ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಕಳವಳ ಸೃಷ್ಟಿಸಿರುವುದು ಏಕೆ ಆ ತಾಲಿಬಾನ್ ಸರ್ಕಾರ!?

|
Google Oneindia Kannada News

ಕಾಬೂಲ್, ಸಪ್ಟೆಂಬರ್ 8: ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಯುಎಸ್ ಗುಪ್ತಚರ ಇಲಾಖೆ ಅಧಿಕಾರಿ ವಿಲಿಯಮ್ಸ್ ಬರ್ನ್ಸ್ ಭೇಟಿ ಮಾಡಿದ್ದಾರೆ. ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಯಲ್ಲಿ ಗುರುತಿಸಿಕೊಂಡ ಮುಲ್ಲಾ ಮೊಹಮ್ಮದ್ ಹಸನ್ ಅಖುಂದಾಗೆ ಅಫ್ಘಾನಿಸ್ತಾನದಲ್ಲಿ ಪ್ರಧಾನಮಂತ್ರಿ ಪಟ್ಟ ಕಟ್ಟಿರುವ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದರು.

Recommended Video

Afghanistan ಹೊಸ ಸರ್ಕಾರ ಭಾರತಕ್ಕೆ ಸಂಕಟ ತರಲಿದೆ!! | Oneindia Kannada

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಕೇಂದ್ರೀಯ ಗುಪ್ತಚರ ತಂಡದ ಮುಖ್ಯಸ್ಥರು ಏನೆಲ್ಲ ಚರ್ಚೆ ನಡೆಸಿದರು ಎಂಬುದರ ಬಗ್ಗೆ ಸ್ಪಷ್ಟವಾಗಿಲ್ಲ. ಆದರೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಘೋಷಿಸಿರುವುದರ ಬೆನ್ನಲ್ಲೇ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.

'ನೋಡುತ್ತಿರಿ, ಚೀನಾ ಖಂಡಿತವಾಗಿ ತಾಲಿಬಾನ್‌ ಜೊತೆ ಹೊಂದಾಣಿಕೆ ಮಾಡುತ್ತೆ''ನೋಡುತ್ತಿರಿ, ಚೀನಾ ಖಂಡಿತವಾಗಿ ತಾಲಿಬಾನ್‌ ಜೊತೆ ಹೊಂದಾಣಿಕೆ ಮಾಡುತ್ತೆ'

ಕಳೆದ ಮೂರು ವಾರಗಳ ಹಿಂದೆಯಷ್ಟೇ ಕಾಬೂಲ್ ನಗರಕ್ಕೆ ತಾಲಿಬಾನ್ ನುಗ್ಗುತ್ತಿದ್ದಂತೆ ಅಲ್ಲಿದ್ದ ಆಡಳಿತ ಕಚೇರಿ ಮತ್ತು ಸಿಬ್ಬಂದಿಯನ್ನು ಸ್ಥಳಾಂತರಿಸಿದ ರಾಷ್ಟ್ರಗಳಲ್ಲಿ ಭಾರತವೂ ಕೂಡಾ ಒಂದಾಗಿತ್ತು. ರಷ್ಯಾ ಮತ್ತು ಪಾಕಿಸ್ತಾನಗಳು ಮಾತ್ರ ಅಲ್ಲಿಯೇ ಉಳಿದುಕೊಂಡಿದ್ದವು. ಪ್ರಸ್ತುತ ಸಂದರ್ಭದಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಘೋಷಣೆಯಾಗಿದೆ. ಮುಲ್ಲಾ ಮೊಹಮ್ಮದ್ ಹಸನ್ ಅಖುಂದಾ ಪ್ರಧಾನಮಂತ್ರಿಯಾಗಿದ್ದು, 33 ಸಚಿವರ ಸಂಪುಟವನ್ನು ರಚಿಸಲಾಗಿದೆ. ಈ ಎಲ್ಲ ಬೆಳವಣಿಗೆಗಳ ಕುರಿತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಕೇಂದ್ರೀಯ ಗುಪ್ತಚರ ತಂಡದ ಮುಖ್ಯಸ್ಥರು ನಡೆಸಿರುವ ಚರ್ಚೆಗಳ ಕುರಿತಾಗಿ ಒಂದು ವಿಶೇಷ ವರದಿಗಾಗಿ ಮುಂದೆ ಓದಿ ...

ಕಾಶ್ಮೀರ ವಿಷಯದಲ್ಲಿ ಉತ್ತೇಜನ ನೀಡುವಂತಿಲ್ಲ

ಕಾಶ್ಮೀರ ವಿಷಯದಲ್ಲಿ ಉತ್ತೇಜನ ನೀಡುವಂತಿಲ್ಲ

ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಎಲ್ಲ ರೀತಿ ಬೆಳವಣಿಗೆ ಬಗ್ಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಕೇಂದ್ರೀಯ ಗುಪ್ತಚರ ತಂಡದ ಮುಖ್ಯಸ್ಥರು ಚರ್ಚೆ ನಡೆಸಲಿದ್ದಾರೆ. ಭಾರತವನ್ನು ಗುರಿಯಾಗಿಸಿಕೊಂಡು ಅಫ್ಘಾನಿಸ್ತಾನ ನೆಲದಲ್ಲಿ ಯಾವುದೇ ರೀತಿ ಉಗ್ರವಾದಿ ಚಟುವಟಿಕೆಗಳಿಗೆ ಅವಕಾಶ ನೀಡುವಂತಿಲ್ಲ. ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರದ ವಿಷಯವಾಗಿ ಭಯೋತ್ಪಾದಕರು ಮತ್ತು ಉಗ್ರರಿಗೆ ಕುಮ್ಮಕ್ಕು ನೀಡುವಂತಿಲ್ಲ ಎಂಬುದರ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಇದರ ಮಧ್ಯೆ ಅಜಿತ್ ದೋವಲ್ ಬುಧವಾರವೇ ದೆಹಲಿಯಲ್ಲಿ ತಮ್ಮ ರಷ್ಯಾದ ಸಹವರ್ತಿ ನಿಕೊಲಾಯ್ ಪತ್ರುಶೇವ್‌ರನ್ನು ಭೇಟಿ ಮಾಡಲಿದ್ದಾರೆ. ಚೀನಾ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದ ವಿಷಯಗಳನ್ನು ಕೇಂದ್ರೀಕೃತವಾಗಿರಿಸಿಕೊಂಡು ಈ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ದೋಹಾದಲ್ಲಿ ತಾಲಿಬಾನ್ ಜೊತೆಗಿನ ಮಾತುಕತೆ ವಿಫಲ

ದೋಹಾದಲ್ಲಿ ತಾಲಿಬಾನ್ ಜೊತೆಗಿನ ಮಾತುಕತೆ ವಿಫಲ

ದೋಹಾದಲ್ಲಿ ತಾಲಿಬಾನ್ ಜೊತೆಗಿನ ಚರ್ಚೆಯು ಉತ್ತಮ ಫಲಿತಾಂಶವನ್ನು ನೀಡಿಲ್ಲ ಎಂದು ರಷ್ಯಾದ ಭಾರತೀಯ ರಾಯಭಾರಿ ಡಿ ಬಿ ವೆಂಕಟೇಶ್ ವರ್ಮಾ ಹೇಳಿದ್ದಾರೆ. "ಭಾರತವು ದೋಹಾ ಮಾತುಕತೆಯಲ್ಲಿ ನೇರವಾಗಿ ಭಾಗವಹಿಸಲಿಲ್ಲ. ಭಾರತ ಟ್ರಾಯ್ಕಾ ಪ್ಲಸ್ ಕಾರ್ಯವಿಧಾನದ ಭಾಗವಾಗಿರಲಿಲ್ಲ, ಆದರೆ ನಾನು ಹೇಳಿದಂತೆ, ಈ ಕಾರ್ಯವಿಧಾನಗಳು ಸರಿಯಾದ ಫಲಿತಾಂಶಗಳನ್ನು ನೀಡಿಲ್ಲ. 20 ವರ್ಷಗಳ ಯುದ್ಧದ ನಂತರ ಅಫ್ಘಾನಿಸ್ತಾನದಿಂದ ಯುಎಸ್ ಹೊರಹೋಗಲು ದಾರಿ ಮಾಡಿಕೊಟ್ಟ ತಾಲಿಬಾನ್ ಜೊತೆಗಿನ ಕತಾರ್ ಆತಿಥ್ಯದ ಮಾತುಕತೆಗಳನ್ನು ಉಲ್ಲೇಖಿಸಿ, ಭಾರತ ಮತ್ತು ರಷ್ಯಾಗಳು ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದಂತೆ ಒಟ್ಟಾಗಿ ಕೆಲಸ ಮಾಡುವುದು ಉತ್ತಮ ಎಂದು ನಾನು ಭಾವಿಸುತ್ತೇನೆ. ಇದು ನಮಗೆ ಅತ್ಯಂತ ಮುಖ್ಯವಾದ ಪಾಠ "ಎಂದು ವೆಂಕಟೇಶ್ ಹೇಳಿದ್ದಾರೆ.

ಅಫ್ಘಾನಿಸ್ತಾನ ಸರ್ಕಾರದ ಬಗ್ಗೆ ಭಾರತಕ್ಕೆ ಕಳವಳ

ಅಫ್ಘಾನಿಸ್ತಾನ ಸರ್ಕಾರದ ಬಗ್ಗೆ ಭಾರತಕ್ಕೆ ಕಳವಳ

ಅಫ್ಘಾನಿಸ್ತಾನದ ಸರ್ಕಾರ ರಚನೆ ಮತ್ತು ವ್ಯವಹಾರಗಳಲ್ಲಿ ಪಾಕಿಸ್ತಾನ ಹಸ್ತಕ್ಷೇಪ ಮಾಡುತ್ತಿರುವುದು ಕಳವಳಕಾರಿಯಾಗಿದೆ. ಪಾಕಿಸ್ತಾನವು ತನ್ನ ನೆಲದಲ್ಲೇ ನಿಂತುಕೊಂಡು ಗಡಿ ಪ್ರದೇಶಗಳಲ್ಲಿ ತನ್ನ ಹಿಂಸಾತ್ಮಕ ಸಂಸ್ಕೃತಿ (ಪ್ರವೃತ್ತಿ)ಯನ್ನು ಮುಂದುವರಿಸುತ್ತಿದೆ. ಭಾರತದ ವಿರುದ್ಧ ದ್ವೇಷಪೂರಿತ ಭಾಷಣಕ್ಕೆ ಇಸ್ಲಮಾಬಾದ್ ಅನ್ನು ಬಳಸಿಕೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ.

"ಶಾಂತಿ ಮತ್ತು ಸಂಸ್ಕೃತಿ ಕೇವಲ ಅಮೂರ್ತ ಮೌಲ್ಯ ಅಥವಾ ಸಮ್ಮೇಳನಗಳಲ್ಲಿ ಚರ್ಚಿಸುವ ತತ್ವವಲ್ಲ. ಅದು ಆಚರಿಸುವ ಮತ್ತು ಸದಸ್ಯ ರಾಷ್ಟ್ರಗಳು ಮತ್ತು ಸದಸ್ಯರ ನಡುವೆ ಜಾಗತಿಕ ಸಂಬಂಧಗಳನ್ನು ಸಕ್ರಿಯವಾಗಿ ನಿರ್ಮಿಸಬೇಕಾಗಿದೆ" ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ಖಾಯಂ ಸದಸ್ಯತ್ವ ಕಾರ್ಯಾಚರಣೆಯಲ್ಲಿ ಭಾರತೀಯ ಕಾರ್ಯದರ್ಶಿ ವಿದಿಶಾ ಮೈತ್ರಾ ಹೇಳಿದರು.

"ಭಾರತದ ವಿರುದ್ಧ ಪಾಕಿಸ್ತಾನದ ನಿಯೋಗವು ದ್ವೇಷದ ಭಾಷಣಕ್ಕಾಗಿ ವಿಶ್ವಸಂಸ್ಥೆ ವೇದಿಕೆಯನ್ನು ಬಳಸಿಕೊಳ್ಳುವ ಇನ್ನೊಂದು ಪ್ರಯತ್ನಕ್ಕೆ ನಾವೆಲ್ಲರೂ ಇಂದು ಸಾಕ್ಷಿಯಾಗಿದ್ದೇವೆ. ಅದು ತನ್ನ ನೆಲದಲ್ಲಿ ಮತ್ತು ಗಡಿಗಳಲ್ಲಿ ಹಿಂಸಾಚಾರದ ಸಂಸ್ಕೃತಿಯನ್ನು ಪ್ರಚೋದಿಸುತ್ತಲೇ ಇದೆ. ಅಂತಹ ಎಲ್ಲಾ ಪ್ರಯತ್ನಗಳನ್ನು ನಾವು ಖಂಡಿಸುತ್ತೇವೆ," ಎಂದು ಹೇಳಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ಘೋಷಿಸಿರುವ ತಾಲಿಬಾನ್

ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ಘೋಷಿಸಿರುವ ತಾಲಿಬಾನ್

ಅಫ್ಘಾನಿಸ್ತಾನದ ಯುಎಸ್ ಬೆಂಬಲಿತ ಪ್ರಜಾಪ್ರಭುತ್ವ ಸರ್ಕಾರ ಪತನಗೊಂಡು 25 ದಿನಗಳೊಳಗೆ ಹೊಸ ಸರ್ಕಾರ ಘೋಷಣೆ ಆಗಿದೆ. ರಾಜಧಾನಿ ಕಾಬೂಲ್ ಸೇರಿದಂತೆ ಇಡೀ ದೇಶದ ಮೇಲೆ 23 ದಿನಗಳ ಹಿಂದೆಯಷ್ಟೇ ಹಿಡಿತ ಸಾಧಿಸಿದ ತಾಲಿಬಾನ್ ಸಂಘಟನೆ ಹೊಸ ಸರ್ಕಾರವನ್ನು ಘೋಷಿಸಿದೆ. ತಾಲಿಬಾನ್ ರಚಿಸಿರುವ ಹೊಸ ಸರ್ಕಾರದ ನಾಯಕತ್ವವನ್ನು ಮುಲ್ಲಾ ಮೊಹಮ್ಮದ್ ಹಸನ್ ಅಖುಂದಾ ಹೆಗಲಿಗೆ ವಹಿಸಲಾಗಿದೆ. ತಾಲಿಬಾನ್ ಮತ್ತು ಹಕ್ಕಾನಿ ನಡುವಿನ ಭಿನ್ನಾಭಿಪ್ರಾಯಗಳ ನಡುವೆ ಮುಲ್ಲಾ ಹಸನ್ ಅಖುಂದಾರನ್ನು ಆಯ್ಕೆ ಮಾಡಲಾಗಿದೆ. ತಾಲಿಬಾನ್ ಸಂಘಟನೆ ಸಹ-ಸಂಸ್ಥಾಪಕ ಅಬ್ದುಲ್ ಘನಿ ಬರಾದಾರ್ ಉಪ ಪ್ರಧಾನಿ ಸ್ಥಾನವನ್ನು ನೀಡಲಾಗಿದೆ. ಅಬ್ದುಲ್ ಬರಾದರ್ ಮೊದಲ ಉಪ ಪ್ರಧಾನಿಯಾಗಿದ್ದು, ಮಾವ್ಲವಿ ಹನ್ನಾಫಿ ಎರಡನೇ ಉಪ ಪ್ರಧಾನಿ ಆಗಿದ್ದಾರೆ. ತಾಲಿಬಾನ್ ರಚಿಸಿರುವ ಹೊಸ ಸರ್ಕಾರದಲ್ಲಿ 33 ಸಚಿವರಿಗೆ ಸ್ಥಾನ ನೀಡಲಾಗಿದೆ.

English summary
Ajit Doval Meets CIA Chief: Why India concerns over the developments in Afghanistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X