ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದ್ವೀಪವೊಂದರಲ್ಲಿ ಆಲಿಬಾಬ ಸಂಸ್ಥಾಪಕ ಜಾಕ್ ಮಾ ಪ್ರತ್ಯಕ್ಷ

|
Google Oneindia Kannada News

ಬೀಜಿಂಗ್, ಫೆ 11: ಚೀನಾದ ಕಮ್ಯೂನಿಸ್ಟ್ ಸರಕಾರದ ಕೆಂಗಣ್ಣಿಗೆ ಗುರಿಯಾಗಿರುವ, ಆಲಿಬಾಬ ಗ್ರೂಪ್ ಆಫ್ ಕಂಪೆನಿಯ ಸಂಸ್ಥಾಪಕ ಜಾಕ್ ಮಾ, ದೇಶದ ದ್ವೀಪವೊಂದರಲ್ಲಿದ್ದಾರೆಂದು ವರದಿಯಾಗಿದೆ.

ಕಳೆದ ಐದು ತಿಂಗಳಿನಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಜಾಕ್ ಮಾ, ದಕ್ಷಿಣ ಚೀನಾ ಸಮುದ್ರದ ಹೈನಾನ್ ದ್ವೀಪವೊಂದರ ಐಷಾರಾಮಿ ರೆಸಾರ್ಟಿನಲ್ಲಿದ್ದಾರೆಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.

ಮುಂಚೂಣಿ ಉದ್ಯಮಿಗಳ ಪಟ್ಟಿಯಿಂದ ಜಾಕ್ ಮಾ ಹೆಸರು ಕೈಬಿಟ್ಟ ಚೀನಾ ಸರ್ಕಾರಿ ಪತ್ರಿಕೆಮುಂಚೂಣಿ ಉದ್ಯಮಿಗಳ ಪಟ್ಟಿಯಿಂದ ಜಾಕ್ ಮಾ ಹೆಸರು ಕೈಬಿಟ್ಟ ಚೀನಾ ಸರ್ಕಾರಿ ಪತ್ರಿಕೆ

ಹೈನಾನ್ ದ್ವೀಪದ ಪಂಚತಾರಾ ಸನ್ ವಾಲಿ ಗಾಲ್ಫ್ ರೆಸಾರ್ಟ್ ನಲ್ಲಿ ಜಾಕ್ ಮಾ ಗಾಲ್ಫ್ ಆಡುತ್ತಿರುವುದನ್ನು ಹೆಸರು ಹೇಳಲು ಇಚ್ಚಿಸದವರೊಬ್ಬರು ನೋಡಿದ್ದಾರೆ ಎಂದು ಬ್ಲೂಮ್ ಬರ್ಗ್ ವರದಿ ಮಾಡಿದೆ.

Alibaba Founder Jack Ma Spotted Playing Golf On Chinese Island After Laying Low For Months

ಚೀನಾ ಸರಕಾರದ ವಾಣಿಜ್ಯ ನೀತಿಯನ್ನು ಖಂಡಿಸಿ ಜಾಕ್ ಮಾ ಹೇಳಿಕೆ ನೀಡಿದ ನಂತರ ಇವರು ನಾಪತ್ತೆಯಾಗಿದ್ದರು. ಹಲವು ಉದ್ಯಮಿಗಳಿಗೆ ಪ್ರೇರಣೆಯಾಗಿದ್ದ ಜಾಕ್ ಮಾ ಅವರ ನಾಪತ್ತೆ ವಿಚಾರ ವಿಶ್ವಮಟ್ಟದಲ್ಲಿ ಭಾರೀ ಸುದ್ದಿಯಾಗಿತ್ತು.

ತಮ್ಮ ಸರಕಾರದ ವಿರುದ್ದ ಧ್ವನಿ ಎತ್ತಿದ್ದಕ್ಕೆ ಚೀನಾ ಸರಕಾರವೇ ಜಾಕ್ ಮಾ ಮೇಲೆ ದ್ವೇಷ ಸಾಧಿಸುತ್ತಿದೆ ಎನ್ನುವ ಆರೋಪ ಕೇಳಿಬರುತ್ತಿತ್ತು. ಇದಾದ ನಂತರ ಕಳೆದ ಜನವರಿ ಇಪ್ಪತ್ತರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಶಿಕ್ಷಕರಿಗೆ ಶುಭಾಶಯ ಕೋರಿದ್ದರು.

 ಮೂರು ತಿಂಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ಅಲಿಬಾಬಾ ಸಂಸ್ಥಾಪಕ ಜಾಕ್‌ ಮಾ ಮೂರು ತಿಂಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ಅಲಿಬಾಬಾ ಸಂಸ್ಥಾಪಕ ಜಾಕ್‌ ಮಾ

ಚೀನಾ ಸರಕಾರ ಜಾಕ್ ಮಾ ವಿರುದ್ದ ದ್ವೇಷ ಸಾಧಿಸುತ್ತಿದೆ ಎನ್ನುವುದಕ್ಕೆ ಇನ್ನೊಂದು ಉದಾಹರಣೆಯೆಂದರೆ, ಚೀನಾದ ಸರ್ಕಾರಿ ಮಾಧ್ಯಮವು ಪ್ರಕಟಿಸಿರುವ ದೇಶದ ಪ್ರಮುಖ ಉದ್ಯಮಶೀಲರ ಪಟ್ಟಿಯಿಂದ ಜಾಕ್ ಮಾ ಅವರ ಹೆಸರನ್ನು ಕೈಬಿಟ್ಟಿರುವುದು.

English summary
Alibaba Founder Jack Ma Spotted Playing Golf On Chinese Island After Laying Low For Months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X