ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಂಜೊ ಅಬೆ ರಾಜಕೀಯ ನೀತಿಗಳಿಂದ ಕೋಪಗೊಂಡು ಹತ್ಯೆ ಮಾಡಿದ್ದೇನೆ ಎಂದ ಯಮಗಾಮಿ

|
Google Oneindia Kannada News

ಜಪಾನ್‌ನ ಮಾಜಿ ಪ್ರಧಾನಿ ಮತ್ತು ಪ್ರಭಾವಿ ರಾಜಕಾರಣಿ ಶಿಂಜೊ ಅಬೆ ಅವರನ್ನು ಜುಲೈ 8 ರಂದು ನಾರಾ ನಗರದಲ್ಲಿ ರಾಜಕೀಯ ರ್‍ಯಾಲಿ ನಡೆಸುತ್ತಿದ್ದಾಗ ಗುಂಡಿಕ್ಕಿ ಕೊಲ್ಲಲಾಗಿದೆ. ಗುಂಡು ಹಾರಿಸಿದ ಟೆಟ್ಸುಯಾ ಯಮಗಾಮಿ ಎಂಬ ವ್ಯಕ್ತಿಯನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.

ಯಮಗಾಮಿ ಹ್ಯಾಂಡ್‌ಮೇಡ್ ಶಾಟ್‌ಗನ್‌ನಿಂದ ಶಿಂಜೊ ಅಬೆಗೆ ಗುಂಡು ಹಾರಿಸಿದ್ದರು ಎಂದು ಹೇಳಲಾಗಿದೆ. ಬುಲೆಟ್ ಮಾಜಿ ಪ್ರಧಾನಿಯ ಹೃದಯಕ್ಕೆ ತಾಗಿದೆ ಎಂದು ವರದಿಯಾಗಿದೆ. ಎದೆಗೆ ಗುಂಡು ತಗುಲಿದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು ಮತ್ತು ಕೆಲವೇ ಹೊತ್ತಿನಲ್ಲಿ ಅವರು ಸಾವನ್ನಪ್ಪಿದರು.

ಶಿಂಜೊ ಅಬೆ: ಉದಾರಿಗಳ ಪಕ್ಷದೊಳಗೊಬ್ಬ ರಾಷ್ಟ್ರೀಯವಾದಿಶಿಂಜೊ ಅಬೆ: ಉದಾರಿಗಳ ಪಕ್ಷದೊಳಗೊಬ್ಬ ರಾಷ್ಟ್ರೀಯವಾದಿ

ರಾಜಕೀಯ ರ್‍ಯಾಲಿಯಲ್ಲಿ ಶಿಂಜೊ ಅಬೆಗೆ ಗುಂಡು ಹಾರಿಸಿದ ಕಾರಣವನ್ನು ಟೆಟ್ಸುಯಾ ಯಮಗಾಮಿ ಬಹಿರಂಗಪಡಿಸಿದ್ದಾನೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ. ಜಪಾನ್‌ನ ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಯಮಗಾಮಿ ಶಿಂಜೊ ಅಬೆ ರಾಜಕೀಯ ನೀತಿಗಳ ಕುರಿತು ಅತೃಪ್ತನಾಗಿದ್ದ ಎಂದು ಪೊಲೀಸ್ ವಿಚಾರಣೆಯ ಸಮಯದಲ್ಲಿ ಹೇಳಿದ್ದಾನೆ.

Alleged killer Tetsuya Yamagami Reveals Reason Why He Killed Shinzo Abe

ಮಾತ್ರವಲ್ಲದೆ, ತಾನು ದ್ವೇಷಿಸುತ್ತಿದ್ದ ಸಂಘಟೆಯ ಜೊತೆ ಮಾಜಿ ಪ್ರಧಾನಿ ಅಬೆ ಸಂಪರ್ಕ ಹೊಂದಿದ್ದರು ಎಂದು ಯಮಗಾಮಿ ನಂಬಿದ್ದ, ಇದರಿಂದ ಆಕ್ರೋಶಗೊಂಡು ಅಬೆ ಮೇಲೆ ಗುಂಡು ಹಾರಿಸಿದ್ದಾನೆ ಎಂದು ನಾರಾ ಸಿಟಿ ಪೊಲೀಸರು ಹೇಳಿದ್ದಾರೆ.

ಜಪಾನ್ ಮಾಜಿ ಪಿಎಂ ಅಬೆ ಜೀವನದ ಪ್ರಮುಖ ಘಟನಾವಳಿಗಳುಜಪಾನ್ ಮಾಜಿ ಪಿಎಂ ಅಬೆ ಜೀವನದ ಪ್ರಮುಖ ಘಟನಾವಳಿಗಳು

ಹೆಚ್ಚಿನ ವಿವರ ಬಹಿರಂಗಪಡಿಸದ ಪೊಲೀಸರು

ಕೊಲೆಗಾರ ಮತ್ತು ಮಾಜಿ ಪ್ರಧಾನಿಯನ್ನು ಕೊಲ್ಲಲು ಅವನ ಉದ್ದೇಶಗಳ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗಪಡಿಸದಿದ್ದರೂ, ಯಮಗಾಮಿ ಶಿಂಜೊ ಅಬೆ ಅವರ ರಾಜಕೀಯ ನಿಲುವಿನಿಂದ ಅಸಮಾಧಾನಗೊಂಡಿದ್ದ ಎಂದು ವರದಿಯಾಗಿದೆ. ಟೆಟ್ಸುಯಾ ಯಮಗಾಮಿ ವಿಚಾರಣೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ಇನ್ನೂ ಬಹಿರಂಗಗೊಳ್ಳಬೇಕಿದೆ.

Alleged killer Tetsuya Yamagami Reveals Reason Why He Killed Shinzo Abe

ಟೆಟ್ಸುಯಾ ಯಮಗಾಮಿ ಸಾರ್ವಜನಿಕ ರ್‍ಯಾಲಿಯಲ್ಲಿ ಜನಸಮೂಹವನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಶಿಂಜೊ ಅಬೆಗೆ ಗುಂಡು ಹಾರಿಸಿದ್ದಾನೆ. ಯಮಗಾಮಿ ಕೈಯಿಂದ ತಯಾರಿಸಿದ ಶಾಟ್‌ಗನ್ ಬಳಸಿ ಗುಂಡು ಹಾರಿಸಿದ್ದ ಮತ್ತು ಇತರ ಉಪಕರಣಗಳ ಜೊತೆಗೆ 3ಡಿ ಪ್ರಿಂಟರ್ ಅನ್ನು ಬಳಸಿದ್ದ ಎನ್ನಲಾಗಿದೆ.

ಶಿಂಜೊ ಅಬೆ ಎದೆಗೆ ಗುಂಡು ತಗುಲಿ ನೆಲದ ಮೇಲೆ ಕುಸಿದು ಬಿದ್ದಿದ್ದರು. ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು, ತೀವ್ರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ದಾಳಿಕೋರನ ಬಗ್ಗೆ ಪೊಲೀಸರು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲವಾದರೂ, ಯಮಗಾಮಿ ಮಾಜಿ ಜಪಾನ್ ಮಾರಿಟೈಮ್ ಸೆಲ್ಫ್ ಡಿಫೆನ್ಸ್ ಫೋರ್ಸ್ ಸದಸ್ಯ ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ. ಆತ 2005 ರವರೆಗೆ ಜಪಾನ್ ಮಾರಿಟೈಮ್ ಸೆಲ್ಫ್ ಡಿಫೆನ್ಸ್ ಫೋರ್ಸ್‌ನಲ್ಲಿ ಮೂರು ವರ್ಷಗಳ ಕಾಳ ಕೆಲಸ ಮಾಡಿದ್ದ ಎಂದು ವರದಿಯಾಗಿದೆ.

ಭಾರತದ ಪ್ರಧಾನಿ ನರೇಂದ್ರ ಮೋದಿ, ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ ನಿಧನಕ್ಕೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ, "ನನ್ನ ಆತ್ಮೀಯ ಸ್ನೇಹಿತರಲ್ಲೊಬ್ಬರಾದ ಶಿಂಜೋ ಅಬೆ ದುರಂತ ನಿಧನದಿಂದ ನಾನು ಆಘಾತಕ್ಕೊಳಗಾಗಿದ್ದೇನೆ ಮತ್ತು ದುಃಖಿತನಾಗಿದ್ದೇನೆ" ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

English summary
Local police said, Tetsuya Yamagami has revealed why he shot Shinzo Abe at a political rally. According to local media reports in Japan, Yamagami said during police interrogation that he was unhappy with Shinzo Abe's political policies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X