ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಟಿನ್ ಶತ್ರು ನವಲ್ನಿಗೆ ವಿಷ ಹಾಕಿರುವುದು ಕನ್ಫರ್ಮ್

|
Google Oneindia Kannada News

ರಷ್ಯಾದ ವಿರೋಧ ಪಕ್ಷದ ನಾಯಕ ಹಾಗೂ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರ ಪರಮ ಶತ್ರು ‌ಅಲೆಕ್ಸಿ ನವಲ್ನಿಗೆ ವಿಷ ಹಾಕಿರುವುದು ಪ್ರಯೋಗಾಲಯದಲ್ಲಿ ಕನ್ಫರ್ಮ್ ಆಗಿದೆ. ನವಲ್ನಿಗೆ 'ನೋವಿಚೋಕ್‌' ಎಂಬ ರಷ್ಯಾ ಸಂಶೋಧಿಸಿದ್ದ ಕಾರ್ಕೋಟಕ ವಿಷವುಣಿಸಲಾಗಿತ್ತು. ಈಗಾಗಲೇ ನವಲ್ನಿಗೆ ವಿಷ ಹಾಕಿರುವುದು ಪಕ್ಕಾ ಎಂದು ಜರ್ಮನಿ ಪ್ರತಿಪಾದಿಸಿತ್ತು, ಈಗ ಫ್ರಾನ್ಸ್‌ ಮತ್ತು ಸ್ವೀಡನ್‌ ಕೂಡ ಈ ವಿಚಾರವನ್ನು ಸ್ಪಷ್ಟಪಡಿಸಿವೆ.

ಫ್ರಾನ್ಸ್‌ ಮತ್ತು ಸ್ವೀಡನ್‌ನಲ್ಲಿ ನಡೆದಿರುವ ಪ್ರಯೋಗಗಳು ನವಲ್ನಿಗೆ ವಿಷ ಹಾಕಿರುವುದನ್ನು ಕನ್ಫರ್ಮ್ ಮಾಡಿವೆ. ಇದಕ್ಕೂ ಮೊದಲು ಜರ್ಮನ್ ಮಿಲಿಟರಿ ಲ್ಯಾಬ್ ತಾವು ಪರೀಕ್ಷೆ ಮಾಡಿದ್ದ ಮಾದರಿಯಲ್ಲಿ ಇದೇ ವಿಷ ಇತ್ತು ಎಂಬುದನ್ನು ದೃಢಪಡಿಸಿತ್ತು.

ವಿಷ ಕುಡಿದರೂ ಸಾವು ಗೆದ್ದ ಪುಟಿನ್ ಶತ್ರು ನವಲ್ನಿ!ವಿಷ ಕುಡಿದರೂ ಸಾವು ಗೆದ್ದ ಪುಟಿನ್ ಶತ್ರು ನವಲ್ನಿ!

ಇದೀಗ ಫ್ರಾನ್ಸ್‌ ಹಾಗೂ ಸ್ವೀಡನ್‌ನಲ್ಲೂ ಇದು ಪಕ್ಕಾ ಆಗಿದೆ. ಸುಮಾರು 20 ದಿನಗಳಿಂದ ಜರ್ಮನಿಯಲ್ಲಿ ನವಲ್ನಿಗೆ ಚಿಕಿತ್ಸೆ ನಡೆಯುತ್ತಿದ್ದು, ನಂಜುನಿವಾರಕ ಚಿಕಿತ್ಸೆ ನೀಡುತ್ತಿದ್ದ ಹಿನ್ನೆಲೆ 1 ವಾರಕ್ಕೂ ಹೆಚ್ಚು ಕಾಲ ಕೋಮಾದಲ್ಲಿ ಇಡಲಾಗಿತ್ತು. ಆದರೆ ಈಗ ನವಲ್ನಿ ಆರೋಗ್ಯ ಸ್ಥಿತಿ ಸುಧಾರಿಸಿದ್ದು, ದೇಹದಲ್ಲಿ ಹರಡಿದ್ದ ವಿಷವನ್ನು ವೈದ್ಯರು ಭಾಗಶಃ ಹೊರಗೆ ತೆಗೆದಿದ್ದಾರೆ.

ಘಟನೆ ನಡೆದಿದ್ದು ಹೇಗೆ..?

ಘಟನೆ ನಡೆದಿದ್ದು ಹೇಗೆ..?

ಆಗಸ್ಟ್ 20ರಂದು ಸೈಬೀರಿಯಾದ ಟಾಮ್ಸ್ಕ್‌ನಿಂದ ಮಾಸ್ಕೋಗೆ ವಿಮಾನದಲ್ಲಿ ಮರಳುವಾಗ ನವಲ್ನಿ ಆರೋಗ್ಯ ಹದಗೆಟ್ಟಿತ್ತು. ಒಮಾಸ್ಕ್‌ ಎಂಬಲ್ಲಿ ತುರ್ತಾಗಿ ವಿಮಾನ ಇಳಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ವಿಮಾನ ಹತ್ತುವ ಮೊದಲು ರೆಸ್ಟೋರೆಂಟ್ ಒಂದರಲ್ಲಿ ನವಲ್ನಿ ಟೀ ಸೇವಿಸಿದ್ದರು. ಅದರಲ್ಲಿ ಕಾರ್ಕೋಟಕ ವಿಷ ಬೆರೆಸಲಾಗಿತ್ತು ಎಂಬ ಆರೋಪವಿತ್ತು. ನಂತರ ರಷ್ಯಾದ ಸಾಮಾನ್ಯ ಆಸ್ಪತ್ರೆಯಲ್ಲಿ ನವಲ್ನಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಬಳಿಕ ನವಲ್ನಿ ಕುಟುಂಬ ಮತ್ತು ಬೆಂಬಲಿಗರು ನವಲ್ನಿಗೆ ಜರ್ಮನಿಯಲ್ಲಿ ಚಿಕಿತ್ಸೆ ನೀಡಲು ಮುಂದಾಗಿದ್ದರು. ನವಲ್ನಿಯನ್ನ ಜರ್ಮನಿಗೆ ಶಿಫ್ಟ್ ಮಾಡುವ ವಿಚಾರದಲ್ಲಿ ದೊಡ್ಡ ನಾಟಕ ನಡೆದಿತ್ತು. ಬಳಿಕ ಅಂತಾರಾಷ್ಟ್ರೀಯ ಒತ್ತಡಗಳಿಗೆ ಮಣಿದಿದ್ದ ರಷ್ಯಾ ಸರ್ಕಾರ ನವಲ್ನಿಗೆ ಜರ್ಮನಿಯಲ್ಲಿ ಚಿಕಿತ್ಸೆ ಕೊಡಿಸಲು ಒಪ್ಪಿತ್ತು.

 ನವಲ್ನಿ ಬದುಕುವುದೇ ಅನುಮಾನವಾಗಿತ್ತು

ನವಲ್ನಿ ಬದುಕುವುದೇ ಅನುಮಾನವಾಗಿತ್ತು

ಕೆಲ ದಿನಗಳ ಹಿಂದೆ ಅಲೆಕ್ಸಿ ನವಲ್ನಿ ಪರಿಸ್ಥಿತಿ ಗಮನಿಸಿದ್ದ ತಜ್ಞರು ಆತ ಬದುಕುಳಿಯುವುದೇ ಅನುಮಾನ ಎಂದಿದ್ದರು. ಅದರಲ್ಲೂ ಜರ್ಮನಿಗೆ ಶಿಫ್ಟ್ ಆಗಲು ನವಲ್ನಿಗೆ ತುರ್ತಾಗಿ ಅನುಮತಿ ನೀಡದಿರುವುದು ಆತನ ಜೀವಕ್ಕೆ ದೊಡ್ಡ ಕಂಟಕ ಸೃಷ್ಟಿಮಾಡಿತ್ತು. ಆದರೆ ಜರ್ಮನಿಯ ಸ್ವಯಂಸೇವಾ ಸಂಸ್ಥೆಯೊಂದು ನವಲ್ನಿಗೆ ಚಿಕಿತ್ಸೆ ಕೊಡಿಸಲು ಮುಂದಾಗಿತ್ತಲ್ಲದೆ, ಸ್ವತಃ ವಿಮಾನವನ್ನು ಕೂಡ ರಷ್ಯಾಗೆ ಕಳುಹಿಸಿತ್ತು. ನವಲ್ನಿಗೆ ಬರ್ಲಿನ್‌ನಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಕೋಮಾ ಸ್ಟೇಜ್‌ನಿಂದ ನವಲ್ನಿ ಹೊರಬಂದಿದ್ದಾರೆ.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

ಅಲೆಕ್ಸಿ ನವಲ್ನಿಗೆ ನರಕದರ್ಶನ..?

ಅಲೆಕ್ಸಿ ನವಲ್ನಿಗೆ ನರಕದರ್ಶನ..?

ವಿಷ ದೇಹದೊಳಗೆ ಹೊಕ್ಕಿದರೆ ಬದುಕುಳಿಯುವ ಸಾಧ್ಯತೆ ತೀರಾ ಕಡಿವೆ. ಅದರಲ್ಲೂ ನವಲ್ನಿ ದೇಹ ಹೊಕ್ಕಿರುವುದು ಕೈಗಾರಿಕೆಗಳಲ್ಲಿ ಬಳಸುವ ವಿಷ. ನವಲ್ನಿ ಕೂದಲು ಹಾಗೂ ಅಂಗಿಯಲ್ಲಿ ಈ ವಿಷಕಾರಿ ಅಂಶಗಳು ಪತ್ತೆಯಾಗಿವೆ. ಇದನ್ನೆಲ್ಲಾ ಗಮನಿಸಿದರೆ ನವಲ್ನಿ ಅಂಗಾಂಗಳಿಗೆ ಭಾರಿ ಹಾನಿಯಾಗುರುವುದು ಸ್ಪಷ್ಟವಾಗಿದೆ. ಹೀಗಾಗಿ ನವಲ್ನಿ ಸಾವು ಗೆದ್ದು ಆಸ್ಪತ್ರೆಯಿಂದ ಹೊರಬಂದರೂ ಬಹು ಅಂಗಾಂಗ ವೈಫಲ್ಯಕ್ಕೆ ತುತ್ತಾಗುವ ಸಾಧ್ಯತೆ ದಟ್ಟವಾಗಿದೆ. ಇದು ನವಲ್ನಿ ಬೆಂಬಲಿಗರಲ್ಲಿ ಭಾರಿ ಆತಂಕ ಸೃಷ್ಟಿಸಿದೆ.

Recommended Video

ಸದ್ಯದಲ್ಲೇ ಬಯಲಾಗುತ್ತೆ ಚೀನಾದ ನಿಜ ಬಣ್ಣ | Oneindia Kannada
 ಭ್ರಷ್ಟಾಚಾರದ ವಿರುದ್ಧ ಹೋರಾಟ

ಭ್ರಷ್ಟಾಚಾರದ ವಿರುದ್ಧ ಹೋರಾಟ

ಅಲೆಕ್ಸಿ ನವಲ್ನಿ ರಾಜಕಾರಣಿ ಮಾತ್ರವಲ್ಲ, ಹೋರಾಟಗಾರ ಕೂಡ. ನವಲ್ನಿ ಭ್ರಷ್ಟಾಚಾರದ ವಿರುದ್ಧ ರಷ್ಯಾದಲ್ಲಿ ನಿರಂತರವಾಗಿ ಹೋರಾಡುತ್ತಿದ್ದಾರೆ. ರಷ್ಯಾದ ಮಾಜಿ ಪ್ರಧಾನಿ ಡಿಮಿಟ್ರಿ ಮೆಡ್ವೆಡೆವ್ ಭ್ರಷ್ಟಾಚಾರದ ಬಗ್ಗೆ ಸಿನಿಮಾ ಕೂಡ ನಿರ್ದೇಶಿಸಿದ್ದರು. ಹಾಗೇ ಪುಟಿನ್ ವಿರುದ್ಧ ಕೇಳಿಬರುತ್ತಿದ್ದ ಭ್ರಷ್ಟಾಚಾರ ಹಾಗೂ ಚುನಾವಣಾ ಅಕ್ರಮಗಳ ವಿರುದ್ಧ ನವಲ್ನಿ ಹಿಂದಿನಿಂದಲೂ ಹೋರಾಟ ನಡೆಸುತ್ತಿದ್ದಾರೆ. ಆದರೆ ಇದೇ ನವಲ್ನಿಯ ಜೀವಕ್ಕೆ ಮುಳುವಾಗಿದೆ ಎಂಬುದು ಆಪ್ತರ ಮಾತು.

English summary
Specialist labs in France and Sweden have confirmed Russian opposition leader Alexei Navalny was poisoned with the Soviet-era nerve agent Novichok, the German government said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X