• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಏಲಿಯನ್ ನಮ್ಮ ಜೊತೆಗೆ ಜೀವಿಸುತ್ತಿರಬಹುದು: ಬ್ರಿಟಿಷ್ ಗಗನಯಾತ್ರಿ

|

ಬೆಂಗಳೂರು, ಜನವರಿ 07: ಅನ್ಯಗ್ರಹ ಜೀವಿಗಳು ಇರುವುದು ಸತ್ಯ, ಏಲಿಯನ್ ಗಳು ನಮ್ಮ ಜೊತೆಗೆ ಜೀವಿಸುತ್ತಿರಬಹುದು ಎಂದು ಮೊದಲ ಬ್ರಿಟಿಷ್ ಗಗನಯಾತ್ರಿ ಡಾ. ಹೆಲೆನ್ ಶರ್ಮಾನ್ ಹೇಳಿದ್ದಾರೆ.

ಸುಮಾರು 28 ವರ್ಷಗಳ ಹಿಂದೆ ಗಗನಯಾನ ಮಾಡಿದ್ದ ಹೆಲೆನ್ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ಏಲಿಯನ್ ಗಳು ನಮ್ಮ ನಡುವೆ ಇದ್ದರೂ ನಮ್ಮ ಕಣ್ಣಿಗೆ ಕಾಣಿಸದೇ ಇರಬಹುದು ಎಂದು ಹೇಳಿದ್ದಾರೆ.

ಗಗನಯಾನಿಗಳಿಗೆ ಮೈಸೂರಲ್ಲಿ ಅಡುಗೆ ತಯಾರಿ: ಏನೇನಿರಲಿದೆ ಮೆನು?

ಅಬ್ಸರ್ವರ್ ಮ್ಯಾಗಜೀನ್ ಜೊತೆ ಮಾತನಾಡುತ್ತಾ, ಬಾಹ್ಯಾಕಾಶದಲ್ಲಿ ಲಕ್ಷಾಂತರ ನಕ್ಷತ್ರಗಳಿದ್ದು, ನಮ್ಮ ಸೂರ್ಯನಂತೆ ಬೇರೆ ನಕ್ಷತ್ರಗಳಿದ್ದು, ಜೀವಿಗಳನ್ನು ಕಾಣಬಹುದಾಗಿದೆ ಎಂದಿದ್ದಾರೆ.

ಕಾರ್ಬನ್, ನೈಟ್ರೋಜನ್ ಮಿಶ್ರಿತ ಜೀವಿಯಾಗಿರಲು ಸಾಧ್ಯವಿಲ್ಲ. ಮನುಷ್ಯರಿಗಿಂತ ಬೇರೆ ಸ್ವರೂಪದಲ್ಲಿರುವುದರಿಂದ ನಮ್ಮ ಕಣ್ಣಿಗೆ ಏಲಿಯನ್ ಗಳು ಕಾಣಿಸುತ್ತಿಲ್ಲ ಎಂದು ಹೇಳಿದರು.

ಸುಮಾರು 13,000 ಮಂದಿ ಆಸಕ್ತರನ್ನು ಹಿಂದಿಕ್ಕಿ ಪ್ರಾಜೆಕ್ಟ್ ಜುನೋಗಾಗಿ ಡಾ. ಹೆಲೆನ್ ಆಯ್ಕೆಯಾಗಿದ್ದರು. ರಷ್ಯಾದ ಮಿರ್ ಗಗನಕೇಂದ್ರಕ್ಕೆ ಬ್ರಿಟಿಷ್ ಗಗನಯಾತ್ರಿಯಾಗಿ ತೆರಳಿ, 8 ದಿನಗಳ ಯಾತ್ರೆ ಮುಗಿಸಿ ಹಿಂತಿರುಗಿದಾಗ ಯುದ್ಧ ಗೆದ್ದ ವೀರ ವನಿತೆಯಂತೆ ಅವರನ್ನು ಸ್ವಾಗತಿಸಲಾಯಿತು.

''ಬಾಹ್ಯಾಕಾಶದಿಂದ ನಮ್ಮ ಗ್ರಹ ಭೂಮಿಯನ್ನು ನೋಡುವುದೇ ಆನಂದ, ಆ ಕ್ಷಣವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ" ಎಂದು ಡಾ. ಹೆಲೆನ್ ಸ್ಮರಿಸಿದ್ದಾರೆ.

ಈ ಹಿಂದೆ ಚಂದ್ರನ ಮೇಲೆ ಮಾನವನ ನೆರಳು ಕಂಡು ಬಂದ ರೀತಿಯ ಚಿತ್ರ ಎಲ್ಲೆಡೆ ಹಬ್ಬಿತ್ತು. ಆದರೆ, ನಂತರ ನಾಸಾ ಈ ಬಗ್ಗೆ ಸ್ಪಷ್ಟನೆ ನೀಡಿ "ಇದು ಕೇವಲ ಧೂಳು ಅಥವಾ ನೆಗೆಟಿವ್‌ ಮೇಲಿನ ಗೆರೆ' ಎಂದು ಸ್ಪಷ್ಟಪಡಿಸಿತ್ತು. 2017ರಲ್ಲಿ ಪೆಂಟಗಾನ್ ಕೂಡಾ ರಹಸ್ಯವಾಗಿ ಸಂಶೋಧನೆ ನಡೆಸಿತ್ತು. ಭೂಮಿಯಲ್ಲಿ ಹಾರುವ ತಟ್ಟೆ, ಅನ್ಯಗ್ರಹ ಜೀವಿ ವಾಹನಗಳು ಇರುವ ಬಗ್ಗೆ ಅಂದು ಸಂಶೋಧನೆ ನಡೆಸಿದ್ದ ಅಧಿಕಾರಿಯೊಬ್ಬರು, ಅನ್ಯಗ್ರಹ ಜೀವಿಗಳಿರುವ ಬಗ್ಗೆ ಕುರುಹುಗಳಿವೆ ಎಂದಿದ್ದರು.

English summary
Aliens exist and they could be living among us, the first British astronaut in space has said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X