ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲಾ ದೇಶಗಳು EUL ಲಸಿಕೆಗಳನ್ನು ಗುರುತಿಸಬೇಕು; WHO ವಿಜ್ಞಾನಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 22: ಕೊರೊನಾ ಲಸಿಕೆ ಸಂಬಂಧ ವಿಶ್ವ ಆರೋಗ್ಯ ಸಂಸ್ಥೆ ರೂಪಿಸಿದ ನೀತಿ ನಿಯಮಗಳು ಹಾಗೂ ಶಿಫಾರಸುಗಳನ್ನು ಎಲ್ಲಾ ದೇಶಗಳು ಅನುಸರಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಹೇಳಿದರು.

ಕೊರೊನಾ ಸೋಂಕಿನ ವಿರುದ್ಧ ಕೋವಿಶೀಲ್ಡ್ ಲಸಿಕೆ ಪಡೆದುಕೊಂಡ ಭಾರತೀಯರು ಹತ್ತು ದಿನಗಳ ಕ್ವಾರಂಟೈನ್‌ಗೆ ಒಳಗಾಗಬೇಕು ಎಂದು ಬ್ರಿಟನ್ ಸರ್ಕಾರ ನಿಯಮ ಹೇರಿರುವ ಸಂಬಂಧ ಈ ಪ್ರತಿಕ್ರಿಯೆ ನೀಡಿದ್ದಾರೆ.

ಬ್ರಿಟನ್‌: ಕೊರೊನಾ ಸೋಂಕಿತರಿಗೆ ಎರಡು ವಿಭಿನ್ನ ಲಸಿಕೆಗಳ ಪ್ರಯೋಗಬ್ರಿಟನ್‌: ಕೊರೊನಾ ಸೋಂಕಿತರಿಗೆ ಎರಡು ವಿಭಿನ್ನ ಲಸಿಕೆಗಳ ಪ್ರಯೋಗ

ಬ್ರಿಟನ್‌ನ ಹೊಸ ನಿಯಮಗಳ ಪ್ರಕಾರ, ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ತಯಾರಿಸಿದ ಕೋವಿಶೀಲ್ಡ್ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದಿದ್ದರೂ ಭಾರತೀಯ ಪ್ರಯಾಣಿಕರನ್ನು ಲಸಿಕೆ ಹಾಕಿಲ್ಲ ಎಂದು ಪರಿಗಣಿಸಲಾಗುತ್ತದೆ ಹಾಗೂ ಅವರನ್ನು ಹತ್ತು ದಿನಗಳ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತದೆ.

All Countries Should Recognise EUL Vaccines Says WHO Scientist Sowmya Swaminathan

ಅರಬ್, ಭಾರತ, ಟರ್ಕಿ, ಜೋರ್ಡಾನ್, ಥೈಲ್ಯಾಂಡ್, ರಷ್ಯಾ ಹಾಗೂ ಆಫ್ರಿಕಾ, ದಕ್ಷಿಣ ಅಮೆರಿಕಗಳಲ್ಲಿ ಲಸಿಕೆ ಪಡೆದ ವ್ಯಕ್ತಿಗಳನ್ನು ಲಸಿಕೆ ಪಡೆಯದವರು ಎಂದು ಪರಿಗಣಿಸಲಾಗುತ್ತದೆ ಹಾಗೂ ಅವರನ್ನು ಹತ್ತು ದಿನಗಳ ಕಾಲ ಕ್ವಾರಂಟೈನ್‌ನಲ್ಲಿಡುವುದು ಕಡ್ಡಾಯ ಎಂದು ಈಚೆಗೆ ಬ್ರಿಟನ್ ಸರ್ಕಾರ ಆದೇಶಿಸಿದ್ದು ವಿವಾದಕ್ಕೆ ಕಾರಣವಾಗಿದೆ.

ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಮುಂದಿನ ನಡೆಯ ಕುರಿತು ಪ್ರಶ್ನಿಸಿದಾಗ, 'ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆ ನಿಲುವು ಸ್ಪಷ್ಟವಾಗಿದೆ. ಎಲ್ಲಾ ದೇಶಗಳು ತುರ್ತು ಬಳಕೆ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಲಸಿಕೆಗಳನ್ನು ಗಣನೆಗೆ ತೆಗೆದುಕೊಳ್ಳಬೇಕು' ಎಂದು ಹೇಳಿದ್ದಾರೆ.

ಎಲ್ಲರಿಗೂ ಕೊರೊನಾ ಬೂಸ್ಟರ್ ಡೋಸ್ ಅಗತ್ಯವಿದೆಯೇ? ಬ್ರಿಟನ್‌ ತಜ್ಞರ ಅಭಿಪ್ರಾಯಎಲ್ಲರಿಗೂ ಕೊರೊನಾ ಬೂಸ್ಟರ್ ಡೋಸ್ ಅಗತ್ಯವಿದೆಯೇ? ಬ್ರಿಟನ್‌ ತಜ್ಞರ ಅಭಿಪ್ರಾಯ

ಬ್ರಿಟನ್, ಯುರೋಪ್, ಅಮೆರಿಕದಲ್ಲಿ ಅನುಮೋದಿತ ಲಸಿಕಾ ಕಾರ್ಯಕ್ರಮದ ಅಡಿಯಲ್ಲಿ ಆಸ್ಟ್ರಾಜೆನೆಕಾ, ಫೈಜರ್, ಮಾಡೆರ್ನಾ ಲಸಿಕೆಗಳ ಎರಡು ಡೋಸ್ ಅಥವಾ ಜಾನ್ಸನ್ ಲಸಿಕೆಯ ಒಂದು ಡೋಸ್ ಲಸಿಕೆ ಪಡೆದ ಜನರನ್ನು ಮಾತ್ರ ಸಂಪೂರ್ಣ ಲಸಿಕೆ ಪಡೆದವರು ಎಂದು ಪರಿಗಣಿಸಲಾಗುತ್ತದೆ ಎಂದು ಬ್ರಿಟನ್‌ನ ಹೊಸ ಪ್ರಯಾಣ ನಿಯಮ ಹಾಕಿದೆ.

All Countries Should Recognise EUL Vaccines Says WHO Scientist Sowmya Swaminathan

ಆಸ್ಟ್ರಾಜೆನಿಕಾ ಲಸಿಕೆಯನ್ನು ಬ್ರಿಟನ್ ಸೇರಿದಂತೆ ಹಲವು ದೇಶಗಳಲ್ಲಿ ಬಳಸಲಾಗುತ್ತಿದೆ. ಆದರೆ ಭಾರತದಲ್ಲಿ ತಯಾರಿಸಿ ನೀಡಲಾಗುತ್ತಿರುವ ಕೋವಿಶೀಲ್ಡ್ ಲಸಿಕೆಯನ್ನು ಪರಿಗಣಿಸಿಲ್ಲದಿರುವುದು ವಿವಾದಕ್ಕೆ ಕಾರಣವಾಗಿದೆ.

ಈ ಬೆನ್ನಲ್ಲೇ ಬ್ರಿಟನ್ ಕಾನೂನು ಭಾರತದ ಕೊರೊನಾ ಲಸಿಕೆಯನ್ನು ಅನುಮಾನಿಸುತ್ತಿವೆ ಎಂಬ ಆರೋಪವೂ ಕೇಳಿಬಂದಿದೆ.

ಈ ಕುರಿತು ಕಾಂಗ್ರೆಸ್ ಸಂಸದ ಶಶಿ ತರೂರ್ ಕೂಡ ಮಾಹಿತಿ ಹಂಚಿಕೊಂಡಿದ್ದರು. ಈ ನಿಯಮಗಳ ಕಾರಣವಾಗಿ ತಮ್ಮ ವಿವಿಧ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ ಎಂದು ಶಶಿ ತರೂರ್ ಹೇಳಿದ್ದರು. ಅಕ್ಟೋಬರ್ 4ರಿಂದ ಈ ನಿಯಮ ಜಾರಿಗೆ ಬರಲಿದೆ. ಇದು ಭಾರತೀಯರಿಗೆ ಅವಮಾನಕರ ಎಂದು ಆಕ್ಷೇಪಿಸಿದ್ದರು.

ಕೋವಿಶೀಲ್ಡ್‌ ಮೂಲತಃ ಬ್ರಿಟನ್‌ನದ್ದೇ. ಅವರ ದೇಶಕ್ಕೂ ನಮ್ಮ ಲಸಿಕೆಯನ್ನು ಪೂರೈಸಲಾಗಿದೆ. ಆದರೆ ಅದೇ ಲಸಿಕೆಯನ್ನು ಪರಿಗಣಿಸುತ್ತಿಲ್ಲವೆಂದರೆ ಏನರ್ಥ ಎಂದು ಪ್ರಶ್ನಿಸಿದ್ದರು.

ಭಾರತದಲ್ಲಿ ಕೋವಿಶೀಲ್ಡ್‌ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳೊಂದಿಗೆ ಮುಖ್ಯವಾಗಿ ಸಾಮೂಹಿಕ ಲಸಿಕಾ ಅಭಿಯಾನವನ್ನು ಕೈಗೊಳ್ಳಲಾಗಿದೆ.

ಕೋವಿಶೀಲ್ಡ್ ಲಸಿಕೆಯನ್ನು ಆಸ್ಟ್ರಾಜೆನೆಕಾ/ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಅಭಿವೃದ್ಧಿಪಡಿಸಿದ್ದು, ಭಾರತದಲ್ಲಿ ಸೀರಂ ಇನ್‌ಸ್ಟಿಟ್ಯೂಟ್ ಇದರ ಉತ್ಪಾದನೆಯಲ್ಲಿ ತೊಡಗಿಕೊಂಡಿದೆ. ಕೋವ್ಯಾಕ್ಸಿನ್ ಲಸಿಕೆಯನ್ನು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದನೆ ಮಾಡುತ್ತಿದೆ.

ಈಚೆಗಷ್ಟೆ ಕೊರೊನಾ ಸೋಂಕಿನ ವಿರುದ್ದ ಸಂಪೂರ್ಣ ಲಸಿಕೆಯನ್ನು ಪಡೆದವರಿಗೆ ಎಲ್ಲಾ ವಿಮಾನ ಪ್ರಯಾಣ ನಿರ್ಬಂಧವನ್ನು ನವೆಂಬರ್‌ ತಿಂಗಳಿನಿಂದ ಸಡಿಲಿಕೆ ಮಾಡಲಾಗುವುದು ಎಂದು ಅಮೆರಿಕ ಘೋಷಣೆ ಮಾಡಿದೆ. ಪರೀಕ್ಷೆ ಮತ್ತು ಸಂಪರ್ಕ ಪತ್ತೆಹಚ್ಚುವಿಕೆಗೆಯ ಮೂಲಕ ಸಂಪೂರ್ಣ ಲಸಿಕೆ ಪಡೆದ ಜನರಿಗೆ ಅಮೆರಿಕ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಎಂದು ಅಮೆರಿಕ ಸ್ಪಷ್ಟಪಡಿಸಿದೆ. ಆದರೆ ಬ್ರಿಟನ್‌ನ ಈ ಹೊಸ ನೀತಿ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

English summary
World Health Organization Chief Scientist Dr Soumya Swaminathan on Tuesday said that all countries are supposed to follow the WHO recommendations
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X