ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದ ನೂತನ ಅಧ್ಯಕ್ಷ ಬೈಡನ್ ಗೆ ಶುಭ ಕೋರದ ರಷ್ಯಾ, ಚೀನಾ

|
Google Oneindia Kannada News

ವಾಷಿಂಗ್ಟನ್, ನ 8: ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳು ಸೂಪರ್ ಪವರ್ ದೇಶ ಅಮೆರಿಕಾದ ನೂತನ ಅಧ್ಯಕ್ಷ ಜೋ ಬೈಡನ್ ಗೆ ಶುಭ ಕೋರಿದರೂ, ಚೀನಾ ಮತ್ತು ರಷ್ಯಾದಿಂದ ಇದುವರೆಗೂ, ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.

ಪ್ಯಾರಿಸ್ ಹವಾಮಾನ ಬದಲಾವಣೆ ಅಗ್ರೀಮೆಂಟ್, ಕೊರೊನಾ ವೈರಸ್, ಅಮೆರಿಕ ಫಸ್ಟ್ ಎನ್ನುವ ಟ್ರಂಪ್ ಸರಕಾರದ ಕೈಗಾರಿಕಾ ನೀತಿ, ನ್ಯಾಟೋ ದೇಶಗಳ ಮೇಲೆ ದಾಳಿ, ವಿಶ್ವ ಆರೋಗ್ಯ ಸಂಸ್ಥೆ ಮುಂತಾದ ವಿಚಾರದಲ್ಲಿ, ಹೊಸ ಬದಲಾವಣೆಯ ನಿರೀಕ್ಷೆಯಲ್ಲಿ ಪಾಶ್ಚಿಮಾತ್ಯ ಮತ್ತು ಏಷ್ಯಾದ ರಾಷ್ಟ್ರಗಳಿವೆ.

 ಭಾರತಕ್ಕೆ ಬೈಡನ್ ಬಲ, ನಡುಗುತ್ತಿದೆ ಚೀನಿಯರ ಬುಡ..! ಭಾರತಕ್ಕೆ ಬೈಡನ್ ಬಲ, ನಡುಗುತ್ತಿದೆ ಚೀನಿಯರ ಬುಡ..!

ಭಾರತದ ಪ್ರಧಾನಿ ನರೇಂದ್ರ ಮೋದಿ, ತಮ್ಮ ಹಿಂದಿನ ಭೇಟಿಯ ವೇಳೆ ಬೈಡನ್ ಜೊತೆಗಿರುವ ಫೋಟೋ ಅನ್ನು ಟ್ವೀಟ್ ಮಾಡಿ ಎರಡು ದೇಶಗಳ ನಡುವಿನ ಸಂಬಂಧ ಇನ್ನಷ್ಟು ಬಲಗೊಳ್ಳಲಿ ಎಂದು ಆಶಿಸಿದ್ದಾರೆ.

Ameirca President Election Joe Biden Victory, China And Russia Silent

ಜಪಾನ್, ತೈವಾನ್, ದಕ್ಷಿಣ ಕೊರಿಯಾ ದೇಶಗಳು ಬೈಡನ್ ಗೆ ಶುಭ ಕೋರಿದ್ದರೂ, ಚೀನಾದಿಂದ ಇದುವರೆಗೂ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. "ಬೈಡನ್ ಮತ್ತು ಕಮಲಾ ಹ್ಯಾರಿಸ್ ಗೆ ಅಭಿನಂದನೆಗಳು. ನಿಮ್ಮ ಅವಧಿಯಲ್ಲಿ ಅಮೆರಿಕಾ ಮತ್ತು ಜಪಾನ್ ನಡುವಿನ ಸಂಬಂಧ ಇನ್ನಷ್ಟು ವೃದ್ದಿಗೊಳ್ಳಲಿ"ಎಂದು ಜಪಾನ್ ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ಟ್ರಂಪ್ ಅವಧಿಯಲ್ಲಿ ಚೀನಾದ ಜೊತೆಗಿನ ಸಂಬಂಧ ಹಾಳಾಗಿತ್ತು. ಚೀನಾ ಸರಕಾರದಿಂದ ಅಧಿಕೃತ ಹೇಳಿಕೆ ಹೊರಬೀಳದಿದ್ದರೂ, ಅಲ್ಲಿನ ಸಾಮಾಜಿಕ ತಾಣದಲ್ಲಿ ಬೈಡನ್ ಗೆ ಅಭಿನಂದನೆಯ ಮಹಾಪೂರವೇ ಹರಿದು ಬಂದಿದೆ.

ವಿಶ್ವದ ಪ್ರಜಾಪ್ರಭುತ್ವ ರಾಷ್ಟ್ರಗಳಿಗೆ ಶಕ್ತಿ ತುಂಬಲು ಬೈಡನ್ ಮಂತ್ರ!ವಿಶ್ವದ ಪ್ರಜಾಪ್ರಭುತ್ವ ರಾಷ್ಟ್ರಗಳಿಗೆ ಶಕ್ತಿ ತುಂಬಲು ಬೈಡನ್ ಮಂತ್ರ!

ಟ್ರಂಪ್ ಗೆ ಆತ್ಮೀಯರಾಗಿದ್ದ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರಿಂದಲೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಚುನಾವಣೆ ಇನ್ನೂ ಮುಗಿದಿಲ್ಲ ಎನ್ನುವ ಟ್ರಂಪ್ ಹೇಳಿಕೆಗೆ, ಅವರ ಬೆಂಬಲಿಗರಲ್ಲಿ ಒಬ್ಬರಾದ ಫಿಲಿಫೇನ್ಸ್ ದೇಶದ ಅಧ್ಯಕ್ಷರೂ ಬೆಂಬಲ ನೀಡದೇ, ಬೈಡನ್ ಗೆ ಅಭಿನಂದಿಸಿದ್ದಾರೆ.

English summary
Ameirca President Election Joe Biden Victory, China And Russia Silent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X