ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೇರಿಕಾದ ಪ್ರಖ್ಯಾತ ನಟ ಮತ್ತು ಪತ್ನಿಗೆ ಕೊರೊನಾ ವೈರಸ್ ಪಾಸಿಟಿವ್!

|
Google Oneindia Kannada News

ಆಸ್ಟ್ರೇಲಿಯಾ, ಮಾರ್ಚ್ 12: ಅಮೇರಿಕಾದ ಪ್ರಖ್ಯಾತ ನಟ, ಆಸ್ಕರ್ ಪ್ರಶಸ್ತಿ ವಿಜೇತ ಟಾಮ್ ಹ್ಯಾಂಕ್ಸ್ ಮತ್ತು ಪತ್ನಿ ರೀಟಾ ವಿಲ್ಸನ್ ಗೆ ಮಾರಕ ಕೊರೊನಾ ವೈರಸ್ ಸೋಂಕು ತಗುಲಿದೆ.

ತಮಗೆ ಕೊರೊನಾ ವೈರಸ್ ಸೋಂಕು ತಗುಲಿರುವ ಬಗ್ಗೆ ಖುದ್ದು ಟಾಮ್ ಹ್ಯಾಂಕ್ಸ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಖಚಿತ ಪಡಿಸಿದ್ದಾರೆ. 63 ವರ್ಷದ ಟಾಮ್ ಹ್ಯಾಂಕ್ಸ್ ಮತ್ತು ರೀಟಾ ವಿಲ್ಸನ್ ಸದ್ಯ ಆಸ್ಟ್ರೇಲಿಯಾದಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊರೊನಾ + ಹೈ ಬಿಪಿ = ಸಾವು : ಇದು ಚೀನಿ ವೈದ್ಯರೇ ಹೇಳಿದ ಮಾತು!ಕೊರೊನಾ + ಹೈ ಬಿಪಿ = ಸಾವು : ಇದು ಚೀನಿ ವೈದ್ಯರೇ ಹೇಳಿದ ಮಾತು!

ಎಲ್ವಿಸ್ ಪ್ರೆಸ್ಲಿಯ ಜೀವನ ಚರಿತ್ರೆ ಕುರಿತು ಸಿನಿಮಾ ಮಾಡುವ ಸಲುವಾಗಿ ಟಾಮ್ ಹ್ಯಾಂಕ್ಸ್ ಮತ್ತು ರೀಟಾ ವಿಲ್ಸನ್ ದಂಪತಿ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ಗೆ ಹಾರಿದ್ದರು. ಈ ವೇಳೆ ಅವರಿಗೆ ಮಾರಣಾಂತಿಕ ಕೊರೊನಾ ವೈರಸ್ ಸೋಂಕು ತಗುಲಿದೆ.

ಕೊರೊನಾ ವೈರಸ್ ಪಾಸಿಟೀವ್

ಕೊರೊನಾ ವೈರಸ್ ಪಾಸಿಟೀವ್

''ನಮಗೆ ಸ್ವಲ್ಪ ಸುಸ್ತು ಎನಿಸಿತು. ಶೀತ ಕಾಣಿಸಿಕೊಂಡಿತು. ಮೈ, ಕೈ ನೋವಾಗುತ್ತಿತ್ತು. ಆಗಾಗ ರೀಟಾಗೆ ನೆಗಡಿ ಆಗುತ್ತಿತ್ತು. ಜ್ವರ ಕೂಡ ಇತ್ತು. ಹೀಗಾಗಿ, ವೈದ್ಯಕೀಯ ತಪಾಸಣೆ ಮಾಡಿಸಿದ ಬಳಿಕ ನಮ್ಮಿಬ್ಬರಿಗೂ ಕೊರೊನಾ ಪಾಸಿಟಿವ್ ಇರುವುದು ದೃಢ ಪಟ್ಟಿದೆ'' ಎಂದು ಟಾಮ್ ಹ್ಯಾಂಕ್ಸ್ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ಮೂಲಕ ಬಹಿರಂಗ ಪಡಿಸಿದ್ದಾರೆ.

ಪ್ರತ್ಯೇಕ ಚಿಕಿತ್ಸೆ

ಪ್ರತ್ಯೇಕ ಚಿಕಿತ್ಸೆ

''ಮುಂದೇನು ಮಾಡೋಣ? ವೈದ್ಯಕೀಯ ಅಧಿಕಾರಿಗಳು ಸೂಚಿಸಿದಂತೆ ನಡೆದುಕೊಳ್ಳುವುದು ಅನಿವಾರ್ಯ. ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ನಮ್ಮನ್ನ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ'' ಎಂದು ಟಾಮ್ ಹ್ಯಾಂಕ್ಸ್ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.

ಬೆಂಗಳೂರಿನ ಟೆಕ್ಕಿ ಮಗಳಿಗೆ ಕೊರೊನಾ: ಶಾಲೆಯ 1700 ಸಹಪಾಠಿಗಳಿಗೆ ತಪಾಸಣೆ!ಬೆಂಗಳೂರಿನ ಟೆಕ್ಕಿ ಮಗಳಿಗೆ ಕೊರೊನಾ: ಶಾಲೆಯ 1700 ಸಹಪಾಠಿಗಳಿಗೆ ತಪಾಸಣೆ!

ಟಾಮ್ ಹ್ಯಾಂಕ್ಸ್ ಕುರಿತು..

ಟಾಮ್ ಹ್ಯಾಂಕ್ಸ್ ಕುರಿತು..

ಕ್ಯಾಲಿಫೋರ್ನಿಯದಲ್ಲಿ ಹುಟ್ಟಿದ ಥಾಮಸ್ ಜೆಫ್ರಿ ಹ್ಯಾಂಕ್ಸ್ ಸಿನಿ ಲೋಕದಲ್ಲಿ ಟಾಮ್ ಹ್ಯಾಂಕ್ಸ್ ಎಂದೇ ಜನಪ್ರಿಯತೆ ಪಡೆದಿದ್ದಾರೆ. 'ಸ್ಪ್ಲಾಶ್', 'ಬ್ಯಾಚೆಲರ್ ಪಾರ್ಟಿ', 'ಬಿಗ್', 'ಫಿಲಡೆಲ್ಫಿಯ', 'ಫಾರೆಸ್ಟ್ ಗಂಪ್', 'ಅಪೋಲೋ 13', 'ಕ್ಯಾಪ್ಟನ್ ಫಿಲಿಪ್ಸ್' ಮುಂತಾದ ಚಿತ್ರಗಳಲ್ಲಿ ಟಾಮ್ ಹ್ಯಾಂಕ್ಸ್ ಅಭಿನಯಿಸಿದ್ದಾರೆ. ಗೋಲ್ಡನ್ ಗ್ಲೋಬ್ ಅವಾರ್ಡ್, ಅಕಾಡೆಮಿ ಅವಾರ್ಡ್, ಪೀಪಲ್ಸ್ ಚಾಯ್ಸ್ ಅವಾರ್ಡ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಟಾಮ್ ಹ್ಯಾಂಕ್ಸ್ ಪಡೆದಿದ್ದಾರೆ.

ರೀಟಾ ವಿಲ್ಸನ್ ಕುರಿತು

ರೀಟಾ ವಿಲ್ಸನ್ ಕುರಿತು

ಟಾಮ್ ಹ್ಯಾಂಕ್ಸ್ ಪತ್ನಿ ರೀಟಾ ವಿಲ್ಸನ್ ಕೂಡ ಅಮೇರಿಕಾದ ನಟಿ, ಗಾಯಕಿ ಮತ್ತು ನಿರ್ಮಾಪಕಿ. 'ನೌ ಅಂಡ್ ದೆನ್', 'ಜಿಂಗಲ್ ಆಲ್ ದಿ ವೇ', 'ದಿ ಸ್ಟೋರಿ ಆಫ್ ಅಸ್', 'ರನ್ ಅವೇ ಬ್ರೈಡ್' ಮುಂತಾದ ಚಿತ್ರಗಳಲ್ಲಿ ರೀಟಾ ವಿಲ್ಸನ್ ಅಭಿನಯಿಸಿದ್ದಾರೆ.

ಕೊರೊನಾದಿಂದ ದೇವಾಲಯಗಳಿಗೆ ಬೀಗ: ಸಂಕಟ ಬಂದರೂ ವೆಂಕಟರಮಣ ಅನ್ನಂಗಿಲ್ಲ!ಕೊರೊನಾದಿಂದ ದೇವಾಲಯಗಳಿಗೆ ಬೀಗ: ಸಂಕಟ ಬಂದರೂ ವೆಂಕಟರಮಣ ಅನ್ನಂಗಿಲ್ಲ!

English summary
American Actor Tom Hanks and Rita Wilson tested Coronavirus Positive.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X