ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೊಂದು ವಿಮಾನ ದುರಂತ, 116 ಜನ ಸಾವು?

By Mahesh
|
Google Oneindia Kannada News

ಅಲ್ಜೀರಿಯಾ, ಜು.24: ಸುಮಾರು 110 ಜನ ಪ್ರಯಾಣಿಕರನ್ನು ಹೊತ್ತಿದ್ದ ಅಲ್ಜೀರಿಯಾದ ಏರ್ ಅಲ್ಜೀರಿ ಏರ್ ಕ್ರಾಫ್ಟ್ ಕಣ್ಮರೆಯಾಗಿದ್ದು, ಅಧಿಕೃತವಾಗಿ ನಾಪತ್ತೆಯಾಗಿರುವ ಸುದ್ದಿ ಬಂದಿದೆ. ವಿಮಾನ ಪತನವಾಗಿದ್ದು 116 ಮಂದಿ ಸಾವನ್ನಪ್ಪಿದ್ದಾರೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ.

ಅಲ್ಜೀರಿಯಾದ ಬುಕಿನಾ ಫಾಸೊದ ಔಗಡೌಗೊನಿಂಅ ಅಲ್ಜೀರಿಸ್ ಗೆ ತೆರಳುತ್ತಿದ್ದ ವಿಮಾನ ತನ್ನ ಪ್ರಯಾಣ ಆರಂಭಿಸಿದ 50 ನಿಮಿಷಗಳ ನಂತರ ಸಂಪರ್ಕ ಕಳೆದುಕೊಂಡಿದೆ. AH5017 ವಿಮಾನದಲ್ಲಿ 110 ಜನ ಪ್ರಯಾಣಿಕರು 6 ಸಿಬ್ಬಂದಿಗಳಿದ್ದರು ಎಂದು ತಿಳಿದು ಬಂದಿದೆ.

Air Algerie flight #AH5017 crashed: China's CCTV; 110 people, 6 crew members on board

ಮಲೇಷಿಯನ್ ಏರ್ ಲೈನ್ಸ್ ನ ಎಂಎಚ್ 370 ವಿಮಾನ ನಾಪತ್ತೆ ಪ್ರಕರಣದ ಬೆನ್ನಲ್ಲೇ ಎಂಎಚ್ 17 ದುರಂತ ಕಂಡು ವಿಶ್ವವೇ ಬೆಚ್ಚಿತ್ತು. ಇತ್ತೀಚೆಗೆ ತೈವಾನ್ ನಲ್ಲಿ ವಿಮಾನ ದುರಂತ ಸಂಭವಿಸಿ 50ಕ್ಕೂ ಹೆಚ್ಚು ಪ್ರಯಾಣಿಕರು ಸಾವಿಗೀಡಾಗಿದ್ದರು.

ಬುರ್ಕಿನಾಫಾಸೊದ ಉವಾಗೊಡೊವ್‌ನಿಂದ ಅಲ್ಜೀರ್ಸ್‌ಗೆ ಪ್ರಯಾಣ ಬೆಳೆಸಿದ್ದ 116 ಮಂದಿಯನ್ನು ಹೊತ್ತಿದ್ದ ವಿಮಾನವು ಯಾನ ಪ್ರಾರಂಭಿಸಿ 50 ನಿಮಿಷಗಳಲ್ಲಿ ಪತನಗೊಂಡಿದೆ ಎಂದು ಅಲ್ಜೀರಿಯದ ವಿಮಾನಯಾನ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.

ಪ್ರಬಲ ಚಂಡಮಾರುತವಿದ್ದ ಪ್ರದೇಶದಲ್ಲಿ ವಿಮಾನ ಸಂಚರಿಸುತ್ತಿತ್ತು ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. 2012ರಲ್ಲಿ ಬಂಡುಕೋರ ಗುಂಪುಗಳು ಹಲವು ತಿಂಗಳುಗಳ ಕಾಲ ವಶದಲ್ಲಿರಿಸಿದ್ದ ಹಾಗೂ ಈಗಲೂ ಪ್ರಕ್ಷುಬ್ಧತೆ ನೆಲೆಸಿರುವ ಉತ್ತರ ಮಾಲಿಯ ಗಾವೊದಲ್ಲಿ ಎಂಡಿ-83 ವಿಮಾನವು ಸಂಪರ್ಕ ಕಳೆದುಕೊಂಡಿರುವುದಾಗಿ ಮಾಲಿಯ ಮೂಲವೊಂದು ತಿಳಿಸಿದೆ.

ವಿಮಾನದಲ್ಲಿ 51 ಫ್ರೆಂಚ್, 27 ಮಂದಿ ಬುರ್ಕಿನಾಫಾಸೊ ಪ್ರಜೆಗಳು, 8 ಮಂದಿ ಲೆಬನಾನ್ ನಾಗರಿಕರು, ಅಲ್ಜೀರಿಯದ 6 ಮಂದಿ, ಐವರು ಕೆನಡಿಯನ್ನರು, ನಾಲ್ವರು ಜರ್ಮನ್ನರು, ಲಕ್ಸಂಬರ್ಗ್‌ನ ಇಬ್ಬರು, ಸ್ವಿಸ್, ಬೆಲ್ಜಿಯಂ, ಈಜಿಪ್ಟ್, ಯುಕ್ರೇನ್, ನೈಜೀರಿಯ, ಕ್ಯಾಮರೂನ್ ಹಾಗೂ ಮಾಲಿಯ ತಲಾ ಓರ್ವರು ಹಾಗೂ ಸ್ಪೇನ್‌ನ 6 ಮಂದಿ ವಿಮಾನದಲ್ಲಿದ್ದರೆಂದು ಅಲ್ಜೀರಿಯದ ವಿಮಾನಯಾನ ಅಧಿಕಾರಿ ತಿಳಿಸಿದ್ದಾರೆ.

English summary
Air Algerie flight #AH5017 crashed: China's CCTV; 110 people, 6 crew members on board. A passenger plane carrying 116 people is feared to have crashed on a flight from Burkina Faso to the Algerian capital Algiers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X