ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಥಾಯ್ಲೆಂಡ್ ಗುಹೆಯಿಂದ ಸುರಕ್ಷಿತವಾಗಿ ಹೊರಬಂದ ಬಾಲಕರು

|
Google Oneindia Kannada News

ಥಾಮ್ ಲುವಾಂಗ್, ಜುಲೈ 10: ಥಾಯ್ಲೆಂಡ್‌ ದುರ್ಗಮ ಗುಹೆಯೊಳಗೆ ಸಿಲುಕಿದ್ದ ಎಲ್ಲ ಹನ್ನೆರಡು ಬಾಲಕರನ್ನು ರಕ್ಷಿಸುವಲ್ಲಿ ರಕ್ಷಣಾ ತಂಡಗಳು ಯಶಸ್ವಿಯಾಗಿವೆ.

ಗುಹೆಯಲ್ಲಿ ಕೋಚ್‌ ಜತೆಗೆ ಉಳಿದಿದ್ದ ಕೊನೆಯ ಬಾಲಕನನ್ನು ಸಹ ಸಂಜೆ ಆರು ಗಂಟೆ ಸುಮಾರಿಗೆ ಹೊರಗೆ ಕರೆತರಲಾಗಿದೆ.

ಕೋಚ್ ಅವರನ್ನು ಕೂಡ ಸುರಕ್ಷಿತವಾಗಿ ಹೊರಗೆ ಕರೆತರಲಾಗಿದ್ದು, ಇಡೀ ಜಗತ್ತಿನ ಗಮನ ಸೆಳೆದಿದ್ದ ಈ ಘಟನೆ ಕೊನೆಗೂ ಸುಖಾಂತ್ಯ ಕಂಡಿದೆ.

ಗುಹೆಯಲ್ಲಿ ಸಿಲುಕಿರುವ ಕೋಚ್‌ನ ಬದುಕು ಇನ್ನೂ ದುರಂತಮಯಗುಹೆಯಲ್ಲಿ ಸಿಲುಕಿರುವ ಕೋಚ್‌ನ ಬದುಕು ಇನ್ನೂ ದುರಂತಮಯ

ಜೂನ್ 23ರಿಂದ ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿ ಹೇಗೋ ಜೀವ ಉಳಿಸಿಕೊಂಡಿದ್ದ ಬಾಲಕರ ಸುರಕ್ಷಿತ ಹಿಂದಿರುಗುವಿಕೆಗೆ ಎಲ್ಲ ದೇಶಗಳ ಜನರೂ ಪ್ರಾರ್ಥಿಸಿದ್ದರು.

10th boy rescued from thais cave on Tuesday

ಜುಲೈ ಮೂರರಂದೇ ಈ ಮಕ್ಕಳು ಪತ್ತೆಯಾಗಿದ್ದರೂ, ಸುರಿಯುವ ಮಳೆಯ ನಡುವೆ ಪ್ರವಾಹದಿಂದ ತುಂಬಿಕೊಂಡಿದ್ದ ಗುಹೆಯಿಂದ ಅವರನ್ನು ಕರೆತರುವ ಕಾರ್ಯಕ್ಕೆ ಹಿನ್ನಡೆಯಾಗಿತ್ತು.

ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಗುಹೆ ಪ್ರವೇಶಿಸಿದ ರಕ್ಷಣಾ ತಂಡದ ಸದಸ್ಯರು ಸಂಜೆ ಆರರವರೆಗೂ ಕಾರ್ಯಾಚರಣೆ ನಡೆಸಿ ಕೋಚ್ ಸೇರಿದಂತೆ ಐವರನ್ನು ಹೊರತರುವಲ್ಲಿ ಸಫಲರಾಗಿದ್ದಾರೆ.

ಮೊದಲ ಎರಡು ದಿನ ರಕ್ಷಿಸಲಾದ ಎಂಟು ಬಾಲಕರನ್ನು ಚಿಯಾಂಗ್ ರೈನಲ್ಲಿನ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆಗೆ ಒಳಪಡಿಸಲಾಗಿದೆ.

ಥಾಯ್ಲೆಂಡ್ ಗುಹೆಯಲ್ಲಿ ಸಿಲುಕಿದ್ದ ಬಾಲಕರನ್ನು ರಕ್ಷಿಸಿದ್ದು ಹೇಗೆ?ಥಾಯ್ಲೆಂಡ್ ಗುಹೆಯಲ್ಲಿ ಸಿಲುಕಿದ್ದ ಬಾಲಕರನ್ನು ರಕ್ಷಿಸಿದ್ದು ಹೇಗೆ?

ಈ ಎಲ್ಲ ಬಾಲಕರೂ ಆರೋಗ್ಯದಿಂದ ಇದ್ದು, ಜ್ವರದಿಂದ ಮುಕ್ತರಾಗಿದ್ದಾರೆ. ಮಾನಸಿಕವಾಗಿಯೂ ಆರೋಗ್ಯವಾಗಿದ್ದಾರೆ. ಅವರಲ್ಲಿ ಉತ್ಸಾಹ ಹೆಚ್ಚಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇದುವರೆಗೂ ಬಾಲಕರ ಕುಟುಂಬದ ಸದಸ್ಯರಿಗೆ ಅವರನ್ನು ಭೇಟಿ ಮಾಡಲು ಅವಕಾಶ ನೀಡಿಲ್ಲ. ಆಸ್ಪತ್ರೆಯ ಕಿಟಕಿಯಿಂದ ಮೂಲಕ ಕೆಲವು ಗಂಟೆ ನೋಡಲು ಅವಕಾಶ ನೀಡಲಾಗಿತ್ತು. ಅಲ್ಲದೆ, ಫೋನ್‌ನಲ್ಲಿ ಮಾತನಾಡಲು ಬಿಡಲಾಗಿತ್ತು.

ಥಾಯ್ಲೆಂಡ್ ಗುಹೆಯಿಂದ 8ನೇ ಬಾಲಕ ರಕ್ಷಣೆ, ಕೆಲ ಗಂಟೆಯಲ್ಲಿ ಶುಭ ಸುದ್ದಿಥಾಯ್ಲೆಂಡ್ ಗುಹೆಯಿಂದ 8ನೇ ಬಾಲಕ ರಕ್ಷಣೆ, ಕೆಲ ಗಂಟೆಯಲ್ಲಿ ಶುಭ ಸುದ್ದಿ

ಈ ಬಾಲಕರು ಯಾವುದೇ ಸೋಂಕಿಗೆ ಒಳಪಟ್ಟಿಲ್ಲ ಎನ್ನುವುದು ಪರೀಕ್ಷೆಯಿಂದ ಖಚಿತವಾದ ಬಳಿಕವಷ್ಟೇ ಕುಟುಂಬದವರ ಭೇಟಿಗೆ ಅವಕಾಶ ನೀಡಲಾಗುವುದು ಎಂದು ಹೇಳಿದ್ದಾರೆ.

English summary
Rescue operation team successfully freed the 11th boy from the deep cave of Thailand on Tuesday. The operation could be over today iteself as there are only 2 boys and the coach is in the cave to be rescued.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X