ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್‌ಪೋರ್ಟ್‌ಲ್ಲಿ ಪ್ರೆಗ್ನೆನ್ಸಿ ಪರೀಕ್ಷೆ ವರದಿಯಷ್ಟೇ ವೇಗವಾಗಿ ಬರುತ್ತೆ ಕೊರೊನಾ ವರದಿ

|
Google Oneindia Kannada News

ಮಿಲನ್, ಸೆಪ್ಟೆಂಬರ್ 23: ಯುರೋಪಿಯನ್ ವಿಮಾನಯಾನ ಸಂಸ್ಥೆಗಳು ಕೊರೊನಾ ಸೋಂಕಿನ ಪರೀಕ್ಷೆಯ ವರಿದಿಯನ್ನು ಪ್ರೆಗ್ನೆನ್ಸಿ ಪರೀಕ್ಷೆಯ ವರದಿಯಷ್ಟೇ ವೇಗವಾಗಿ ನೀಡುತ್ತಿದೆ. ಸಾಮಾನ್ಯವಾಗಿ ಕೊರೊನಾ ವರದಿ ಬರಲು 48 ತಾಸುಗಳು ಕಾಯಲೇಬೇಕು, ಆದರೆ ವಿಮಾನ ಪ್ರಯಾಣಿಕರಿಗೆ ಮಾತ್ರ ಗಂಟೆಯ ಒಳಗೇ ವರದಿ ಲಭ್ಯವಾಗುತ್ತಿದೆ.

ಈ ವರದಿಯನ್ನು ನಂಬಬೇಕೋ, ಬಿಡಬೇಕೋ ಎಂಬುದು ತಿಳಿಯುತ್ತಿಲ್ಲ, ಒಂದೊಮ್ಮೆ ಈ ವರದಿ ಸರಿಯಾಗಿದ್ದರೆ, ಬೇರೆ ಆಸ್ಪತ್ರೆಗಳಲ್ಲೇಕೆ ಎರಡು ದಿನಗಳವರೆಗೆ ಕಾಯಬೇಕು ಎಂಬುದು ಪ್ರಶ್ನೆಯಾಗಿದೆ. ವಿಮಾನ ಹತ್ತುವ ಮುನ್ನ ಪ್ರಯಾಣಿಕರ ಕೊವಿಡ್ ಪರೀಕ್ಷೆ ಮಾಡಲಾಗುತ್ತಿದ್ದು, ಬೇಗ ಫಲಿತಾಂಶವೂ ಕೈ ಸೇರುತ್ತಿದೆ.

ಇನ್ಮುಂದೆ ಆಂಟಿಜನ್ ಟೆಸ್ಟ್ ಕೂಡ ಲಭ್ಯ

ಇನ್ಮುಂದೆ ಆಂಟಿಜನ್ ಟೆಸ್ಟ್ ಕೂಡ ಲಭ್ಯ

ಜರ್ಮನಿಯ ಲುಫ್ತಾಂಜಾ ಕೂಡ ಸರ್ಕಾರದ ಜೊತೆ ಮಾತುಕತೆ ನಡೆಸುತ್ತಿದ್ದು, ಸ್ವಿಸ್ ಡ್ರಗ್ ಮೇಕರ್ ಜೊತೆ ಸೇರಿ ಆಂಟಿಜನ್ ಪರೀಕ್ಷೆ ಮಾಡುವ ಗುರಿ ಹೊಂದಿದೆ. ಮುಂದಿನ ತಿಂಗಳಿನಿಂದ ಇದು ಲಭ್ಯವಿರಲಿದೆ.

ನೂತನ ಆವಿಷ್ಕಾರ: ಕೊವಿಡ್ 19 ರೋಗವನ್ನು ತಡೆಯಲು ಅಯೋಡಿನ್ ದ್ರಾವಣನೂತನ ಆವಿಷ್ಕಾರ: ಕೊವಿಡ್ 19 ರೋಗವನ್ನು ತಡೆಯಲು ಅಯೋಡಿನ್ ದ್ರಾವಣ

ಆರೋಗ್ಯ ಅಧಿಕಾರಿಗಳಿಂದ ಪರೀಕ್ಷೆ

ಆರೋಗ್ಯ ಅಧಿಕಾರಿಗಳಿಂದ ಪರೀಕ್ಷೆ

ವಿಮಾನ ನಿಲ್ದಾಣಗಳಲ್ಲಿ ಆರೋಗ್ಯ ಅಧಿಕಾರಿಗಳ ತಂಡವು ಕೊರೊನಾ ಪರೀಕ್ಷೆ ನಡೆಸಲಿದೆ. ಈ ಪರೀಕ್ಷೆಯು ಟಿಕೆಟ್ ದರದಲ್ಲಿಯೇ ಅಡಕವಾಗಿರುತ್ತದೆ. ಅವರು ಇದು ಸುರಕ್ಷಿತ ಎಂದು ಸಾಬೀತುಪಡಿಸಿದರೆ, ಈ ಸೌಲಭ್ಯವನ್ನು ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರ್ಗಗಳಿಗೆ ವಿಸ್ತರಿಸಲಾಗುವುದು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ಕೊರೊನಾದಿಂದ ಗುಣಮುಖರಾದವರು ಈ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿಕೊರೊನಾದಿಂದ ಗುಣಮುಖರಾದವರು ಈ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ

15 ನಿಮಿಷಗಳಲ್ಲಿ ವರದಿ ಲಭ್ಯ

15 ನಿಮಿಷಗಳಲ್ಲಿ ವರದಿ ಲಭ್ಯ

ಆಂಟಿಜನ್ ಪರೀಕ್ಷೆಗಳಿಗೆ ಯಂತ್ರಗಳ ಅಗತ್ಯವಿರುವುದಿಲ್ಲ, ಅದು ಪ್ರಗ್ನೆನ್ಸಿ ಪರೀಕ್ಷೆಯಷ್ಟೇ ಬೇಗ ಕೊರೊನಾ ವರದಿಯನ್ನು ನೀಡುತ್ತದೆ.

Recommended Video

ನರೇಂದ್ರ ಮೋದಿ ಸರ್ಕಾರದ ವಿರುದ್ಧ ಆಕ್ರೋಶ | Oneindia Kannada
ಪರೀಕ್ಷೆಗೆ ಅಗತ್ಯವಿರುವುದೇನು?

ಪರೀಕ್ಷೆಗೆ ಅಗತ್ಯವಿರುವುದೇನು?

ಪರೀಕ್ಷೆಗೆ ಮೂಗಿನ ಸ್ವ್ಯಾಬ್‌ಗಳ ಅಗತ್ಯವಿರುತ್ತದೆ. ಮಾಲಿಕ್ಯೂಲರ್ ಅಥವಾ ಪಿಸಿಆರ್ ಪರೀಕ್ಷೆಗಳಂತೆ ನಿಖರವಾಗಿರುವುದಿಲ್ಲ. ವರದಿಯಲ್ಲಿ ನೆಗೆಟಿವ್ ಬಂದರಷ್ಟೇ ವಿಮಾನದಲ್ಲಿ ಪ್ರಯಾಣಿಸಲು ಅವಕಾಶವಿರುತ್ತದೆ. ಆದರೆ ಇಲ್ಲಿಯವರೆಗೂ ಯಾವುದೇ ಕೊರೊನಾ ಪಾಸಿಟಿವ್ ವ್ಯಕ್ತಿ ಪತ್ತೆಯಾಗಿಲ್ಲ. ಡೊಮೆಸ್ಟಿಕ್ ವಿಮಾನಗಳಲ್ಲಿ ಕೂಡ ಶೀಘ್ರ ಆಂಟಿಜನ್ ಟೆಸ್ಟ್ ಆರಂಭಿಸಲಿದ್ದಾರೆ. ಯಾರನ್ನೋ ಕ್ವಾರಂಟೈನ್‌ಗೆ ದೂಡುವ ಬದಲು ಕೊರೊನಾ ಪರೀಕ್ಷೆ ಮಾಡಿಸಿ ಕಳುಹಿಸಿವುದೇ ಉತ್ತಮ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

English summary
European airlines are pinning hopes on pre-flight COVID-19 tests that deliver results as fast as pregnancy tests to help restore passengers' confidence in taking to the skies in confined spaces with shared air.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X