ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಲಿಬಾನ್ ನಾಯಕರೊಂದಿಗೆ ಅಮೆರಿಕ ಬೇಹುಗಾರಿಕೆ ಸಂಸ್ಥೆ ಮುಖ್ಯಸ್ಥರ ರಹಸ್ಯ ಸಭೆ

|
Google Oneindia Kannada News

ಕಾಬೂಲ್, ಆಗಸ್ಟ್ 24:ಅಮೆರಿಕದ ಬೇಹುಗಾರಿಕೆ ಸಂಸ್ಥೆ ಸಿಐಎಯ ಮುಖ್ಯಸ್ಥ ವಿಲಿಯಂ ಜೆ ಬರ್ನ್ಸ್ ಸೋಮವಾರ ಕಾಬೂಲ್‌ನಲ್ಲಿ ತಾಲಿಬಾನ್ ನಾಯಕ ಅಬ್ದುಲ್ ಘನಿ ಬರದಾರ್ ಜತೆ ರಹಸ್ಯೆ ಸಭೆ ನಡೆಸಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ಇದು ಉಭಯ ರಾಷ್ಟ್ರಗಳ ನಡುವಿನ ಅತ್ಯುನ್ನತ ಮಟ್ಟದ ಸಭೆಯಾಗಿದೆ. ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ಆಕ್ರಮಿಸಿಕೊಂಡು ಒಂದು ವಾರದ ಬಳಿಕ ಸಭೆ ನಡೆದಿದೆ.

 ಅಂದರಾಬ್ ಕಣಿವೆಯಲ್ಲಿ ಆಹಾರ ಸರಬರಾಜಿಗೆ ತಾಲಿಬಾನಿಗಳ ತಡೆ: ಸಾಲೇಹ್ ಅಂದರಾಬ್ ಕಣಿವೆಯಲ್ಲಿ ಆಹಾರ ಸರಬರಾಜಿಗೆ ತಾಲಿಬಾನಿಗಳ ತಡೆ: ಸಾಲೇಹ್

ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜನರನ್ನು ಸ್ಥಳಾಂತರಿಸುವ ಪ್ರಯತ್ನ ನಡೆಯುತ್ತಿರುವ ಮಧ್ಯೆಯೇ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಬೇಹುಗಾರ ಸಂಸ್ಥೆಯನ್ನು ತಾಲಿಬಾನಿಗಳ ಬಳಿ ಕಳುಹಿಸಿದೆ.

American Spy Agency CIA Director Held Secret Meeting With Taliban Leader Baradar: Report

ತಾಲಿಬಾನ್ ವಶದಲ್ಲಿರುವ ಅಫ್ಘಾನಿಸ್ತಾನದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಅಮೆರಿಕ, ಭಾರತ, ರಷ್ಯಾ ಸೇರಿದಂತೆ ಹಲವು ದೇಶಗಳು ಮಿಲಿಟರಿ ವಿಮಾನಗಳ ಮೂಲಕ ಅಫ್ಘಾನ್​ನಲ್ಲಿ ನೆಲೆಸಿರುವ ತಮ್ಮ ಪ್ರಜೆಗಳನ್ನು ವಾಪಾಸ್ ಕರೆತಂದಿದ್ದಾರೆ. ಇನ್ನೂ ಅಫ್ಘಾನಿಸ್ತಾನದಲ್ಲಿರುವ ಅಮೆರಿಕ ಸೇನೆಯನ್ನು ಆ. 31ರೊಳಗೆ ವಾಪಾಸ್ ಕರೆಸಿಕೊಳ್ಳದಿದ್ದರೆ ಅರದ ಪರಿಣಾಮವನ್ನು ಎದುರಿಸಬೇಕಾದೀತು ಎಂದು ತಾಲಿಬಾನ್ ಅಮೆರಿಕಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದೆ.

ಅಮೆರಿಕದ ಅಧ್ಯಕ್ಷ ಜೋ ಬಿಡೆನ್, ತಾಲಿಬಾನ್ ಮೇಲಿನ ನಿರ್ಬಂಧ ಸಡಿಲಿಕೆ ಸಾಧ್ಯವಿಲ್ಲ. ನಮ್ಮ ಮುಂದಿನ ನಿರ್ಧಾರ ತಾಲಿಬಾನ್​ ಸಂಘಟನೆಯ ನಡೆಯನ್ನು ಆಧರಿಸಿದೆ ಎಂದು ಹೇಳಿದ್ದರು.

ಅಲ್ಲದೆ, ಅಫ್ಘಾನಿಸ್ತಾನವನ್ನು ತಾಲಿಬಾನ್‌ ವಶಪಡಿಸಿಕೊಂಡ ಮಾತ್ರಕ್ಕೆ ಈಗಾಗಲೇ ಅಫ್ಘಾನ್ ವಿರುದ್ಧ ಅಮೆರಿಕ ವಿಧಿಸಿರುವ ಕಠಿಣ ನಿರ್ಬಂಧಗಳನ್ನು ಕೈ ಬಿಡಲು ಸಾಧ್ಯವಿಲ್ಲ.

ನಿರ್ಬಂಧ ಸಡಿಲಿಕೆ ತಾಲಿಬಾನ್‌ ನಡವಳಿಕೆಯನ್ನು ಅವಲಂಬಿಸಿರುತ್ತದೆ. ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಲೂ ಭದ್ರತಾ ವಲಯವನ್ನು ಇನ್ನಷ್ಟು ವಿಸ್ತರಿಸಲಾಗುವುದು. ಆಗಸ್ಟ್‌ 31ರೊಳಗೆ ಪೂರ್ಣಗೊಳ್ಳಲಿರುವ, ಸೇನಾ ಪಡೆಗಳ ವಾಪಾಸಾತಿ ಅವಧಿ ವಿಸ್ತರಿಸುವ ಸಾಧ್ಯತೆಗಳ ಬಗ್ಗೆ ಅಮೆರಿಕಾ ಭದ್ರತಾ ಪಡೆಗಳೊಂದಿಗೆ ಚರ್ಚಿಸುತ್ತೇವೆ ಎಂದು ಕೂಡ ಜೋ ಬಿಡೆನ್ ಮಾಧ್ಯಮಗಳಿಗೆ ತಿಳಿಸಿದ್ದರು.

ಒಂದುವೇಳೆ ಅಫ್ಘಾನಿಸ್ತಾನದಿಂದ ತಮ್ಮ ಸೇನೆಯನ್ನು ಹಿಂಪಡೆಯಲು ಅಮೆರಿಕ ಹಾಗೂ ಇಂಗ್ಲೆಂಡ್ ಆ. 31ರ ನಂತರವೂ ಗಡುವು ವಿಸ್ತಾರ ಮಾಡಬೇಕೆಂಬ ಮನವಿಯನ್ನು ಇಟ್ಟರೆ ನಾವು ಅದಕ್ಕೆ ಒಪ್ಪುವ ಮಾತೇ ಇಲ್ಲ. ಒಂದುವೇಳೆ ರೆಡ್ ಲೈನ್ ಮೀರಿ ಅವರ ಸೈನ್ ಅಫ್ಘಾನ್​ನಲ್ಲೇ ಉಳಿದರೆ ಅದರ ಪರಿಣಾಮ ಕೆಟ್ಟದಾಗಿರುತ್ತದೆ ಎಂದು ಸುಹೇಲ್ ಹೇಳಿದ್ದಾರೆ.

ಅಫ್ಘಾನಿಸ್ತಾನದಿಂದ ಜಾಗ ಖಾಲಿ ಮಾಡಲು ಅಮೆರಿಕ, ಇಂಗ್ಲೆಂಡ್ ಸೇರಿದಂತೆ ಹಲವು ವಿದೇಶೀಯ ಸೇನೆಗಳಿಗೆ ಆ. 31ರವರೆಗೆ ತಾಲಿಬಾನ್ ಸಮಯಾವಕಾಶ ನೀಡಿದೆ. ತಾಲಿಬಾನ್ ಅಟ್ಟಹಾಸದಿಂದ ಈಗಾಗಲೇ ಸಾವಿರಾರು ವಿದೇಶೀಯರು ಅಫ್ಘಾನಿಸ್ತಾದಿಂದ ಬೇರೆ ಬೇರೆ ದೇಶಗಳಿಗೆ ವಲಸೆ ಹೋಗಿದ್ದಾರೆ. ಈ ವೇಳೆ ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಡೆದ ಗಲಾಟೆಯಲ್ಲಿ 20 ಜನರು ಸಾವನ್ನಪ್ಪಿದ್ದಾರೆ.

ಅಫ್ಘಾನಿಸ್ತಾನಕ್ಕೆ ಅಮೆರಿಕ ಪೂರೈಸಿದ್ದ ಯುದ್ಧೋಪಕರಣಗಳು ತಾಲಿಬಾನ್ ಕೈ ಸೇರಿದೆ ಎಂದು ಅಮೆರಿಕದ ರಕ್ಷಣಾ ಅಧಿಕಾರಿ ಖಚಿತಪಡಿಸಿದ್ದಾರೆ. ಅಮೆರಿಕದ ಮಿಲಿಟರಿ ಪಡೆಗಳಿಂದ ಪೂರೈಸಲಾಗಿದ್ದ ವಾಹನಗಳು, ಯುದ್ದೋಪಕರಣಗಳನ್ನು ಅಫ್ಘಾನ್ ಸರ್ಕಾರ ತಾಲಿಬಾನ್ ವಶಕ್ಕೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಎಚ್ಚರಿಕೆ ಸಂದೇಶವನ್ನು ರವಾನಿಸಿರುವ ತಾಲಿಬಾನ್ ಆ . 31ರೊಳಗೆ ಅಫ್ಘಾನಿಸ್ತಾನದಿಂದ ಅಮೆರಿಕ ತನ್ನ ಸೇನೆಯನ್ನು ವಾಪಾಸ್ ಕರೆಸಿಕೊಳ್ಳದೆ ಅದರಿಂದಾಗುವ ಪರಿಣಾಮಗಳಿಗೆ ನಾವು ಹೊಣೆಯಲ್ಲ.

ಇದು ರೆಡ್ ಲೈನ್ ಆಗಿದ್ದು, ಈ ಗಡುವನ್ನು ಮೀರಿ ಅಮೆರಿಕ ಸೇನೆಗೆ ಸಮಯಾವಕಾಶ ನೀಡಲು ಸಾಧ್ಯವಿಲ್ಲ ಎಂದಿದೆ. ಈ ಬಗ್ಗೆ ತಾಲಿಬಾನ್ ವಕ್ತಾರ ಸುಹೇಲ್ ಶಹೀನ್ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ತಾಲಿಬಾನಿ ನಾಯಕರ ಜತೆ ಸಭೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.

Recommended Video

ಪಾಕಿಸ್ತಾನ ಬಾಂಗ್ಲಾದೇಶದ ಮುಸ್ಲಿಂರನ್ನು ಇಲ್ಲಿಗೆ ತುಂಬಿಸ್ಕೊಂಡಿದ್ರೆ ಪರಿಸ್ಥಿತಿ ಏನಾಗ್ತಿತ್ತು ? | Oneindia

English summary
The chief of American spy agency CIA William J Burns held a secret meeting with the Taliban leader Abdul Ghani Baradar in Kabul on Monday, according to the Washington Post which quoted unnamed US officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X