ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ರಂಗಿನಾಟದ ಆರೋಪ ಒಂದಾ ಎರಡಾ..

|
Google Oneindia Kannada News

ಅಮೆರಿಕದ ಅಧ್ಯಕ್ಷರಾಗುವ ಮುನ್ನವೇ ವಿವಾದವನ್ನು ಮೈಗೂಡಿಸಿಕೊಂಡಿದ್ದ ಡೊನಾಲ್ಡ್ ಟ್ರಂಪ್, ಅಧ್ಯಕ್ಷರಾದ ನಂತರವೂ ಒಂದಲ್ಲಾ ಒಂದು ವಿವಾದಕಾರಿ ನಿರ್ಧಾರ, ಹೇಳಿಕೆ ನೀಡುತ್ತಲೇ ಬರುತ್ತಿದ್ದಾರೆ. ಜೊತೆಗೆ, ಲೈಂಗಿಕ ದೌರ್ಜನ್ಯದ ಆರೋಪವೂ ಇವರ ಮೇಲೆ ಒಂದರ ಮೇಲೊಂದು ಕೇಳಿ ಬರುತ್ತಲೇ ಇದೆ.

ಬಹುಷ: ಅಮೆರಿಕದ ಇದುವರೆಗಿನ ಯಾವ ಅಧ್ಯಕ್ಷರ ಮೇಲೂ ಬರದಷ್ಟು ಆರೋಪಗಳು ಟ್ರಂಪ್ ಮೇಲಿವೆ, ಜೊತೆಗೆ, ಬಂದ ಆರೋಪಗಳನ್ನೆಲ್ಲಾ ಶ್ವೇತಭವನ ಅಲ್ಲಗಳೆಯುತ್ತಲೇ ಬರುತ್ತಿದೆ. ನೀಲಿ ಚಿತ್ರ ನಟಿ ಸ್ಟಾರ್ಮಿ ಡೇನಿಯಲ್, ಹನ್ನೊಂದು ವರ್ಷದ ಹಿಂದೆ ಟ್ರಂಪ್ ಜೊತೆಗಿನ ಸಂಬಂಧವನ್ನು ನಿನ್ನೆಮೊನ್ನೆ ಪತ್ರಿಕೆಯೊಂದು ಬಹಿರಂಗ ಪಡಿಸಿತ್ತು.

ಮೇಟಿಯಂತಹ ಪ್ರಕರಣ ವೈಟ್ ಹೌಸ್ ಮುತ್ತಿಡಲಿವೆಮೇಟಿಯಂತಹ ಪ್ರಕರಣ ವೈಟ್ ಹೌಸ್ ಮುತ್ತಿಡಲಿವೆ

ಪರಸ್ತ್ರೀ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕಾದೀತು. ಇದೇ ಅಧ್ಯಕ್ಷ ಅವಧಿಯಲ್ಲಿಯೇ ಕೆಲವು ಲೈಂಗಿಕ ಹಗರಣಗಳು ಆಗುವ ಸಂಭವಗಳು ಹೆಚ್ಚು ಇವೆ. ಕರ್ನಾಟಕದ ಮೇಟಿ ಯಂತಹ ಪ್ರಕರಣಗಳು ವೈಟ್ ಹೌಸ್ ಅನ್ನು ಮುತ್ತಿದರೆ ಆಶ್ಚರ್ಯವಿಲ್ಲ ಎನ್ನುವ ಭವಿಷ್ಯವನ್ನೂ ನುಡಿಯಲಾಗಿತ್ತು.

#MeToo ಚಳವಳಿಯ ಮೂಲಕ ನೂರಾರು ಮಹಿಳೆಯರು ಅಧ್ಯಕ್ಷ ಟ್ರಂಪ್ ಅವರಿಂದ ತಮ್ಮ ಮೇಲಾಗಿರುವ ಲೈಂಗಿಕ ದೌರ್ಜನ್ಯವನ್ನು ಬಯಲಿಗೆಳೆದಿದ್ದರು. ಅಮೆರಿಕದ ಅಧ್ಯಕ್ಷರ ಲೈಂಗಿಕ ಚೇಷ್ಟೆಗಳು ನೂರು ದಾಟಿವೆ. ಇನ್ನೂ ಹೆಚ್ಚುತ್ತಲೇ ಇವೆ ಎಂದು ಈ ಚಳುವಳಿಯ ಮೂಲಕ ಹೋದ ತಿಂಗಳು ಮಹಿಳೆಯರು ಬೀದಿಗಿಳಿದಿದ್ದರು.

ಟ್ರಂಪ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪಗಳ ಸುರಿಮಳೆಟ್ರಂಪ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪಗಳ ಸುರಿಮಳೆ

ಅಮೆರಿಕದ ಅಧ್ಯಕ್ಷರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಮಾಡಿರುವವರಲ್ಲಿ ಚಿತ್ರ ನಟಿಯರೂ ಇದ್ದಾರೆ, ನೀಲಿ ಚಿತ್ರನಟಿಯರೂ ಇದ್ದಾರೆ, ಪತ್ರಕರ್ತೆಯರೂ ಇದ್ದಾರೆ, ಸಾಮಾನ್ಯ ಮಹಿಳೆಯರೂ ಇದ್ದಾರೆ. ಆದರೆ, ಇದ್ಯಾವ ಆರೋಪಕ್ಕೂ ಟ್ರಂಪ್ ತಲೆಕೆಡಿಸಿಕೊಳ್ಳುತ್ತಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಾಣಿಸುತ್ತಿರುವ ಸತ್ಯ. ಟ್ರಂಪ್ ಮೇಲಿರುವ ಲೈಂಗಿಕ ದೌರ್ಜನ್ಯದ ಕೆಲವೊಂದು ವಿವರಗಳು, ಮುಂದೆ ಓದಿ..

ಪತ್ನಿಯೇ ಪತಿಯ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು

ಪತ್ನಿಯೇ ಪತಿಯ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು

1977ರಲ್ಲಿ ಇವಾನ ಟ್ರಂಪ್ ಅವರನ್ನು ಡೊನಾಡ್ ಟ್ರಂಪ್ ಮದುವೆಯಾಗಿದ್ದರು. 1989ರಲ್ಲಿ ದಂಪತಿಯರ ಡೈವೋರ್ಸ್ ಕೇಸ್ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಪತ್ನಿಯೇ ಪತಿಯ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. 1990ರಲ್ಲಿ ಕೋರ್ಟ್ ಇವರ ಡೈವೋರ್ಸಿಗೆ ಅನುಮತಿ ನೀಡಿತ್ತು. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ (2015) ಇವಾನ, ಟ್ರಂಪ್ ಪರ ಪ್ರಚಾರ ನಡೆಸಿದ್ದರು.

ಮಹಿಳಾ ಉದ್ಯಮಿ ಜೆಸ್ಸಿಕಾ ಲೀಡ್ಸ್ 1980ರಲ್ಲಿನ ಅನುಭವ

ಮಹಿಳಾ ಉದ್ಯಮಿ ಜೆಸ್ಸಿಕಾ ಲೀಡ್ಸ್ 1980ರಲ್ಲಿನ ಅನುಭವ

ಮಹಿಳಾ ಉದ್ಯಮಿ ಜೆಸ್ಸಿಕಾ ಲೀಡ್ಸ್ 1980ರಲ್ಲಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ, ಡೊನಾಲ್ಡ್ ಟ್ರಂಪ್ ಪಕ್ಕದ ಸೀಟಿನಲ್ಲಿ ಕೂತಿದ್ದರು. ವಿಮಾನ ಟೇಕ್ ಆಫ್ ಆಗಿ 45ನಿಮಿಷದಲ್ಲಿ ಟ್ರಂಪ್ ನನ್ನ ಎದೆ, ಸ್ಕರ್ಟ್ ಮೇಲೆ ಕೈಯಾಡಿಸಲು ಆರಂಭಿಸಿದ್ದರು. ಅಂದು ನಡೆದ ಘಟನೆಯನ್ನು ಕೂಡಲೇ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಸಂಪಾದಕರಿಗೆ ತಿಳಿಸಿದ್ದೆ ಎಂದು ಲೀಡ್ಸ್ ಹೇಳಿದ್ದರು.

1992ರಲ್ಲಿ ಜಿಲ್ ಹೇರತ್ ಎನ್ನುವ ಮಹಿಳೆ ಆರೋಪ

1992ರಲ್ಲಿ ಜಿಲ್ ಹೇರತ್ ಎನ್ನುವ ಮಹಿಳೆ ಆರೋಪ

1992ರಲ್ಲಿ ಜಿಲ್ ಹೇರತ್ ಎನ್ನುವ ಮಹಿಳೆ ಟ್ರಂಪ್ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಟ್ರಂಪ್ ಮತ್ತು ಅವರ ಸ್ನೇಹಿತ ಜಾರ್ಜ್ ಹೌರಾನೆ ಹಲವು ಬಾರಿ ದೌರ್ಜನ್ಯ ಎಸಗಿದ್ದಾರೆಂದು ಹೇರತ್ ನೋವು ತೋಡಿಕೊಂಡಿದ್ದರು. ಫ್ಲೋರಿಡಾದ ನನ್ನ ಮನೆಗೆ ಹಲವು ಬಾರಿ ಭೇಟಿ ನೀಡಿದ್ದ ಟ್ರಂಪ್ ಮತ್ತು ಅವರ ಸ್ನೇಹಿತ ನನ್ನ ಖಾಸಗಿ ಭಾಗಕ್ಕೆ ಬಲವಂತವಾಗಿ ಕೈಹಾಕಲು ಪ್ರಯತ್ನಿಸಿದ್ದರು ಎಂದು ಹೇರತ್ ಆರೋಪಿಸಿದ್ದರು.

ಕರೆನಾ ವಿರ್ಜಿನಿಯಾ ಎನ್ನುವ ಕೋಚ್

ಕರೆನಾ ವಿರ್ಜಿನಿಯಾ ಎನ್ನುವ ಕೋಚ್

ಕರೆನಾ ವಿರ್ಜಿನಿಯಾ ಎನ್ನುವ ಕೋಚ್ 1998ರಲ್ಲಿ ನಡೆದ ಘಟನೆಯನ್ನು 2016ರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ್ದರು. ಯುಎಸ್ ಓಪನ್ ಪಂದ್ಯದ ನಂತರ ಮನೆಗೆ ಹೋಗಲು ಕಾಯುತ್ತಿದ್ದೆ. ಆ ವೇಳೆ, ಟ್ರಂಪ್ ನನ್ನನ್ನು ಬಲವಂತವಾಗಿ ಎಳೆದು, ನನ್ನ ಕಾಲು, ಎದೆಯ ಮೇಲೆ ಕೈಹಾಕಿ ಅಸಭ್ಯವಾಗಿ ವರ್ತಿಸಿದ್ದರು. ನಾನು ಇದೇ ಮೊದಲ ಬಾರಿಗೆ ಟ್ರಂಪ್ ಅವರನ್ನು ನೋಡಿದ್ದು ಎಂದು ವಿರ್ಜಿನಿಯಾ 2016ರಲ್ಲಿ ಆರೋಪಿಸಿದ್ದರು.

ಸಮ್ಮರ್ ಜೆರ್ವೋಸ್ ಎನ್ನುವ ನಟಿ

ಸಮ್ಮರ್ ಜೆರ್ವೋಸ್ ಎನ್ನುವ ನಟಿ

ಸಮ್ಮರ್ ಜೆರ್ವೋಸ್ ಎನ್ನುವ ನಟಿ 2007ರಲ್ಲಿ ಟ್ರಂಪ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಅಸಭ್ಯವಾಗಿ ವರ್ತಿಸಿದ್ದರು ಎಂದು ಆರೋಪಿಸಿದ್ದರು 2006ರಲ್ಲಿ ತನ್ನ ಚಿತ್ರ ಬಿಡುಗಡೆಯಾದ ನಂತರ ಕೆಲಸಕ್ಕಾಗಿ ಟ್ರಂಪ್ ಅವರನ್ನು ಸಂಪರ್ಕಿಸಿದ್ದೆ. ಬೇವರ್ಲಿ ಹಿಲ್ಸ್ ಹೋಟೆಲಿಗೆ ನನ್ನನ್ನು ಬರಲಿ ಹೇಳಿ, ನನ್ನ ಅಂಗಾಂಗ ಮೇಲೆ ಕೈಯಾಡಿಸಿ ಅಸಭ್ಯವಾಗಿ ವರ್ತಿಸಿದ್ದರೆಂದು ಸಮ್ಮರ್ ಜೆರ್ವೋಸ್ ಹೇಳಿದ್ದರು.

English summary
Donald Trump, an American businessman and current President of the United States, has been accused of sexual assault and sexual harassment by at least fifteen women since the 1980s.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X