ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2019ರಲ್ಲಿ ವಾಯುಮಾಲಿನ್ಯದಿಂದ 5 ಲಕ್ಷ ನವಜಾತ ಶಿಶುಗಳ ಸಾವು

|
Google Oneindia Kannada News

ನವದೆಹಲಿ, ಅಕ್ಟೋಬರ್ 21: ವಾಯುಮಾಲಿನ್ಯವು 2019ರಲ್ಲಿ 476,000 ನವಜಾತ ಶಿಶುಗಳನ್ನು ಬಲಿಪಡೆದಿದೆ.

ಭಾರತ ಹಾಗೂ ಆಫ್ರಿಕಾವು ಹಾಟ್‌ಸ್ಪಾಟ್‌ಗಳಾಗಿವೆ. ಹೊಸ ಜಾಗತಿಕ ಅಧ್ಯಯನದ ಪ್ರಕಾರ ಸುಮಾರು, ಮೂರನೇ ಎರಡರಷ್ಟು ಸಾವುಗಳು ಅಡುಗೆ ಇಂಧನದಿಂದ ಹೊರಬರುವ ಹಾನಿಕಾರಕ ಹೊಗೆಯಿಂದಾಗಿದೆ ಎಂದು ಹೇಳಿದೆ.

ವಿಮಾನದಲ್ಲಿ ಜನಿಸಿದ ಮಗುವಿಗೆ ಜೀವಮಾನವಿಡೀ ಉಚಿತ ಪ್ರಯಾಣ ಘೋಷಿಸಿದ ಇಂಡಿಗೋವಿಮಾನದಲ್ಲಿ ಜನಿಸಿದ ಮಗುವಿಗೆ ಜೀವಮಾನವಿಡೀ ಉಚಿತ ಪ್ರಯಾಣ ಘೋಷಿಸಿದ ಇಂಡಿಗೋ

ಸ್ಟೇಟ್ ಆಫ್ ಗ್ಲೋಬಲ್ ಏರ್ 2020 ಪ್ರಕಾರ 116,000ಕ್ಕೂ ಹೆಚ್ಚು ಭಾರತೀಯ ಶಿಶುಗಳು ವಾಯುಮಾಲಿನ್ಯದಿಂದ ಸಾವನ್ನಪ್ಪಿವೆ ಮತ್ತು ಆಫ್ರಿಕಾದ ಉಪ ಸಹಾರನ್‌ ಅಲ್ಲಿ 236,000 ಶಿಶುಗಳು ಸಾವನ್ನಪ್ಪಿವೆ.

Air Pollution Killed Almost 5 Lakh Newborns In 2019

ಯುಎಸ್ ಮೂಲದ ಹೆಲ್ತ್ ಎಫೆಕ್ಟ್ಸ್ ಇನ್‌ಸ್ಟಿಟ್ಯೂಟ್ ಮತ್ತು ಇನ್‌ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಮತ್ತು ಮೌಲ್ಯಮಾಪನದ ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಪ್ರಾಜೆಕ್ಟ್ ಈ ಅಧ್ಯಯನ ನಡೆಸಿದೆ.

ಗರ್ಭಾವಸ್ಥೆಯಲ್ಲಿರುವ ತಾಯಂದಿರು ವಾಯುಮಾಲಿನ್ಯ ಎದುರಿಸಿದಾಗ ಹುಟ್ಟುವ ಮಕ್ಕಳ ಮೇಲೂ ಅದು ಪರಿಣಾಮ ಬೀರಲಿದೆ. ಶಿಶುಗಳು ಅವಧಿ ಮುಂಚೆಯೇ ಜನಿಸುವುದು, ಕಡಿಮೆ ತೂಕವಿರುವುದು ಇಂತಹ ಹಲವು ತೊಂದರೆಗಳು ಕೂಡ ಉಂಟಾಗಲಿದೆ.

ಈ ಪರಿಸ್ಥಿತಿ ಈಗಾಗಲೇ ಎರಡೂ ದೇಶಗಳಲ್ಲಿ ಶಿಶುಗಳ ಸಾವಿಗೆ ಕಾರಣವಾಗಿದೆ. ಕಳಪೆ ಗುಣಮಟ್ಟದ ಇಂಧನವನ್ನು ಬಳಕೆ ಮಾಡುವುದರಿಂದಲೂ ಶಿಶುಗಳ ಮೇಲೆ ಪರಿಣಾಮ ಬೀರಬಹುದು.

English summary
Air pollution killed 476,000 newborns in 2019, with the biggest hotspots in India and Sub-Saharan Africa, according to a new global study which said that nearly two-thirds of the deaths came from noxious fumes from cooking fuels.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X