• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಸ್ಪತ್ರೆಯಿಂದ ನವಲ್ನಿ ಔಟ್, ಮುಂದೆ ಇದೆ ಮಾರಿಹಬ್ಬ..!

|

ವಿಷಪ್ರಾಶನದ ಪರಿಣಾಮ ಕೋಮಾದಲ್ಲಿ ಚಿಕಿತ್ಸೆ ಪಡೆದು, ಬರೋಬ್ಬರಿ 32 ದಿನಗಳ ನಂತರ ಪುಟಿನ್ ಶತ್ರು ಅಲೆಕ್ಸಿ ನವಲ್ನಿ ಡಿಸ್ಚಾರ್ಜ್ ಆಗಿದ್ದಾರೆ. ಜರ್ಮನಿ ರಾಜಧಾನಿ ಬರ್ಲಿನ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ನವಲ್ನಿ ಈಗ ಓಡಾಡುಷ್ಟು ಶಕ್ತರಾಗಿದ್ದಾರೆ. ಆಗಸ್ಟ್ 20ರಂದು ಸೈಬೀರಿಯಾದಿಂದ ಮಾಸ್ಕೋಗೆ ಮರಳುವಾಗ ಅಲೆಕ್ಸಿ ನವಲ್ನಿ ಆರೋಗ್ಯ ಹದಗೆಟ್ಟು ಒಮಾಸ್ಕ್‌ ಎಂಬಲ್ಲಿ ತುರ್ತಾಗಿ ವಿಮಾನ ಇಳಿಸಿ ಚಿಕಿತ್ಸೆ ಕೊಡಿಸಲಾಗಿತ್ತು.

ನವಲ್ನಿ ವಿಮಾನ ಹತ್ತುವ ಮೊದಲು ರೆಸ್ಟೋರೆಂಟ್ ಒಂದರಲ್ಲಿ ನವಲ್ನಿ ಟೀ ಸೇವಿಸಿದ್ದರು. ಅದರಲ್ಲಿ ಕಾರ್ಕೋಟಕ ವಿಷ ಬೆರೆಸಲಾಗಿತ್ತು ಎಂಬ ಆರೋಪವಿತ್ತು. ಜರ್ಮನಿಯ ಮಿಲಿಟರಿ ಲ್ಯಾಬ್‌ನಲ್ಲಿ ನಡೆದಿದ್ದ ಪರೀಕ್ಷೆಯಲ್ಲಿ ನವಲ್ನಿಗೆ ವಿಷಪ್ರಾಶನ ಆಗಿರುವುದು ಕನ್ಫರ್ಮ್ ಆಗಿತ್ತು. 'ನೋವಿಚೋಕ್' ಎಂಬ ರಷ್ಯಾ ಸಂಶೋಧಿತ ವಿಷವನ್ನೇ ನವಲ್ನಿಗೆ ಕುಡಿಸಲಾಗಿದೆ ಎಂಬುದು ಪಕ್ಕಾ ಆಗಿತ್ತು.

ವಿಷ ಕುಡಿದರೂ ಸಾವು ಗೆದ್ದ ಪುಟಿನ್ ಶತ್ರು ನವಲ್ನಿ!

ಆದರೆ ನವಲ್ನಿ ಕುಡಿದಿದ್ದ ನೀರಿನ ಬಾಟಲ್‌ನಲ್ಲಿ ಈ ವಿಷ ಕಂಡುಬಂದಿತ್ತು. ಇಷ್ಟೆಲ್ಲಾ ಹೈಡ್ರಾಮಗಳ ಬಳಿಕ, 32 ದಿನಗಳ ನರಕ ಕಂಡು ನವಲ್ನಿ ಈಗ ತನ್ನ ತವರು ರಷ್ಯಾಗೆ ಹಾರಲು ಸಿದ್ಧರಾಗಿದ್ದಾರೆ. ಹೀಗೆ ಪುಟಿನ್ ವಿರುದ್ಧ 2ನೇ ಹಂತದ ರಾಜಕೀಯ ಯುದ್ಧಕ್ಕೆ ಸನ್ನದ್ಧರಾಗಿದ್ದಾರೆ.

ಘಟನೆ ನಡೆದಿದ್ದು ಹೇಗೆ..?

ಘಟನೆ ನಡೆದಿದ್ದು ಹೇಗೆ..?

ಆಗಸ್ಟ್ 20ರಂದು ಸೈಬೀರಿಯಾದ ಟಾಮ್ಸ್ಕ್‌ನಿಂದ ಮಾಸ್ಕೋಗೆ ವಿಮಾನದಲ್ಲಿ ಮರಳುವಾಗ ನವಲ್ನಿ ಆರೋಗ್ಯ ಹದಗೆಟ್ಟಿತ್ತು. ಒಮಾಸ್ಕ್‌ ಎಂಬಲ್ಲಿ ತುರ್ತಾಗಿ ವಿಮಾನ ಇಳಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ವಿಮಾನ ಹತ್ತುವ ಮೊದಲು ರೆಸ್ಟೋರೆಂಟ್ ಒಂದರಲ್ಲಿ ನವಲ್ನಿ ಟೀ ಸೇವಿಸಿದ್ದರು. ಅದರಲ್ಲಿ ಕಾರ್ಕೋಟಕ ವಿಷ ಬೆರೆಸಲಾಗಿತ್ತು ಎಂಬ ಆರೋಪವಿತ್ತು. ನಂತರ ರಷ್ಯಾದ ಸಾಮಾನ್ಯ ಆಸ್ಪತ್ರೆಯಲ್ಲಿ ನವಲ್ನಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಬಳಿಕ ನವಲ್ನಿ ಕುಟುಂಬ ಮತ್ತು ಬೆಂಬಲಿಗರು ನವಲ್ನಿಗೆ ಜರ್ಮನಿಯಲ್ಲಿ ಚಿಕಿತ್ಸೆ ನೀಡಲು ಮುಂದಾಗಿದ್ದರು. ನವಲ್ನಿಯನ್ನ ಜರ್ಮನಿಗೆ ಶಿಫ್ಟ್ ಮಾಡುವ ವಿಚಾರದಲ್ಲಿ ದೊಡ್ಡ ನಾಟಕ ನಡೆದಿತ್ತು. ಬಳಿಕ ಅಂತಾರಾಷ್ಟ್ರೀಯ ಒತ್ತಡಗಳಿಗೆ ಮಣಿದಿದ್ದ ರಷ್ಯಾ ಸರ್ಕಾರ ನವಲ್ನಿಗೆ ಜರ್ಮನಿಯಲ್ಲಿ ಚಿಕಿತ್ಸೆ ಕೊಡಿಸಲು ಒಪ್ಪಿತ್ತು.

ನವಲ್ನಿ ಬದುಕುವುದೇ ಅನುಮಾನವಾಗಿತ್ತು

ನವಲ್ನಿ ಬದುಕುವುದೇ ಅನುಮಾನವಾಗಿತ್ತು

ಕೆಲ ದಿನಗಳ ಹಿಂದೆ ಅಲೆಕ್ಸಿ ನವಲ್ನಿ ಪರಿಸ್ಥಿತಿ ಗಮನಿಸಿದ್ದ ತಜ್ಞರು ಆತ ಬದುಕುಳಿಯುವುದೇ ಅನುಮಾನ ಎಂದಿದ್ದರು. ಅದರಲ್ಲೂ ಜರ್ಮನಿಗೆ ಶಿಫ್ಟ್ ಆಗಲು ನವಲ್ನಿಗೆ ತುರ್ತಾಗಿ ಅನುಮತಿ ನೀಡದಿರುವುದು ಆತನ ಜೀವಕ್ಕೆ ದೊಡ್ಡ ಕಂಟಕ ಸೃಷ್ಟಿಮಾಡಿತ್ತು. ಆದರೆ ಜರ್ಮನಿಯ ಸ್ವಯಂಸೇವಾ ಸಂಸ್ಥೆಯೊಂದು ನವಲ್ನಿಗೆ ಚಿಕಿತ್ಸೆ ಕೊಡಿಸಲು ಮುಂದಾಗಿತ್ತಲ್ಲದೆ, ಸ್ವತಃ ವಿಮಾನವನ್ನು ಕೂಡ ರಷ್ಯಾಗೆ ಕಳುಹಿಸಿತ್ತು. ನವಲ್ನಿಗೆ ಬರ್ಲಿನ್‌ನಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಕೋಮಾ ಸ್ಟೇಜ್‌ನಿಂದ ನವಲ್ನಿ ಹೊರಬಂದಿದ್ದಾರೆ.

ಬಿರುಗಾಳಿ ಸೃಷ್ಟಿಯಾಗುವ ಮುನ್ಸೂಚನೆ

ಬಿರುಗಾಳಿ ಸೃಷ್ಟಿಯಾಗುವ ಮುನ್ಸೂಚನೆ

ನವಲ್ನಿ ಪತ್ನಿ ಅವರ ಜೊತೆಯಲ್ಲೇ ಇದ್ದರು. ವಿಷ ನವಲ್ನಿ ದೇಹ ಹೊಕ್ಕಿದೆ ಎಂಬುದು ತಿಳಿದ ಕ್ಷಣದಿಂದಲೂ ಯುಲಿಯಾ ನವಲ್ನಿ ಜೊತೆಯಲ್ಲೇ ಇದ್ದರು. ನವಲ್ನಿಯನ್ನು ಯುಲಿಯಾ ಮಗುವಿನಂತೆ ಆರೈಕೆ ಮಾಡುತ್ತಿದ್ರೆ, ಬೆಂಬಲಿಗರು ಅವರ ಬಗ್ಗೆ ತೋರುತ್ತಿರುವ ಪ್ರೀತಿ ಹಾಗೂ ಕಾಳಜಿ ರಷ್ಯಾದಲ್ಲಿ ನವಲ್ನಿ ಮೇಲಿರುವ ಅಭಿಮಾನ ಎಂತಹದ್ದು ಎಂಬುದನ್ನು ಸಾರಿ ಸಾರಿ ಹೇಳುತ್ತಿದೆ. ಈಗ ಮತ್ತೊಮ್ಮೆ ಫೀನಿಕ್ಸ್ ನಂತೆ ಎದ್ದ್ ರಷ್ಯಾ ರಾಜಕೀಯದಲ್ಲಿ ಬಿರುಗಾಳಿ ಸೃಷ್ಟಿಯಾಗುವ ಮುನ್ಸೂಚನೆ ಸಿಕ್ಕಿದೆ.

  ಕಾಶ್ಮೀರದಲ್ಲಿ ಭಾರತೀಯರು ಅಂತ ಹೇಳೋರು ಯಾರು ಇಲ್ಲಾ?? | Oneindia Kannada
  ಭ್ರಷ್ಟಾಚಾರದ ವಿರುದ್ಧ ಹೋರಾಟ

  ಭ್ರಷ್ಟಾಚಾರದ ವಿರುದ್ಧ ಹೋರಾಟ

  ಅಲೆಕ್ಸಿ ನವಲ್ನಿ ರಾಜಕಾರಣಿ ಮಾತ್ರವಲ್ಲ, ಹೋರಾಟಗಾರ ಕೂಡ. ನವಲ್ನಿ ಭ್ರಷ್ಟಾಚಾರದ ವಿರುದ್ಧ ರಷ್ಯಾದಲ್ಲಿ ನಿರಂತರವಾಗಿ ಹೋರಾಡುತ್ತಿದ್ದಾರೆ. ರಷ್ಯಾದ ಮಾಜಿ ಪ್ರಧಾನಿ ಡಿಮಿಟ್ರಿ ಮೆಡ್ವೆಡೆವ್ ಭ್ರಷ್ಟಾಚಾರದ ಬಗ್ಗೆ ಸಿನಿಮಾ ಕೂಡ ನಿರ್ದೇಶಿಸಿದ್ದರು. ಹಾಗೇ ಪುಟಿನ್ ವಿರುದ್ಧ ಕೇಳಿಬರುತ್ತಿದ್ದ ಭ್ರಷ್ಟಾಚಾರ ಹಾಗೂ ಚುನಾವಣಾ ಅಕ್ರಮಗಳ ವಿರುದ್ಧ ನವಲ್ನಿ ಹಿಂದಿನಿಂದಲೂ ಹೋರಾಟ ನಡೆಸುತ್ತಿದ್ದಾರೆ. ಆದರೆ ಇದೇ ನವಲ್ನಿಯ ಜೀವಕ್ಕೆ ಮುಳುವಾಗಿದೆ ಎಂಬುದು ಆಪ್ತರ ಮಾತು.

  English summary
  Russian opposition leader Alexei Navalny has been discharged from hospital after 32 days treatment for poisoning. Very soon he will going back to Russia.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X