ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್‌ನಲ್ಲಿ ವಿಪಕ್ಷಗಳ ಯಾರ್ಕರ್: ಪತನದತ್ತ ಇಮ್ರಾನ್ ಖಾನ್ ಸರಕಾರ?

|
Google Oneindia Kannada News

ಪೂರ್ಣ ಬಹುಮತವಿಲ್ಲದಿದ್ದರೂ, ಇತರ ಪಕ್ಷಗಳ ಬೆಂಬಲದೊಂದಿಗೆ ಸರಕಾರ ರಚಿಸಿದ್ದ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹರಿಕ್ ಇನ್ಸಾಫ್ (ಪಿಟಿಐ) ಸರಕಾರ, ಈಗ ಬದಲಾದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಸಂಕಷ್ಟದಲ್ಲಿದೆ. ಪಾಕಿಸ್ತಾನದ ಸೇನೆಯ ದಿವ್ಯ ಮೌನ ಕುತೂಹಲಕ್ಕೆ ಕಾರಣವಾಗಿದೆ.

ಪಾಕಿಸ್ತಾನದ ಪ್ರಮುಖ ವಿರೋಧ ಪಕ್ಷಗಳು ಇಮ್ರಾನ್ ಖಾನ್ ಸರಕಾರದ ವಿರುದ್ದ ಅವಿಶ್ವಾಸ ಗೊತ್ತುವಳಿ ಮಂಡಿಸಲು ಮುಂದಾಗಿದೆ. ಇಮ್ರಾನ್ ಖಾನ್ ಸರಕಾರವನ್ನು ಬೆಂಬಲಿಸುತ್ತಿದ್ದ ಪಕ್ಷಗಳೇ ಇಮ್ರಾನ್ ವಿರುದ್ದ ತಿರುಗಿಬಿದ್ದಿರುವುದರಿಂದ ಸರಕಾರ ಪತನದಂಚಿಗೆ ಹೋಗುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಭಾರತದ ಮಾಧ್ಯಮಗಳ ಬಗ್ಗೆ ಪಾಕ್ ಪ್ರಧಾನಿಗೆ ಶಶಿ ತರೂರ್ ಕಿವಿಮಾತುಭಾರತದ ಮಾಧ್ಯಮಗಳ ಬಗ್ಗೆ ಪಾಕ್ ಪ್ರಧಾನಿಗೆ ಶಶಿ ತರೂರ್ ಕಿವಿಮಾತು

ಮಿತ್ರ ಪಕ್ಷಗಳ ಜೊತೆಗೆ ಸ್ವಪಕ್ಷೀಯ ಜನ ಪ್ರತಿನಿಧಿಗಳೇ ಇಮ್ರಾನ್ ವಿರುದ್ದದ ಬಣದಲ್ಲಿ ಗುರುತಿಸಿಕೊಂಡಿರುವುದು ಸರಕಾರಕ್ಕೆ ನುಂಗಲಾರದ ತುತ್ತಾಗುತ್ತಿದೆ. ಈ ಮುಖಂಡರ ವಿರುದ್ದ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎನ್ನುವ ಕೂಗು ಜೋರಾಗಿದೆ.

ಪಾಕಿಸ್ತಾನದ ರಾಜಕೀಯ ಇತಿಹಾಸದಲ್ಲಿ ಸೇನೆಯ ಪಾತ್ರ ಬಹು ಮುಖ್ಯ, ಆದರೆ ಈಗ ಅಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳ ವಿಚಾರದಲ್ಲಿ ಸೇನೆಯು ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದರಿಂದ ಇಮ್ರಾನ್ ಸರಕಾರ ಗೊಂದಲದಲ್ಲಿದೆ. ಸರಕಾರಕ್ಕೆ ಬಹುಮತದ ಕೊರತೆ!

ಕ್ಷಿಪಣಿ ಉಡಾವಣೆ: ಭಾರತ-ಪಾಕಿಸ್ತಾನ ಮಾತುಕತೆಗೆ ಚೀನಾ ಬ್ಯಾಟಿಂಗ್ಕ್ಷಿಪಣಿ ಉಡಾವಣೆ: ಭಾರತ-ಪಾಕಿಸ್ತಾನ ಮಾತುಕತೆಗೆ ಚೀನಾ ಬ್ಯಾಟಿಂಗ್

 ಇಮ್ರಾನ್ ಖಾನ್ ಅಧಿಕಾರದಲ್ಲಿ ಉಳಿಯಬಹುದೇ ಎನ್ನುವ ಅನಿಶ್ಚಿತತೆ

ಇಮ್ರಾನ್ ಖಾನ್ ಅಧಿಕಾರದಲ್ಲಿ ಉಳಿಯಬಹುದೇ ಎನ್ನುವ ಅನಿಶ್ಚಿತತೆ

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಆಡಳಿತ ಪಕ್ಷದ ಹಲವಾರು ಜನ ಪ್ರತಿನಿಧಿಗಳು ಗುರುವಾರ (ಮಾರ್ಚ್ 17) ಅವಿಶ್ವಾಸ ಮತಕ್ಕೆ ಮುಂಚಿತವಾಗಿ ಸರಕಾರಕ್ಕೆ ತಮ್ಮ ಬೆಂಬಲವನ್ನು ಹಿಂತೆಗೆದುಕೊಂಡಿದ್ದಾರೆ. ಇದರಿಂದಾಗಿ, ಇಮ್ರಾನ್ ಖಾನ್ ಅಧಿಕಾರದಲ್ಲಿ ಉಳಿಯಬಹುದೇ ಎನ್ನುವ ಅನಿಶ್ಚಿತತೆ ಎದುರಾಗಿದೆ. ಇಮ್ರಾನ್ ಸರಕಾರ ತನ್ನ ಪಾಲುದಾರರನ್ನು ಕಳೆದುಕೊಳ್ಳುವ ಅಪಾಯದಲ್ಲಿದೆ ಎಂದು ಪ್ರಮುಖ ಮುಖಂಡರೊಬ್ಬರ ಹೇಳಿಕೆಯ ಒಂದು ದಿನದ ನಂತರ ಈ ಬೆಳವಣಿಗೆಗಳು ನಡೆಯುತ್ತಿವೆ.

 ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ಉದಾಹರಣೆಗಳು ಕಮ್ಮಿ

ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ಉದಾಹರಣೆಗಳು ಕಮ್ಮಿ

"ಇಮ್ರಾನ್ ಖಾನ್ ದೇಶ, ಆರ್ಥಿಕತೆ ಮತ್ತು ವಿದೇಶಾಂಗ ನೀತಿಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ" ಎಂದು ಭಿನ್ನಮತೀಯ ಬಣದ ನಾಯಕ ರಾಜಾ ರಿಯಾಜ್ ಹೇಳಿದ್ದಾರೆ. ಪಾಕಿಸ್ತಾನದ ರಾಜಕೀಯವನ್ನು ಅವಲೋಕಿಸಿದಾಗ, ಪಾಕಿಸ್ತಾನದ ಯಾವೊಬ್ಬ ಪ್ರಧಾನಿಯೂ ತನ್ನ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ಉದಾಹರಣೆಗಳು ಕಮ್ಮಿ. ಈ ಪಟ್ಟಿಯಲ್ಲಿ ಇಮ್ರಾನ್ ಖಾನ್ ಅವರ ಹೆಸರು ಕೂಡಾ ಸೇರಲಿದೆ ಎಂದು ಹೇಳಲಾಗುತ್ತಿದೆ.

 ನಮಗೆ ಸರಕಾರದ ಕಡೆಯಿಂದ ಬೆದರಿಕೆಯಿದೆ ಎನ್ನುವ ದೂರು

ನಮಗೆ ಸರಕಾರದ ಕಡೆಯಿಂದ ಬೆದರಿಕೆಯಿದೆ ಎನ್ನುವ ದೂರು

ಸರಕಾರದ ಪಾಲುದಾರ ಪಕ್ಷದ 24 ಸಂಸದರು ತಿರುಬಿದ್ದಿರುವ ತಾಜಾ ಬೆಳವಣಿಗಳು ಇಮ್ರಾನ್ ಖಾನ್ ಸರಕಾರಕ್ಕೆ ಮುಳುವಾಗುವ ಸಾಧ್ಯತೆ ದಟ್ಟವಾಗಿದೆ. ಇಮ್ರಾನ್ ಸರಕಾರದ ವಿರುದ್ದ ನಾವು ಮತ ಚಲಾಯಿಸಲಿದ್ದೇವೆ ಎಂದು ಈ ನಾಯಕರು ಬಹಿರಂಗವಾಗಿಯೇ ಹೇಳಿಕೆಯನ್ನು ನೀಡಿದ್ದಾರೆ. ಈ ಗುಂಪಿನ ಸದಸ್ಯರು ಸಿಂಧ್ ಪ್ರಾಂತ್ಯದ ಹೌಸ್ ಒಂದರಲ್ಲಿ ವಾಸ್ತವ್ಯವನ್ನು ಹೂಡಿದ್ದಾರೆ. ಇದು ಪಾಕಿಸ್ತಾನ ಸರಕಾರದ ಆಸ್ತಿಯಾಗಿದ್ದು, ನಮಗೆ ಸರಕಾರದ ಕಡೆಯಿಂದ ಬೆದರಿಕೆಯಿದೆ ಎನ್ನುವ ದೂರುಗಳನ್ನು ಬಂಡಾಯ ನಾಯಕರು ನೀಡುತ್ತಿದ್ದಾರೆ.

 ಮಾರ್ಚ್ 21ರಂದು ಅವಿಶ್ವಾಸ ಗೊತ್ತುವಳಿ, ಮಾರ್ಚ್ 28ಕ್ಕೆ ಮತಕ್ಕೆ ಹೋಗುವ ಸಾಧ್ಯತೆ

ಮಾರ್ಚ್ 21ರಂದು ಅವಿಶ್ವಾಸ ಗೊತ್ತುವಳಿ, ಮಾರ್ಚ್ 28ಕ್ಕೆ ಮತಕ್ಕೆ ಹೋಗುವ ಸಾಧ್ಯತೆ

ಇವೆಲ್ಲದರ ನಡುವೆ ಇಮ್ರಾನ್ ಖಾನ್ ಬಲಪ್ರದರ್ಶನಕ್ಕೆ ಮುಂದಾಗಿದ್ದು ಮಾರ್ಚ್ 27ರಂದು ಇಸ್ಲಾಮಾಬಾದ್ ನಲ್ಲಿ ಬೃಹತ್ ಸಭೆ ನಡೆಸಲು ನಿಶ್ಚಿಯಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಮಾರ್ಚ್ 25ರಂದು ಸಂಸತ್ತಿನ ಆವರಣದಲ್ಲಿ ವಿಪಕ್ಷಗಳು ಸಾರ್ವಜನಿಕ ಸಭೆ ನಡೆಸಲು ಮುಂದಾಗಿವೆ. ಮಿತ್ರಪಕ್ಷಗಳಿಲ್ಲದೇ ಇಮ್ರಾನ್ ಪಕ್ಷ 155 ಸ್ಥಾನಗಳನ್ನು ಹೊಂದಿದೆ ಮತ್ತು ಅಧಿಕಾರವನ್ನು ಉಳಿಸಿಕೊಳ್ಳಲು ಇನ್ನೂ 172 ಸ್ಥಾನಗಳ ಅವಶ್ಯಕತೆಯಿದೆ. ಮಾರ್ಚ್ 21ರಂದು ಅವಿಶ್ವಾಸ ಗೊತ್ತುವಳಿ ಮಂಡಿಸಿ, ಮಾರ್ಚ್ 28ಕ್ಕೆ ಮತಕ್ಕೆ ಹೋಗುವ ಸಾಧ್ಯತೆಯಿದೆ.

ಜಂಟಿ ವಿರೋಧ ಪಕ್ಷದಲ್ಲಿ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಮತ್ತು ಮಾಜಿ ಪ್ರಧಾನಿಗಳಾದ ನವಾಜ್ ಷರೀಫ್, ಬೇನಜಿರ್ ಭುಟ್ಟೋ ಅವರ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ನಂತಹ ಪ್ರಮುಖ ಪಕ್ಷಗಳನ್ನು ಒಳಗೊಂಡಿದೆ ಮತ್ತು ಸುಮಾರು 163 ಬಲವನ್ನು ಹೊಂದಿದೆ.

English summary
Trouble mounts for Pakistan PM Imran Khan as several MPs defect ahead of no-confidence vote.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X