ಸಿರಿಯಾ ಮೇಲೆ ಅಮೆರಿಕ ದಾಳಿ, ನೂರಕ್ಕೂ ಹೆಚ್ಚು ಸಾವು

Posted By:
Subscribe to Oneindia Kannada

ವಾಷಿಂಗ್ಟನ್‌, ಫೆಬ್ರವರಿ 08: ಅಮೆರಿಕದ ಸೇನಾ ನೆಲೆ ಮೇಲೆ ದಾಳಿ ನಡೆಸಿದ್ದ ಸಿರಿಯಾ ಸರ್ಕಾರಿ ಪಡೆಗಳ ವಿರುದ್ಧ ಪ್ರತಿ ದಾಳಿ ನಡೆಸಿರುವ ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳು ನೂರಕ್ಕೂ ಹೆಚ್ಚು ಸಿರಿಯಾ ಪಡೆ ಯೋಧರನ್ನು ಹೊಡೆದುರುಳಿಸಿದೆ.

ಶೆಲ್, ಗ್ರೆನೆಡ್, ಟ್ಯಾಂಕ್, ಫೈಟರ್‌ ಜೆಟ್‌, ರಾಕೆಟ್ ಲಾಂಚರ್‌ಗಳನ್ನು ಬಳಸಿ ಮಾಡಿದ ಭೀಕರ ವಾಯುದಾಳಿ ಜೊತೆಗೆ ನೆಲದ ಮೇಲಿನಿಂದಲೂ ದಾಳಿ ನಡೆಸಿದ ಅಮೆರಿಕ ಪೂರ್ವ ಸಿರಿಯಾದ ಚಹರೆಯನ್ನೇ ಬದಲಾಯಿಸಿಬಿಟ್ಟಿದೆ.

ಸಿರಿಯಾ ಮಾಧ್ಯಮಗಳೂ ಕೂಡ ಈ ವರದಿಯನ್ನು ಪುಷ್ಠೀಕರಿಸಿದ್ದು, ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳು ಸಿರಿಯಾದ ಡಿರಲ್ ಜೊರ್ ಪ್ರದೇಶದಲ್ಲಿ ಸರ್ಕಾರದ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿರುವುದಾಗಿ ವರದಿ ಮಾಡಿವೆ.

America attacked on Syria more than 100 dead

ಸಿರಿಯಾ ಡೆಮೆಕ್ರೊಟಿಕ್ ಫೋರ್ಸ್‌ನ ಕೇಂದ್ರ ಕಚೇರಿ ಡಿರಲ್ ಜೊರ್ ಪ್ರದೇಶದಲ್ಲಿಯೇ ಇದ್ದು, ಅದನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಸಿರಿಯಾ ಸೇನೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
American forces with alliance attacked on Syrian government forces by air and land with high weapons. More than 100 Syrian soldiers were dead in the attack.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ