ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಎದೆಯಲ್ಲಿ ನಡುಕ ಹುಟ್ಟಿಸಿದೆ ಭಾರತದ 'ಈ' ಅಸ್ತ್ರ!

|
Google Oneindia Kannada News

ನವದೆಹಲಿ, ಜೂನ್.29: ಭಾರತ-ಚೀನಾ ಗಡಿಭಾಗದ ಲಡಾಖ್ ಪೂರ್ವಭಾಗದಲ್ಲಿರುವ ಗಾಲ್ವಾನ್ ನದಿ ಕಣಿವೆಗೆ ಸಂಬಂಧಿಸಿದಂತೆ ಕಾಲ್ಕೆರೆದು ನಿಂತಿರುವ ಡ್ರ್ಯಾಗನ್ ರಾಷ್ಟ್ರ ಚೀನಾ ಎದೆಯಲ್ಲಿ ಭಾರತದ ಇದೊಂದು ಅಸ್ತ್ರ ನಡುಕ ಹುಟ್ಟಿಸಿದೆ.

ನೆರೆರಾಷ್ಟ್ರ ಚೀನಾದ ಜೊತೆಗೆ ಗಡಿಯಲ್ಲಿ ಸಂಘರ್ಷ ನಡೆದಿರುವ ಸಂದರ್ಭದಲ್ಲೇ ಸ್ಪೇನ್ ನಲ್ಲಿ ಸಿದ್ಧಗೊಂಡ ಪ್ರಬಲ ರಾಫೆಲ್ ಯುದ್ಧ ವಿಮಾನವು ಇನ್ನೇನು ಜುಲೈ ತಿಂಗಳಿನಲ್ಲಿ ಭಾರತಕ್ಕೆ ಬರಲಿದೆ. ಮೊದಲ ಹಂತದಲ್ಲಿ ಜುಲೈ.27ರಂದು ನಾಲ್ಕರಿಂದ ಆರು ಯುದ್ಧವಿಮಾನಗಳು ದೇಶಕ್ಕೆ ಲಗ್ಗೆ ಇಡಲಿವೆ.

ರಫೇಲ್ ಯುದ್ಧವಿಮಾನ ಒಪ್ಪಂದದ ಆಳ-ಅಗಲದ ಸಂಪೂರ್ಣ ಚಿತ್ರಣ!ರಫೇಲ್ ಯುದ್ಧವಿಮಾನ ಒಪ್ಪಂದದ ಆಳ-ಅಗಲದ ಸಂಪೂರ್ಣ ಚಿತ್ರಣ!

ಕಳೆದ ನಾಲ್ಕು ವರ್ಷಗಳ ಹಿಂದೆ ಅಂದರೆ 2016ರ ಸಪ್ಟೆಂಬರ್ ತಿಂಗಳಿನಲ್ಲಿ 36 ರಾಫೆಲ್ ಯುದ್ಧ ವಿಮಾನಗಳನ್ನು ಖರೀದಿಸುವ 59,000 ಕೋಟಿ ಮೌಲ್ಯದ ಒಪ್ಪಂದಕ್ಕೆ ಭಾರತವು ಫ್ರಾನ್ಸ್ ಜೊತೆಗೆ ಅಂಕಿತ ಹಾಕಿತ್ತು.

ದೇಶದಲ್ಲಿ 2022ರ ವೇಳೆಗೆ 36 ರಾಫೆಲ್ ಯುದ್ಧವಿಮಾನ

ದೇಶದಲ್ಲಿ 2022ರ ವೇಳೆಗೆ 36 ರಾಫೆಲ್ ಯುದ್ಧವಿಮಾನ

ಭಾರತ-ಫ್ರಾನ್ಸ್ ನಡುವಿನ ಒಪ್ಪಂದಕ್ಕೆ ಸಂಬಂಧಿಸಿದಂತೆ ಕಳೆದ 2020ರ ಮೇ ತಿಂಗಳ ವೇಳೆಗೆ ಮೊದಲ ಹಂತದಲ್ಲಿ ನಾಲ್ಕು ರಾಫೆಲ್ ಯುದ್ಧವಿಮಾನಗಳು ಭಾರತದ ಆಂಬಾಲಕ್ಕೆ ಬಂದಿಳಿಯಬೇಕಿತ್ತು. ಆದರೆ ಕೊರೊನಾವೈರಸ್ ಅಟ್ಟಹಾಸದ ಹಿನ್ನೆಲೆಯಲ್ಲಿ ವಿಳಂಬವಾಗಿದ್ದು, ಜುಲೈ ತಿಂಗಳಾಂತ್ಯದ ವೇಳೆಗೆ ನಾಲ್ಕು ಯುದ್ಧವಿಮಾನಗಳನ್ನು ಭಾರತಕ್ಕೆ ಕಳುಹಿಸಿ ಕೊಡಲಾಗುತ್ತಿದೆ. ಒಪ್ಪಂದದ ಪ್ರಕಾರ 2022ರ ಏಪ್ರಿಲ್ ವೇಳೆಗೆ ಒಟ್ಟು 36 ರಾಫೆಲ್ ಯುದ್ಧವಿಮಾನಗಳನ್ನು ಫ್ರಾನ್ಸ್ ಭಾರತಕ್ಕೆ ಕಳುಹಿಸಲು ಕೊಡಬೇಕಿದೆ.

ತುರ್ತು ಅಗತ್ಯ ಹಿನ್ನೆಲೆ ರಾಫೆಲ್ ಯುದ್ಧವಿಮಾನಕ್ಕೆ ಬೇಡಿಕೆ

ತುರ್ತು ಅಗತ್ಯ ಹಿನ್ನೆಲೆ ರಾಫೆಲ್ ಯುದ್ಧವಿಮಾನಕ್ಕೆ ಬೇಡಿಕೆ

ಭಾರತ-ಚೀನಾದ ಗಡಿ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಬೂದಿ ಮುಚ್ಚಿದೆ ಕೆಂಡದಂತೆ ಪರಿವರ್ತನೆಯಾಗುತ್ತಿದೆ. ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಚೀನಾ ತನ್ನ ಸೇನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ. ಇದರ ಸೂಕ್ಷ್ಮತೆಯನ್ನು ಅರಿತುಕೊಂಡ ಭಾರತವು ತುರ್ತಾಗಿ ರಾಫೆಲ್ ಯುದ್ಧವಿಮಾನಗಳನ್ನು ಕಳುಹಿಸಿಕೊಡುವಂತೆ ಫ್ರಾನ್ಸ್ ಸರ್ಕಾರಕ್ಕೆ ಮನವಿ ಮಾಡಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಇನ್ನೊಂದು ತಿಂಗಳಿನಲ್ಲೇ ನಾಲ್ಕು ರಾಫೆಲ್ ಯುದ್ಧವಿಮಾನಗಳನ್ನು ಕಳುಹಿಸಲು ಫ್ರಾನ್ಸ್ ಸಮ್ಮತಿಸಿದೆ.

ದೇಶದ ವಾಯುಪಡೆ ಸಾಮರ್ಥ್ಯ ಹೇಗಿದೆ?

ದೇಶದ ವಾಯುಪಡೆ ಸಾಮರ್ಥ್ಯ ಹೇಗಿದೆ?

ಭಾರತೀಯ ವಾಯುಪಡೆಯ ಸಾಮರ್ಥ್ಯವು ಸಿ -17 ಗ್ಲೋಬ್ ಮಾಸ್ಟರ್ ಸೂಪರ್ ಹರ್ಕ್ಯುಲಸ್ ಮತ್ತು ಸಿಎಚ್ -47 ಚಿನೂಕ್ ನಿಂದ ಅಗಾಧವಾಗಿದೆ. ಇನ್ನು, ಟಿ -90 ಟ್ಯಾಂಕ್‌ಗಳ ಮೂಲಕ ಸಮರ್ಥವಾಗಿ ದಾಳಿಯನ್ನು ರಚಿಸುವ ಸಾಮರ್ಥ್ಯವನ್ನು ಭಾರತೀಯ ಸೇನೆ ಹೊಂದಿದೆ. ವಾಯುಸೇನೆಗೆ ಟಿ -90 ಟ್ಯಾಂಕ್ ಗಳನ್ನು ಸ್ಥಳಾಂತರಗೊಳಿಸುವುದೇ ದೊಡ್ಡ ಸವಾಲಾಗಿದೆ.

ಭಾರತಕ್ಕೆ ಯುದ್ಧದ ಟ್ಯಾಂಕರ್ ಸ್ಥಳಾಂತರವೇ ಸವಾಲು

ಭಾರತಕ್ಕೆ ಯುದ್ಧದ ಟ್ಯಾಂಕರ್ ಸ್ಥಳಾಂತರವೇ ಸವಾಲು

ಭಾರತಕ್ಕೆ ಸದ್ಯದ ಪರಿಸ್ಥಿತಿಯಲ್ಲಿ ಟಿ-90 ಯುದ್ಧದ ಟ್ಯಾಂಕ್ ಗಳೇ ಬಹುಮುಖ್ಯ ಅಸ್ತ್ರಗಳಾಗಿವೆ. ಆದರೆ 46 ಟನ್ ತೂಕದ ಟಿ-90 ಯುದ್ಧದ ಟ್ಯಾಂಕ್ ಗಳನ್ನು ಏರ್ ಲಿಫ್ಟ್ ಮಾಡುವುದು ಅಷ್ಟೊಂದು ಸುಲಭವಾಗಿಲ್ಲ. ಏಕೆಂದರೆ 77 ಟನ್ ತೂಕವನ್ನು ಹೊರುವ ಸಾಮರ್ಥ್ಯವುಳ್ಳ ಸಿ-17 ಯುದ್ಧವಿಮಾನಗಳ ಅಭಾವವನ್ನು ಭಾರತ ಎದುರಿಸುತ್ತಿದೆ. ಇನ್ನೊಂದು ಕಡೆ II-76 ವಿಮಾನಗಳು ಕೇವಲ 45 ಟನ್ ಭಾರವನ್ನಷ್ಟು ಹೊರುವ ಸಾಮರ್ಥ್ಯವನ್ನು ಹೊಂದಿವೆ. ಹೀಗಾಗಿ ಟಿ-90 ಟ್ಯಾಂಕ್ ಸ್ಥಳಾಂತರವೇ ಕಷ್ಟವಾಗಲಿದೆ.

Recommended Video

Rafale ಯುದ್ಧ ವಿಮಾನದ ಕೆಲಸ ಶುರು , ಭಾರತಕ್ಕೆ ಮಹತ್ವದ ದಿನ | Oneindia Kannada
II-76 ವಿಮಾನಗಳಲ್ಲಿ ಟಿ-76 ಟ್ಯಾಂಕ್ ಗಳ ಸ್ಥಳಾಂತರ

II-76 ವಿಮಾನಗಳಲ್ಲಿ ಟಿ-76 ಟ್ಯಾಂಕ್ ಗಳ ಸ್ಥಳಾಂತರ

ಭಾರತೀಯ ಸೇನೆಯು ಹೊಂದಿರುವ ಟಿ-76 ಟ್ಯಾಂಕ್ ಗಳನ್ನು II-76 ಯುದ್ಧ ವಿಮಾನಗಳು ಹೊತ್ತು ಸಾಗುವ ಸಾಮರ್ಥ್ಯವನ್ನು ಹೊಂದಿವೆ. 30 ವರ್ಷ ಹಳೆಯದಾದ ಟಿ-76 ಟ್ಯಾಂಕ್ ಗಳು 40 ಟನ್ ತೂಕವಿರಲಿದ್ದು, II-76 ವಿಮಾನಗಳಷ್ಟೇ ಈ ಟ್ಯಾಂಕ್ ಗಳ ಸ್ಥಳಾಂತರಕ್ಕೆ ಬಳಸಿಕೊಳ್ಳಲಾಗುತ್ತದೆ.

English summary
Amid Ladakh Conflict With China: First Batch Of Rafale Warplanes Arrive In India In July.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X