ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿಢೀರ್ ಕೇಂದ್ರ ಸರ್ಕಾರ ವಿಸರ್ಜನೆ, ‘ಯುವ’ ರಾಜಕೀಯಕ್ಕೆ ಆಹ್ವಾನ..!

|
Google Oneindia Kannada News

ಆಫ್ರಿಕಾ ಖಂಡದ 2ನೇ ಅತಿ ದೊಡ್ಡ ದೇಶ ಅಲ್ಜೀರಿಯಾದಲ್ಲಿ ರಾಜಕೀಯ ವಿಪ್ಲವ ಎದುರಾಗಿದ್ದು, ಅಧ್ಯಕ್ಷ ಅಬ್ದೆಲ್ ಮಜೀದ್ ಟೆಬ್ಬೌನ್ ದಿಢೀರ್ ಕೇಂದ್ರ ಸರ್ಕಾರವನ್ನು ವಿಸರ್ಜಿಸಿದ್ದಾರೆ.

ಹಲವಾರು ವರ್ಷಗಳಿಂದ ಅಲ್ಜೀರಿಯಾದಲ್ಲಿ ಅಬ್ದೆಲ್ ಮಜೀದ್ ಸರ್ಕಾರದ ವಿರುದ್ಧ ಆಕ್ರೋಶ ಮೊಳಗಿತ್ತು. ಜನರು ಅಧ್ಯಕ್ಷನ ವಿರುದ್ಧ ಬೀದಿಗಿಳಿದು ಉಗ್ರ ಪ್ರತಿಭಟನೆ ನಡೆಸುತ್ತಿದ್ದರು. ರಸ್ತೆಗಳು ಪ್ರತಿಭಟನಾಕಾರರಿಂದ ತುಂಬಿ ಹೋಗಿದ್ದವು. ಈ ಆಕ್ರೋಶ ತಣ್ಣಗಾಗಿಸಲು ಅಬ್ದೆಲ್ ಮಜೀದ್ ಟೆಬ್ಬೌನ್ ನೇತೃತ್ವದ ಸರ್ಕಾರ ಹರಸಾಹಪಟ್ಟಿತ್ತು. ಆದರೂ ಪರಿಸ್ಥಿತಿ ಹಿಡಿತಕ್ಕೆ ಬಂದಿರಲಿಲ್ಲ.

150 ವರ್ಷದ ಬಳಿಕ ಹೋರಾಟಗಾರರ ತಲೆಬುರುಡೆಗಳನ್ನು ಸಮಾಧಿ ಮಾಡಿದ ಅಲ್ಜೀರಿಯಾ150 ವರ್ಷದ ಬಳಿಕ ಹೋರಾಟಗಾರರ ತಲೆಬುರುಡೆಗಳನ್ನು ಸಮಾಧಿ ಮಾಡಿದ ಅಲ್ಜೀರಿಯಾ

ಹೀಗಾಗಿ ಅನಿವಾರ್ಯವಾಗಿ ಸರ್ಕಾರವನ್ನೇ ವಿಸರ್ಜಿಸಿರುವ ಅಧ್ಯಕ್ಷರು, ಈ ಬಗ್ಗೆ ಸರ್ಕಾರಿ ಸುದ್ದಿ ವಾಹಿನಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ದೇಶದಲ್ಲಿ ಹೊಸ ರಾಜಕೀಯ ವ್ಯವಸ್ಥೆ ಹಾಗೂ ರಾಜಕೀಯ ಪರಿಕಲ್ಪನೆ ಜಾರಿಗೆ ತರಲು ತಾನು ಈ ನಿರ್ಧಾರ ಕೈಗೊಂಡೆ ಅಂತಾ ಅಬ್ದೆಲ್ ಮಜೀದ್ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಈಗಾಗಲೇ ಕೊರೊನಾ ಸಂಕಷ್ಟಕ್ಕೆ ತುತ್ತಾಗಿರುವ ವೈನ್ ತಯಾರಕ ಹಾಗೂ ತೈಲ ವ್ಯಾಪಾರಿ ರಾಷ್ಟ್ರದಲ್ಲಿ, ಅಧ್ಯಕ್ಷ ಅಬ್ದೆಲ್ ಮಜೀದ್ ನಿರ್ಧಾರ ಸಂಚಲನ ಸೃಷ್ಟಿಸಿದೆ.

ಯುವಕರು ರಾಜಕೀಯಕ್ಕೆ ಬರಲಿ

ಯುವಕರು ರಾಜಕೀಯಕ್ಕೆ ಬರಲಿ

ತಮ್ಮ ಭಾಷಣದುದ್ದಕ್ಕೂ ಯುವಕರು ಹಾಗೂ ಯುವ ಸಮುದಾಯವನ್ನು ಹೊಗಳಿದ ಅಬ್ದೆಲ್ ಮಜೀದ್, ಅಲ್ಜೀರಿಯಾದ ಭವಿಷ್ಯ ನಿರ್ಮಾಣಕ್ಕೆ ಯುವ ಸಮುದಾಯ ಮುಂದೆ ಬರಬೇಕು. ಹೀಗಾಗಿ ನಾವು ಯುವಕ, ಯುವತಿಯರಿಗೆ ಹೆಚ್ಚಿನ ಒತ್ತು ನೀಡಲಿದ್ದೇವೆ ಎಂದಿದ್ದಾರೆ. ನೀವು ಯಾವುದಕ್ಕೂ ಯೋಚಿಸಬೇಡಿ, ನಿಮ್ಮನ್ನು ಬೆಂಬಲಿಸುವ ಕಾರ್ಯ ನಮ್ಮದು. ಕ್ಯಾಂಪೇನ್, ಸ್ಪರ್ಧೆ ಹೀಗೆ ಚುನಾವಣೆ ವಿಚಾರದಲ್ಲಿ ನಾನು ನಿಮಗೆ ಬೆಂಬಲ ನೀಡುತ್ತೇನೆ ಎಂದು ಅಲ್ಜೀರಿಯಾದ ಯುವಕರಿಗೆ ಅಬ್ದೆಲ್ ಮಜೀದ್ ಭರವಸೆ ನೀಡಿದ್ದಾರೆ. ಇದೇ ವರ್ಷದ ಅಂತ್ಯಕ್ಕೆ ಅಲ್ಜೀರಿಯಾದಲ್ಲಿ ಚುನಾವಣೆ ನಡೆಯು ಸಾಧ್ಯತೆ ಇದೆ.

ಹೋರಾಟಗಾರರು ಜೈಲು ಸೇರಿದ್ದರು

ಹೋರಾಟಗಾರರು ಜೈಲು ಸೇರಿದ್ದರು

ಅಲ್ಜೀರಿಯಾದಲ್ಲಿ ಅಬ್ದೆಲ್ ಮಜೀದ್ ಸರ್ಕಾರದ ವಿರುದ್ಧ ಹೋರಾಟಕ್ಕೆ ಧುಮುಕಿದ್ದ ಅನೇಕರು ಜೈಲು ಕಂಬಿ ಎಣಿಸುತ್ತಿದ್ದಾರೆ. ಇದನ್ನು ಕೂಡ ತಮ್ಮ ಭಾಷಣದಲ್ಲಿ ಪ್ರಸ್ತಾಪ ಮಾಡಿರುವ ಅಬ್ದೆಲ್ ಮಜೀದ್ ಜೈಲು ಸೇರಿದ ಹೋರಾಟಗಾರರ ಕ್ಷಮೆ ಕೇಳಿದ್ದಾರೆ. ಇದನ್ನೆಲ್ಲಾ ಗಮನಿಸುವುದಾದರೆ, ಮಜೀದ್ ಎಲ್ಲರನ್ನೂ ತಮ್ಮ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸಲು ಸಿದ್ಧರಾಗಿದ್ದಾರೆ ಎಂಬ ಮುನ್ಸೂಚನೆ ಸಿಗುತ್ತಿದೆ. ಹಾಗೇ ಯುವಕರನ್ನು ರಾಜಕೀಯಕ್ಕೆ ವೆಲ್‌ಕಂ ಮಾಡಿರುವುದರ ಹಿಂದೆಯೂ ಕೂಡ ರಾಜಕೀಯ ಲೆಕ್ಕಾಚಾರಗಳು ಅಡಗಿವೆ ಎಂಬ ಅಭಿಪ್ರಾಯವನ್ನ ತಜ್ಞರು ವ್ಯಕ್ತಪಡಿಸುತ್ತಿದ್ದಾರೆ.

ಭಾರತದಲ್ಲಿ ಅಣಿಯಾಯ್ತು ಮತ್ತೊಂದು ಲಸಿಕೆ; ಅನುಮತಿಗೆ ಕೋರಿಕೆಭಾರತದಲ್ಲಿ ಅಣಿಯಾಯ್ತು ಮತ್ತೊಂದು ಲಸಿಕೆ; ಅನುಮತಿಗೆ ಕೋರಿಕೆ

ಇತಿಹಾಸ ಏನು ಹೇಳುತ್ತೆ..?

ಇತಿಹಾಸ ಏನು ಹೇಳುತ್ತೆ..?

1962ಕ್ಕೆ ಮೊದಲು ಅನೇಕ ರಾಜಕೀಯ ವಿಪ್ಲವಗಳನ್ನು ಕಂಡಿತ್ತು ಅಲ್ಜೀರಿಯಾ. ಆದರೆ 1962ರ ಬಳಿಕ ಹೊಸ ಅಲೆ ಮೂಡಿತ್ತು. ಗಣರಾಜ್ಯ ವ್ಯವಸ್ಥೆ ಹೊಂದಿರುವ ಅಲ್ಜೀರಿಯಾದಲ್ಲಿ 58 ಪ್ರಾಂತ್ಯಗಳಿವೆ. ಹಾಗೇ ಈ ದೇಶದ ಸೇನೆ ಆಫ್ರಿಕಾದ ದೊಡ್ಡ ಸೇನಾಪಡೆಗಳಲ್ಲಿ ಒಂದಾಗಿದೆ. ಅಲ್ಜೀರಿಯಾ ರಕ್ಷಣಾ ಬಜೆಟ್‌ಗೆ ಭಾರಿ ಪ್ರಮಾಣದ ಅನುದಾನವನ್ನೂ ಮೀಸಲಿಡುತ್ತದೆ. ಆಫ್ರಿಕನ್ ಯೂನಿಯನ್ ಸೇರಿದಂತೆ ಅರಬ್ ಲೀಗ್, ಒಪೆಕ್ ಸದಸ್ಯ ರಾಷ್ಟ್ರವಾಗಿಯೂ ಅಲ್ಜೀರಿಯಾ ಗುರುತಿಸಿಕೊಂಡಿದೆ. ಆದರೆ ಕೆಲವು ವರ್ಷಗಳಿಂದ ಅಲ್ಲಿನ ರಾಜಕೀಯ ಸ್ಥಿತಿ ಹದಗೆಟ್ಟು ಹೋಗಿತ್ತು.

ಅತ್ಯುತ್ತಮ ಜೀವನ ಶೈಲಿ..!

ಅತ್ಯುತ್ತಮ ಜೀವನ ಶೈಲಿ..!

ಅಲ್ಜೀರಿಯಾ ಆಫ್ರಿಕಾ ಖಂಡದ ಶ್ರೀಮಂತ ರಾಷ್ಟ್ರ. ಇಲ್ಲಿನ ಜನರ ಜೀವನ ಶೈಲಿ ಹಾಗೂ ಮಾನವ ಅಭಿವೃದ್ಧಿ ಸೂಚ್ಯಂಕ ಅತ್ಯುತ್ತಮವಾಗಿದೆ. ಆಫ್ರಿಕಾ ಖಂಡದ ಅತಿದೊಡ್ಡ ಆರ್ಥಿಕತೆಗಳಲ್ಲಿ ಒಂದಾಗಿರುವ ಅಲ್ಜೀರಿಯಾಗೆ ತೈಲ ಹಾಗೂ ವೈನ್ ವ್ಯವಹಾರವೇ ದೊಡ್ಡ ಆದಾಯ. ವಿಶ್ವದ 16 ನೇ ಅತಿದೊಡ್ಡ ತೈಲ ನಿಕ್ಷೇಪ ಹೊಂದಿದೆ ಈ ದೇಶ. ಅಲ್ಲದೆ ಆಫ್ರಿಕಾದಲ್ಲಿ 2ನೇ ಅತಿದೊಡ್ಡ ತೈಲ ಸಂಗ್ರಹ ವ್ಯವಸ್ಥೆ ಅಲ್ಜೀರಿಯಾ ದೇಶದಲ್ಲಿದ್ದು, ಕೆಲವೇ ಕಿಲೋಮೀಟರ್ ಅಂತರದಲ್ಲಿ ಯುರೋಪ್ ದೇಶದ ಗಡಿಯನ್ನು ಸ್ಪರ್ಶಿಸುತ್ತದೆ ಅಲ್ಜೀರಿಯಾ. ಆದರೆ ಅಧ್ಯಕ್ಷ ಕೈಗೊಂಡ ನಿರ್ಧಾರ ದೇಶದ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ಅನ್ನೋದನ್ನ ಕಾದು ನೋಡಬೇಕಿದೆ.

English summary
Algeria's parliament has dissolved by President Abdelmadjid Tebboune and announced a government reshuffle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X