ್ನೆಗಳ ಸುರಿಮಳೆ

"ನೀವು ರಷ್ಯಾದೊಂದಿಗೆ ಕೌಟುಂಬಿಕ ಸಂಬಂಧಗಳನ್ನು ಹೊಂದಿದ್ದೀರಿ ಎಂದು ವರದಿಯಾಗಿದೆ, ನಿಮ್ಮ ಪತ್ನಿ ಭಾರತೀಯ ಸಲಹಾ ಸಂಸ್ಥೆ ಇನ್ಫೋಸಿಸ್‌ನಲ್ಲಿ ಪಾಲನ್ನು ಹೊಂದಿದ್ದಾರೆ. ಈ ಕಂಪನಿಯು ಮಾಸ್ಕೋದಲ್ಲಿ ಕೆಲಸ ಮಾಡುತ್ತದೆ, ಅವರು ಕಚೇರಿಯನ್ನು ಹೊಂದಿದ್ದಾರೆ. ಇನ್ಫೋಸಿಸ್ ಮಾಸ್ಕೋದಲ್ಲಿರುವ ಆಲ್ಫಾ ಬ್ಯಾಂಕ್‌ನೊಂದಿಗೆ ಸಂಪರ್ಕ ಹೊಂದಿದೆ. ನಿಮ್ಮ ಸ್ವಂತ ಮನೆಯಲ್ಲಿ ಇತರರಿಗೆ ನೀವು ನೀಡುವ ಸಲಹೆಯನ್ನು ನೀವು ಅನುಸರಿಸುತ್ತಿಲ್ಲವೇ?" ಎಂದು ಸ್ಕೈ ನ್ಯೂಸ್‌ನ ಮಹಿಳಾ ಪತ್ರಕರ್ತೆಯೊಬ್ಬರು ರಿಷಿ ಸುನಕ್ ಅವರನ್ನು ಪ್ರಶ್ನಿಸಿದರು.

ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಿಷಿ ಸುನಕ್, "ಚುನಾಯಿತ ರಾಜಕಾರಣಿಯಾಗಿ, ನಾನು ಯಾವ ಜವಾಬ್ದಾರಿಯನ್ನು ಹೊಂದಿದ್ದೇನೆ ಎಂಬುದರ ಕುರಿತು ನಾನು ಸಂದರ್ಶನ ನೀಡುತ್ತಿದ್ದೇನೆ. ಇದಕ್ಕೆಲ್ಲ ನನ್ನ ಹೆಂಡತಿ ಹೊಣೆಯಲ್ಲ" ಎಂದು ಉತ್ತರಿಸಿದರು. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆಡಳಿತದಿಂದ ಅವರ ಕುಟುಂಬವು 'ಸಂಭಾವ್ಯವಾಗಿ ಪ್ರಯೋಜನ ಪಡೆಯುತ್ತಿದೆಯೇ' ಎಂದು ಕೇಳಿದಾಗ, "ನಾನು ಹಾಗೆ ಯೋಚಿಸುವುದಿಲ್ಲ ಮತ್ತು ನಾನು ಹೇಳಿದಂತೆ ಎಲ್ಲಾ ಖಾಸಗಿ ಕಂಪನಿಗಳ ಕಾರ್ಯಾಚರಣೆಗಳು ಅವುಗಳ ಮೇಲೆ ಅವಲಂಬಿತವಾಗಿದೆ" ಎಂದು ಅವರು ಹೇಳಿದರು.

ಈ ನಡುವೆ, ಬಹುರಾಷ್ಟ್ರೀಯ ಸಾಫ್ಟ್‌ವೇರ್ ಸೇವಾ ಪೂರೈಕೆದಾರರು ರಷ್ಯಾ ಮತ್ತು ಉಕ್ರೇನ್ ನಡುವೆ ಶಾಂತಿಯನ್ನು ಬೆಂಬಲಿಸುತ್ತಾರೆ ಮತ್ತು ಪ್ರತಿಪಾದಿಸುತ್ತಾರೆ ಎಂದು ಇನ್ಫೋಸಿಸ್ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ.

English summary
Amid Sunak Row IT major Infosys is shifting its services from Russia to its other global delivery centres, according to sources.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X