ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಅಮೆರಿಕಾ ಹೊಸ 'ಅಸ್ತ್ರ'

|
Google Oneindia Kannada News

ವಾಶಿಂಗ್ ಟನ್, ಏಪ್ರಿಲ್.02: ಕೊರೊನಾ ವೈರಸ್ ವಿರುದ್ಧ ಹೋರಾಡುವುದಕ್ಕೆ ದೊಡ್ಡ ದೊಡ್ಡ ರಾಷ್ಟ್ರಗಳ ಹೆಣಗಾಡುವಂತಾ ಸ್ಥಿತಿ ನಿರ್ಮಾಣವಾಗಿದೆ. ಯುನೈಟೆಡ್ ಸ್ಟೇಟ್ಸ್ ವಿಶ್ವದಲ್ಲೇ ಅತಿಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರವಾಗಿದೆ.

2,15,344ಕ್ಕೂ ಅಧಿಕ ಮಂದಿ ಸೋಂಕಿತರನ್ನು ಹೊಂದಿರುವ ಅಮೆರಿಕಾದಲ್ಲಿ ಇದುವರೆಗೂ ಮಾರಕ ರೋಗಕ್ಕೆ 5,112ಕ್ಕೂ ಅಧಿಕ ಮಂದಿ ಪ್ರಾಣ ಬಿಟ್ಟಿದ್ದಾರೆ. ಈ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಡಕ್ ಸೂಚನೆ ನೀಡಿದ್ದಾರೆ.

ಜನರಿಗೆ ಆರೋಗ್ಯ ಒದಗಿಸುವಲ್ಲಿ ಹಿಂದುಳಿದ ರಾಜ್ಯ ಸರ್ಕಾರ: ಎಎಪಿಜನರಿಗೆ ಆರೋಗ್ಯ ಒದಗಿಸುವಲ್ಲಿ ಹಿಂದುಳಿದ ರಾಜ್ಯ ಸರ್ಕಾರ: ಎಎಪಿ

ಕೊರೊನಾ ವೈರಸ್ ನಿಂದ ತಮ್ಮನ್ನು ರಕ್ಷಿಸಿಕೊಳ್ಳುವುದಕ್ಕೆ ದೇಶದಲ್ಲಿ ಇರುವ ಪ್ರತಿಯೊಬ್ಬರನ್ನು ಮಾಸ್ಕ್ ಹೊರತಾಗಿ ಸಾಮಾನ್ಯ ಬಟ್ಟೆಯನ್ನಾದರೂ ಮುಖಕ್ಕೆ ಕಟ್ಟಿಕೊಳ್ಳುವುದು ಸೂಕ್ತ ಎಂದು ಸಾಂಕ್ರಾಮಿಕ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ(CDC) ಕೇಂದ್ರವು ತಿಳಿಸಿದೆ.

ಸೋಂಕು ಹರಡುವಿಕೆಗೆ ಕಡಿವಾಣ ಹಾಕಲು ಕಠಿಣ ಕ್ರಮ

ಸೋಂಕು ಹರಡುವಿಕೆಗೆ ಕಡಿವಾಣ ಹಾಕಲು ಕಠಿಣ ಕ್ರಮ

ಅಮೆರಿಕಾದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಎಷ್ಟಾಗಿದೆ ಎಂದರೆ ಎಲ್ಲ ಸೋಂಕಿತರಿಗೂ ಮಾಸ್ಕ್ ಒದಗಿಸಲು ಸಾಧ್ಯವಾಗುತ್ತಿಲ್ಲ. ಮಾಸ್ಕ್ ಗಳ ಅಭಾವ ಕೊರೊನಾ ಹರಡುವಿಕೆಗೆ ಕಾರಣವಾಗಬಾರದು ಈ ನಿಟ್ಟಿನಲ್ಲಿ ಅಮೆರಿಕಾ ಸರ್ಕಾರವು ಹೊಸ ಅಸ್ತ್ರವನ್ನು ಪ್ರಯೋಗಿಸಿದೆ.

ಅಂಗವಸ್ತ್ರ ಅಥವಾ ಕರವಸ್ತ್ರ ಬಳಕೆಗೆ ಸೂಚನೆ

ಅಂಗವಸ್ತ್ರ ಅಥವಾ ಕರವಸ್ತ್ರ ಬಳಕೆಗೆ ಸೂಚನೆ

ಕೊರೊನಾ ವೈರಸ್ ನಿಂದ ಜನರು ತಮ್ಮನ್ನು ರಕ್ಷಿಸಿಕೊಳ್ಳಲು ಕನಿಷ್ಠ ಮಾಸ್ಕ್ ಧರಿಸದಿದ್ದರೂ ಕರವಸ್ತ್ರ ಅಥವಾ ಅಂಗವಸ್ತ್ರವನ್ನು ಮುಖಕ್ಕೆ ಕಟ್ಟಿಕೊಳ್ಳುವುದು ಸೂಕ್ತವಾಗಿದೆ. ಮನೆಗಳಿಂದ ಹೊರಗೆ ಬರುವಾಗ ಮುಖವನ್ನು ಬಟ್ಟೆಗಳಿಂದ ಮುಚ್ಚಿಕೊಂಡು ಬರುವಂತೆ ಜನರಿಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮನವಿ ಮಾಡಿಕೊಂಡಿದ್ದಾರೆ.

ಮಾಸ್ಕ್ ಗಳು ವೈದ್ಯಕೀಯ ಸಿಬ್ಬಂದಿಗೆ ಹೆಚ್ಚು ಅವಶ್ಯಕ

ಮಾಸ್ಕ್ ಗಳು ವೈದ್ಯಕೀಯ ಸಿಬ್ಬಂದಿಗೆ ಹೆಚ್ಚು ಅವಶ್ಯಕ

ಅಮೆರಿಕಾದಲ್ಲಿ ಸಾರ್ವಜನಿಕರಿಗಿಂತಲೂ ಕೊರೊನಾ ವೈರಸ್ ಸೋಂಕಿತರನ್ನು ತಪಾಸಣೆ ಮಾಡುವ ಮತ್ತು ಅಂಥವರಿಗೆ ಚಿಕಿತ್ಸೆ ನೀಡುವ ವೈದ್ಯಕೀಯ ಸಿಬ್ಬಂದಿಗೆ ಕಡ್ಡಾಯವಾಗಿ ಬೇಕಾಗಿವೆ. ಆದರೆ ದೇಶದಲ್ಲಿ ಎನ್-95 ಮಾಸ್ಕ್ ಗಳಿಗೆ ಕೊರತೆಯಿದೆ. ಇದರಿಂದ ವೈದ್ಯಕೀಯ ಸಿಬ್ಬಂದಿ ಹಲವು ಬಾರಿ ತಾವು ಬಳಸಿದ ಮಾಸ್ಕ್ ಗಳನ್ನೇ ಮರುಬಳಕೆ ಮಾಡುತ್ತಿದ್ದಾರೆ.

ಯಾವುದೇ ಬದಲಾವಣೆಯನ್ನು ಮಾಡಿಲ್ಲ ಸಿಡಿಸಿ

ಯಾವುದೇ ಬದಲಾವಣೆಯನ್ನು ಮಾಡಿಲ್ಲ ಸಿಡಿಸಿ

ಕೊರೊನಾ ವೈರಸ್ ನಿಯಂತ್ರಣ ಕುರಿತು ಸಿಡಿಸಿ ಸಿದ್ಧಪಡಿಸಿದ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಕೇವಲ ಮಾಸ್ಕ್ ಧರಿಸಿದರೆ ಅಥವಾ ಬಟ್ಟೆಯನ್ನು ಧರಿಸಿದರೆ ಸೋಂಕಿನಿಂದ ಬಚಾವ್ ಆಗುವುದು ಸಾಧ್ಯವಿಲ್ಲ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

English summary
America New Weapon For Fight Against Coronavirus. Cloth Mask Also Consider For Public.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X