ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧ್ಯಕ್ಷನ ಭೀಕರ ಕೊಲೆಗೆ ಕಿರಾತಕರು ಹೇಗೆಲ್ಲಾ ಸ್ಕೆಚ್ ಹಾಕಿದ್ದರು ಗೊತ್ತಾ..?

|
Google Oneindia Kannada News

ಅದು ರೊಟ್ಟಿ ಚೂರಿನಂತೆ ಹರಡಿಕೊಂಡಿರುವ ದ್ವೀಪರಾಷ್ಟ್ರ, ಅಮೆರಿಕನ್ನರ ಪಾಲಿನ ವೈರಿ ಕ್ಯೂಬಾ ಮಗ್ಗುಲಲ್ಲೇ ಇರುವ ಪುಟಾಣಿ ದೇಶ. ಆದರೆ ಇತ್ತೀಚೆಗೆ ಅಲ್ಲಿ ನಡೆದ ಭೀಕರ ಘಟನೆ ಇಡೀ ಜಗತ್ತಿನ ಗಮನ ಸೆಳೆದಿತ್ತು. ಆ ಪುಟಾಣಿ ದ್ವೀಪರಾಷ್ಟ್ರದ ಅಧ್ಯಕ್ಷನನ್ನೇ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಆದ್ರೆ ಹತ್ಯೆಯ ತನಿಖೆಗೆಂದು ಅಖಾಡ ಪ್ರವೇಶಿಸಿದ್ದ ಪೊಲೀಸರಿಗೆ ಅಘಾತಕಾರಿ ಮಾಹಿತಿ ಸಿಗುತ್ತಿದೆ. ಕೊಲಂಬಿಯಾ ಮೂಲದ 26 ಜನರಿದ್ದ ಗ್ಯಾಂಗ್ ಈ ಕೊಲೆ ಮಾಡಿದೆ ಎನ್ನಲಾಗಿತ್ತು. ಆದರೆ ಜೊವೆನೆಲ್ ಮೊಯಿಸ್ ಹತ್ಯೆಯಲ್ಲಿ ಅಮೆರಿಕದ ಪ್ರಭಾವಿ ಒಬ್ಬನ ಕೈವಾಡ ಇರುವುದು ಬಯಲಾಗಿದೆ.

ಅಮೆರಿಕ ಮಾದಕ ವಸ್ತು ನಿಯಂತ್ರಣದ ದಳದಲ್ಲಿ ಮಾಜಿ ಮಾಹಿತಿದಾರ ಎಂಬ ವಿಚಾರ ಕೂಡ ರಿವೀಲ್ ಆಗಿದೆ. ಮತ್ತೊಂದು ಕಡೆ ವೈದ್ಯ ಹಾಗೂ ಚರ್ಚ್‌ನ ಫಾದರ್ ಆಗಿದ್ದ ಬಂಧಿತ ವ್ಯಕ್ತಿ, ಬ್ಯುಸಿನೆಸ್ ಮಾಡಲು ಹೋಗಿ ಕೈಸುಟ್ಟುಕೊಂಡಿದ್ದ ಎನ್ನಲಾಗಿದೆ. ಅಧಿಕಾರಿಗಳು ಶಂಕಿತನನ್ನ ಕ್ರಿಸ್ಟಿಯನ್ ಎಮ್ಯಾನುಯೆಲ್ ಸನಾನ್ ಎಂದು ಗುರುತಿಸಿದ್ದಾರೆ. ಹತ್ತಾರು ಉದ್ಯಮಗಳನ್ನ ಆರಂಭಿಸಿದ್ದ ಆರೋಪಿ ಸನಾನ್ ಅದರಲ್ಲಿ ಸೋತು ಹೋಗಿದ್ದ. ಫ್ಲೋರಿಡಾ ಮೂಲದ ನಂಟು ಹೊಂದಿದ್ದ ಈತ ಯಾವ ಕಾರಣಕ್ಕೆ ಹೈಟಿ ಅಧ್ಯಕ್ಷ ಮೊಯಿಸ್ ಕೊಲೆಯಲ್ಲಿ ಕೈಯಾಡಿಸಿದ್ದ ಎಂಬುದೇ ರೋಚಕ ಸಂಗತಿ.

ಅಧ್ಯಕ್ಷರ ಹತ್ಯೆಗೆ ಪ್ರಚೋದನೆ..?

ಅಧ್ಯಕ್ಷರ ಹತ್ಯೆಗೆ ಪ್ರಚೋದನೆ..?

ಸನಾನ್ ಸಾಮಾಜಿಕ ಜಾಲತಾಣದ ಮೂಲಕ ಹಿಂಸಾಚಾರಕ್ಕೆ ಪ್ರಚೋದಿಸಿದ್ದ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ ತನಿಖಾಧಿಕಾರಿಗಳು. ಮೊದಲೇ ಹೈಟಿ ಬಡ ದ್ವೀಪರಾಷ್ಟ್ರ, ಇಲ್ಲಿ ಸದಾ ಒಂದಿಲ್ಲೊಂದು ಪ್ರತಿಭಟನೆಗಳು ನಡೆಯುತ್ತಿರುತ್ತವೆ. ಪ್ರಾಕೃತಿಕವಾಗಿಯೂ ಸೂಕ್ಷ್ಮ ಪ್ರದೇಶವಾದ ಹೈಟಿಯಲ್ಲಿ ನೆಮ್ಮದಿ ಎಂಬುದೇ ಮರೀಚಿಕೆ. ಬೆಲೆ ಏರಿಕೆ, ರಾಜಕೀಯ ಕಿತ್ತಾಟಗಳು ಮಾಮೂಲಿ. ಇಂತಹ ಪರಿಸ್ಥಿತಿಯಲ್ಲಿ ಅಧ್ಯಕ್ಷನ ಹತ್ಯೆ ಪರಿಸ್ಥಿತಿಯನ್ನ ಮತ್ತಷ್ಟು ಕಠಿಣಗೊಳಿಸಿದೆ. ಮತ್ತೊಂದ್ಕಡೆ ಹೈಟಿ ದೋಸ್ತ್ ಅಮೆರಿಕ ಮೂಲದ ವ್ಯಕ್ತಿ ಈ ಹತ್ಯೆಯಲ್ಲಿ ಯಾವ ಪಾತ್ರ ವಹಿಸಿದ್ದ ಎಂಬುದೇ ತನಿಖಾಧಿಕಾರಿಗಳಿಗೆ ಯಕ್ಷ ಪ್ರಶ್ನೆಯಾಗಿದೆ.

ಈತನೇ ಮಾಸ್ಟರ್ ಮೈಂಡ್..?

ಈತನೇ ಮಾಸ್ಟರ್ ಮೈಂಡ್..?

ಮೊದಲೇ ಹೇಳಿದಂತೆ ಕ್ರಿಸ್ಟಿಯನ್ ಎಮ್ಯಾನುಯೆಲ್ ಸನಾನ್ ಒಬ್ಬ ವೈದ್ಯ, ಚರ್ಚ್ ಪಾದ್ರಿ ಮತ್ತು ಉದ್ಯಮಿ. ಆದರೆ ಈತನೇ ಹೈಟಿ ಅಧ್ಯಕ್ಷ ಮೊಯಿಸ್ ಕೊಲೆ ರೂವಾರಿ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಶಂಕಿತನ ಮಾಜಿ ಸ್ನೇಹಿತ ಹಲವು ಮಾಹಿತಿ ಹೊರಹಾಕಿದ್ದಾನೆ. ಎಮ್ಯಾನುಯೆಲ್ ಸನಾನ್ ತನ್ನ ಜೊತೆ ಚರ್ಚ್ ಪಾದ್ರಿ ಆಗಿದ್ದ, ಇಬ್ಬರೂ ಒಟ್ಟಿಗೆ ಸಾಮಾಜಿಕ ಕಾರ್ಯಗಳನ್ನ ಮಾಡಿದ್ದೇವೆ ಎಂಬ ವಿಚಾರ ತಿಳಿಸಿದ್ದಾನೆ. ಆದ್ರೆ ಯಾವ ಕಾರಣಕ್ಕೆ ಹೈಟಿ ಅಧ್ಯಕ್ಷರ ಹತ್ಯೆಗೆ ಸಂಚು ರೂಪಿಸಿದ್ದ ಎಂಬುದು ಬಯಲಾಗಿಲ್ಲ.

ಅರೆಸ್ಟ್ ಮಾಡಲು ಹೋಗಿ ಹತ್ಯೆ..?

ಅರೆಸ್ಟ್ ಮಾಡಲು ಹೋಗಿ ಹತ್ಯೆ..?

ಕ್ರಿಸ್ಟಿಯನ್ ಎಮ್ಯಾನುಯೆಲ್ ಸನಾನ್ ಒಡನಾಟ ಹೊಂದಿದ್ದವರ ಪ್ರಕಾರ ಆತ ಹೈಟಿ ಅಧ್ಯಕ್ಷರ ಹತ್ಯೆಗೆ ಸ್ಕೆಚ್ ಹಾಕಿರಲಿಲ್ಲ. ಬದಲಾಗಿ ಅಧ್ಯಕ್ಷ ಜೊವೆನೆಲ್ ಮೊಯಿಸ್ ಬಂಧನಕ್ಕೆ ಪ್ಲ್ಯಾನ್ ರೂಪಿಸಿತ್ತು ಎನ್ನಲಾಗಿದೆ. ಆದರೆ ಏನೋ ಎಡವಟ್ಟು ಸಂಭವಿಸಿ ಹತ್ಯೆ ನಡೆದಿದೆ ಎಂದು ಹೆಸರು ಹೇಳಲು ಇಚ್ಛಿಸದ ಸನಾನ್ ಸ್ನೇಹಿತ ಸ್ಫೋಟಕ ಮಾಹಿತಿ ನೀಡಿದ್ದಾನೆ. ಈಗಾಗಲೇ 23 ಜನರನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ಕೂಡ ಮುಂದುವರಿದೆ. ಬಂಧಿತರಲ್ಲಿ ಕೊಲಂಬಿಯಾ ಮೂಲದ ಮಾಜಿ ಸೈನಿಕರು ಕೂಡ ಸೇರಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಖುದ್ದಾಗಿ ಹೈಟಿ ಅಧ್ಯಕ್ಷರ ಹತ್ಯೆ ತನಿಖೆಯನ್ನ ಹತ್ತಿರದಿಂದ ಗಮನಿಸುತ್ತಿದ್ದಾರೆ.

ಪಕ್ಕಾ ಪ್ಲ್ಯಾನ್ಡ್ ಮರ್ಡರ್..!

ಪಕ್ಕಾ ಪ್ಲ್ಯಾನ್ಡ್ ಮರ್ಡರ್..!

ಜೊವೆನೆಲ್ ಮೊಯಿಸ್ ಕೊಲೆ ಮಾಡಲು ಪಕ್ಕಾ ಪ್ಲ್ಯಾನ್ ಮಾಡಿದ್ದ ವಿದೇಶಿ ಗ್ಯಾಂಗ್, ತಮ್ಮ ಶಸ್ತ್ರಾಸ್ತ್ರಗಳನ್ನ ಗುಟ್ಟಾಗಿ ದ್ವೀಪರಾಷ್ಟ್ರ ಹೈಟಿಗೆ ಸಾಗಿಸಿತ್ತು. ಬಂಧಿತ ಶಂಕಿತ ಎಮ್ಯಾನುಯೆಲ್ ಸನಾನ್‌ಗೆ ಸೇರಿದ್ದ ಪ್ರೈವೇಟ್ ಜೆಟ್‌ನಲ್ಲಿ ಕೊಲೆ ಆರೋಪಿಗಳು ಹಲವು ಬಾರಿ ಹೈಟಿಗೆ ಬಂದು ಹೋಗಿದ್ದರು ಎಂದು ಶಂಕಿಸಲಾಗಿದೆ. ಇದೇ ಕಾರಣಕ್ಕೆ ಎಮ್ಯಾನುಯೆಲ್ ಸನಾನ್‌ ವಿಚಾರಣೆ ತೀವ್ರಗೊಂಡಿದೆ. ಘಟನೆಯಲ್ಲಿ ಗುಂಡು ತಿಂದು ಜೊವೆನೆಲ್ ಮೊಯಿಸ್ ಮೃತಪಟ್ಟರೆ, ಆತನ ಕುಟುಂಬ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದೆ. ಇದು ಹೈಟಿ ಎಂಬ ಬಡರಾಷ್ಟ್ರದಲ್ಲಿ ಜ್ವಾಲಾಮುಖಿ ಸ್ಫೋಟಗೊಳ್ಳುವ ಪರಿಸ್ಥಿತಿ ಸೃಷ್ಟಿಸಿದೆ.

ಹತ್ಯೆ ಬಳಿಕ ಅಮೆರಿಕ ಮೊರೆ

ಹತ್ಯೆ ಬಳಿಕ ಅಮೆರಿಕ ಮೊರೆ

ಹೈಟಿ ಅಧ್ಯಕ್ಷ ಮೊಯಿಸ್ ಹತ್ಯೆ ನಂತರ ಹೈಟಿ ಪರಿಸ್ಥಿತಿ ಹೇಗಿದೆ ಎಂದರೆ, ಒಂದು ಸಣ್ಣ ಕಿಡಿ ಬಿದ್ದರೂ ಅಲ್ಲಿ ದೊಡ್ಡ ಜ್ವಾಲೆ ಆವರಿಸುವ ಸಾಧ್ಯತೆ ಇದೆ. ಹೀಗಾಗಿಯೇ ಎಚ್ಚೆತ್ತುಕೊಂಡಿರುವ ಹಂಗಾಮಿ ಪ್ರಧಾನಿ ಕ್ಲೌಡ್ ಜೋಸೆಫ್, ಅಮೆರಿಕ ಮಿಲಿಟರಿ ನೆರವು ಕೋರಿದ್ದಾರೆ. ಮತ್ತೊಂದ್ಕಡೆ ವಿಶ್ವಸಂಸ್ಥೆ ಶಾಂತಿ ಪಾಲನಾ ಪಡೆಯ ಎಂಟ್ರಿಗೂ ವೇದಿಕೆ ಸಿದ್ಧವಾಗಿದೆ. ಏಕೆಂದರೆ ಹಲವು ದಶಕಗಳ ಕಾಲ ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆ ದ್ವೀಪರಾಷ್ಟ್ರ ಹೈಟಿಗೆ ಭದ್ರತೆ ನೀಡಿತ್ತು. ಆದರೆ 2017 ರಲ್ಲಿ ಶಾಂತಿ ಪಾಲನಾ ಪಡೆ ಆ ದೇಶವನ್ನ ತೊರೆದಿತ್ತು. ಇದೀಗ ಮತ್ತೊಮ್ಮೆ ಪರಿಸ್ಥಿತಿ ಸೂಕ್ಷ್ಮವಾಗಿದ್ದು, ವಿಶ್ವಸಂಸ್ಥೆ ಮತ್ತೆ ಮಧ್ಯಪ್ರವೇಶ ಮಾಡಿದರೂ ಅಚ್ಚರಿ ಇಲ್ಲ.

English summary
Big twist in Haiti president assassination, officers arrested former US drug agency informant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X