ಸತತ ಎಂಟು ಗಂಟೆ ಭಾಷಣ ಮಾಡಿದ ಅಮೆರಿಕ ರಾಜಕಾರಣಿ

Posted By:
Subscribe to Oneindia Kannada

ವಾಷಿಂಗ್ಟನ್, ಫೆಬ್ರವರಿ 09: ಭಾರತ ರಾಜಕಾರಣಿಗಳು ಮೈಕು ಸಿಕ್ಕರೆ ಸಾಕು ಕೊರೆತ ಪ್ರಾರಂಭಿಸುತ್ತಾರೆ ಎಂಬ ಮಾತಿಗೆ ಆದರೆ ಅಮೆರಿಕದ ಈ ಮಹಿಳಾ ರಾಜಕಾರಣಿ ಎಲ್ಲರನ್ನೂ ಮೀರಿಸಿ ಮಾತಿನಲ್ಲಿ ತಾನೇ ನಂ.1 ಎಂದು ಸಾಬೀತು ಮಾಡಿದ್ದಾರೆ.

ಅಮೆರಿಕದ ಡೆಮಾಕ್ರಟಿಕ್ ಪಕ್ಷದ ನಾಯಕಿ ನ್ಯಾನ್ಸಿ ಪೆಲೊಸಿ ಅವರು ಸತತವಾಗಿ 8 ಗಂಟೆ 07 ನಿಮಿಷ ಮಾತನಾಡಿ ದಾಖಲೆ ಸೃಷ್ಠಿಸಿದ್ದಾರೆ. ದಾಖಲೆಗಳಿಲ್ಲದ ಯುವ ವಲಸೆಗಾರರ ರಕ್ಷಣೆ ಕುರಿತು ಅಮೆರಿಕ ಸಂಸತ್‌ನಲ್ಲಿ ಮಾತನಾಡಿದ ಅವರು ಯುವ ವಲಸಿಗರ ಕನಸುಗಳನ್ನು ರಕ್ಷಿಸಬೇಕಾದ ಜವಾಬ್ದಾರಿ ಅಮೆರಿಕದ ಮೇಲಿದೆ ಎಂದಿದ್ದಾರೆ.

77 ವರ್ಷದ ನ್ಯಾನ್ಸಿ ಅವರು ಭಾಷಣದ ಸಂದರ್ಭದಲ್ಲಿ ನೀರನ್ನು ಹೊರತುಪಡಿಸಿದರೆ ಯಾವುದೇ ರೀತಿಯ ಆಹಾರ ಸೇವಿಸಲಿಲ್ಲ. ಕಳೆದ 108 ವರ್ಷಗಳಲ್ಲೇ ಇದು ಸುದೀರ್ಘ ಭಾಷಣವಾಗಿದೆ.

American politician spoke for 8 hours, set record

ಈ ಹಿಂದೆ 1909 ರಲ್ಲಿ ಸಂಸದರಾಗಿದ್ದ ಚಾಂಪ್‌ ಕ್ಲರ್ಕ್‌ ಅವರು 5ಗಂಟೆ 15 ನಿಮಿಷಗಳ ಭಾಷಣ ಮಾಡಿ ದಾಖಲೆ ನಿರ್ಮಿಸಿದ್ದರು. 1909ಕ್ಕೂ ಮುನ್ನ ಸುದೀರ್ಘ ಭಾಷಣ ಮಾಡಿದ ಬಗ್ಗೆ ಮಾಹಿತಿಯೇ ಇಲ್ಲ.
ನ್ಯಾನ್ಸಿ ಪೆಲೊಸಿ ಅವರು ಸತತವಾಗಿ 8 ಗಂಟೆ ಕಾಲ ನಿಂತಲ್ಲೇ ನಿಂತು, ನೀರು ಬಿಟ್ಟು ಇನ್ನೇನೂ ಸೇವಿಸದೆ ಬಿಗಿದ ಭಾಷಣ ವಿಶ್ವದಾದ್ಯಂತ ಸುದ್ದಿ ಮಾಡುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
American politician Democratic party leader Nancy Pelosi gave speech 8 hours continuously. She talked about protection of undocumented young immigrants.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ