ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶ್ಚಿಮದ ಮೇಲೆ ದಾಳಿಗೆ ಕರೆ ನೀಡಿದ ಅಲ್ ಕೈದಾ ನಾಯಕ ಝವಾಹಿರಿ

|
Google Oneindia Kannada News

ಯುಎಸ್, ಯುರೋಪಿಯನ್, ಇಸ್ರೇಲಿ ಹಾಗೂ ರಷ್ಯನ್ ರನ್ನು ಗುರಿ ಮಾಡಿಕೊಂಡು ಮುಸ್ಲಿಮರು ದಾಳಿ ನಡೆಸಬೇಕು ಎಂದು ಅಲ್- ಕೈದಾ ನಾಯಕ ಅಯ್ಮಾನ್ ಅಲ್-ಝವಾಹಿರಿ ಕರೆ ನೀಡಿದ್ದಾನೆ. 9/11ರ ಅಮೆರಿಕ ಮೇಲಿನ ದಾಳಿಯ 18ನೇ ವರ್ಷಾಚರಣೆ ಭಾಷಣದಲ್ಲಿ ಈ ಕರೆ ನೀಡಿದ್ದಾನೆ.

ಎಸ್ ಐಟಿಇ ಗುಪ್ತಚರ ಗುಂಪು ನೀಡಿರುವ ವರದಿ ಪ್ರಕಾರ, ಜೈಲಿನಲ್ಲಿ ತಮ್ಮ ನಿಲುವು ಬದಲಿಸಿಕೊಂಡ ಜಿಹಾದಿಗಳ ಬಗ್ಗೆ ಝವಾಹಿರಿ ಟೀಕಿಸಿದ್ದಾನೆ. ಅಮೆರಿಕದ ಮೇಲೆ ನಡೆಸಿದ ದಾಳಿಯಲ್ಲಿ ಅಮಾಯಕ ನಾಗರಿಕರು ಸಾವನ್ನಪ್ಪಿದರು. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಕೆಲ ಜಿಹಾದಿಗಳು ತಮ್ಮ ನಿಲುವು ಬದಲಿಸಿದ್ದರು.

ಕಾಬೂಲ್‌ನಲ್ಲಿ ಅಮೆರಿಕದ ರಾಯಭಾರ ಕಚೇರಿ ಮೇಲೆ ರಾಕೆಟ್ ದಾಳಿಕಾಬೂಲ್‌ನಲ್ಲಿ ಅಮೆರಿಕದ ರಾಯಭಾರ ಕಚೇರಿ ಮೇಲೆ ರಾಕೆಟ್ ದಾಳಿ

ಸೆಪ್ಟೆಂಬರ್ 11, 2001ರಂದು ಅಲ್ ಕೈದಾ ಉಗ್ರ ಸಂಘಟನೆ ಕೈವಾಡದೊಂದಿಗೆ ವಿಮಾನವೊಂದನ್ನು ಅಪಹರಿಸಿ, ವಿಶ್ವ ವಾಣಿಜ್ಯ ಕೇಂದ್ರದ ಕಟ್ಟಡಗಳಿಗೆ, ಪೆಂಟಗಾನ್ ಹಾಗೂ ಗ್ರಾಮೀಣ ಭಾಗದ ಪೆನ್ಸಿಲ್ವೇನಿಯಾದಲ್ಲಿ ಗುದ್ದಿಸಲಾಗಿತ್ತು. ಅದರಲ್ಲಿ 3,000ದಷ್ಟು ಮಂದಿ ಮೃತಪಟ್ಟಿದ್ದರು.

Al Qaeda Leader Al Zawahiri Call For Attack On West

ಪಾಕಿಸ್ತಾನದ ಅಬೋಟಾಬಾದ್ ನಲ್ಲಿ ಯು.ಎಸ್. ನೇವಿ ಸೀಲ್ ನಿಂದ ಒಸಾಮಾ ಬಿನ್ ಲಾಡೆನ್ ನನ್ನು ಹತ್ಯೆ ಮಾಡಿದ ನಂತರ 2011ರಲ್ಲಿ ಈಜಿಪ್ಟ್ ಮೂಲದ ಝವಾಹಿರಿ ಅಲ್ ಕೈದಾ ಉಗ್ರ ಸಂಘಟನೆಯ ಜವಾಬ್ದಾರಿ ವಹಿಸಿಕೊಂಡಿದ್ದ.

English summary
9/11 terror attack 18th anniversary speech Al Qaeda terror group leader call for attack on US, European, Israeli, Russian.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X