ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗರ್ಭಪಾತ ಸಾಂವಿಧಾನ ಹಕ್ಕು ರದ್ದುಗೊಳಿಸಿದ ಅಮೆರಿಕ

|
Google Oneindia Kannada News

ವಾಷಿಂಗ್ಟನ್, ಜೂ. 25: ಮಹಿಳೆಯರ ಗರ್ಭಪಾತದ ಸಾಂವಿಧಾನಿಕ ಹಕ್ಕನ್ನು ಕೊನೆಗೊಳಿಸಿ ಅಮೆರಿಕದ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಸುಪ್ರೀಂಕೋರ್ಟ್ ಆದೇಶ ದೇಶದ ಕೆಲವು ಪ್ರಮುಖ ರಾಜ್ಯಗಳಲ್ಲಿ ಕಾನೂನು ಹೋರಾಟವನ್ನು ಹುಟ್ಟುಹಾಕಿದ್ದು, ಮಹಿಳೆಯರು ನಮ್ಮ ದೇಹ ನಮ್ಮ ಹಕ್ಕು ಎಂದು ಪೋಸ್ಟರ್‌ ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ಅಮೆರಿಕ ಶಾಸಕರು ಈ ವರ್ಷದ ನಂತರ ಗವರ್ನರ್ ಮತ್ತು ಕಾಂಗ್ರೆಸ್ ಚುನಾವಣೆಗಳ ಮೊದಲು ಗರ್ಭಪಾತದ ನಿಷೇಧದ ಕಾನೂನುಗಳನ್ನು ಜಾರಿಗೊಳಿಸಲು ಮುಂದಾಗುತ್ತಿದ್ದಾರೆ. ಮಹಿಳೆಯರ ಸಂತಾನೋತ್ಪತ್ತಿ ಹಕ್ಕುಗಳಿಗಾಗಿ ವಕೀಲರು ಮಿಚಿಗನ್ ಮತ್ತು ಫ್ಲೋರಿಡಾದಲ್ಲಿ ಗರ್ಭಪಾತದ ಹಕ್ಕುಗಳನ್ನು ಸಂರಕ್ಷಿಸಲು ಮೊಕದ್ದಮೆ ಹೂಡಿದ್ದಾರೆ. ಅಮೆರಿಕದ ಸುಪ್ರೀಂ ಕೋರ್ಟ್ 1973ರ ರೋಯ್ ಹಾಗೂ ವೇಡ್ ನಿರ್ಧಾರವನ್ನು ರದ್ದುಗೊಳಿಸಿದ್ದು, ದೇಶದ ರಾಜ್ಯಗಳು ತಮ್ಮದೇ ಆದ ನಿಯಮಗಳನ್ನು ಮಾಡಲು ಅನುಮೋದನೆ ನೀಡಿದೆ.

ಬೈಡನ್ ಸಂಪುಟದಲ್ಲಿ ಮತ್ತೊಬ್ಬ ಭಾರತೀಯೆ; ಆರತಿ ಪ್ರಭಾಕರ್ ವಿಜ್ಞಾನ ಸಲಹೆಗಾರ್ತಿ ಬೈಡನ್ ಸಂಪುಟದಲ್ಲಿ ಮತ್ತೊಬ್ಬ ಭಾರತೀಯೆ; ಆರತಿ ಪ್ರಭಾಕರ್ ವಿಜ್ಞಾನ ಸಲಹೆಗಾರ್ತಿ

ದೇಶದಾದ್ಯಂತ ಅರ್ಧಕ್ಕಿಂತ ಹೆಚ್ಚು ರಾಜ್ಯಗಳು ಗರ್ಭಪಾತವನ್ನು ನಿಷೇಧಿಸಲು ಮುಂದಾಗುವ ನಿರೀಕ್ಷೆಯಿದೆ. ಹೀಗಾಗಿ 36 ಮಿಲಿಯನ್ ಮಹಿಳೆಯರು ಮತ್ತು ಸಾರ್ವಜನಿಕ ಆರೋಗ್ಯ ಮತ್ತು ನಾಗರಿಕ ಸ್ವಾತಂತ್ರ್ಯಗಳ ಬಿಕ್ಕಟ್ಟಿನಲ್ಲಿ ಗರ್ಭಿಣಿಯಾಗಬಹುದಾದ ಇತರ ಜನರನ್ನು ಬಾಧಿಸುತ್ತದೆ ಎಂದು ಅಮೇರಿಕನ್ ಸಿವಿಲ್ ಲಿಬರ್ಟೀಸ್ ಯೂನಿಯನ್ ಮತ್ತು ಪ್ಲಾನ್ಡ್ ಪೇರೆಂಟ್‌ಹುಡ್ ಫೆಡರೇಶನ್ ಆಫ್ ಅಮೇರಿಕಾ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಮೆರಿಕ ಸುಪ್ರೀಂ ಕೋರ್ಟ್ ತೀರ್ಪಿನ ಕೆಲವು ಗಂಟೆಗಳ ನಂತರ ಓಹಿಯೋದ ಗವರ್ನರ್ ಮೈಕ್ ಡಿವೈನ್ ಮತ್ತು ರಾಜ್ಯ ಅಟಾರ್ನಿ ಜನರಲ್ ಡೇವ್ ಯೋಸ್ಟ್, ರಿಪಬ್ಲಿಕನ್ ಇಬ್ಬರೂ ಸೇರಿ ಆರು ವಾರಗಳ ಗರ್ಭಧಾರಣೆಯ ನಂತರ ಗರ್ಭಪಾತವನ್ನು ನಿಷೇಧಿಸುವ ರಾಜ್ಯ ಕಾನೂನಿನ ವಿರುದ್ಧ ತಡೆಯಾಜ್ಞೆಯನ್ನು ತೆಗೆದುಹಾಕಲು ಫೆಡರಲ್ ನ್ಯಾಯಾಧೀಶರ ಅನುಮತಿ ಪಡೆದರು.

ಯುಎಸ್: ಇಂಧನ ಬೆಲೆ ಹೆಚ್ಚಿಸಿದ ದೊಡ್ಡ ತೈಲ ಸಂಸ್ಥೆಗಳ ವಿರುದ್ಧ ಬೈಡನ್ ಕಿಡಿಯುಎಸ್: ಇಂಧನ ಬೆಲೆ ಹೆಚ್ಚಿಸಿದ ದೊಡ್ಡ ತೈಲ ಸಂಸ್ಥೆಗಳ ವಿರುದ್ಧ ಬೈಡನ್ ಕಿಡಿ

ಓಹಿಯೋ ರಾಜ್ಯದ ಸಂವಿಧಾನದ ಅಡಿಯಲ್ಲಿ ನಮ್ಮ ರಾಜ್ಯದಲ್ಲಿ ಗರ್ಭಪಾತ ಆರೈಕೆಯ ನಿರಂತರತೆಯನ್ನು ರಕ್ಷಿಸಲು ಓಹಿಯೋದ ಗರ್ಭಪಾತ ನಿಷೇಧದ ಪರವಾಗಿ ಮೊಕದ್ದಮೆ ಹೂಡಲು ಎರಡು ವಕೀಲ ಗುಂಪುಗಳು ಯೋಜಿಸಿವೆ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 ಕಪ್ಪು ಮಹಿಳೆ ವಿರುದ್ಧ ಅಸಮಾನವಾದ ತಾರತಮ್ಯ

ಕಪ್ಪು ಮಹಿಳೆ ವಿರುದ್ಧ ಅಸಮಾನವಾದ ತಾರತಮ್ಯ

ಇಂದಿನ ತೀರ್ಪು ದೇಶದಲ್ಲಿ ಮಹತ್ತರ ಪರಿಣಾಮಗಳನ್ನು ಉಂಟುಮಾಡುತ್ತದೆ. ಕಪ್ಪು ಮಹಿಳೆಯರು ಮತ್ತು ಇತರ ಬಣ್ಣದ ಜನರು ಈಗಾಗಲೇ ನಮ್ಮ ದೇಶದಲ್ಲಿ ಅಸಮಾನವಾದ ತಾರತಮ್ಯವನ್ನು ಎದುರಿಸುತ್ತಿದ್ದಾರೆ ಹಾಗೂ ತೀವ್ರವಾದ ತಾಯಂದಿರ ಮರಣದ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ವಿಶೇಷವಾಗಿ ಓಹಿಯೋದಂತಹ ರಾಜ್ಯಗಳಲ್ಲಿ ತೀವ್ರ ತೊಂದರೆ ಅನುಭಸುತ್ತಿದ್ದಾರೆ. ಗರ್ಭಪಾತದ ಮೇಲೆ ಕಠಿಣ ನಿಷೇಧವನ್ನು ಜಾರಿಗೊಳಿಸಲು ಬದ್ಧವಾಗಿದೆ ಎಂದು ಗುಂಪುಗಳು ಹೇಳಿವೆ.

 1931 ರ ಕಾನೂನಿನಿಂದ ವಿನಾಯಿತಿ

1931 ರ ಕಾನೂನಿನಿಂದ ವಿನಾಯಿತಿ

ಮಿಚಿಗನ್ ಗವರ್ನರ್ ಗ್ರೆಚೆನ್ ವಿಟ್ಮರ್, ಡೆಮೋಕ್ರಾಟ್, ಮಿಚಿಗನ್‌ನ ಕ್ರಿಮಿನಲ್ ಗರ್ಭಪಾತ ನಿಷೇಧ ಕಾಯ್ದೆಯು ಸಂವಿಧಾನವನ್ನು ಉಲ್ಲಂಘಿಸುತ್ತದೆಯೇ ಎಂಬುದರ ಕುರಿತು ತನ್ನ ಮೊಕದ್ದಮೆಯನ್ನು ತಕ್ಷಣವೇ ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದರು. 1931 ರ ಕಾನೂನು ಗರ್ಭಪಾತವನ್ನು ಅತ್ಯಾಚಾರ ಅಥವಾ ಸಂಭೋಗದ ಪ್ರಕರಣಗಳಲ್ಲಿ ವಿನಾಯಿತಿ ನೀಡುತ್ತದೆ. ಇದು ನಾಲ್ಕು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾದ ಅಪರಾಧವಾಗಿದೆ ಎಂದು ಹೇಳಿದೆ.

 ಗರ್ಭಪಾತ ಕಾನೂನಿನ ವಿರುದ್ಧ ಮಕದ್ದಮೆ

ಗರ್ಭಪಾತ ಕಾನೂನಿನ ವಿರುದ್ಧ ಮಕದ್ದಮೆ

ಗರ್ಭಪಾತ ಸಂಬಂಧದ ವಿಟ್ಮರ್‌ನ ಮೊಕದ್ದಮೆಯನ್ನು ಏಪ್ರಿಲ್‌ನಲ್ಲಿ ಸಲ್ಲಿಸಲಾಗಿತ್ತು. ಮೇ ತಿಂಗಳಲ್ಲಿ ಮಿಚಿಗನ್ ಕೋರ್ಟ್ ಆಫ್ ಕ್ಲೈಮ್ಸ್ ಗರ್ಭಪಾತ ಕಾನೂನಿನ ವಿರುದ್ಧ ಪೇರೆಂಟ್‌ಹುಡ್ ಮತ್ತು ಎಸಿಎಲ್‌ಯು ಸಲ್ಲಿಸಿದ ಮೊಕದ್ದಮೆಯಲ್ಲಿ ಪ್ರಾಥಮಿಕ ತಡೆಯಾಜ್ಞೆಯನ್ನು ನೀಡಿತು. ಇದು ಸದರಿ ಮೊಕದ್ದಮೆಯಲ್ಲಿ ತೀರ್ಪು ಬರುವವರೆಗೆ ಜಾರಿಗೆ ಬರುವುದನ್ನು ತಡೆಯುತ್ತದೆ.

 ಗರ್ಭಪಾತವನ್ನು ನಿಷೇಧಿಸುವ ರಾಜ್ಯ ಕಾನೂನು

ಗರ್ಭಪಾತವನ್ನು ನಿಷೇಧಿಸುವ ರಾಜ್ಯ ಕಾನೂನು

ಅಮೆರಿಕ ಸರ್ವೋಚ್ಚ ನ್ಯಾಯಾಲಯವು ಗರ್ಭಪಾತದ ಆರೈಕೆಯು ನಮ್ಮ ರಾಜ್ಯ ಸಂವಿಧಾನದ ಸರಿಯಾದ ಪ್ರಕ್ರಿಯೆ ಮತ್ತು ಸಮಾನ ರಕ್ಷಣೆಯ ಹಿನ್ನೆಲೆಯಲ್ಲಿ ರಕ್ಷಿಸಲ್ಪಟ್ಟಿರುವ ಸಂತಾನೋತ್ಪತ್ತಿ ಆರೋಗ್ಯ ರಕ್ಷಣೆಯಾಗಿದೆ ಎಂಬ ನಿರ್ಧಾರ ನಿರ್ಣಾಯಕವಾಗಿದೆ ಎಂದು ಅವರು ಹೇಳಿದರು. ಫ್ಲೋರಿಡಾದಲ್ಲಿ 15 ವಾರಗಳ ಗರ್ಭಧಾರಣೆಯ ನಂತರ ಗರ್ಭಪಾತವನ್ನು ನಿಷೇಧಿಸುವ ರಾಜ್ಯ ಕಾನೂನು ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಆರೋಪಿಸಿ ಯಹೂದಿ ಸಭೆಯೊಂದು ಕಳೆದ ವಾರ ಮೊಕದ್ದಮೆ ಹೂಡಿತ್ತು. ಯಹೂದಿ ಕಾನೂನಿನಲ್ಲಿ ಮಹಿಳೆಯ ಆರೋಗ್ಯ, ಮಾನಸಿಕ ಅಥವಾ ದೈಹಿಕ ಯೋಗಕ್ಷೇಮವನ್ನು ರಕ್ಷಿಸಲು ಅಗತ್ಯವಿದ್ದಲ್ಲಿ ಗರ್ಭಪಾತದ ಅಗತ್ಯವಿದೆ. ಈ ಕಾಯಿದೆಯಡಿಯಲ್ಲಿ ಅನುಮತಿಸದ ಇತರ ಹಲವು ಕಾರಣಗಳಿಗಾಗಿ ಗರ್ಭಪಾತದ ಪರವಾಗಿ ಸಲ್ಲಿಸಲಾದ ಮೊಕದ್ದಮೆಯ ಹಾಕಿತ್ತು.

English summary
America has abolished the constitutional right of women to abortion, the Supreme Court has ruled. The Supreme Court decision has sparked a legal battle in some major states of the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X