ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರು-ಕುವೈಟ್ ಪ್ರಯಾಣಿಕರೇ ಗಮನಿಸಿ

By Mahesh
|
Google Oneindia Kannada News

Air India Express to discontinue Kuwait - Mangalore service from next year
ಮಂಗಳೂರು, ಡಿ.10: ಇಲ್ಲಿನ ಬಜ್ಪೆ ವಿಮಾನ ನಿಲ್ದಾಣದಿಂದ ಕುವೈಟ್ ಗೆ ನೇರವಾಗಿ ಪ್ರಯಾಣಿಸುತ್ತಿದ್ದ ಮಂದಿಗೆ ಒಂದು ಕಹಿ ಸುದ್ದಿ ಇದೆ. ಕೊಚ್ಚಿ-ಮಂಗಳೂರು-ಕುವೈಟ್ ವಿಮಾನಯಾನ ಸೇವೆಯನ್ನು ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಎಕ್ಸ್ ಪ್ರೆಸ್ ಸ್ಥಗಿತಗೊಳಿಸಲಿದೆ.

ಕರ್ನಾಟಕ ರಾಜ್ಯ ಮಾತ್ರವಲ್ಲದೆ ನೆರೆ ರಾಜ್ಯಗಳಾದ ಕೇರಳ, ಗೋವಾ ಕಡೆ ಹೋಗುತ್ತಿದ್ದ ಕುವೈಟಿಗಳಿಗೂ ಇದರಿಂದ ತೊಂದರೆಯಾಗಲಿದೆ. ಮುಂಬರುವ ವರ್ಷದಿಂದ ವಿಮಾನಯಾನ ಸೇವೆ ಸ್ಥಗಿತಗೊಳಿಸಲು ಏರ್ ಇಂಡಿಯಾ ನಿರ್ಧರಿಸಿದೆ. ಏಪ್ರಿಲ್ 1 ರಿಂದ ಬೇಸಿಗೆ ವೇಳಾಪಟ್ಟಿ ಬದಲಾವಣೆ ಕಾಣುತ್ತಿದ್ದು ಕುವೈಟ್-ಮಂಗಳೂರು-ಕೊಚ್ಚಿ ವಿಮಾನಯಾನ ಸೇವೆಯನ್ನು ಪಟ್ಟಿಯಿಂದ ಹೊರಗಿಡಲಾಗಿದೆ.

ವಿಮಾನಯಾನ ಸೇವೆ ಗುತ್ತಿಗೆ ಆಧಾರದ ಮೇಲೆ ನಡೆಯುತ್ತಿದ್ದು,. ಏರ್ ಇಂಡಿಯಾ ವಿಮಾನಗಳ ಕೊರತೆ ಅನುಭವಿಸುತ್ತಿರುವುದರಿಂದ ಈ ರೀತಿ ಪ್ರಯಾಣಿಕ ವಿರೋಧಿ ನಿಲುವು ತೆಗೆದುಕೊಳ್ಳಬೇಕಿದೆ ಎಂದು ಏರ್ ಇಂಡಿಯಾ ಅಧಿಕಾರಿಯೊಬ್ಬರು ಹೇಳಿದ್ದಾರೆ.

ವಾರಕ್ಕೆ ಮೂರು ಸಲ ಕೊಚ್ಚಿಯಿಂದ ಮಂಗಳೂರು ಮಾರ್ಗವಾಗಿ ಕುವೈಟ್ ಗೆ ವಿಮಾನ ಹಾರಾಟ ಕಾಣುತ್ತಿತ್ತು. ಈಗ ಈ ಸೇವೆ ನಿಂತರೆ ಕ್ಯಾಲಿಕಟ್ ನಿಂದ ಮಾತ್ರ ಕುವೈಟ್ ಕಡೆಗೆ ವಿಮಾನಯಾನ ಸಾಧ್ಯವಿದೆ.

ವಿಜಯ್ ಮಲ್ಯ ಒಡೆತನದ ಕಿಂಗ್ ಫಿಷರ್ ಇನ್ನೂ ಆರ್ಥಿಕ ಬಿಕ್ಕಟ್ಟಿನ ಪಂಜರದಿಂದ ಹೊರ ಬಂದಿಲ್ಲ. ಈ ನಡುವೆ ಏರ್ ಇಂಡಿಯಾ ವಿಮಾನಗಳು ಮತ್ತೆ ಮೇಲಕ್ಕೇರುವಂತೆ ಮಾಡಲು ಸರ್ಕಾರ ಸಹಾಯ ಹಸ್ತ ಚಾಚಿತ್ತು.

ಉನ್ನತ ಮಟ್ಟದ ಕಾರ್ಯದರ್ಶಿಗಲ ಸಭೆಯಲ್ಲಿ ಏರ್ ಇಂಡಿಯಾ ಪುನುರುತ್ಥಾನಕ್ಕೆ ಸುಮಾರು 30,000 ಕೋಟಿ ರು ನೀಡಲು ಮುಂದಾಗಿ ಎರಡು ಮೂರು ವರ್ಷಗಳೇ ಕಳೆದಿದೆ. ಈ ಬೇಲ್ ಔಟ್ ಯೋಜನೆಗೆ ಹಲವರ ವಿರೋಧ ವ್ಯಕ್ತವಾಗಿದೆ. ಏರ್ ಲೈನ್ ಗೆ ಸಹಾಯ ಹಸ್ತ ಚಾಚುವ ಮೂಲಕ ಖಾಸಗಿಯವರಿಗೆ ತನ್ನ ಷೇರುಗಳನ್ನು ಮಾರಾಟ ಮಾಡುವುದೇ ಸರ್ಕಾರದ ಉದ್ದೇಶ ಎನ್ನಲಾಗುತ್ತಿದೆ ಎಂಬ ಕೂಗಿದೆ.

English summary
India’s state-owned Air India Express, is withdrawing its Kuwait-Mangalore - Kochi service from its schedule starting from February 15. The same schedule is withdrawn from its summer schedule starting from April 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X