ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏನೇ ಆದರೂ ನಾನು ರಾಜೀನಾಮೆ ನೀಡಲ್ಲ ಎಂದ ಪಾಕ್‌ ಪ್ರಧಾನಿ ಇಮ್ರಾನ್‌

|
Google Oneindia Kannada News

ಇಸ್ಲಾಮಾಬಾದ್‌, ಏಪ್ರಿಲ್‌ 01: ಪಾಕಿಸ್ತಾನದ ಸಂಸತ್ತಿನಲ್ಲಿ ಏಪ್ರಿಲ್‌ 3ರಂದು ಅವಿಶ್ವಾಸ ಮಂಡನೆ ಆಗಲಿದೆ. ಆದರೆ ಈ ನಡುವೆ ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್‌ ಖಾನ್‌, "ನಾನು ಏನೇ ಆದರೂ ರಾಜೀನಾಮೆ ನೀಡಲ್ಲ," ಎಂದು ಪಟ್ಟು ಹಿಡಿದು ಕೂತಿದ್ದಾರೆ. ಹಾಗೆಯೇ ಪ್ರತಿಪಕ್ಷಗಳು 'ಪಾಕಿಸ್ತಾನವನ್ನು ಮಾರಾಟ ಮಾಡುತ್ತಿವೆ' ಎಂದು ಆರೋಪಿಸಿದರು.

"ಕೊನೆಯವರೆಗೂ ಹೋರಾಟ ನಡೆಸುತ್ತೇನೆ. ಅದಕ್ಕೂ ಮುನ್ನವೇ ರಾಜೀನಾಮೆ ನೀಡಿ ಹೋರಾಟದಿಂದ ಹಿಂದೆ ಸರಿಯುವ ಮಾತಿಲ್ಲ. ನನ್ನ ಸರ್ಕಾರವನ್ನು ಉರುಳಿಸಲು ವಿದೇಶಿ ಪಿತೂರಿಗಳು ನಡೆಯುತ್ತಿದೆ," ಎಂದು ಆರೋಪ ಮಾಡಿದ್ದಾರೆ. "ಕ್ರಿಕೆಟಿಗನಾಗಿದ್ದರೂ ನಾನು ಯಾವಾಗಲೂ ಕೊನೆಯ ಎಸೆತದವರೆಗೂ ಆಡಿದ್ದೇನೆ. ಮತ್ತು ನಾನು ಈಗಲೂ ಅದನ್ನೇ ಮಾಡುತ್ತೇನೆ," ಎಂದು ತಿಳಿಸಿದ್ದಾರೆ.

 'ಬಹುಮತ ಕಳೆದುಕೊಂಡ ಇಮ್ರಾನ್, ಶರೀಫ್‌ ಶೀಘ್ರ ಪಾಕ್‌ ಪ್ರಧಾನಿ' ಎಂದ ಪಿಪಿಪಿ ಅಧ್ಯಕ್ಷ 'ಬಹುಮತ ಕಳೆದುಕೊಂಡ ಇಮ್ರಾನ್, ಶರೀಫ್‌ ಶೀಘ್ರ ಪಾಕ್‌ ಪ್ರಧಾನಿ' ಎಂದ ಪಿಪಿಪಿ ಅಧ್ಯಕ್ಷ

ಪ್ರಮುಖ ಮಿತ್ರರಾಷ್ಟ್ರಗಳ ಪಕ್ಷಾಂತರದಿಂದ ಸಂಸತ್ತಿನಲ್ಲಿ ಸರ್ಕಾರದ ಬಲ ಕಡಿಮೆಯಾದರೂ, ಪಾಕಿಸ್ತಾನದ ಭವಿಷ್ಯವನ್ನು ಭಾನುವಾರ ನಿರ್ಧರಿಸಲಾಗುವುದು ಎಂದು ಇಮ್ರಾನ್ ಖಾನ್ ಪ್ರತಿಪಾದಿಸಿದರು. "ನನ್ನ ದೇಶವು ತಮ್ಮ ಆತ್ಮಸಾಕ್ಷಿಯನ್ನು (ವಿಧಾನಸಭೆಯಲ್ಲಿ) ಮಾರಿಕೊಳ್ಳುವವರ ಮುಖವನ್ನು ನೋಡಬೇಕೆಂದು ನಾನು ಬಯಸುತ್ತೇನೆ," ಎಂದು ಹೇಳಿದರು. ಸದಸ್ಯರ ಬೆಂಬಲವನ್ನು ಪ್ರತಿಪಕ್ಷಗಳು ಖರೀದಿಸುತ್ತಿವೆ ಎಂದು ಆರೋಪಿಸಿದರು. "ಈ ನಾಟಕವು ದೇಶದ ಮುಂದೆ ಮ್ಯಾರಿಯಟ್ ಮತ್ತು ಸಿಂಧ್ ಹೌಸ್‌ನಲ್ಲಿ ನಡೆಯುತ್ತಿದೆ," ಎಂದರು.

Ahead of April 3 No-trust Vote Imran Khan Says Wont resign

ಸರ್ಕಾರದ ವಿರುದ್ಧ ವಿದೇಶಿ ಪಿತೂರಿ ಎಂದ ಇಮ್ರಾನ್‌ ಖಾನ್‌

69 ವರ್ಷದ ಪಾಕಿಸ್ತಾನಿ ಪ್ರಧಾನಿ, ಅವಿಶ್ವಾಸ ನಿರ್ಣಯವನ್ನು ತಮ್ಮ ಮತ್ತು ಅವರ ಸರ್ಕಾರದ ವಿರುದ್ಧ "ವಿದೇಶಿ ಪಿತೂರಿ" ಎಂದು ನಿರಂತರವಾಗಿ ಹೇಳುತ್ತಾ ಬಂದಿದ್ದಾರೆ. " ಅತ್ಯಂತ ಗೊಂದಲದ ಸಂಗತಿಯೆಂದರೆ ಇಲ್ಲಿ ಕುಳಿತಿರುವ ನಮ್ಮ ಜನರು ವಿದೇಶಿ ಶಕ್ತಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ," ಎಂದು ಮತ್ತೆ ಆರೋಪ ಮಾಡಿದ್ದಾರೆ. ಅವರು "ಮೂರು ಗೂಂಡಾಗಳು" ಎಂದು ಉಲ್ಲೇಖಿಸಿದ್ದಾರೆ. ಪಿಎಂಎಲ್ (ಎನ್) ಅಧ್ಯಕ್ಷ, ವಿರೋಧ ಪಕ್ಷದ ನಾಯಕ ಶೆಹಬಾಜ್ ಷರೀಫ್, ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಸಹ-ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮತ್ತು ಜಮಿಯತ್ ಉಲೇಮಾ-ಎ-ಇಸ್ಲಾಂ ಮುಖ್ಯಸ್ಥ ಮೌಲಾನಾ ಫಜ್ಲುರ್ ರೆಹಮಾನ್ ಅನ್ನು ಉಲ್ಲೇಖ ಮಾಡಿ ಈ ಆರೋಪ ಮಾಡಿದ್ದಾರೆ. "ಇಂತಹ ಭ್ರಷ್ಟರು ತಮ್ಮ ದೇಶಗಳಲ್ಲಿ ಅಧಿಕಾರದಲ್ಲಿ ಇರಬೇಕೆಂದು ವಿದೇಶಗಳು ಬಯಸುತ್ತವೆಯೇ?," ಎಂದು ಪ್ರಧಾನಿ ಯುಎಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿದೇಶದಿಂದ ಪತ್ರ ಬಂದಿದೆ ಎಂದು ಕೂಡಾ ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ಬಹುಮತ ಕಳೆದುಕೊಂಡ ಇಮ್ರಾನ್ ಖಾನ್: ರಾಜೀನಾಮೆಗೆ ಒತ್ತಾಯಪಾಕಿಸ್ತಾನದಲ್ಲಿ ಬಹುಮತ ಕಳೆದುಕೊಂಡ ಇಮ್ರಾನ್ ಖಾನ್: ರಾಜೀನಾಮೆಗೆ ಒತ್ತಾಯ

ಆರೋಪ ತಳ್ಳಿಹಾಕಿದ ಪಾಕಿಸ್ತಾನ

ಅವಿಶ್ವಾಸ ಗೊತ್ತುವಳಿಯಲ್ಲಿ ಭಾಗಿಯಾಗಿರುವ ಆರೋಪಗಳನ್ನು ತಳ್ಳಿಹಾಕಿರುವ ಅಮೆರಿಕದ ವಿದೇಶಾಂಗ ಇಲಾಖೆಯು, ದೇಶದ ಪ್ರಸ್ತುತ ರಾಜಕೀಯ ಪರಿಸ್ಥಿತಿಯ ಕುರಿತು ಪಾಕಿಸ್ತಾನಕ್ಕೆ ಯಾವುದೇ ಪತ್ರವನ್ನು ಕಳುಹಿಸಿಲ್ಲ ಎಂದು ಬುಧವಾರ ಪ್ರತಿಪಾದಿಸಿದೆ.

ಇನ್ನು ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್‌ ಖಾನ್‌ ಸುಮಾರು 40 ನಿಮಿಷಗಳ ಕಾಲ ಭಾಷಣವನ್ನು ಮಾಡಿದ್ದಾರೆ. ಈ ಭಾಷಣದಲ್ಲಿ "ನಾನು ಮೂರರಿಂದ ಮೂರೂವರೆ ವರ್ಷಗಳ ಕಾಲ ಅಧಿಕಾರದಲ್ಲಿದ್ದೇನೆ ಆದರೆ ನೀವು (ಪ್ರತಿಪಕ್ಷಗಳು) ಆಡಳಿತ ನಡೆಸಿದ್ದೀರಿ. 30 ವರ್ಷಗಳಿಗೂ ಹೆಚ್ಚು ಕಾಲ ದೇಶದಲ್ಲಿ ಆಡಳಿತ ನಡೆಸಿದ್ದೀರಿ," ಎಂದರು.

Recommended Video

ಮರಳಿ ಫಾರ್ಮ್ ಗೆ ಬಂದ ರಾಬಿನ್ ಉತ್ತಪ್ಪ! | Oneindia Kannada

ಇನ್ನು ಇದಕ್ಕೂ ಮುನ್ನ "ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್‌ ಖಾನ್‌ ಈಗ ಪಾಕಿಸ್ತಾನ ವಿಧಾನಸಭೆಯಲ್ಲಿ ಬಹುಮತವನ್ನು ಕಳೆದುಕೊಂಡಿದ್ದಾರೆ ಹಾಗೂ ವಿರೋಧ ಪಕ್ಷದ ನಾಯಕ ಶಹಬಾಜ್ ಷರೀಫ್ ಅವರು ಶೀಘ್ರದಲ್ಲೇ ಪ್ರಧಾನಿಯಾಗಲಿದ್ದಾರೆ," ಎಂದು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ಹೇಳಿದ್ದಾರೆ.

English summary
Won't resign, says Imran Khan ahead of April 3 vote; accuses opposition of 'selling out Pakistan'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X