ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆಜಾನ್ ಸುದ್ದಿ: ಜೂನ್ ಅಂತ್ಯದವರೆಗೂ ವರ್ಕ್ ಫ್ರಮ್ ಹೋಮ್

|
Google Oneindia Kannada News

ನವದೆಹಲಿ, ಅಕ್ಟೋಬರ್.21: ಕೊರೊನಾವೈರಸ್ ಸೋಂಕಿನ ಹರಡುವಿಕೆ ಅಪಾಯವನ್ನು ಜಾಗತಿಕ ಕಂಪನಿಗಳು ಅರಿತುಕೊಂಡಿವೆ. ಅಮೆಜಾನ್ ಕೂಡಾ ಈ ನಿಟ್ಟಿನಲ್ಲಿ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದು, ಸಂಸ್ಥೆ ಉದ್ಯೋಗಿಗಳ ವರ್ಕ್ ಫ್ರಾಮ್ ಹೋಮ್ ಅವಧಿಯನ್ನು ವಿಸ್ತರಿಸಿದೆ.

ಜೂನ್ ಅಂತ್ಯದವರೆಗೂ ತಮ್ಮ ಸಂಸ್ಥೆಯ ಉದ್ಯೋಗಿಗಳಿಗೆ ವರ್ಕ್ ಫ್ರಾಮ್ ಹೋಮ್ ಮುಂದುವರಿಸುವುದಕ್ಕೆ ಅವಕಾಶ ಕಲ್ಪಿಸಿದೆ. ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಅಪಾಯ ಹೆಚ್ಚಾಗುತ್ತಿರುವ ಹಿನ್ನೆಲೆ ಸಂಸ್ಥೆಯು ಈ ಕ್ರಮವನ್ನು ತೆಗೆದುಕೊಂಡಿರುವುದಾಗಿ ಅಮೆಜಾನ್ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

WFH ಬದಲಿಗೆ ಬಂಪರ್: ಪರ್ವತಗಳ ಮೇಲೆ ಕುಳಿತು ಮಾಡಬಹುದು ಉದ್ಯೋಗ!WFH ಬದಲಿಗೆ ಬಂಪರ್: ಪರ್ವತಗಳ ಮೇಲೆ ಕುಳಿತು ಮಾಡಬಹುದು ಉದ್ಯೋಗ!

ಅಮೆಜಾನ್ ಸಂಸ್ಥೆಯು ಈ ಮೊದಲು ಜನವರಿ ಅಂತ್ಯದವರೆಗೂ ಉದ್ಯೋಗಿಗಳಿಗೆ ಮನೆಯಿಂದಲೇ ಕಾರ್ಯ ನಿರ್ವಹಿಸುವಂತೆ ಅವಕಾಶ ನೀಡಿತ್ತು. ವರ್ಕ್ ಫ್ರಾಮ್ ಹೋಮ್ ವೈಖರಿ ಪರಿಣಾಮಕಾರಿ ಎನಿಸಿದ ಹಿನ್ನೆಲೆ ಜೂನ್.30ರವರೆಗೂ ವಿಸ್ತರಿಸಲಾಗಿದೆ ಎಂದು ಅಮೆಜಾನ್ ವಕ್ತಾರರು ಈ-ಮೇಲ್ ಸಂದೇಶದಲ್ಲಿ ತಿಳಿಸಿದ್ದಾರೆ.

ಅಮೆಜಾನ್ ಉದ್ಯೋಗಿಗಳಿಗೆ ಕೊರೊನಾವೈರಸ್ ಆತಂಕ

ಅಮೆಜಾನ್ ಉದ್ಯೋಗಿಗಳಿಗೆ ಕೊರೊನಾವೈರಸ್ ಆತಂಕ

ಕಳೆದ ಮೂರು ವಾರಗಳ ಹಿಂದೆಯಷ್ಟೇ ಕೊರೊನಾವೈರಸ್ ಸೋಂಕು ಹರಡುವಿಕೆ ನಡುವೆ ಅಮೆರಿಕಾದಲ್ಲಿ ಅಮೆಜಾನ್ ಸಂಸ್ಥೆಯು ಉದ್ಯೋಗಿಗಳನ್ನು ಅಪಾಯಕ್ಕೆ ದೂಡುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. 19000 ಉದ್ಯೋಗಿಗಳಿಗೆ ಕೊವಿಡ್-19 ಸೋಂಕು ತಗುಲಿರುವ ಬಗ್ಗೆ ಅನುಮಾನವೂ ವ್ಯಕ್ತವಾಗಿತ್ತು. ಸಾರ್ವಜನಿಕ ವಲಯದಲ್ಲಿ ಸಂಸ್ಥೆಗಳು, ರಾಜಕಾರಣಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಸಂಸ್ಥೆ ವಿರುದ್ಧ ಆರೋಪಿಸಿದ್ದರು. ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಅಮೆಜಾನ್ ತನ್ನ ಗೋದಾಮುಗಳನ್ನು ತೆರೆಯುವ ಮೂಲಕ ಉದ್ಯೋಗಿಗಳನ್ನು ಅಪಾಯಕ್ಕೆ ದೂಡಿತ್ತಿದೆ ಎಂದು ದೂಷಿಸಿದ್ದರು. ಈ ಆರೋಪದ ಬೆನ್ನಲ್ಲೇ ಸಂಸ್ಥೆಯು ಮಹತ್ವದ ತೀರ್ಮಾನ ತೆಗೆದುಕೊಂಡಿದೆ.

ಕಚೇರಿಗೆ ತೆರಳುವ ಉದ್ಯೋಗಿಗಳ ರಕ್ಷಣೆಗೆ ಹೂಡಿಕೆ

ಕಚೇರಿಗೆ ತೆರಳುವ ಉದ್ಯೋಗಿಗಳ ರಕ್ಷಣೆಗೆ ಹೂಡಿಕೆ

"ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆಯೂ ಅನಿವಾರ್ಯವಾಗಿ ಸಂಸ್ಥೆಯ ಕಚೇರಿಗೆ ತೆರಳುವ ಉದ್ಯೋಗಿಗಳಿಗಾಗಿ ಎಲ್ಲ ರೀತಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸಾಮಾಜಿಕ ಅಂತರ, ದೇಹದ ತಾಪಮಾನ ತಪಾಸಣೆ, ಹ್ಯಾಂಡ್ ಸ್ಯಾನಿಟೈಸ್ ಮಾಡುವುದು ಮತ್ತು ಮಾಸ್ಕ್ ಗಳನ್ನು ಒದಗಿಸುವುದಕ್ಕಾಗಿ ಸಂಸ್ಥೆಯೇ ಹಣ ಮತ್ತು ಸಂಪನ್ಮೂಲವನ್ನು ಹೂಡಿಕೆ ಮಾಡಿದೆ" ಎಂದು ಅಮೆಜಾನ್ ವಕ್ತಾರರು ತಿಳಿಸಿದ್ದಾರೆ.

ಜಾಗತಿಕ ಸಂಸ್ಥೆಗಳಿಂದ ವರ್ಕ್ ಫ್ರಾಮ್ ಹೋಮ್ ವಿಸ್ತರಣೆ

ಜಾಗತಿಕ ಸಂಸ್ಥೆಗಳಿಂದ ವರ್ಕ್ ಫ್ರಾಮ್ ಹೋಮ್ ವಿಸ್ತರಣೆ

ಜಗತ್ತಿನ ಹಲವು ದೈತ್ಯ ಮತ್ತು ಜಾಗತಿಕ ಸಂಸ್ಥೆಗಳು ಈಗಾಗಲೇ ತಮ್ಮ ಉದ್ಯೋಗಿಗಳ ವರ್ಕ್ ಫ್ರಾಮ್ ಹೋಮ್ ಅವಧಿಯನ್ನು ವಿಸ್ತರಿಸಿವೆ. ಅಮೆಜಾನ್ ಅಷ್ಟೇ ಅಲ್ಲದೇ ಮೈಕ್ರೋಸಾಫ್ಟ್ ಕಂಪನಿ ಕೂಡಾ ಉದ್ಯೋಗಿಗಳ ವರ್ಕ್ ಫ್ರಾಮ್ ಅವಧಿಯನ್ನು ವಿಸ್ತರಿಸಿದೆ. ಫೇಸ್ ಬುಕ್ ಸಂಸ್ಥೆಯು ಉದ್ಯೋಗಿಗಳ ವರ್ಕ್ ಫ್ರಾಮ್ ಹೋಮ್ ಅವಧಿಯನ್ನು ಜುಲೈ ಅಂತ್ಯದವರೆಗೂ ವಿಸ್ತರಿಸಿದೆ. ಗೂಗಲ್ ಸಂಸ್ಥೆಯು ಜೂನ್ ಅಂತ್ಯದವರೆಗೂ ವರ್ಕ್ ಫ್ರಾಮ್ ಹೋಮ್ ಅವಧಿಯನ್ನು ವಿಸ್ತರಿಸಿದೆ.

Recommended Video

Modi ಭಾಷಣ ಹೇಗಿತ್ತು ಗೊತ್ತಾ?? | Oneindia Kannada
ಜಗತ್ತಿನಲ್ಲಿ ಕೊರೊನಾವೈರಸ್ ಅಂಕಿ-ಸಂಖ್ಯೆ

ಜಗತ್ತಿನಲ್ಲಿ ಕೊರೊನಾವೈರಸ್ ಅಂಕಿ-ಸಂಖ್ಯೆ

ಜಾಗತಿಕ ಮಟ್ಟದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 4 ಕೋಟಿ ಗಡಿ ದಾಟಿದೆ. ವಿಶ್ವದಲ್ಲಿ ಈವರೆಗೂ ಒಟ್ಟು 4,10,54,072 ಕೊವಿಡ್-19 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಮಹಾಮಾರಿಗೆ 11,29,795 ಜನರು ಪ್ರಾಣ ಬಿಟ್ಟಿದ್ದಾರೆ. 3,06,34,165 ಸೋಂಕಿತರು ಗುಣಮುಖರಾಗಿದ್ದು, ಅಮೆರಿಕಾ ಮಹಾಮಾರಿಗೆ ತತ್ತರಿಸಿದ ರಾಷ್ಟ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಭಾರತವು ಗುರುತಿಸಿಕೊಂಡಿದೆ.

English summary
Amazon Extends Work From Home Option For Company Employees Till June 30.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X