ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನ್‌ನಲ್ಲಿ ತಾಲಿಬಾನಿಗಳು ಅಧಿಕಾರಕ್ಕೆ ಬಂದಾಗಿನಿಂದ ಶೇ.50ರಷ್ಟು ಶಿಕ್ಷಣ ಕೇಂದ್ರಗಳು ಬಂದ್

|
Google Oneindia Kannada News

ಕಾಬೂಲ್, ನವೆಂಬರ್ 30: ಅಫ್ಘಾನಿಸ್ತಾನವು ತಾಲಿಬಾನಿಗಳ ವಶವಾದ ಬಳಿಕ ದೇಶದಲ್ಲಿ ಶೇ.50ರಷ್ಟು ಶಿಕ್ಷಣ ಕೇಂದ್ರಗಳು ಮುಚ್ಚಲ್ಪಟ್ಟಿವೆ ಎಂಬುದು ತಿಳಿದುಬಂದಿದೆ.

ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಕ್ಕೆ ತೆಗೆದುಕೊಂಡಾಗಿನಿಂದ ಕಳೆದ ಮೂರು ತಿಂಗಳಲ್ಲಿ ಶೇ. 50 ರಷ್ಟು ಖಾಸಗಿ ಶಿಕ್ಷಣ ಕೇಂದ್ರಗಳು ಮುಚ್ಚಲ್ಪಟ್ಟಿರುವುದಾಗಿ ಖಾಸಗಿ ಶಿಕ್ಷಣ ಕೇಂದ್ರಗಳ ಯೂನಿಯನ್ ಹೇಳಿಕೆ ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

 'ಯಾವುದೇ ಪಿಎಚ್‌ಡಿ, ಡಿಗ್ರಿ ಮೌಲ್ಯಯುತವಲ್ಲ': ತಾಲಿಬಾನ್‌ ನೂತನ ಶಿಕ್ಷಣ ಸಚಿವ 'ಯಾವುದೇ ಪಿಎಚ್‌ಡಿ, ಡಿಗ್ರಿ ಮೌಲ್ಯಯುತವಲ್ಲ': ತಾಲಿಬಾನ್‌ ನೂತನ ಶಿಕ್ಷಣ ಸಚಿವ

ಕಳೆದ ವರ್ಷ 34 ಪ್ರಾಂತ್ಯಗಳಿಂದ 200,000 ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ತಾಲಿಬಾನ್ ಅಧಿಕಾರಕ್ಕೆ ಬಂದ ಮೇಲೆ ಅನೇಕ ಪ್ರಾಂತ್ಯಗಳಲ್ಲಿ 7-12 ಗ್ರೇಡ್ ಗಳಲ್ಲಿ ಹುಡುಗಿಯರು ಭಾಗವಹಿಸುವುದನ್ನು ನಿಷೇಧಿಸಲಾಗಿದೆ ಎಂದು ಟೊಲೊ ನ್ಯೂಸ್ ವರದಿ ಮಾಡಿದೆ.

After Taliban Takeover In Afghanistan 50% Of Private Education Centres Closed

ಯೂನಿಯನ್ ಪ್ರಕಾರ, ಕುಟುಂಬಗಳ ಹದಗೆಟ್ಟ ಆರ್ಥಿಕ ಪರಿಸ್ಥಿತಿ ಈ ಖಾಸಗಿ ಶಿಕ್ಷಣ ಸಂಸ್ಥೆಗಳು ಮುಚ್ಚಲು ಪ್ರಮುಖ ಕಾರಣವಾಗಿದೆ. ಅಫ್ಘಾನಿಸ್ತಾನದಲ್ಲಿ ಆಡಳಿತ ಬದಲಾವಣೆ ನಂತರ ಶೇ.40 ರಿಂದ 50 ರಷ್ಟು ಶಿಕ್ಷಣ ಸಂಸ್ಥೆಗಳು ತಮ್ಮ ಚಟುವಟಿಕೆಗಳನ್ನು ನಿಲ್ಲಿಸಿವೆ. ಇದರಿಂದಾಗಿ ಶಿಕ್ಷಣ ಕೇಂದ್ರಗಳಲ್ಲಿನ ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆಯಾಗಿರುವುದಾಗಿ ಯೂನಿಯನ್ ಮುಖ್ಯಸ್ಥ ಸಂಜರ್ ಖಲೀದ್ ಹೇಳಿದ್ದಾರೆ.

ಶಿಕ್ಷಣವನ್ನು ಮುಂದುವರೆಸಲು ತಮ್ಮ ಆತ್ಮಸ್ಥೈರ್ಯದ ಮೇಲೆ ಹೆಚ್ಚಿನ ಸಮಯ ಪರಿಣಾಮ ಬೀರಲಿದೆ ಎಂದು ಕೆಲ ವಿದ್ಯಾರ್ಥಿಗಳು ಹೇಳಿದ್ದಾರೆ. ಶಿಕ್ಷಣದಿಂದ ದೇಶವನ್ನು ರಕ್ಷಿಸುವ ವ್ಯಕ್ತಿಯಾಗಬಹುದು ಎಂಬ ವಿಶ್ವಾಸ ಈಗಲೂ ಇದೆ ಎಂದು ವಿದ್ಯಾರ್ಥಿಯೊಬ್ಬ ಟೊಲೊ ನ್ಯೂಸ್ ಗೆ ಹೇಳಿದ್ದಾರೆ. ಮುಂದಿನ ವರ್ಷ ಶಾಲೆಗೆ ಹೋಗಬೇಕೆ ಅಥವಾ ಬೇಡವೇ ಎಂಬುದು ಇನ್ನೂ ದೃಢವಾಗಿಲ್ಲ ಎಂದು ಮತ್ತೋರ್ವ ವಿದ್ಯಾರ್ಥಿ ನಾಜಿಯಾ ಸರ್ವಾರಿ ಹೇಳಿದ್ದಾರೆ.

ಮಹಿಳೆಯರ ಶಿಕ್ಷಣದ ವಿಷಯದಲ್ಲಿ ಕಠಿಣ ನಿಲುವುಗಳನ್ನು ಹೊಂದಿರುವ ತಾಲಿಬಾನ್‌ ಉಗ್ರರು, ಮಹಿಳೆಯರ ಉನ್ನತ ಶಿಕ್ಷಣಕ್ಕೆ ಷರತ್ತಿನ ಅನುಮತಿ ನೀಡಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ತಾಲಿಬಾನ್‌ ಸರ್ಕಾರ, ಮುಂದಿನ ದಿನಗಳಲ್ಲೂ ದೇಶದ ಮಹಿಳೆಯರು ಸ್ನಾತಕೋತ್ತರ ಪದವಿ ಸೇರಿ ವಿವಿಗಳಲ್ಲಿ ಉನ್ನತ ಶಿಕ್ಷಣ ಪಡೆಯಬಹುದು. ಆದರೆ ತರಗತಿ ಕೊಠಡಿಗಳು ಯುವತಿ ಮತ್ತು ಯುವಕರಿಗೆ ಪ್ರತ್ಯೇಕವಾಗಿರುತ್ತವೆ. ಜೊತೆಗೆ ಇಸ್ಲಾಮಿಕ್‌ ವಸ್ತ್ರ ಸಂಹಿತೆ ಕಡ್ಡಾಯ ಎಂದು ತಾಲಿಬಾನ್‌ ಸರ್ಕಾರ ಸ್ಪಷ್ಟಪಡಿಸಿದೆ.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೊಸ ಶಿಕ್ಷಣ ನೀತಿ ಬಗ್ಗೆ ಮಾತನಾಡಿದ ನೂತನ ಶಿಕ್ಷಣ ಸಚಿವ ಅಬ್ದುಲ್‌ ಹಕ್ಕಾನಿ, 'ತಾಲಿಬಾನ್‌ 20 ವರ್ಷಗಳ ಹಿಂದಕ್ಕೆ ಹೋಗಲು ಇಷ್ಟಪಡಲ್ಲ. ಹಾಗಾಗಿ ಮಹಿಳೆಯರ ಶಿಕ್ಷಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಪುರುಷ ಮತ್ತು ಮಹಿಳೆಯರ ಸಹ ಶಿಕ್ಷಣಕ್ಕೆ ಅವಕಾಶ ನೀಡುವುದಿಲ್ಲ. ಮಹಿಳಾ ವಿದ್ಯಾರ್ಥಿಗಳು ಹಿಜಾಬ್‌(ಬುರ್ಖಾ) ಧರಿಸಬೇಕು ಎಂದು ಹೇಳಿದರು. ಆದರೆ ಇದು ಕೇವಲ ಶಿರಸ್ತಾ್ರಣವೋ ಅಥವಾ ಕಡ್ಡಾಯವಾಗಿ ಮುಖದ ಮೇಲಿನ ಹೊದಿಕೆಯೋ ಎಂಬುದನ್ನು ಹಕ್ಕಾನಿ ವಿವರಿಸಿಲ್ಲ.

1990ರ ದಶಕದಲ್ಲಿ ಆಫ್ಘನ್‌ನಲ್ಲಿ ಆಳ್ವಿಕೆ ನಡೆಸಿದ್ದ ತಾಲಿಬಾನ್‌ ಮಹಿಳೆಯರಿಗೆ ಶಿಕ್ಷಣವನ್ನು ನಿರಾಕರಿಸಿತ್ತು ಮತ್ತು ಸಾರ್ವಜನಿಕ ಜೀವನದಿಂದಲೂ ಹೊರಗಿಟ್ಟಿತ್ತು.

ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚನೆ ಮಾಡುತ್ತಿದ್ದಂತೆಯೇ ತಾಲಿಬಾನಿಗಳು ತಮ್ಮ ಕರಾಳ ಮುಖ ತೋರಿಸಲು ಪ್ರಾರಂಭಿಸಿದ್ದಾರೆ. ಅಲ್ಲಿನ ನೂತನ ಸರ್ಕಾರದಲ್ಲಿ ಶಿಕ್ಷಣ ಮಂತ್ರಿಯಾಗಿರುವ ತಾಲಿಬಾನ್‌ ನಾಯಕ ಶೇಖ್ ಮೌಲ್ವಿ ನೂರುಲ್ಲಾ ಮುನೀರ್‌ ಉನ್ನತ ಶಿಕ್ಷಣದ ಪ್ರಸ್ತುತತೆಯನ್ನು ಪ್ರಶ್ನೆ ಮಾಡಿದ್ದಾನೆ. ಪಿಎಚ್‌ಡಿ, ಉನ್ನತ ಶಿಕ್ಷಣಕ್ಕೆ ಈಗ ಬೆಲೆ ಇಲ್ಲ ಎಂದು ಹೇಳಿದ್ದಾನೆ.

ನೂರುಲ್ಲಾ ಮುನೀರ್‌ ಮಾತನಾಡಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಇದರಲ್ಲಿ, 'ಪಿಎಚ್‌ಡಿ ಡಿಗ್ರಿ, ಮಾಸ್ಟ್‌ರ್ಸ್‌ ಡಿಗ್ರಿಗೆ ಇಂದು ಬೆಲೆ ಇಲ್ಲ. ಈಗ ಅಧಿಕಾರದಲ್ಲಿರುವ ಮುಲ್ಲಾಗಳು ಹಾಗೂ ತಾಲಿಬಾನಿಗಳು ಯಾವುದೇ ಪಿಎಚ್‌ಡಿ ಅಥವಾ ಎಂಎ ಡಿಗ್ರಿ ಪಡೆದಿಲ್ಲ. ಹೈಸ್ಕೂಲೂ ಓದಿಲ್ಲ. ಆದರೂ ನಾವೆಲ್ಲ ಎಲ್ಲರಿಗಿಂತಲೂ ಶ್ರೇಷ್ಠರು' ಎಂದು ಹೇಳಿದ್ದಾನೆ.

English summary
Over half of Afghanistan's private education centres have shuttered in the last three months after the Taliban took control of Kabul in August, local media reported, citing the Union of Private Education Centers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X