• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಷಿಕಾಗೋದಲ್ಲಿ ರಾಜನ್ ಕಾರ್ಪೊರೇಟ್ ಫೈನಾನ್ಸ್ ಪಾಠ ಮಾಡ್ತಾರೆ

|

ನ್ಯೂಯಾರ್ಕ್, ಸೆಪ್ಟೆಂಬರ್ 19: ಷಿಕಾಗೋದ ಬೂತ್ ಸ್ಕೂಲ್ ಆಫ್ ಬಿಜಿನೆಸ್ ನಲ್ಲಿ ಮುಂದಿನ ವರ್ಷದಿಂದ ಆರ್ ಬಿಐ ಮಾಜಿ ಗೌರ್ನರ್ ರಘುರಾಂ ರಾಜನ್ ಇಂಟರ್ ನ್ಯಾಷನಲ್ ಕಾರ್ಪೋರೇಟ್ ಫೈನಾನ್ಸ್ ಪಾಠ ಮಾಡಲಿದ್ದಾರೆ. ಕಾರ್ಪೋರೇಟ್ ಫೈನಾನ್ಸ್ ಹಾಗೂ ಬಂಡವಾಳ ಹೂಡಿಕೆ ಸವಾಲುಗಳು ಬಗ್ಗೆ ಈ ಕೋರ್ಸ್ ತಿಳಿಸಿಕೊಡುತ್ತದೆ.

'ರಾಕ್ ಸ್ಟಾರ್ ಸೆಂಟ್ರಲ್ ಬ್ಯಾಂಕರ್' ಅಂತಲೇ ಕರೆಸಿಕೊಂಡಿದ್ದ ರಘುರಾಂ ರಾಜನ್ 2013ರ ಸೆಪ್ಟೆಂಬರ್ ನಲ್ಲಿ ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾದ ಗೌರ್ನರ್ ಆಗಿ ಅಧಿಕಾರ ಸ್ವೀಕರಿಸಿದ್ದರು. ಅವರ ಅಭಿಪ್ರಾಯ ಹಾಗೂ ದೃಷ್ಟಿಕೋನ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಇದೀಗ ಅಧಿಕಾರಾವಧಿ ಪೂರ್ಣಗೊಳಿಸಿದ್ದು, ಉಪನ್ಯಾಸ ವೃತ್ತಿಗೆ ಮರಳಿದ್ದಾರೆ.[ರಿಸರ್ವ್ ಬ್ಯಾಂಕ್‌ಗೆ ಹೊಸ ಸಾರಥಿ ಉರ್ಜಿತ್ ಪಟೇಲ್]

1991ರಲ್ಲಿ ಷಿಕಾಗೋ ವಿಶ್ವವಿದ್ಯಾಲಯ ಸೇರಿದ್ದ ರಘುರಾಂ ರಾಜನ್, ಕಳೆದ ಮೂರು ವರ್ಷ "ರಜೆ"ಯಲ್ಲಿದ್ದರು. ರಾಜನ್ ಅವರ ಅಭಿಪ್ರಾಯಗಳು ಹಲವು ಸಂದರ್ಭದಲ್ಲಿ ವಿವಾದಕ್ಕೆ ಕಾರಣವಾದವು. ಅದರಲ್ಲೂ ಮೋದಿ ಸರಕಾರದ ನಿರ್ಧಾರಗಳನ್ನು ವಿಮರ್ಶಿಸುವಂತಿದ್ದವು. ಸ್ವಲ್ಪ ಕಾಲದ ನಂತರ ಉಪನ್ಯಾಸ ನೀಡುವುದಕ್ಕೆ, ಸಾರ್ವಜನಿಕ ಸಮಾರಂಭಗಳಿಗಾಗಿ ಭಾರತಕ್ಕೆ ಬರುತ್ತೇನೆ ಎಂದು ರಾಜನ್ ಹೇಳಿದ್ದಾರೆ.

ರಘುರಾಂ ರಾಜನ್ ಅವರ ಆಸಕ್ತಿ ವಿಷಯಗಳಲ್ಲಿ ಟೆನಿಸ್, ಸ್ಕ್ವಾಶ್ ಹಾಗೂ ಇತಿಹಾಸದ ಜತೆಗೆ ಭಾರತೀಯ ರಾಜಕೀಯ ಸಹ ಇದೆ ಎಂದು ಷಿಕಾಗೋ ವಿ.ವಿ.ಯಲ್ಲಿ ಹಾಕಲಾಗಿದೆ. ರಾಜನ್ ಅವರು ಎರಡು ಪುಸ್ತಕಗಳನ್ನು ಸಹ ಬರೆಯಲಿದ್ದಾರೆ ಎಂದು ಷಿಕಾಗೋ ಬೂತ್ ಸ್ಕೂಲ್ ತಿಳಿಸಿದೆ. 2003ರಿಂದ 2006ರವರೆಗೆ ರಘುರಾಂ ರಾಜನ್ ಐಎಂಎಫ್ ನಲ್ಲಿ ಸಹ ಕಾರ್ಯ ನಿರ್ವಹಿಸಿದ್ದರು.[RBIನಲ್ಲಿ ರಾಕ್ ಸ್ಟಾರ್ ರಘುರಾಂ ರಾಜನ್ ಶಕೆ ಮುಕ್ತಾಯ: ಟಾಪ್ 10ಹೇಳಿಕೆಗಳು]

2008ರ ವಿಶ್ವ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ರಾಜನ್ ಮುಂಚೆಯೇ ತಿಳಿಸಿದ್ದರು ಎಂಬುದು ಅವರ ಹೆಚ್ಚುಗಾರಿಕೆ. ಅಮೆರಿಕನ್ ಫೈನಾನ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿಯೂ 2011ರಲ್ಲಿ ರಾಜನ್ ಕಾರ್ಯ ನಿರ್ವಹಿಸಿದ್ದರು. ಸದ್ಯಕ್ಕೆ ಅಮೆರಿಕನ್ ಅಕಾಡೆಮಿ ಆಫ್ ಆರ್ಟ್ಸ್ ಅಂಡ್ ಸೈನ್ಸಸ್ ನ ಸದಸ್ಯರಾಗಿದ್ದಾರೆ.

English summary
Former Resrve Bank of India Governor Raghuram Rajan has resumed his role as 'Professor of Finance' at the University of Chicago Booth School of Business. He would teach international corporate finance there in 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more