ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಹೆಚ್ಚುವರಿ ಸೇನೆ ಜಮಾವಣೆ: ನಡೆಯುತ್ತದೆಯೇ 3ನೇ ಮಹಾಯುದ್ಧ?

|
Google Oneindia Kannada News

ವಾಷಿಂಗ್ಟನ್, ಜನವರಿ 4: ಇರಾನ್‌ನ ಸೇನಾಧಿಕಾರಿ ಖಾಸಿಂ ಸೋಲೆಮನಿ ಅವರನ್ನು ಇರಾಕ್‌ನಲ್ಲಿ ಅಮೆರಿಕದ ಸೇನಾಪಡೆ ಹತ್ಯೆ ಮಾಡಿದ ಘಟನೆ ಮಧ್ಯಪ್ರಾಚ್ಯದಲ್ಲಿ ತೀವ್ರ ಉದ್ವಿಗ್ನತೆ ಸೃಷ್ಟಿಸಿದೆ. ಅಮೆರಿಕದ ವಿರೋಧಪಕ್ಷಗಳು ಸೇರಿದಂತೆ ವಿವಿಧ ದೇಶಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರವನ್ನು ಖಂಡಿಸಿದ್ದಾರೆ. ಈ ಕೃತ್ಯಕ್ಕೆ ತಕ್ಕ ಪ್ರತಿಫಲ ಅನುಭವಿಸಬೇಕಾಗುತ್ತದೆ ಎಂದು ಇರಾನ್ ಎಚ್ಚರಿಕೆ ನೀಡಿದೆ. ಅದರ ಬೆನ್ನಲ್ಲೇ ಅಮೆರಿಕವು ಮಧ್ಯಪ್ರಾಚ್ಯಕ್ಕೆ ಬೃಹತ್ ಸೇನೆಯನ್ನು ರವಾನಿಸಿದ್ದು, ಯುದ್ಧದ ಭೀತಿ ಎದುರಾಗಿದೆ.

ಎರಡು ಘೋರ ಮಹಾಯುದ್ಧಗಳನ್ನು ಕಂಡಿರುವ ಜಗತ್ತು ಮೂರನೇ ಮಹಾಯುದ್ಧಕ್ಕೆ ಆಸ್ಪದ ಕೊಡದಂತೆ ಎಲ್ಲ ದೇಶಗಳ ನಡುವೆ ಶಾಂತಿ ಮೂಡಿಸುವ ಮಂತ್ರವನ್ನು ಜಪಿಸುತ್ತಿದೆ. ಮೂರನೇ ಮಹಾಯುದ್ಧ ನಡೆದರೆ ಅದು ತೈಲಕ್ಕಾಗಿ ನಡೆಯುತ್ತದೆ ಎನ್ನಲಾಗುತ್ತಿತ್ತು. ಆದರೆ ಈಗಿನ ಸನ್ನಿವೇಶವನ್ನು ಗಮನಿಸಿದಾಗ ಮಹಾಯುದ್ಧದ ಸನ್ನಿವೇಶ ದೂರವಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.

ತನಗೆ ಸಹಾಯ ಮಾಡಿದ್ದವನನ್ನೇ ಕೊಂದ ಅಮೆರಿಕ: ಯಾರಿದು ಸೋಲೆಮನಿ?ತನಗೆ ಸಹಾಯ ಮಾಡಿದ್ದವನನ್ನೇ ಕೊಂದ ಅಮೆರಿಕ: ಯಾರಿದು ಸೋಲೆಮನಿ?

ಸೋಲೆಮನಿ ಅವರನ್ನು ಅಮೆರಿಕ ಹತ್ಯೆ ಮಾಡಿದ ಬೆನ್ನಲ್ಲೇ ಟ್ವಿಟ್ಟರ್‌ನಲ್ಲಿ 'ಮೂರನೇ ಮಹಾಯುದ್ಧ' ಹ್ಯಾಷ್ ಟ್ಯಾಗ್ ಟ್ರೆಂಡ್ ಆಗಿದೆ. ಈ ಹತ್ಯೆಯು ಇರಾನ್ ಮಾತ್ರವಲ್ಲದೆ, ಮಧ್ಯಪ್ರಾಚ್ಯದ ಅನೇಕ ದೇಶಗಳಲ್ಲಿಯೂ ಅಮೆರಿಕ ವಿರುದ್ಧ ಆಕ್ರೋಶ ಹುಟ್ಟಿಸಿದೆ. ಜತೆಗೆ ಐಸಿಸ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಸೋಲೆಮನಿ ಕೊಲೆಯು, ಉಗ್ರರ ನಿಯಂತ್ರಣ ಪ್ರಯತ್ನಕ್ಕೆ ಉಂಟಾದ ಭಾರಿ ಹಿನ್ನಡೆ ಎಂದೇ ಹೇಳಲಾಗಿದೆ. ಅಮೆರಿಕದ ಈ ನಡೆಯ ಪರಿಣಾಮವನ್ನು ಇಡೀ ಜಗತ್ತು ಎದುರಿಸಬೇಕಾಗಿದೆ ಎಂಬ ಅಸಮಾಧಾನ ವ್ಯಕ್ತವಾಗಿದೆ. ಆದರೆ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿರುವ ಟ್ರಂಪ್, ಸೋಲೆಮನಿ ದೆಹಲಿ ಮತ್ತು ಲಂಡನ್ ಮೇಲೆ ಕೂಡ ದಾಳಿ ನಡೆಸಲು ಸಂಚು ರೂಪಿಸಿದ್ದ ಎಂದು ಹೇಳಿದ್ದಾರೆ.

ಹೆಚ್ಚುವರಿ ಪಡೆಗಳ ನಿಯೋಜನೆ

ಹೆಚ್ಚುವರಿ ಪಡೆಗಳ ನಿಯೋಜನೆ

ಸೋಲೆಮನಿ ಹತ್ಯೆಯು ಉದ್ವಿಗ್ನದ ವಾತಾವರಣ ಸೃಷ್ಟಿಸಿರುವ ಬೆನ್ನಲ್ಲೇ, ಅಮೆರಿಕವು ತನ್ನ 82ನೇ ಏರ್‌ಬಾರ್ನ್ ವಿಭಾಗದಿಂದ ಸುಮಾರು 3,000 ಹೆಚ್ಚುವರಿ ಪಡೆಗಳನ್ನು ಮಧ್ಯಪ್ರಾಚ್ಯಕ್ಕೆ ಕಳುಹಿಸಿದೆ. ಈ ಭಾಗದಲ್ಲಿ ಇರುವ ಅಮೆರಿಕದ ಪಡೆಗಳಿಗೆ ಬೆದರಿಕೆ ಹೆಚ್ಚಿರುವ ಕಾರಣ ಹೆಚ್ಚುವರಿ ಪಡೆಗಳ ಮೂಲಕ ಬಲ ಹೆಚ್ಚಿಸಲಾಗಿದೆ. ಈ ವಾರ ಇರಾಕ್‌ನಲ್ಲಿರುವ ಅಮೆರಿಕದ ರಾಯಭಾರ ಕಚೇರಿಯೊಳಗೆ ಪ್ರತಿಭಟನಾಕಾರರು ನುಗ್ಗಿದ್ದ ಹಿನ್ನೆಲೆಯಲ್ಲಿ ಕುವೈತ್‌ಗೆ ಸುಮಾರು 750 ಪಡೆಗಳನ್ನು ಕಳುಹಿಸಲಾಗಿತ್ತು.

ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ: ಅಮೆರಿಕಕ್ಕೆ ಇರಾನ್ ಎಚ್ಚರಿಕೆತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ: ಅಮೆರಿಕಕ್ಕೆ ಇರಾನ್ ಎಚ್ಚರಿಕೆ

ಪ್ರತೀಕಾರದ ಪ್ರತಿಜ್ಞೆ ಮಾಡಿದ ಇರಾನ್

ಪ್ರತೀಕಾರದ ಪ್ರತಿಜ್ಞೆ ಮಾಡಿದ ಇರಾನ್

ಸೋಲೆಮನಿ ಹತ್ಯೆಗೆ ಪ್ರತೀಕಾರವಾಗಿ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಪಡೆಗಳು ಹಾಗೂ ಕಚೇರಿಗಳ ಮೇಲೆ ಇರಾನ್ ದಾಳಿ ನಡೆಸುವ ಸಾಧ್ಯತೆ ಇದೆ. ಈ ವಾರದ ಸೇನಾ ಪಡೆಗಳ ನಿಯೋಜನೆಗೂ ಮುನ್ನ ಕಳೆದ ಮೇ ತಿಂಗಳಿಂದ ಅಮೆರಿಕವು ಮಧ್ಯಪ್ರಾಚ್ಯಕ್ಕೆ 14,000 ಹೆಚ್ಚುವರಿ ಪಡೆಗಳನ್ನು ರವಾನಿಸಿದೆ. 2015ರಲ್ಲಿ ಡೊನಾಲ್ಡ್ ಟ್ರಂಪ್, ಅಣ್ವಸ್ತ್ರ ಒಪ್ಪಂದದಿಂದ ಹಿಂದೆ ಸರಿದು ಇರಾನ್ ಮೇಲೆ ನಿರ್ಬಂಧಗಳನ್ನು ವಿಧಿಸಿದ ಸಂದರ್ಭದಿಂದಲೂ ಉಭಯ ದೇಶಗಳ ನಡುವೆ ಸಂಘರ್ಷದ ವಾತಾವರಣವಿದೆ.

ವಾಪಸ್ ಬರುವಂತೆ ಪ್ರಜೆಗಳಿಗೆ ಅಮೆರಿಕ ಸೂಚನೆ

ವಾಪಸ್ ಬರುವಂತೆ ಪ್ರಜೆಗಳಿಗೆ ಅಮೆರಿಕ ಸೂಚನೆ

ಇರಾನ್ ಸೇರಿದಂತೆ ಮಧ್ಯಪ್ರಾಚ್ಯದ ಹಲವು ದೇಶಗಳಲ್ಲಿ ಅಮೆರಿಕದ ವಿರುದ್ಧ ಆಕ್ರೋಶ ಹೆಚ್ಚಾಗಿದೆ. ಇದು ಈ ದೇಶಗಳಲ್ಲಿರುವ ಅಮೆರಿಕದ ಪ್ರಜೆಗಳನ್ನು ಗುರಿಯನ್ನಾಗಿಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಇರಾಕ್‌ ಮೇಲೆ ಇರಾನ್ ದಾಳಿ ನಡೆಸುವ ಸಂಭವ ಇರುವುದರಿಂದ ಅಲ್ಲಿರುವ ತನ್ನ ಎಲ್ಲ ಪ್ರಜೆಗಳೂ ಕೂಡಲೇ ವಾಪಸ್ ಬರಬೇಕು ಎಂದು ಅಮೆರಿಕ ಸೂಚನೆ ನೀಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಯುದ್ಧೋನ್ಮಾದ!

ಸಾಮಾಜಿಕ ಜಾಲತಾಣಗಳಲ್ಲಿ ಯುದ್ಧೋನ್ಮಾದ!

2020ರ ಹೊಸವರ್ಷದೊಂದಿಗೆ ದೇಶಗಳ ನಡುವಿನ ಸಂಘರ್ಷ, ದಾಳಿ ಘಟನೆಗಳು ಕಡಿಮೆಯಾಗಲಿ ಎಂಬ ಆಶಯ ಹೊಂದಿದ್ದವರಿಗೆ ಆರಂಭದಲ್ಲಿಯೇ ಆಘಾತ ಎದುರಾಗಿದೆ. ಅಮೆರಿಕ ಮತ್ತು ಇರಾನ್ ಸಂಘರ್ಷ ಭುಗಿಲೆದ್ದಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಯುದ್ಧದ 'ಛಾಯೆ' ಮೂಡಿದೆ. ಅಮೆರಿಕ ಹಾಗೂ ಅದರ ಮಿತ್ರಪಡೆಗಳು ಮತ್ತು ಇರಾನ್ ಹಾಗೂ ಮಿತ್ರಪಡೆಗಳ ನಡುವೆ ಯುದ್ಧ ನಡೆಯುವುದು ಖಾತರಿ ಎಂದೇ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಗಂಭೀರ ಚರ್ಚೆಯ ನಡುವೆ ನೆಟ್ಟಿಗರು ವಿಶ್ವಯುದ್ಧದ ಭೀತಿಯನ್ನೂ ತಮಾಷೆಯ ಮೀಮ್‌ಗಳನ್ನಾಗಿ ಪರಿವರ್ತಿಸಿದ್ದಾರೆ.

ಅಮೆರಿಕಾ-ಇರಾನ್ ಯುದ್ಧ ಸ್ಥಿತಿಗೆ ಕಾರಣವೇನು? ಇಲ್ಲಿದೆ ಪೂರ್ಣ ಮಾಹಿತಿಅಮೆರಿಕಾ-ಇರಾನ್ ಯುದ್ಧ ಸ್ಥಿತಿಗೆ ಕಾರಣವೇನು? ಇಲ್ಲಿದೆ ಪೂರ್ಣ ಮಾಹಿತಿ

ಯುದ್ಧ ನಡೆದರೆ ಭಾರಿ ನಷ್ಟ

ಯುದ್ಧ ನಡೆದರೆ ಭಾರಿ ನಷ್ಟ

ಒಂದು ವೇಳೆ ಈ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದರೆ ಮುಂದೇನಾಗುವುದು ಎಂಬ ಭಯ ವ್ಯಕ್ತವಾಗುತ್ತಿದೆ. ಈಗಾಗಲೇ ಎರಡು ಮಹಾಯುದ್ಧಗಳು ಹಾಗೂ ದೇಶಗಳ ನಡುವಿನ ಸಮರಗಳ ಮೂಲಕ ಅಪಾರ ಸಾವು-ನೋವು, ಸಂಪತ್ತಿನ ನಾಶ ಕಂಡಿರುವ ಜಗತ್ತು, ಮತ್ತಷ್ಟು ಸಂಕಟವನ್ನು ಎದುರಿಸಬೇಕಾಗುತ್ತದೆ. ಮುಖ್ಯವಾಗಿ ಮಧ್ಯಪ್ರಾಚ್ಯವು ಜಗತ್ತಿನ ತೈಲ ಉತ್ಪಾದನೆಯ ಕೇಂದ್ರವಾಗಿದೆ. ಯುದ್ಧದ ಸನ್ನಿವೇಶ ಎದುರಾದರೆ ತೈಲ ಬೆಲೆಯಲ್ಲಿ ಭಾರಿ ಏರಿಕೆಯಾಗಲಿದೆ. ಮುಖ್ಯವಾಗಿ ತೈಲ ಆಮದಿಗಾಗಿ ಇರಾನ್ ಮೇಲೆ ಹೆಚ್ಚು ಅವಲಂಬಿತವಾಗಿರುವ ಭಾರತ ತೀವ್ರ ಸಂಕಷ್ಟಕ್ಕೆ ಸಿಲುಕಲಿದೆ.

English summary
The fear of third world war in twitter arising after US assassinated Iranian military commander Qassem Soleimani. US has deployed more troops in Middle East.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X