ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಲ್-ಖೈದಾ ದಾಳಿ ಕುರಿತು ಪ್ರಜೆಗಳಿಗೆ ಎಚ್ಚರಿಕೆ ನೀಡಿದ ಅಮೆರಿಕ

|
Google Oneindia Kannada News

ನ್ಯೂಯಾರ್ಕ್, ಆಗಸ್ಟ್ 04: ಅಮೆರಿಕನ್ನರು ವಿದೇಶಕ್ಕೆ ಪ್ರಯಾಣ ಮಾಡುವಾಗ ತೀವ್ರ ಎಚ್ಚರಿಕೆ ವಹಿಸುವಂತೆ ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಹಾಗೂ ಅಧ್ಯಕ್ಷ ಜೋ ಬಿಡೆನ್ ತನ್ನ ಪ್ರಜೆಗಳಿಗೆ ಸೂಚನೆ ನೀಡಿದ್ದಾರೆ.

ಅಲ್-ಖೈದಾ ಮುಖ್ಯಸ್ಥ ಐಮನ್ ಅಲ್-ಜವಾಹಿರಿ ಮೇಲೆ ದಾಳಿ ನಡೆಸಿದ ಎರಡೇ ದಿನಗಳಲ್ಲಿ ಈ ಎಚ್ಚರಿಕೆ ನೀಡಲಾಗಿದೆ. ಅಲ್-ಖೈದಾ ಬೆಂಬಲಿಗರು ಅಮೆರಿಕನ್ ಪ್ರಜೆಗಳು, ಸೌಲಭ್ಯಗಳು ಮತ್ತು ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಬಹುದು ಎಂದು ಹೇಳಿದೆ.

ಅಫ್ಘಾನಿಸ್ತಾನದಲ್ಲಿ ಜುಲೈ 31ರ 2022ರಂದು ಯುನೈಟೆಡ್ ಸ್ಟೇಟ್ಸ್ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ನಡೆಸಿತು. ಇದೇ ವೇಳೆ ಅಲ್-ಖೈದಾ ನಾಯಕನಾಗಿ ಒಸಾಮಾ ಬಿನ್ ಲಾಡೆನ್‌ನ ಉಪ ಮತ್ತು ಉತ್ತರಾಧಿಕಾರಿ ಅಯ್ಮಾನ್ ಅಲ್-ಜವಾಹಿರಿಯನ್ನು ಕೊಂದು ಹಾಕಲಾಯಿತು.

Al-Qaeda Supporters may seek to attack: US President Joe biden issues alert to citizens

ಸೆಪ್ಟೆಂಬರ್ 11, 2001ರಂದು ಯುನೈಟೆಡ್ ಸ್ಟೇಟ್ಸ್ ವಿರುದ್ಧದ ನಡೆಸಿದ ದಾಳಿಯಲ್ಲಿ ಅಲ್-ಜವಾಹಿರಿ ಮಾಸ್ಟರ್‌ಮೈಂಡ್‌ ಆಗಿದ್ದರು. ಯುನೈಟೆಡ್ ಸ್ಟೇಟ್ಸ್ ಮೇಲೆ ದಾಳಿ ಮಾಡಲು ತನ್ನ ಅನುಯಾಯಿಗಳನ್ನು ಅಲ್ ಜವಾಹಿರಿ ಒತ್ತಾಯಿಸುತ್ತಲೇ ಇದ್ದರು," ಯುಎಸ್ ಸ್ಟೇಟ್ ಡಿಪಾರ್ಟ್‌ಮೆಂಟ್ ಉಲ್ಲೇಖಿಸಿದೆ.

ಅಲ್-ಖೈದಾ ಮುಖ್ಯಸ್ಥನ ಹತ್ಯೆ ಖಾತ್ರಿಪಡಿಸಿದ ಬಿಡೆನ್: ಕಳೆದ ಮಂಗಳವಾರವಷ್ಟೇ ಯುಎಸ್ ಉಪಾಧ್ಯಕ್ಷ ಜೋ ಬಿಡೆನ್ ಕಾಬೂಲ್‌ನಲ್ಲಿ ನಡೆಸಿದ ಡ್ರೋನ್ ದಾಳಿಯಲ್ಲಿ ಭಯೋತ್ಪಾದಕ ಐಮನ್ ಅಲ್-ಜವಾಹಿರಿಯನ್ನು ಕೊಲ್ಲಲಾಗಿದೆ ಎಂದು ಘೋಷಿಸಿದರು.

ಕಳೆದ ಆಗಸ್ಟ್ 7, 1998 ರಂದು ಟಾಂಜಾನಿಯಾದ ದಾರ್ ಎಸ್ ಸಲಾಮ್ ಮತ್ತು ಕೀನ್ಯಾದ ನೈರೋಬಿಯಲ್ಲಿನ ಯುನೈಟೆಡ್ ಸ್ಟೇಟ್ಸ್ ರಾಯಭಾರ ಕಚೇರಿಗಳ ಮೇಲೆ ಬಾಂಬ್ ದಾಳಿ ನಡೆಸಿದ ಆರೋಪದ ಈ ಜವಾಹಿರಿ ಮೇಲಿದೆ.

Al-Qaeda Supporters may seek to attack: US President Joe biden issues alert to citizens

ಆಫ್ರಿಕಾದ ನೈರೋಬಿ, ಕೀನ್ಯಾ ಮತ್ತು ಡಾರ್ ಎಸ್ ಸಲಾಮ್, ಟಾಂಜಾನಿಯಾದಲ್ಲಿನ ಅಮೆರಿಕನ್ ರಾಯಭಾರ ಕಚೇರಿಗಳ ಮೇಲೆ ಏಕಕಾಲದಲ್ಲಿ ಬಾಂಬ್ ದಾಳಿ ನಡೆಸಲಾಗಿದ್ದು, ಅಂದು 12 ಅಮೆರಿಕನ್ನರು ಸೇರಿದಂತೆ 224 ಜನರು ಸ್ಫೋಟಗಳಲ್ಲಿ ಮೃತಪಟ್ಟಿದ್ದು, 4,500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಜವಾಹಿರಿ ಸಂಚಿನ ಮುಖ ತೆರೆದಿಟ್ಟ ದಾಳಿ: ಕಳೆದ 2001ರ ಸೆಪ್ಟೆಂಬರ್ 11ರಂದು ವಿಶ್ವ ವ್ಯಾಪಾರ ಕೇಂದ್ರ ಮತ್ತು ಪೆಂಟಗನ್ ಅವಳಿ ಗೋಪುರಗಳ ಮೇಲಿನ ದಾಳಿಯಲ್ಲಿ ಸುಮಾರು 3,000 ಜನರು ಸಾವನ್ನಪ್ಪಿದಾಗ ಜವಾಹಿರಿಯ ಭಯೋತ್ಪಾದನೆಯ ಸಂಚಿನ ಅಸಲಿ ಮುಖ ಬಯಲಾಗಿತ್ತು.

ಆದರೆ 2001ರ ಕೊನೆಯಲ್ಲಿ ಜವಾಹಿರಿ ಮತ್ತು ಬಿನ್ ಲಾಡೆನ್ ಇಬ್ಬರೂ ಅಫ್ಘಾನಿಸ್ತಾನದಲ್ಲಿ ಅಮೆರಿಕ ಪಡೆಗಳು ನಡೆಸಿದ ದಾಳಿಯಿಂದ ತಪ್ಪಿಸಿಕೊಂಡಿದ್ದರು. ತದನಂತರ 2003ರ ಮೇ ತಿಂಗಳಿನಲ್ಲಿ ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಏಕಕಾಲದಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ 9 ಅಮೆರಿಕನ್ನರು ಸೇರಿದಂತೆ 23 ಜನರು ಸಾವನ್ನಪ್ಪಿದರು.

Recommended Video

Hubli ಯಲ್ಲಿ ಧ್ವಜ ತಯಾರಿಕ ಕಾರ್ಖಾನೆಗೆ ಭೇಟಿ ಕೊಟ್ಟ Rahul Gandhi | *Politics | OneIndia Kannada

English summary
Al-Qaeda Supporters may seek to attack: US President Joe biden issues alert to citizens. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X