ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಕೊರೊನಾ’ ಹೆಮ್ಮಾರಿ ಹೋಯ್ತು! ಮತ್ತೊಂದು ಭಯಾನಕ ರೋಗ ಶುರುವಾಯ್ತು!

|
Google Oneindia Kannada News

ಅಮೆರಿಕನ್ನರ ಗ್ರಹಚಾರ ನೆಟ್ಟಗಿಲ್ವಾ? ಯಾಕೋ ಇತ್ತೀಚಿನ ಘಟನೆಗಳನ್ನ ಗಮನಿಸುತ್ತಿದ್ರೆ ಈ ಡೌಟ್ ಬಂದೇ ಬರುತ್ತೆ. ಕಳೆದ ಕೆಲವು ವರ್ಷಗಳಿಂದ ಮೇಲಿಂದ ಮೇಲೆ ವಿಶ್ವದ ದೊಡ್ಡಣ್ಣನಿಗೆ ಪೆಟ್ಟು ಬೀಳುತ್ತಿದೆ. ಕೊರೊನಾ ಕಂಟಕ ಮುಗಿಯುತ್ತಿದ್ದಂತೆ ಅಮೆರಿಕದಲ್ಲಿ ಈಗ ಹೊಸ ಆತಂಕ ಎದುರಾಗಿದೆ. 'ಸಿಡುಬು' ವರ್ಗಕ್ಕೆ ಸೇರಿರುವ 'ಮಂಕಿಪಾಕ್ಸ್‌' ಕಾಯಿಲೆ ಆತಂಕ ಅಮೆರಿಕವನ್ನು ಆವರಿಸಿದೆ.

27 ರಾಜ್ಯಗಳಲ್ಲಿ 200 ಜನರಿಗೆ 'ಮಂಕಿಪಾಕ್ಸ್‌' ಅಥವಾ ಮಂಗನ ಹುಣ್ಣು ತಗುಲಿರುವ ಅನುಮಾನ ಮೂಡಿದೆ. ಜುಲೈ ಆರಂಭದಲ್ಲಿ ನೈಜೀರಿಯಾದಿಂದ ಬಂದ ವ್ಯಕ್ತಿಗೆ 'ಮಂಕಿಪಾಕ್ಸ್‌' ತಗುಲಿತ್ತು. ಈ ವ್ಯಕ್ತಿಯ ಜೊತೆ 200 ಜನರು ಸಂಪರ್ಕಕ್ಕೆ ಬಂದಿರುವ ಸಾಧ್ಯತೆ ಇದೆ. ಹೀಗಾಗಿ 27 ರಾಜ್ಯಗಳ 200 ಜನರ ಮೇಲೆ ಅಮೆರಿಕ ಆರೋಗ್ಯ ಇಲಾಖೆ ಹದ್ದಿನ ಕಣ್ಣಿಟ್ಟಿದೆ.

ಕೆಲವು ದಿನಗಳ ಹಿಂದಷ್ಟೇ ಅಮೆರಿಕದಲ್ಲಿ ಕೊರೊನಾ ಕಂಟ್ರೋಲ್‌ಗೆ ಬಂದಿದೆ. ಆದ್ರೆ ಒಂದು ಕಂಟಕ ತೊಲಗುವ ಹೊತ್ತಿನಲ್ಲೇ ಮತ್ತೊಂದು ಸಮಸ್ಯೆ ಎದುರಾಗಿದೆ. ಮಂಕಿಪಾಕ್ಸ್‌ ಅಥವಾ ಮಂಗನ ಹುಣ್ಣು ವೇಗವಾಗಿ ಹಬ್ಬುತ್ತಾ ಅಮೆರಿಕದ ನಿವಾಸಿಗಳಲ್ಲಿ ಕೊರೊನಾ ಬಳಿಕ ಮತ್ತೊಂದು ಭೀತಿ ಸೃಷ್ಟಿಸಿದೆ.

Americans are very much feared about Monkeypox Virus

'ಮಂಕಿಪಾಕ್ಸ್‌' ಲಕ್ಷಣ ಏನು..?
ಜ್ವರ, ತಲೆನೋವು, ಊತ, ಬೆನ್ನು ನೋವು, ಸ್ನಾಯು ನೋವು ಮತ್ತು ಆಯಾಸ 'ಮಂಕಿಪಾಕ್ಸ್‌'ನ ಸಾಮಾನ್ಯ ಲಕ್ಷಣ. ಹಾಗೇ ಮುಖದ ಮೇಲೆ ಹಾಗೂ ಬಳಿಕ ದೇಹದಲ್ಲಿ ಹುಣ್ಣುಗಳು ಕಾಣಿಸುತ್ತದೆ. ಇದು ಸಾಮಾನ್ಯವಾಗಿ ಅಂಗೈಗಳಲ್ಲಿ, ಪಾದದ ಅಡಿಭಾಗದಲ್ಲಿ ಕಂಡುಬರುತ್ತೆ. ಸಿಡುಬಲ್ಲಿ ತುರಿಕೆ ಬರುವಂತೆ ಮಂಕಿಪಾಕ್ಸ್‌ನಲ್ಲೂ ತುರಿಕೆ ಬರುತ್ತದೆ. ಹುಣ್ಣುಗಳು ಸಂಪೂರ್ಣ ಗುಣಮುಖವಾದರೂ ಇದರ ಗಾಯದ ಗುರುತು ಹಾಗೆಯೇ ಉಳಿಯುವ ಸಾಧ್ಯತೆಯಿದೆ. ಮಂಕಿಪಾಕ್ಸ್‌ ಸೋಂಕು 14 ರಿಂದ 21 ದಿನಗಳವರೆಗೆ ಇರುತ್ತದೆ. ಹಾಗೇ ಸೌಮ್ಯ ಲಕ್ಷಣವನ್ನು ಸೋಂಕಿತರು ಹೊಂದಿರುತ್ತಾರೆ.

ಮಂಗನ ಹುಣ್ಣಿನಲ್ಲಿ 2 ತಳಿ
ವೈರಸ್‌ ಹೆಚ್ಚಾಗಿ ಮಧ್ಯ ಮತ್ತು ಪಶ್ಚಿಮ ಆಫ್ರಿಕಾ ಉಷ್ಣವಲಯದ ಮಳೆಕಾಡಿನಲ್ಲಿ ಕಂಡುಬರುತ್ತದೆ. ಇದರಲ್ಲಿ 2 ಪ್ರಮುಖ ತಳಿಗಳಿವೆ. 1 ಪಶ್ಚಿಮ ಆಫ್ರಿಕನ್ ತಳಿ, ಇನ್ನೊಂದು ಮಧ್ಯ ಆಫ್ರಿಕನ್ ತಳಿ. ರೋಗದ ಸಂಪರ್ಕ ಪತ್ತೆ ಕಾರ್ಯ ಆರಂಭವಾಗಿದೆ. ಆಫ್ರಿಕಾವನ್ನ ಒಂದಾದ ಬಳಿಕ ಒಂದು ಸಾಂಕ್ರಾಮಿಕ ರೋಗಗಳು ಕಾಡುತ್ತಿವೆ. ಇದೀಗ 'ಮಂಕಿಪಾಕ್ಸ್‌' ಹೊಸ ಅವಾಂತರಕ್ಕೆ ಕಾರಣವಾಗಿದೆ. ಬಡ ರಾಷ್ಟ್ರಗಳೇ ತುಂಬಿ ತುಳುಕುತ್ತಿರುವ ಈ ಖಂಡದಲ್ಲಿ ಕೊರೊನಾ ಸೋಂಕಿಗೆ ವ್ಯಾಕ್ಸಿನ್ ಸಿಗುತ್ತಿಲ್ಲ. ಇಂತಹ ಪರಿಸ್ಥಿತಿ ನಡುವೆ ಮಂಕಿಪಾಕ್ಸ್‌ ಬೇರೆ..!

Americans are very much feared about Monkeypox Virus

ಭವಿಷ್ಯದಲ್ಲಿ ಕಾದಿದೆಯಾ ಅಪಾಯ..?
ಮಂಕಿಪಾಕ್ಸ್ ಒಂದು 'ಝೂನೋಸಿಸ್‌' ಎಂದಿದೆ ವಿಶ್ವ ಆರೋಗ್ಯ ಸಂಸ್ಥೆ. ಅಂದ್ರೆ ಪ್ರಾಣಿಗಳಿಂದ ಮನುಷ್ಯರಿಗೆ ಹರಡಬಹುದಾದ ರೋಗ ಎಂದು ಅರ್ಥ. ಅಳಿಲು, ಗ್ಯಾಂಬಿಯಾನ್ ಇಲಿಗಳು, ಡಾರ್ಮಿಸ್, ವಿವಿಧ ಜಾತಿ ಮಂಗಗಳಲ್ಲಿ ಮಂಕಿಪಾಕ್ಸ್ ವೈರಸ್‌ನ ಪುರಾವೆ ದೊರೆತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ. ಕೊರೊನಾ ರೀತಿಯಲ್ಲೇ ಮಂಕಿಪಾಕ್ಸ್ ವೇಗವಾಗಿ ಹರಡಿದರೆ ಮತ್ತೊಂದು ಸಮಸ್ಯೆ ಉಲ್ಬಣವಾಗಲಿದೆ. ಇದೇ ಕಾರಣಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಅಲರ್ಟ್ ಆಗಿದ್ದು, ಎಚ್ಚರವಾಗಿರುವ ಎಲ್ಲಾ ದೇಶಗಳಿಗೂ ಸಂದೇಶ ನೀಡಿದೆ.

English summary
After Corona pandemic now Americans are feared about Monkeypox Virus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X