ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತದೇ ವರಸೆ, ಬಾಲಕೋಟ್ ಏರ್‌ಸ್ಟ್ರೈಕ್‌ನಲ್ಲಿ ಯಾರೂ ಸತ್ತಿಲ್ಲವೆಂದ ಮಸೂದ್ ಅಜರ್

|
Google Oneindia Kannada News

ಇಸ್ಲಾಮಾಬಾದ್​, ಮಾರ್ಚ್ 16: ಭಾರತದಿಂದ ಎಷ್ಟು ಪೆಟ್ಟು ತಿಂದಿದ್ದೇವೆ ಎಂದು ಹೇಳಿಕೊಂಡರೆ ಮರ್ಯಾದೆ ಹೋಗುತ್ತದಲ್ಲ ಅದಕ್ಕೆ ಪೆಟ್ಟೇ ತಿಂದಿಲ್ಲ ಎಂದು ನುಣುಚಿಕೊಳ್ಳಲು ಜೈಷ್ ಸಂಘಟನೆ ಪ್ರಯತ್ನಸುತ್ತಿದೆ.

ಕೆಳಗೆ ಬಿದ್ದರೂ ಜಟ್ಟು ಮೀಸೆ ಮಣ್ಣಾಗಲಿಲ್ಲ ಎಂಬ ಗಾದೆಯೊಂದಿದೆ ಅದೇ ರೀತಿ ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ಹೇಳಿದ್ದಾನೆ.

ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ 40 ಕ್ಕೂ ಹೆಚ್ಚು ಜವಾನರು ಹುತಾತ್ಮರಾಗಿದ್ದರು. ಆ ಸೇಡು ತೀರಿಸಿಕೊಳ್ಳಲು ಪಾಕಿಸ್ತಾನದ ಬಾಲಕೋಟ್‌ ಮೇಲೆ ಭಾರತೀಯ ವಾಯುಸೇನೆ ಸೇರ್‌ ಸ್ಟ್ರೈಕ್ ನಡೆಸಿತ್ತು. ಅಲ್ಲಿದ್ದ ಜೈಷ್ ಸಂಘಟನೆಯ ಉಗ್ರರ ಅಡಗುತಾಣಗಳ ಮೇಲೆ ಸ್ಟ್ರೈಕ್ ನಡೆಸಿತ್ತು.

All is Well, No Damage Done in Balakot Air Strike Says Masood Azhar

ಸುಮಾರು 200 ಕ್ಕೂ ಹೆಚ್ಚು ಉಗ್ರರು ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿತ್ತು. ಅದಕ್ಕೆ ಕೆಲವು ಪುರಾವೆಗಳು ಕೂಡ ಸಿಕ್ಕಿತ್ತು. ಆದರೆ ಜೈಷ್ ಸಂಘಟನೆ ಅದನ್ನು ತಳ್ಳಿ ಹಾಕುತ್ತಿದೆ. ಏರ್‌ಸ್ಟ್ರೈಕ್‌ನಲ್ಲಿ ಯಾರೂ ಮೃತಪಟ್ಟಿಲ್ಲ ಎಂದು ಸುಳ್ಳು ಹೇಳುತ್ತಿದೆ.

ಏರ್‌ಸ್ಟ್ರೈಕ್ ಬಳಿಕ ಬಾಲಕೋಟ್‌ನಿಂದ 200 ಉಗ್ರರ ಶವಗಳ ರವಾನೆ: ಅಮೆರಿಕ ಹೋರಾಟಗಾರರುಏರ್‌ಸ್ಟ್ರೈಕ್ ಬಳಿಕ ಬಾಲಕೋಟ್‌ನಿಂದ 200 ಉಗ್ರರ ಶವಗಳ ರವಾನೆ: ಅಮೆರಿಕ ಹೋರಾಟಗಾರರು

ಭಾರತೀಯ ವಾಯುಪಡೆ ಯೋಧರು ಇತ್ತೀಚೆಗೆ ಬಾಲಾಕೋಟ್​ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಸಾಕಷ್ಟು ಉಗ್ರರು ಹತರಾಗಿದ್ದರೂ, ಯಾರೊಬ್ಬರೂ ಸತ್ತಿಲ್ಲ.

ಏನೊಂದು ಹಾನಿಯಾಗಿಲ್ಲ. ಈ ವಿಷಯವಾಗಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಎಂದು ಜೈಶ್​ನ ಪ್ರಮುಖ ಉಗ್ರ ಮಸೂದ್​ ಅಜರ್​ ಪಾಕ್​ನ ಪತ್ರಿಕೆಯೊಂದಕ್ಕೆ ಬರೆದಿರುವ ತನ್ನ ಲೇಖನದಲ್ಲಿ ಹೇಳಿಕೊಂಡಿದ್ದಾನೆ.

ಜೈಶ್​ನ ವಾರಪತ್ರಿಕೆ ಅಲ್​ ಕಾಲಂನಲ್ಲಿ 'ಸಾಡಿ' ಎಂಬ ಕಲ್ಪಿತನಾಮದೊಂದಿಗೆ ಬರೆದಿರುವ ಲೇಖನದಲ್ಲಿ ತನ್ನ ಆರೋಗ್ಯ ಸ್ಥಿತಿ ಕುರಿತೂ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಆದರೆ ತಾನು ಆರೋಗ್ಯವಾಗಿರುವುದಾಗಿ ಹೇಳಿಕೊಂಡಿದ್ದಾನೆ.

ತಾನು ಕಳೆದ 17 ವರ್ಷಗಳಿಂದ ಆಸ್ಪತ್ರೆಗೆ ಹೋಗಿ ಯಾವುದೇ ಚಿಕಿತ್ಸೆ ಪಡೆದುಕೊಂಡಿಲ್ಲ ಎಂದು ಲೇಖನದಲ್ಲಿ ಹೇಳಿಕೊಂಡಿರುವ ಮಸೂದ್​ ಅಜರ್​, ತನ್ನ ಮೂತ್ರಪಿಂಡ ಮತ್ತು ಯಕೃತ್ತು ಚೆನ್ನಾಗಿರುವುದಾಗಿ ತಿಳಿಸಿದ್ದಾನೆ.

ತಾನು ಸಂಪೂರ್ಣ ಆರೋಗ್ಯವಾಗಿರುವುದಾಗಿ ಸಾಬೀತುಪಡಿಸಲು ತನ್ನೊಂದಿಗೆ ಶೂಟಿಂಗ್​ ಅಥವಾ ಬಿಲ್ಗಾರಿಕೆ (ಆರ್ಚರಿ) ಸ್ಪರ್ಧೆಗೆ ಬರುವಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸವಾಲು ಹಾಕಿದ್ದಾನೆ.

ನೂರಾರು ಜೈಷ್ ಉಗ್ರರು ಹತ್ಯೆಯಾಗಿದ್ದಕ್ಕೆ ಸಿಕ್ಕಿದೆ ಬಲವಾದ ಸಾಕ್ಷ್ಯ!ನೂರಾರು ಜೈಷ್ ಉಗ್ರರು ಹತ್ಯೆಯಾಗಿದ್ದಕ್ಕೆ ಸಿಕ್ಕಿದೆ ಬಲವಾದ ಸಾಕ್ಷ್ಯ!

ಕಾಶ್ಮೀರದ ಆದಿಲ್​ ಅಹ್ಮದ್​ ದರ್​ನಂಥವರು ಹೊತ್ತಿಸಿರುವ ದ್ವೇಷಾಗ್ನಿಯನ್ನು ಆರಲು ಬಿಡುವುದಿಲ್ಲ ಎಂದು ಮಸೂದ್​ ಅಜರ್​ ಹೇಳಿಕೊಂಡಿದ್ದಾನೆ.

ಪುಲ್ವಾಮಾದಲ್ಲಿ ಆದಿಲ್​ ಅಹ್ಮದ್​ ದರ್​ ಸಿಆರ್​ಪಿಎಫ್​ನ 40 ಯೋಧರನ್ನು ಬಲಿಪಡೆದು ಹೊತ್ತಿಸಿರುವ ದ್ವೇಷಾಗ್ನಿ ಈ ತಕ್ಷಣದಲ್ಲೇ ಆರುವುದಿಲ್ಲ ಎಂದು ಪುನರುಚ್ಚರಿಸಲು ಬಯಸುವುದಾಗಿ ಹೇಳಿದ್ದಾನೆ.

English summary
The Jaish-e-Mohammed in a purported column in the group’s mouthpiece Al-Qalam has accused Indian Prime Minister Narendra Modi of spreading false news of losses suffered by Masood Azhar led group.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X