ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಟಿನ್ ಶತ್ರು ಅಲೆಕ್ಸಿ ನವಲ್ನಿ ಜರ್ಮನಿಗೆ ಶಿಫ್ಟ್..!

|
Google Oneindia Kannada News

ವಿಷ ಸೇರಿದ ದೇಹದೊಳಗೆ ಕ್ಷಣಕ್ಷಣಕ್ಕೂ ಬಿಗಡಾಯಿಸುತ್ತಿರುವ ಪರಿಸ್ಥಿತಿ. ನಾಯಕನ ಜೀವ ಉಳಿಸಲು ಹೋರಾಡುತ್ತಿರುವ ಬೆಂಬಲಿಗರು. ಅಷ್ಟಕ್ಕೂ ಇದು ಯಾವುದೋ ಸಿನಿಮಾ ಸೀನ್ ಅಲ್ಲ. ಪುಟಿನ್ ಶತ್ರು ಅಲೆಕ್ಸಿ ನವಲ್ನಿಯ ದುರಂತ ಕತೆ. ರಷ್ಯಾದಲ್ಲಿ ಪ್ರಶ್ನಾತೀತ ನಾಯಕನಾಗಿ ಮೆರೆಯುತ್ತಿರುವ ಪುಟಿನ್ ವಿರುದ್ಧ ಹೋರಾಟಕ್ಕೆ ನಿಂತ ಹೋರಾಟಗಾರನ ವ್ಯಥೆ.

2 ದಿನದ ಹಿಂದೆ ವಿಷಯುಕ್ತ ಟೀ ಕುಡಿದ ಪರಿಣಾಮ ಕೋಮಾ ಸೇರಿದ್ದ ಅಲೆಕ್ಸಿ ನವಲ್ನಿ ಇನ್ನೂ ಚೇತರಿಸಿಕೊಂಡಿಲ್ಲ, ನವಲ್ನಿ ಕೋಮಾದಲ್ಲಿದ್ದಾರೆ. ಈಗ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ರಷ್ಯಾದಿಂದ ಜರ್ಮನಿಗೆ ಶಿಫ್ಟ್ ಮಾಡಲಾಗಿದೆ. ಈ ಮೊದಲು ನವಲ್ನಿ ಜರ್ಮನಿಗೆ ತೆರಳುವುದಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು.

ವಿಷ ಕೊಟ್ಟು ಪುಟಿನ್ ಶತ್ರು ಕೊಲೆಗೆ ಯತ್ನ..?ವಿಷ ಕೊಟ್ಟು ಪುಟಿನ್ ಶತ್ರು ಕೊಲೆಗೆ ಯತ್ನ..?

ಆದರೆ ರಷ್ಯಾ ಮೇಲೆ ಜಾಗತಿಕವಾಗಿ ಒತ್ತಡ ಹೆಚ್ಚಾಗುತ್ತಿದ್ದಂತೆ ಅಲೆಕ್ಸಿ ನವಲ್ನಿ ಜರ್ಮನಿಗೆ ತೆರಳಲು ಅನುಮತಿ ನೀಡಲಾಗಿದೆ. 'ಸಿನಿಮಾ ಫಾರ್ ಪೀಸ್' ಎಂಬ ಸ್ವಯಂ ಸೇವಾ ಸಂಸ್ಥೆಯೊಂದು ನವಲ್ನಿ ಚಿಕಿತ್ಸಾ ವೆಚ್ಚವನ್ನು ಭರಿಸಲು ಮುಂದಾಗಿದೆ. ಇದೇ ಸಂಸ್ಥೆ ನವಲ್ನಿಯನ್ನು ರಷ್ಯಾದಿಂದ ಜರ್ಮನಿಗೆ ಶಿಫ್ಟ್ ಮಾಡಲು ಖಾಸಗಿ ವಿಮಾನ ವ್ಯವಸ್ಥೆ ಮಾಡಿತ್ತು. ಸದ್ಯ ಜರ್ಮನಿಯ ರಾಜಧಾನಿ ಬರ್ಲಿನ್‌ನಲ್ಲಿ ನವಲ್ನಿಗೆ ತಜ್ಞ ವೈದ್ಯರು ಚಿಕಿತ್ಸೆ ಆರಂಭಿಸಿದ್ದಾರೆ. ನವಲ್ನಿ ದೇಹದಿಂದ ಕಾರ್ಕೋಟಕ ವಿಷ ಹೊರತೆಗೆಯಲು ವೈದ್ಯರ ಹರಸಾಹಸ ಮುಂದುವರಿದಿದೆ.

ನವಲ್ನಿ ಬದುಕುವುದೇ ಅನುಮಾನ..?

ನವಲ್ನಿ ಬದುಕುವುದೇ ಅನುಮಾನ..?

ಅಲೆಕ್ಸಿ ನವಲ್ನಿ ಪರಿಸ್ಥಿತಿ ಗಮನಿಸಿರುವ ತಜ್ಞರು ಹೇಳುವಂತೆ ಆತ ಬದುಕುವ ಸಾಧ್ಯತೆ ತೀರಾ ಕಡಿಮೆ. ಅದರಲ್ಲೂ ಜರ್ಮನಿಗೆ ಶಿಫ್ಟ್ ಆಗಲು ನವಲ್ನಿಗೆ ತುರ್ತಾಗಿ ಅನುಮತಿ ನೀಡದಿರುವುದು ಭಾರಿ ಅನುಮಾನ ಮೂಡಿಸಿದೆ. ಜೊತೆಗೆ ನವಲ್ನಿ ಆರೋಗ್ಯ ಮತ್ತಷ್ಟು ಗಂಭೀರವಾಗುವಂತೆ ಮಾಡಿದೆ. 2 ದಿನಗಳ ಹಿಂದೆ ನವಲ್ನಿ ಶಿಫ್ಟ್ ಆಗುವ ಹಂತದಲ್ಲಿಲ್ಲ, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದಿದ್ದ ರಷ್ಯಾ ವೈದ್ಯರೇ ಈಗ ಶಿಫ್ಟ್ ಮಾಡಿದ್ದಾರೆ. ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿರುವ ನವಲ್ನಿ ಬದುಕುವುದೇ ಅನುಮಾನ ಎನ್ನಲಾಗ್ತಿದೆ.

ಬದುಕಿ ಉಳಿದರೆ ನವಲ್ನಿಗೆ ನರಕದರ್ಶನ

ಬದುಕಿ ಉಳಿದರೆ ನವಲ್ನಿಗೆ ನರಕದರ್ಶನ

ವಿಷ ದೇಹದೊಳಗೆ ಹೊಕ್ಕಿದರೆ ಬದುಕುಳಿಯುವ ಸಾಧ್ಯತೆ ತೀರಾ ಕಡಿವೆ. ಅದರಲ್ಲೂ ನವಲ್ನಿ ದೇಹ ಹೊಕ್ಕಿರುವುದು ಕೈಗಾರಿಕೆಗಳಲ್ಲಿ ಬಳಸುವ ವಿಷ ಎನ್ನಲಾಗ್ತಿದೆ. ನವಲ್ನಿ ಕೂದಲು ಹಾಗೂ ಅಂಗಿಯಲ್ಲಿ ಈ ವಿಷಕಾರಿ ಅಂಶಗಳು ಪತ್ತೆಯಾಗಿವೆ. ಇದನ್ನೆಲ್ಲಾ ಗಮನಿಸಿದರೆ ನವಲ್ನಿಯ ಅಂಗಾಂಗಳಿಗೆ ಭಾರಿ ಹಾನಿಯಾಗುರುವ ಸ್ಪಷ್ಟವಾಗಿದೆ. ಹೀಗಾಗಿ ನವಲ್ನಿ ಸಾವು ಗೆದ್ದರೂ, ಬಹು ಅಂಗಾಂಗ ವೈಫಲ್ಯಕ್ಕೆ ತುತ್ತಾಗುವ ಸಾಧ್ಯತೆ ದಟ್ಟವಾಗಿದೆ. ಇದು ನವಲ್ನಿ ಬೆಂಬಲಿಗರಲ್ಲಿ ಭಾರಿ ಆತಂಕ ಸೃಷ್ಟಿಸಿದೆ.

ಮಗುವಿನಂತೆ ಕಾಪಾಡುತ್ತಿರುವ ಹೆಂಡತಿ

ಮಗುವಿನಂತೆ ಕಾಪಾಡುತ್ತಿರುವ ಹೆಂಡತಿ

ಇನ್ನು ನವಲ್ನಿ ಪತ್ನಿ ಜೊತೆಯಲ್ಲೇ ಇದ್ದಾರೆ. ವಿಷ ನವಲ್ನಿ ದೇಹ ಹೊಕ್ಕಿದೆ ಎಂಬುದು ತಿಳಿದ ಕ್ಷಣದಿಂದಲೂ ಯುಲಿಯಾ ನವಲ್ನಿ ಜೊತೆಯಲ್ಲೇ ಇದ್ದಾರೆ. ನವಲ್ನಿಯನ್ನ ಯುಲಿಯಾ ಮಗುವಿನಂತೆ ಆರೈಕೆ ಮಾಡುತ್ತಿದ್ದಾರೆ. ಮತ್ತೊಂದೆಡೆ ಬೆಂಬಲಿಗರು ಅವರ ಬಗ್ಗೆ ತೋರುತ್ತಿರುವ ಪ್ರೀತಿ ಹಾಗೂ ಕಾಳಜಿ ರಷ್ಯಾದಲ್ಲಿ ನವಲ್ನಿ ಮೇಲಿರುವ ಅಭಿಮಾನ ಎಂತಹದ್ದು ಎಂಬುದನ್ನ ಸಾರಿ ಸಾರಿ ಹೇಳುವಂತಿದೆ.

ಭ್ರಷ್ಟಾಚಾರದ ವಿರುದ್ಧ ಹೋರಾಟ

ಭ್ರಷ್ಟಾಚಾರದ ವಿರುದ್ಧ ಹೋರಾಟ

ಅಲೆಕ್ಸಿ ನವಲ್ನಿ ರಾಜಕಾರಣಿ ಮಾತ್ರವಲ್ಲ, ಹೋರಾಟಗಾರ ಕೂಡ. ನವಲ್ನಿ ಭ್ರಷ್ಟಾಚಾರದ ವಿರುದ್ಧ ರಷ್ಯಾದಲ್ಲಿ ನಿರಂತರವಾಗಿ ಹೋರಾಡುತ್ತಿದ್ದಾರೆ. ಅಲ್ಲದೆ ರಷ್ಯಾದ ಮಾಜಿ ಪ್ರಧಾನಿ ಡಿಮಿಟ್ರಿ ಮೆಡ್ವೆಡೆವ್ ಭ್ರಷ್ಟಾಚಾರದ ಬಗ್ಗೆ ಸಿನಿಮಾ ಕೂಡ ನಿರ್ದೇಶಿಸಿದ್ದರು. ಹಾಗೇ ಪುಟಿನ್ ವಿರುದ್ಧ ಕೇಳಿಬರುತ್ತಿದ್ದ ಭ್ರಷ್ಟಾಚಾರ ಹಾಗೂ ಚುನಾವಣಾ ಅಕ್ರಮಗಳ ವಿರುದ್ಧ ನವಲ್ನಿ ಹಿಂದಿನಿಂದಲೂ ಹೋರಾಟ ನಡೆಸುತ್ತಿದ್ದಾರೆ. ಆದರೆ ಇದೇ ಅವರ ಜೀವಕ್ಕೆ ಮುಳುವಾಗಿದೆ ಎಂಬುದು ಆಪ್ತರ ಮಾತು.

ಘಟನೆ ಬಗ್ಗೆ ವಕ್ತಾರೆ ಹೇಳೋದು ಏನು..?

ಘಟನೆ ಬಗ್ಗೆ ವಕ್ತಾರೆ ಹೇಳೋದು ಏನು..?

ಸೈಬೀರಿಯಾದ ಟಾಮ್ಸ್ಕ್‌ನಿಂದ ಮಾಸ್ಕೋಗೆ ವಿಮಾನದಲ್ಲಿ ಮರಳುವಾಗ ಅಲೆಕ್ಸಿ ನವಲ್ನಿ ಆರೋಗ್ಯ ಹದಗೆಟ್ಟಿತ್ತು ಎಂದು ನವಲ್ನಿ ವಕ್ತಾರೆ ಕಿರಾ ಯರ್ಮಿಶ್ ಹೇಳುತ್ತಿದ್ದಾರೆ. ತಕ್ಷಣ ಒಮಾಸ್ಕ್‌ ಎಂಬಲ್ಲಿ ತುರ್ತಾಗಿ ವಿಮಾನ ಇಳಿಸಿ ನವಲ್ನಿಗೆ ಚಿಕಿತ್ಸೆ ಕೊಡಿಸಲಾಗಿದೆ. ಆದರೆ ವಿಮಾನ ಹತ್ತುವ ಮೊದಲು ರೆಸ್ಟೋರೆಂಟ್ ಒಂದರಲ್ಲಿ ಅಲೆಕ್ಸಿ ನವಲ್ನಿ ಟೀ ಸೇವಿಸಿದ್ದರು. ಅದೇ ಚಹಾದಲ್ಲಿ ಕಾರ್ಕೋಟಕ ವಿಷ ಬೆರೆಸಿದ್ದರು ಎಂಬುದು ವಕ್ತಾರೆಯ ಆರೋಪವಾಗಿದೆ.

ಹಿಂದೆಯೂ ದಾಳಿ ನಡೆದಿತ್ತು

ಹಿಂದೆಯೂ ದಾಳಿ ನಡೆದಿತ್ತು

ನವಲ್ನಿ ಮೇಲೆ ಇಂತಹ ದಾಳಿ ನಡೆಯುತ್ತಿರುವುದು ಇದೇ ಮೊದಲಲ್ಲ. 2017ರಲ್ಲಿ ಕೂಡ ರಾಸಾಯನಿಕ ದಾಳಿ ನಡೆದಿತ್ತು. ನವಲ್ನಿ ರಸ್ತೆಯಲ್ಲಿ ಕ್ಯಾಂಪೇನ್ ಮಾಡುವ ಸಂದರ್ಭದಲ್ಲಿ ಕೆಮಿಲ್ ಅಟ್ಯಾಕ್ ಮಾಡಿದ್ದ ಕಿರಾತಕನೊಬ್ಬ ಅಲ್ಲಿಂದ ಓಡಿ ಹೋಗಿದ್ದ. ಈ ದಾಳಿ ಪರಿಣಾಮ ಹಲವು ದಿನಗಳ ಕಾಲ ನವಲ್ನಿ ಮುಖ ಹಸಿರು ಬಣ್ಣಕ್ಕೆ ತಿರುಗಿತ್ತು. ಅಂದು ದಾಳಿ ನಡೆದಾಗ ಹೆದರದ ನವಲ್ನಿ ಹಸಿರು ಬಣ್ಣಕ್ಕೆ ತಿರುಗಿದ್ದ ಮುಖದಲ್ಲೇ ಲೈವ್ ಬಂದಿದ್ದರು. ಅಲ್ಲದೆ ತಮ್ಮನ್ನು ಈ ರೀತಿ ಹೆದರಿಸಲು ಆಗಲ್ಲ ಎಂದು ತೊಡೆ ತಟ್ಟಿದ್ದರು. ಈಗಲೂ ಇಂತಹದ್ದೇ ಪವಾಡ ನಡೆಯಲಿ, ನವಲ್ನಿ ಹುಷಾರಾಗಿ ಬರಲಿ ಎಂಬುದೇ ಅವರ ಬೆಂಬಲಿಗರ ಬಯಕೆ.

ವಿಷಾಹಾರ ಸೇವನೆ: ಕೋಮಾಗೆ ಜಾರಿದ ರಷ್ಯಾ ವಿರೋಧ ಪಕ್ಷದ ನಾಯಕವಿಷಾಹಾರ ಸೇವನೆ: ಕೋಮಾಗೆ ಜಾರಿದ ರಷ್ಯಾ ವಿರೋಧ ಪಕ್ಷದ ನಾಯಕ

English summary
Russian opposition leader Alexei Navalny has shifted to Germany from Siberia for treatment. He is in coma after drinking the tea witch his supporters say poisoned.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X