ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ-ಪಾಕ್ ಗಡಿಯಲ್ಲಿ ಭಯೋತ್ಪಾದಕರ ನುಸುಳುವಿಕೆಗೆ ಅಮೆರಿಕಾ ಖಂಡನೆ

|
Google Oneindia Kannada News

ನವದೆಹಲಿ, ಮಾರ್ಚ್.05: ಭಾರತ ಮತ್ತು ಪಾಕಿಸ್ತಾನ ನಡುವಿನ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಲ್ಲಿ ಭಯೋತ್ಪಾದಕರ ಒಳನುಸುಳುವಿಕೆಯನ್ನು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಖಂಡಿಸಿದೆ. ಉಭಯ ರಾಷ್ಟ್ರಗಳ ನಡುವಿನ ಶಾಂತಿ ಸಂವಾದವನ್ನು ಬೆಂಬಲಿಸಿದೆ.

ಗಡಿ ನಿಯಂತ್ರಣ ರೇಖೆ ಮೂಲಕ ಒಳನುಸುಳಲು ಪ್ರಯತ್ನಿಸುವ ಭಯೋತ್ಪಾದಕರನ್ನು ನಾವು ಖಂಡಿಸುತ್ತೇವೆ. ಕಾಶ್ಮೀರ ಮತ್ತು ಇತರ ಪ್ರದೇಶಗಳಿಗೆ ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ತಾನದ ನಡುವಿನ ನೇರ ಶಾಂತಿ ಮಾತುಕತೆಗೆ ನಾವು ಬೆಂಬಲಿಸುತ್ತಿದ್ದೇವೆ, ಎಂದು ಯುಎಸ್ ರಾಜ್ಯ ಇಲಾಖೆ ವಕ್ತಾರ ನೆಡ್ ಪ್ರಿನ್ಸ್ ಹೇಳಿದ್ದಾರೆ.

ಚೀನಾದಿಂದ ಭಾರತವನ್ನು ಬೆದರಿಸಲು ಯತ್ನ,ಅಮೆರಿಕ ಕಳವಳ ಚೀನಾದಿಂದ ಭಾರತವನ್ನು ಬೆದರಿಸಲು ಯತ್ನ,ಅಮೆರಿಕ ಕಳವಳ

"ನಾವು ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಈ ಪ್ರಾದೇಶಿಕ ವಿಚಾರದಲ್ಲಿ ನಮ್ಮ ನೀತಿ ಯಾವುದೇ ರೀತಿ ಬದಲಾಗಿಲ್ಲ. 2003ರ ಕದನ ವಿರಾಮ ಬದ್ಧತೆಗಳಿಗೆ ಅನುಸರಿಸುವ ಮೂಲಕ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಲ್ಲಿ ಉದ್ವಿಗ್ನತೆಯನ್ನು ತಗ್ಗಿಸುವುದಕ್ಕೆ ಕರೆ ನೀಡುತ್ತೇವೆ ಎಂದು ನೆಡ್ ಪ್ರಿನ್ಸ್ ತಿಳಿಸಿದ್ದಾರೆ.

America Condemn infiltration Across LoC, Supports Dialogue Between India, Pakistan

ಭಾರತದ ನಡೆಗೆ ಅಮೆರಿಕಾ ಸ್ವಾಗತ:

ದೇಶದ ಪ್ರಜಾಪ್ರಭತ್ವ ನೀತಿಗೆ ಅನುಗುಣವಾಗಿ ಜಮ್ಮು-ಕಾಶ್ಮೀರದಲ್ಲಿ ಆರ್ಥಿಕ ಮತ್ತು ರಾಜಕೀಯವನ್ನು ಸಹಜ ಸ್ಥಿತಿಗೆ ಮರಳುವಂತೆ ಕೇಂದ್ರ ಸರ್ಕಾರವು ಕ್ರಮಗಳನ್ನು ತೆಗೆದುಕೊಂಡಿತ್ತು. ಕಣಿವೆ ರಾಜ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಜಾರಿಗೊಳಿರುವ ಕ್ರಮಗಳನ್ನು ಕಳೆದ ಬುಧವಾರ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಸ್ವಾಗತಿಸಿತ್ತು.

English summary
America Condemn infiltration Across LoC, Supports Dialogue Between India, Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X