ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದ ರಾಜಧಾನಿಯಲ್ಲಿ ಪುರುಷರು ಸುರಕ್ಷಿತರಲ್ಲ!

|
Google Oneindia Kannada News

ವಾಷಿಂಗ್ ಟನ್, ಆಗಸ್ಟ್. 07: ನವದೆಹಲಿಯಂತೆ ಅಮೆರಿಕದ ರಾಜಧಾನಿಯೂ ಅತ್ಯಾಚಾರದ ನಗರಿಯಾಗುತ್ತಿದೆಯೇ ಎಂಬ ಪ್ರಶ್ನೆ ಒಡಮೂಡಿದೆ. ಆದರೆ ಇಲ್ಲಿ ಪುರುಷರೇ ಲೈಂಗಿಕ ಶೋಷಣೆಗೆ ಗುರಿಯಾಗುತ್ತಿದ್ದಾರೆ. ಅರ್ಧ ಡಜನ್ ಗಿಂತ ಹೆಚ್ಚಿನ ಯುವಕರು ಸೇರಿ ಯುವಕನ ಮೇಲೆಯೇ ಅತ್ಯಾಚಾರ ನಡೆಸಿದ ಘಟನೆ ಶುಕ್ರವಾರ ವರದಿಯಾಗಿದೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ಯುವಕನ ಮೇಲೆ ವಾಷಿಂಗ್ ಟನ್ ನಲ್ಲಿ ಅತ್ಯಾಚಾರ ನಡೆಯುತ್ತಿರುವುದು ಎರಡನೇ ಪ್ರಕರಣವಾಗಿದೆ. ಕೊಲಂಬಿಯಾ ಹೈಟ್ಸ್ ನಲ್ಲಿ ಈ ಅಮಾನವೀಯ ಘಟನೆ ನಡೆದಿದೆ ಎಂದು ಅಂತರ್ಜಾಲ ತಾಣವೊಂದು ವರದಿ ಮಾಡಿದೆ.[ಹಸುವಿನ ಕರು ಮೇಲೆಯೇ ಅತ್ಯಾಚಾರ ಎಸಗಿದ!]

America: Man gangraped in Washington DC

ಅತ್ಯಾಚಾರಕ್ಕೆ ಒಳಗಾದ ವ್ಯಕ್ತಿಯ ಹೆಸರು ತಿಳಿದು ಬಂದಿಲ್ಲ. ನಡೆದುಕೊಂಡು ಹೋಗುತ್ತಿದ್ದ ಯುವಕನನ್ನು ಹಿಂದಿನಿಂದ ಬಂದ ವಾಹನವೊಂದು ಬಲತ್ಕಾರಯುತವಾಗಿ ಒಳಕ್ಕೆ ಎಳೆದುಕೊಂಡಿತು. ಕೈಯಲ್ಲಿ ಗನ್ ಹಿಡಿದ ವ್ಯಕ್ತಿಗಳು ಆತನನ್ನು ತಕ್ಷಣ ಸುತ್ತುವರಿದರು. ನಂತರ 7 ಕ್ಕೂ ಅಧಿಕ ಕಾಮುಕರು ಆತನ ಮೇಲೆ ಎರಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.[ಗಂಡನ ರೇಪ್ ಮಾಡಿ ಕೊಂದ ಐವರು ಹೆಂಡತಿಯರು]

17 ರಿಂದ 27 ವರ್ಷದ ನಡುವಿನ ಯುವಕರ ತಂಡ ಕೃತ್ಯ ಎಸಗಿದೆ. ಅತ್ಯಾಚಾರಕ್ಕೆ ಒಳಗಾದವ ಗನ್ ಹಿಡಿದ ವ್ಯಕ್ತಿಯ ಬಗ್ಗೆ ಹೇಳಿದ್ದು ಆತ 22 ರಿಂದ 27 ವರ್ಷದ ನಡುವಿನವನಂತೆ ತೋರುತ್ತಾನೆ ಎಂದು ತಿಳಿಸಿದ್ದಾನೆ.

ಇದು ಈ ಭಾಗದಲ್ಲಿ ನಡೆಯುತ್ತಿರುವ ಎರಡನೇ ಪ್ರಕರಣ. ಕಳೆದ ಡಿಸೆಂಬರ್ ನಲ್ಲಿ 52 ವರ್ಷದ ವ್ಯಕ್ತಿಯ ಮೇಲೆ ಆತನ ನೆರೆಹೊರೆಯವರೆಲ್ಲ ಸೇರಿಕೊಂಡು ಸಾಮೂಹಿಕ ಅತ್ಯಾಚಾರ ನಡೆಸಿದ್ದರು.

English summary
America: A man was gangraped at gunpoint by nearly half a dozen men in Washington, DC. This is the second such incident reported from the American capital in less than a year. The incident was witnessed at Columbia Heights neighbourhood in the city last week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X