ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾ ಯುದ್ಧ ವಿಮಾನಗಳ ಹಾರಾಟಕ್ಕೆ ತಡೆ ಹಾಕಿದ ಅಮೆರಿಕ

|
Google Oneindia Kannada News

ವಾಷಿಂಗ್ಟನ್, ಜೂನ್ 28 : ರಷ್ಯಾ ಸೇನೆಯ ಯುದ್ಧ ವಿಮಾನಗಳ ಹಾರಾಟಕ್ಕೆ ಅಮೆರಿಕ ತಡೆ ಹಾಕಿದೆ. ಅಮೆರಿಕ-ರಷ್ಯಾ ನಡುವಿನ ಈ ಸಣ್ಣ ವಿವಾದ ವಿಶ್ವದ ಗಮನವನ್ನು ಸೆಳೆಯುತ್ತಿದೆ. ಈಗಾಗಲೇ ಭಾರತ-ಚೀನಾ ಯೋಧರ ಘರ್ಷಣೆ ವಿಶ್ವಮಟ್ಟದಲ್ಲಿ ಸುದ್ದಿಯಾಗಿದೆ.

ಅಲಾಸ್ಕಾ ಬಳಿ ರಷ್ಯಾ ವಾಯುಸೇನೆಯ ಯುದ್ಧವಿಮಾನಗಳ ಹಾರಾಟಕ್ಕೆ ಅಮೆರಿಕ ತಡೆ ಹಾಕಿದೆ. ಅಲಸ್ಕಾ ವಾಯು ರಕ್ಷಣಾ ಒಪ್ಪಂದವನ್ನು ರಷ್ಯಾ ಉಲ್ಲಂಘಿಸಿದೆ ಎಂದು ಆರೋಪಿಸಲಾಗಿದೆ. ಇದು ಅಮೆರಿ ಮತ್ತು ರಷ್ಯಾ ನಡುವಿನ ಬಿಕ್ಕಟ್ಟಿಗೆ ಕಾರಣವಾಗಲಿದೆಯೇ? ಎಂದು ಕಾದು ನೋಡಬೇಕಿದೆ.

ರಷ್ಯಾ ಪ್ರವಾಸದ ಹಿಂದಿರುವ ಗುಟ್ಟು ಬಿಚ್ಚಿಟ್ಟ ರಾಜನಾಥ್ ಸಿಂಗ್! ರಷ್ಯಾ ಪ್ರವಾಸದ ಹಿಂದಿರುವ ಗುಟ್ಟು ಬಿಚ್ಚಿಟ್ಟ ರಾಜನಾಥ್ ಸಿಂಗ್!

ರಷ್ಯಾದ ನಾಲ್ಕು ಟಿಯು-142 ಎಸ್ ಯುದ್ಧ ವಿಮಾನಗಳು ದಕ್ಷಿಣ ಅಲಸ್ಕಾದ ಅಲ್ಯೂಟಿಯನ್ ದ್ವೀಪದ ಮೇಲೆ ಹಾರಾಟ ನಡೆಸಿವೆ. ಈ ಹಾರಾಟದ ಬಳಿಕ ಅಮೆರಿಕ ಯುದ್ಧ ವಿಮಾನಗಳ ಹಾರಾಟಕ್ಕೆ ತಡೆ ಹಾಕಿದ್ದು, ವಿವಾದಕ್ಕೆ ಕಾರಣವಾಗಿದೆ.

ಪರಮಾಣು ಶಸ್ತ್ರಾಸ್ತ್ರ: ವಿಶ್ವದ ದೊಡ್ಡಣ್ಣನನ್ನೇ ಸೈಡ್ ಹೊಡೆದ ರಷ್ಯಾಪರಮಾಣು ಶಸ್ತ್ರಾಸ್ತ್ರ: ವಿಶ್ವದ ದೊಡ್ಡಣ್ಣನನ್ನೇ ಸೈಡ್ ಹೊಡೆದ ರಷ್ಯಾ

flight

ರಷ್ಯಾದ ಯುದ್ಧ ವಿಮಾನಗಳ ಹಾರಾಟ ಪತ್ತೆಯಾದ ತಕ್ಷಣ ಅಮೆರಿಕ ವಾಯುಸೇನೆಯ ಎಫ್‌ - 22 ವಿಮಾನಗಳು ರಷ್ಯಾದ ವಿಮಾನಗಳನ್ನು ವಾಪಸ್ ಕಳಿಸುವಲ್ಲಿ ಯಶಸ್ವಿಯಾಗಿವೆ. ರಷ್ಯಾ ವಿಮಾನಗಳು ಅಮೆರಿಕ ಅಥವ ಕೆನಡಾದ ವಾಯುಗಡಿಯನ್ನು ಪ್ರವೇಶ ಮಾಡಿಲ್ಲ ಎಂದು ಅಮೆರಿಕ ವಾಯುಸೇನೆ ಸ್ಪಷ್ಟಪಡಿಸಿದೆ.

ಭಾರತ-ಚೀನಾ ಗಡಿ ಸಂಘರ್ಷವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ: ಅಮೆರಿಕ ಭಾರತ-ಚೀನಾ ಗಡಿ ಸಂಘರ್ಷವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ: ಅಮೆರಿಕ

ಅಲಸ್ಕಾದ ಅಲ್ಯೂಟಿನ್ ದ್ವೀಪದ ಮೇಲೆ ಹಾರಾಟ ನಡೆಸುವುದು ಅಲಸ್ಕಾ ವಾಯು ರಕ್ಷಣಾ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ಅಮೆರಿಕ ಆರೋಪ ಮಾಡಿದೆ. ಜೂನ್ ತಿಂಗಳಿನಲ್ಲಿ 4 ಬಾರಿಗೆ ಅಮೆರಿಕ ರಷ್ಯಾ ಯುದ್ಧ ವಿಮಾನಗಳ ಹಾರಾಟಕ್ಕೆ ತಡೆಯೊಡ್ಡಿದೆ.

English summary
North American aerospace defense command intercepted the Russian maritime patrol aircraft entering the Alaska.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X